- Home
- Entertainment
- TV Talk
- Brahmagantu Serial: ದಿಶಾ ಕಂಡ್ರೆ ದೀಪಾಗೆ ಹೊಟ್ಟೆ ಉರಿ! ತನ್ಮೇಲೆ ತಾನೇ ಹೊಟ್ಟೆಕಿಚ್ಚು ಪಡೋ ಜಗತ್ತಿನ ಏಕೈಕ ಮಹಿಳೆ!
Brahmagantu Serial: ದಿಶಾ ಕಂಡ್ರೆ ದೀಪಾಗೆ ಹೊಟ್ಟೆ ಉರಿ! ತನ್ಮೇಲೆ ತಾನೇ ಹೊಟ್ಟೆಕಿಚ್ಚು ಪಡೋ ಜಗತ್ತಿನ ಏಕೈಕ ಮಹಿಳೆ!
ಬ್ರಹ್ಮಂಟು ಸೀರಿಯಲ್ನಲ್ಲಿ ಬಾಡಿ ಶೇಮಿಂಗ್ಗೆ ಒಳಗಾಗುವ ದೀಪಾ, ಗುಣವೇ ಮುಖ್ಯ ಎಂದು ಸಾರಲು ದಿಶಾ ಎಂಬ ಮಾಡೆಲ್ ಆಗಿ ರೂಪಾಂತರಗೊಳ್ಳುತ್ತಾಳೆ. ಆದರೆ, ತನ್ನ ಪತಿ ಚಿರು ದಿಶಾಳ ಸೌಂದರ್ಯಕ್ಕೆ ಮಾರುಹೋದಾಗ, ದೀಪಾ ತನ್ನದೇ ಇನ್ನೊಂದು ರೂಪದ ಮೇಲೆ ಅಸೂಯೆ ಪಡುತ್ತಾಳೆ.

ಸೌಂದರ್ಯಕ್ಕಿಂತ ಗುಣನೇ ಮೇಲು
ಸೌಂದರ್ಯಕ್ಕಿಂತ ಗುಣನೇ ಮೇಲು ಎಂದು ಹೇಳಹೊರಟಿರುವುದು ಬ್ರಹ್ಮಗಂಟು (Brahmagantu Serial) ಸೀರಿಯಲ್. ಇಲ್ಲಿ ಸೋಡಾ ಗ್ಲಾಸ್, ಎಣ್ಣೆ ಕೂದಲು, ಹಲ್ಲಿಗೆ ಕ್ಲಿಪ್, ಜಡೆಗೆ ರಿಬ್ಬನ್, ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡಿರೋ ದೀಪಾಳೆ ಇದಕ್ಕೆ ನಾಯಕಿ. ಯಾವುದೋ ಒಂದು ಸನ್ನಿವೇಶದಲ್ಲಿ ಸುರಸುಂದರಾಂಗ ಚಿರುನ್ನ ಮದ್ವೆಯಾಗ್ತಾಳೆ.
ಬಾಡಿ ಶೇಮಿಂಗ್
ಅಲ್ಲಿಂದ ಇಲ್ಲಿಯವರೆಗೂ ಅವಳು ಎದುರಿಸಿದ್ದು ಬಾಡಿ ಶೇಮಿಂಗೇ. ಆದರೆ ಸೌಂದರ್ಯ ಮುಖ್ಯವಲ್ಲ, ಗುಣ ಮುಖ್ಯ ಎಂದು ಸಾಧಿಸಲು ಹೊರಟಿದ್ದಾಳೆ ದೀಪಾ. ಆದರೆ ಸೌಂದರ್ಯ ಮುಖ್ಯ ಎನ್ನೋದು ವಿಲನ್ ಅತ್ತಿಗೆ ಸೌಂದರ್ಯಳ ಮಾತು. ಸದ್ಯ ಇದು ಸೌಂದರ್ಯ v/s ಗುಣ ಎಂದಾಗಿದೆ.
ಮನಸ್ಸನ್ನು ಗೆದ್ದವಳು ದೀಪಾ
ಆದರೆ ಇದಾಗಲೇ ತನ್ನ ಒಳ್ಳೆಯ ಗುಣದಿಂದ ಗಂಡನ ಮನಸ್ಸನ್ನೂ ಗೆದ್ದಿದ್ದಾಳೆ ದೀಪಾ. ಆದರೆ ಇದೀಗ ಮಾಡೆಲ್ ಆಗಿ ಎಲ್ಲರನ್ನೂ ಯಾಮಾರಿಸುತ್ತಿದ್ದಾಳೆ ದೀಪಾ. ದೀಪಾಳನ್ನು ದಿಶಾ ಮಾಡಿ, ಆಕೆಯ ಬದುಕಿನ ದಿಕ್ಕನ್ನೇ ಬದಲಿಸಿದ್ದಾಳೆ ಅರ್ಚನಾ.
ದಿಶಾನೇ ದೀಪಾ
ಒಟ್ಟಿನಲ್ಲಿ ದಿಶಾನೇ ದೀಪಾ ಎನ್ನುವುದು ಯಾರಿಗೂ ತಿಳಿದಿಲ್ಲ. (ಇದು ಹೇಗೆ ಎಂದು ಕೇಳಿದರೆ ಉತ್ತರವಿಲ್ಲವನ್ನಿ!). ಪಟಪಟ ಇಂಗ್ಲಿಷ್ ಮಾತನಾಡುತ್ತಾ, ಸಕತ್ ಮಿಂಚುತ್ತಿದ್ದಾಳೆ ದೀಪಾ. ಈ ದಿಶಾನೇ ದೀಪಾ ಎಂದು ತಿಳಿಯದ ಸೌಂದರ್ಯ ಅವರಿಬ್ಬರನ್ನೂ ಒಟ್ಟು ಮಾಡಿ ದೀಪಾಳನ್ನು ದೂರ ಮಾಡುವ ಸ್ಕೆಚ್ ಹಾಕುತ್ತಿದ್ದಾಳೆ.
ದೀಪಾಳ ಸವಾಲು
ಅತ್ತ ದೀಪಾ ಕೂಡ ದಿಶಾ ಆಗಿ ಇದನ್ನೇ ಸವಾಲಾಗಿ ಸ್ವೀಕರಿಸಿದ್ದಾಳೆ. ಆದರೆ ದಿಶಾಳ ಸೌಂದರ್ಯ ನೋಡಿ ಚಿರುನೂ ಮಾರು ಹೋಗಿದ್ದಾನೆ. ಅವಳಿಗೆ ಹೆಚ್ಚು ಹೆಚ್ಚು ಅವಕಾಶ ಬರುತ್ತಿದೆ. ದಿಶಾಳನ್ನು ಆತ ದುರುಗುಟ್ಟಿಕೊಂಡು ನೋಡ್ತಿರೋದು ನೋಡಿ ದೀಪಾಳಿಗೆ ಹೊಟ್ಟೆ ಉರಿದಿದೆ. ದೀಪಾನೇ ದಿಶಾ ಆಗಿದ್ದರೂ ಗಂಡ ಅಂದಕ್ಕೆ ಹೆಚ್ಚು ಬೆಲೆ ಕೊಟ್ಟ ಎನ್ನುವುದು ಅವಳಿಗೆ ಇರುವ ನೋವು.
ದಿಶಾ ಕಂಡ್ರೆ ದೀಪಾಳಿಗೆ ಹೊಟ್ಟೆಕಿಚ್ಚು
ಅದಕ್ಕಾಗಿಯೇ ಗಂಡನ ಮೇಲೆ ಉರಿದು ಬೀಳುತ್ತಿದ್ದಾಳೆ. ಅರ್ಚನಾ ನಕ್ಕು ನಿನ್ನ ಮೇಲೆ ನೀನು ಹೊಟ್ಟೆಕಿಚ್ಚು ಪಟ್ಟುಕೊಳ್ತಿದ್ಯಾ ಎಂದು ಕೇಳಿದ್ರೂ ದೀಪಾ, ಆ ಮಿಟಕಲಾಡಿ ದಿಶಾನ್ನ ಗುರ್ ಅಂತ ನೋಡ್ತಿದ್ರು, ಅದು ನನಗೆ ಇಷ್ಟ ಆಗಲಿಲ್ಲ ಎಂದು ಕೋಪದಿಂದ ಹೇಳುತ್ತಿದ್ದಾಳೆ.
ಏಕೈಕ ಮಹಿಳೆ!
ಒಟ್ಟಿನಲ್ಲಿ ತನ್ನ ಮೇಲೆ ತಾನು ಹೊಟ್ಟೆಕಿಚ್ಚು ಪಡುವ ಏಕೈಕ ಮಹಿಳೆ ಎಂದು ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ತಮಾಷೆ ಮಾಡುತ್ತಿದ್ದಾಳೆ.