Davanagere Vijayadashami procession: ದಾವಣಗೆರೆಯಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ವಿಜಯದಶಮಿ ಶೋಭಾಯಾತ್ರೆಗೆ ಬೃಹತ್ ಸಿದ್ಧತೆ ನಡೆದಿದೆ. ಸಾವಿರಾರು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ., ಶೋಭಾಯಾತ್ರೆ ಮಾರ್ಗದುದ್ದಕ್ಕೂ ಆಕರ್ಷಕ ಟ್ಯಾಬ್ಲೋಗಳು ಕೇಸರಿಮಯವಾಗಿದೆ. ಪೊಲೀಸರ ಸರ್ಪಗಾವಲು.

ದಾವಣಗೆರೆ (ಅ.1): ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಾಳೆ ವಿಜಯದಶಮಿ ಶೋಭಾಯಾತ್ರೆಗೆ ವಿಶ್ವ ಹಿಂದು ಪರಿಷತ್ ಮತ್ತು ಸಾರ್ವಜನಿಕ ವಿಜಯ ದಶಮಿ ಸಮಿತಿ ಬೃಹತ್ ಆಯೋಜನೆ ಮಾಡಿದೆ. ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಶೋಭಾಯಾತ್ರೆಯ ಮಾರ್ಗ ಕೇಸರಿಮಯವಾಗಿ ಕಂಗೊಳಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಟ್ಟಿಕಲ್‌ನಲ್ಲಿ ಆಂಜನೇಯ, ಶಿವಾಜಿ ಮೂರ್ತಿ, ವೆಂಕಟೇಶ್ವರ ಸರ್ಕಲ್‌ನಲ್ಲಿ ಶ್ರೀ ಕೃಷ್ಣ, ಹಾಸಬಾವಿ ಸರ್ಕಲ್‌ನಲ್ಲಿ ಬೃಹತ್ ಆಂಜನೇಯ ಟ್ಯಾಬ್ಲೋಗಳು ಗಮನ ಸೆಳೆಯುತ್ತಿವೆ. ಶೋಭಾಯಾತ್ರೆಯ ಮಾರ್ಗದಲ್ಲಿ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಪೊಲೀಸ್ ರೂಟ್ ಮಾರ್ಚ್ ನಡೆದಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ:Attack on Hindu Family: ಹಿಂದೂಗಳನ್ನ ಕೆಣಕಿ ಆಚರಣೆ ನಿಲ್ಲಿಸುವ ಹುನ್ನಾರ? ಹಿಂದೂ ಮುಖಂಡ ಸ್ಫೋಟಕ ಹೇಳಿಕೆ

ಇತ್ತೀಚಿನ ಫ್ಲೆಕ್ಸ್ ಗಲಾಟೆ ಹಿನ್ನೆಲೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಹಾಕದಂತೆ ಸೂಚನೆ ನೀಡಲಾಗಿದೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ದಾವಣಗೆರೆ ನಗರ ಅದ್ಧೂರಿ ಶೋಭಾಯಾತ್ರೆಗೆ ಸಜ್ಜಾಗಿದ್ದು, ಶಾಂತಿಯುತವಾಗಿ ಕಾರ್ಯಕ್ರಮ ನಡೆಯಲು ಎಲ್ಲ ತಯಾರಿ ನಡೆದಿದೆ.