Pakistan U-turn on Gaza plan: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಗೆ ಆರಂಭದಲ್ಲಿ ಬೆಂಬಲ ಸೂಚಿಸಿದ್ದ ಪಾಕಿಸ್ತಾನ, ಇದೀಗ ಸಾರ್ವಜನಿಕರ ತೀವ್ರ ವಿರೋಧದಿಂದಾಗಿ ಯು-ಟರ್ನ್ ಹೊಡೆದಿದೆ. ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ.
ವಾಷಿಂಗ್ಟನ್ (ಅ.1): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಗೆ ಪಾಕಿಸ್ತಾನದಿಂದ ತೀವ್ರ ವಿರೋಧ ಎದ್ದಿದೆ. ಇತ್ತೀಚಿಗೆ ಬೆಂಬಲ ಸೂಚಿಸಿದ್ದ ಪಾಕಿಸ್ತಾನ ಸರ್ಕಾರ ಈಗ ಯು-ಟರ್ನ್ ತೆಗೆದುಕೊಂಡಂತೆ ಕಾಣುತ್ತಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗುರಿಯಾಗಿದೆ. ಆದರೆ ಟ್ರಂಪ್ ಮಾತ್ರ ಪಾಕಿಸ್ತಾನವು ಹಂಡ್ರೆಡ್ ಪರ್ಸೆಂಟ್ ಸಪೋರ್ಟ್ ಮಾಡುತ್ತೆ ಎಂದು ಹೇಳುತ್ತಿದ್ದಾರೆ.
ಷರೀಫ್-ಮುನೀರ್ ವಿರುದ್ಧ ಪಾಕ್ ಸಾರ್ವಜನಿಕರ ವಿರೋಧ:
ದೇಶದ ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ನಿರ್ಧಾರಕ್ಕೆ ಇದು ಧರ್ಮದ್ರೋಹ ಎಂಬ ಆರೋಪಗಳು ಎದ್ದಿವೆ. ಟ್ರಂಪ್ ಅವರು ಇತ್ತೀಚೆಗೆ ಹೊರಡಿಸಿದ 20 ಅಂಶಗಳ ಶಾಂತಿ ಪ್ರಸ್ತಾವನೆಯು ಗಾಜಾದಲ್ಲಿ ಕದನ ವಿರಾಮ ಸಾಧಿಸುವ ಉದ್ದೇಶವನ್ನು ಹೊಂದಿದ್ದು, ಇದನ್ನು ಅಮೆರಿಕದ 'ದಾಖಲೆಯ ಸಾಧನೆ' ಎಂದು ಕರೆದಿದ್ದಾರೆ.
ಟ್ರಂಪ್‌ರ 20 ಅಂಶಗಳ ಶಾಂತಿ ಪ್ರಸ್ತಾವನೆ ಯೋಜನೆಯಲ್ಲಿ ಏನಿವೆ?
ಈ ಯೋಜನೆಯಲ್ಲಿ ಸ್ವತಂತ್ರ ಪ್ಯಾಲೆಸ್ಟೀನಿಯನ್ ಸರ್ಕಾರ ಸ್ಥಾಪನೆ, ಅಂತರರಾಷ್ಟ್ರೀಯ ಸಂಸ್ಥೆಗಳ ಮೇಲ್ವಿಚಾರಣೆ ಮತ್ತು ತಂತ್ರಜ್ಞರ ನೇತೃತ್ವ – ಇಂತಹ ಅಂಶಗಳಿವೆ. ಭಾರತ, ಚೀನಾ, ರಷ್ಯಾ ಸೇರಿದಂತೆ ಎಂಟು ಅರಬ್-ಮುಸ್ಲಿಂ ಬಹುಸಂಖ್ಯಾತ ದೇಶಗಳು ಈ ಪ್ರಸ್ತಾವನೆಯನ್ನು ಶ್ಲಾಘಿಸಿವೆ. ಆದರೆ ಪಾಕಿಸ್ತಾನ ಯು-ಟರ್ನ್ ಹೊಡೆದಿದೆ.
ಇದನ್ನೂ ಓದಿ: ಶೀಘ್ರ ಇಸ್ರೇಲ್-ಹಮಾಸ್ ಯುದ್ಧ ಅಂತ್ಯದತ್ತ? ಟ್ರಂಪ್‌ರಿಂದ 20 ಅಂಶ ಪ್ರಸ್ತಾಪ, ಹಮಾಸ್ ಉಗ್ರರು ಒಪ್ತಾರಾ?
ಪಾಕಿಸ್ತಾನದ ಪ್ರಮುಖ ಸುದ್ದಿ ವೆಬ್‌ಸೈಟ್ ಡಾನ್ ವರದಿಯ ಪ್ರಕಾರ, ದಾರ್ ಅವರು ಹೇಳಿದ್ದು, 'ಇದು ನಾವು ಕಳುಹಿಸಿದ ದಾಖಲೆಯಲ್ಲ. ಈ ಪ್ರಸ್ತಾವನೆಯಲ್ಲಿ ನಾವು ಸೇರಿಸಲು ಬಯಸುವ ಹಲವು ವಿಷಯಗಳಿವೆ. ಅವುಗಳನ್ನು ಸೇರಿಸದಿದ್ದರೆ, ಅವುಗಳನ್ನು ಸೇರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ, ಗಾಜಾಗೆ ಪಾಕಿಸ್ತಾನಿ ಪಡೆಗಳನ್ನು ಕಳುಹಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಉನ್ನತ ನಾಯಕತ್ವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಸೂಚಿಸಿದ್ದಾರೆ.
ಈ ಬೆಳವಣಿಗೆಯು ಟ್ರಂಪ್ ಅವರ ಹೇಳಿಕೆಗೆ ವಿರುದ್ಧವಾಗಿದೆ. ಅಲ್ಲಿ ಅವರು ಶಹಬಾಜ್ ಮತ್ತು ಮುನೀರ್ ಅವರನ್ನು ಅತ್ಯಂತ ಸಕ್ರಿಯ ನಾಯಕರು ಎಂದು ಪ್ರಶಂಸಿಸಿ, ಪಾಕಿಸ್ತಾನದ ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ ಆರಂಭದಿಂದಲೂ ನಮ್ಮೊಂದಿಗಿದ್ದರು ಎಂದು ಹೇಳಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಈ ಯೋಜನೆಗೆ ಸಾರ್ವಜನಿಕ ವಿರೋಧ ತೀವ್ರಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ #NoToGazaPlan ಮತ್ತು #TraitorSharif ಮುಂತಾದ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.
ಇದನ್ನೂ ಓದಿ: ಭಾರತ ಹಾಗೂ ಮೋದಿಗೆ ನಾನು ಆಪ್ತ, ಹಾಗಿದ್ದರೂ ಅವರಿಗೆ ತೆರಿಗೆ ಹೇರಿದ್ದೇನೆ: ಡೊನಾಲ್ಡ್ ಟ್ರಂಪ್!
ಶಹಬಾಜ್ ಸರ್ಕಾರ ಟ್ರಂಪ್‌ರೊಂದಿಗೆ ಒಲವು ಪಡೆಯಲು ಆರಂಭದಲ್ಲಿ ಬೆಂಬಲ ಸೂಚಿಸಿತ್ತು, ಆದರೆ ದೇಶದಲ್ಲಿ ಸಾರ್ವಜನಿಕರ ಆಕ್ರೋಶ, ಒತ್ತಡ ತೀವ್ರಗೊಂಡ ಹಿನ್ನೆಲೆ ಈಗ ಹಿಂದೆ ಸರಿಯುತ್ತಿದೆ. ಇದು ಪಾಕಿಸ್ತಾನದ ಐತಿಹಾಸಿಕ ಪ್ಯಾಲೆಸ್ಟೀನ್ ಬೆಂಬಲ ನೀತಿಗೆ ವಿರುದ್ಧವಾಗಿ ಕಂಡುಬಂದಿದ್ದು, ದೇಶದ ರಾಜಕೀಯದಲ್ಲಿ ಹೊಸ ಆಂದೋಲನಗಳನ್ನು ಹುಟ್ಟಿಸಬಹುದು.
