ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಚಿನ್ನಯ್ಯನ ಆರೋಪದ ಮೇಲೆ ನಡೆದ ಎಸ್‌ಐಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪತ್ತೆಯಾಗಿದ್ದ ಮೂರು ತಲೆಬುರುಡೆಗಳ ಎಫ್ಎಸ್ಎಲ್ ವರದಿ ಲಭ್ಯವಾಗಿದೆ.
ಬೆಂಗಳೂರು (ಅ.1): ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆ ಎಂದು ಸ್ಫೋಟಕ ಆರೋಪ ಮಾಡಿ ಸರ್ಕಾರದಿಂದ ಎಸ್‌ಐಟಿ ರಚಿಸಲು ಕಾರಣವಾಗಿದ್ದ ಚಿನ್ನಯ್ಯ ಹಾಗೂ ಧರ್ಮಸ್ಥಳ ವಿರೋಧಿ ಗ್ಯಾಂಗ್‌ಗೆ ಭಾರೀ ಮುಖಭಂಗವಾಗಿದೆ. ಕೋರ್ಟ್‌ಗೆ ಒಂದು ತಲೆಬುರುಡೆ ತಂದು ಇಂಥದ್ದೇ ಹಲವಾರು ಶವಗಳನ್ನು ನಾನು ಧರ್ಮಸ್ಥಳದ ಅಕ್ಕಪಕ್ಕದಲ್ಲಿ ಅಲ್ಲಿನ ಮುಖ್ಯಸ್ಥರ ಸೂಚನೆಯ ಮೇರೆಗೆ ಹೂತಿಟ್ಟಿದ್ದೇನೆ ಎಂದಿದ್ದ ಚಿನ್ನಯ್ಯನ ಮಾತು ನಂಬಿ ಧರ್ಮಸ್ಥಳದ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಲಾಗಿತ್ತು. ಗಿರೀಶ್ ಮಟ್ಟೆಣ್ಣನವರ್, ಸುಜಾತಾ ಭಟ್, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಎಂಡಿ ಸಮೀರ್ ನೇತೃತ್ವದಲ್ಲಿ ಧರ್ಮಸ್ಥಳದ ಮೇಲೆ ಟೀಕಾಪ್ರಹಾರ ಮಾಡುವ ಕೆಲಸ ಅಂದಾಜು ವರ್ಷಗಳ ಕಾಲ ನಡೆದಿತ್ತು.
ಎಸ್‌ಐಟಿ ಬಳಿಕ ಚಿನ್ನಯ್ಯ ತೋರಿಸಿದ್ದ ಸ್ಪಾಟ್‌ಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಬಹುತೇಕ ಯಾವುದೇ ಸ್ಪಾಟ್‌ನಲ್ಲಿ ಏನೂ ಸಿಕ್ಕಿರಲಿಲ್ಲ. ಒಂದೆರಡು ಕಡೆ ಅಸ್ಥಿಪಂಜರಗಳು ಸಿಕ್ಕಿದ್ದವು. ಅದನ್ನು ಎಸ್‌ಐಟಿ, ಎಫ್‌ಎಸ್‌ಎಲ್‌ಗೆ ಕಳಿಸಿತ್ತು. ಈ ಅದರ ಅರದಿಗಳು ಬಂದಿವೆ. ಎಸ್ ಐ ಟಿ ತನಿಖೆ ವೇಳೆ ಪತ್ತೆಯಾಗಿದ್ದ ತಲೆಬುರುಡೆಗಳ ಎಫ್ಎಸ್ಎಲ್ ವರದಿ ಲಭ್ಯವಾಗಿದೆ.ಚಿನ್ನಯ್ಯ ತಂದು ಕೊಟ್ಟಿದ್ದ ಬರುಡೆ ಸೇರಿ ಒಟ್ಟು ಮೂರು ತಲೆಬುರುಡೆ ಮತ್ತು ಮೂಳೆಗಳ ವರದಿ ಲಭ್ಯವಾಗಿದೆ.
ಮೊದಲನೆಯದಾಗಿ ಚಿನ್ನಯ್ಯ ಕೋರ್ಟ್‌ನಲ್ಲಿ ತಂದುಕೊಟ್ಟಿದ್ದ ಬುರುಡೆ, 40ರ ಆಸುಪಾಸು ವಯಸ್ಸಿನ ಗಂಡಸಿನ ತಲೆಬುರುಡೆ ಎಂದು ಎಫ್‌ಎಸ್‌ಎಲ್ ಹೇಳಿದೆ.
ಉತ್ಖನನ ವೇಳೆ ಸಿಕ್ಕಿದ್ದ ಎರಡನೇ ಬುರುಡೆ ಮತ್ತು ಕೆಲ ಮೂಳೆಗಳು ಸಿಕ್ಕಿದ್ದವು. ಸ್ಪಾಟ್ ನಂ.6ರಲ್ಲಿ ಸಿಕ್ಕಿದ್ದ ಬುರುಡೆ ಹಾಗೂ ಮೂಳೆ ಸಹ ಇಪತ್ತೈದರಿಂದ ಮೂವತ್ತು ವಯಸ್ಸಿನ ಗಂಡಸಿನ ಮೂಳೆ ಮತ್ತು ಬುರುಡೆ ಎಂದು ತಿಳಿಸಿದೆ.
ಸ್ಪಾಟ್ ನಂಬರ್ 15ರಲ್ಲಿ ಕೂಡ ಬುರುಡೆ ಹಾಗೂ ಮೂಳೆ ಸಿಕ್ಕಿದ್ದವು. ಇದು ಮರದ ಬುಡದಲ್ಲಿ ಸಿಕ್ಕ ಅಸ್ಥಿಪಂಜರವಾಗಿತ್ತು. ಇದು ಸಹ ಒರ್ವ ಗಂಡಸಿನ ದೇಹ ಎಂದು ವರದಿ ಹೇಳಿದೆ. 35-39 ವರ್ಷದ ಒಳಗಿನ ಗಂಡಸಿನ ದೇಹದ ಮೂಳೆ ಎಂದು ಎಫ್‌ಎಸ್‌ಎಲ್ ತನ್ನ ವರದಿಯಲ್ಲಿ ತಿಳಿಸಿದೆ.
ಮೂರೂ ಸಾವಿಗೆ ಕಾರಣ ಗೊತ್ತಿಲ್ಲ, ಹಲ್ಲೆಯ ಕುರುಹು ಇಲ್ಲ
ಮೂರು ಸಾವಿಗೆ ನಿಖರವಾಗಿ ಕಾರಣ ಏನು ಅನ್ನೋದು ಗೊತ್ತಾಗಿಲ್ಲ.ಸಕ್ಕಿರುವ ಮೂಳೆಗಳ ಮೇಲೆ ಮುರಿದ ಹಾಗು ಹಲ್ಲೆಗೆ ಒಳಾಗಿರುವ ಯಾವುದೇ ಕುರುಹು ಇಲ್ಲ. ಇನ್ನೂ ವಿಷ ಸೇವನೆ ಮಾಡಿರಬಹುದಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಅಹಮದಾಬಾದ್ ನಲ್ಲಿರುವ ಎಫ್ ಎಸ್ ಎಲ್ ಗೂ ಸ್ಯಾಪಂಲ್ಸ್ ಕಳಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಮಾಹಿತಿ ತಿಳಿಯಲಿದೆ.
ಬಂಗ್ಲೆಗುಡ್ಡದ ಮೂಳೆಗಳು ಏನಾದವು?
ಕೊನೆಯ ಬಾರಿಗೆ ಬಂಗ್ಲೆಗುಡ್ಡದಲ್ಲಿ ಎಸ್‌ಐಟಿ ಪರಿಶೀಲನೆ ಮಾಡಿತ್ತು. ಈ ವೇಳೆ ಏಳು ಬುರುಡೆ ಹಾಗೂ ಮೂಳೆಗಳು ಸಿಕ್ಕಿದ್ದವು. ಈ ಮೂಳೆ ಹಾಗೂ ಬುರುಡೆಗಳನ್ನು ಇನ್ನೂ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿಲ್ಲ.
