Okinotori Shima: ಈ ಬಂಡೆಯ ಗಾತ್ರ ಕೇವಲ 60 ಚದರ ಮೀಟರ್ ನಿಮ್ಮ ಕಾರು ಪಾರ್ಕಿಂಗ್ ಜಾಗಕ್ಕಿಂತ ಸ್ವಲ್ಪ ದೊಡ್ಡದಷ್ಟೇ. ಆದರೆ ಈ ಚಿಕ್ಕ ಕಲ್ಲಿಗೆ ಜಪಾನ್ ಏಕೆ ಇಷ್ಟೊಂದು ಹಣ ಖರ್ಚು ಮಾಡಿದೆ? ಒಂದು ವೇಳೆ ಇದು ಸಮುದ್ರದಲ್ಲಿ ಮುಳುಗಿದರೆ ಏನಾಗುತ್ತದೆ? ಈ ಕುತೂಹಲಕಾರಿ ಕಥೆಯ ಹಿಂದಿನ ರಹಸ್ಯವನ್ನು ತಿಳಿಯೋಣ.

Okinotori Shima: ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ, ಟೋಕಿಯೊದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಒಕಿನೊಟೊರಿ ಶಿಮಾ ಎಂಬ ಸಣ್ಣ ಹವಳದ ಬಂಡೆಗಾಗಿ ಜಪಾನ್ 4,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ! ಆಶ್ಚರ್ಯಕರವಾಗಿ, ಈ ಬಂಡೆಯ ಗಾತ್ರ ಕೇವಲ 60 ಚದರ ಮೀಟರ್ ಅರ್ಥವಾಗಲಿಲ್ಲವೇ? ನಿಮ್ಮ ಕಾರು ಪಾರ್ಕಿಂಗ್ ಜಾಗಕ್ಕಿಂತ ಸ್ವಲ್ಪ ದೊಡ್ಡದಷ್ಟೇ. ಆದರೆ ಈ ಚಿಕ್ಕ ಕಲ್ಲಿಗೆ ಜಪಾನ್ ಏಕೆ ಇಷ್ಟೊಂದು ಹಣ ಖರ್ಚು ಮಾಡಿದೆ? ಒಂದು ವೇಳೆ ಇದು ಸಮುದ್ರದಲ್ಲಿ ಮುಳುಗಿದರೆ ಏನಾಗುತ್ತದೆ? ಈ ಕುತೂಹಲಕಾರಿ ಕಥೆಯ ಹಿಂದಿನ ರಹಸ್ಯವನ್ನು ತಿಳಿಯೋಣ.

ಒಂದು ಕಲ್ಲು, ಲಕ್ಷಾಂತರ ಕಿಲೋಮೀಟರ್ ಹಕ್ಕು!

ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ಒಂದು ದೇಶವು ತನ್ನ ಗಡಿಯಿಂದ 370 ಕಿಲೋಮೀಟರ್‌ವರೆಗಿನ ಸಮುದ್ರ ಪ್ರದೇಶದ ಮೇಲೆ ವಿಶೇಷ ಆರ್ಥಿಕ ವಲಯ (EEZ) ಹಕ್ಕನ್ನು ಹೊಂದಿರುತ್ತದೆ. ಈ ವಲಯದಲ್ಲಿ ತೈಲ, ಅನಿಲ, ಮೀನು, ಖನಿಜ ಸಂಪತ್ತು—ಎಲ್ಲವೂ ಆ ದೇಶಕ್ಕೆ ಸೇರಿರುತ್ತದೆ. ಒಕಿನೊಟೊರಿ ಶಿಮಾ ಜಪಾನ್‌ನ ಈ ಹಕ್ಕುಗಳ ಕೇಂದ್ರಬಿಂದು. ಈ ಸಣ್ಣ ಬಂಡೆಯಿಂದ 370 ಕಿಮೀ ವ್ಯಾಪ್ತಿಯಲ್ಲಿ ಜಪಾನ್ ಲಕ್ಷಾಂತರ ಚದರ ಕಿಲೋಮೀಟರ್ ಸಮುದ್ರವನ್ನು ತನ್ನದಾಗಿಸಿಕೊಂಡಿದೆ.

ಒಕಿನೊಟೊರಿ ಶಿಮಾ ಮುಳುಗಿದರೆ ಏನಾಗುತ್ತದೆ?

ಒಕಿನೊಟೊರಿ ಶಿಮಾ ಕೇವಲ ಬಂಡೆಯಾಗಿದ್ದು, ದೊಡ್ಡ ಅಲೆಗಳು ಅಥವಾ ಬಿರುಗಾಳಿಗಳಿಂದ ಮುಳುಗುವ ಅಪಾಯದಲ್ಲಿದೆ. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ಈ ಬಂಡೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದರೆ, ಜಪಾನ್ ಈ ಪ್ರದೇಶದ EEZ ಹಕ್ಕುಗಳನ್ನು ಕಳೆದುಕೊಳ್ಳುತ್ತದೆ. ಇದರಿಂದ ಜಪಾನ್‌ಗೆ ಸಮುದ್ರದ ದೊಡ್ಡ ಭಾಗ ಮತ್ತು ಅದರ ಸಂಪನ್ಮೂಲಗಳ ಮೇಲಿನ ನಿಯಂತ್ರಣ ಕೈತಪ್ಪುತ್ತದೆ. ಚೀನಾದಂತಹ ನೆರೆಯ ದೇಶಗಳು ಈ ಪ್ರದೇಶದ ಮೇಲೆ ಹಕ್ಕು ಸಾಧಿಸಬಹುದು.

ಒಕಿನೊಟೊರಿ ಶಿಮಾ ರಕ್ಷಣೆಗೆ 4,500 ಕೋಟಿ ಖರ್ಚು!

ಈ ಅಪಾಯವನ್ನು ತಡೆಯಲು, ಜಪಾನ್ ಒಕಿನೊಟೊರಿ ಶಿಮಾವನ್ನು ಕಾಂಕ್ರೀಟ್ ಗೋಡೆಗಳು ಮತ್ತು ಬಲಿಷ್ಠ ರಚನೆಗಳಿಂದ ರಕ್ಷಿಸುತ್ತಿದೆ. 4,500 ಕೋಟಿ ರೂ. ಖರ್ಚಿನ ಈ ಕಾರ್ಯವು ಕೇವಲ ಒಂದು ಬಂಡೆಯನ್ನು ಉಳಿಸುವುದಕ್ಕಿಂತ ಹೆಚ್ಚಿನದು ಇದು ಜಪಾನ್‌ನ ಆರ್ಥಿಕ ಮತ್ತು ಅಂತರರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಯತ್ನ. ಈ ಸಣ್ಣ ಕಲ್ಲು ಜಪಾನ್‌ಗೆ ಲಕ್ಷಾಂತರ ಕಿಮೀ ಸಮುದ್ರದ ಹಕ್ಕನ್ನು ಒದಗಿಸುವ ಚಿನ್ನದ ತಾಯಿತವಾಗಿದೆ.

ಒಕಿನೊಟೊರಿ ಶಿಮಾ ಕೇವಲ 60 ಚದರ ಮೀಟರ್‌ನ ಬಂಡೆಯಾಗಿರಬಹುದು, ಆದರೆ ಇದು ಜಪಾನ್‌ನ ಆರ್ಥಿಕ ಭವಿಷ್ಯಕ್ಕೆ ಒಂದು ಭದ್ರ ಕೋಟೆ. ಈ ಘಟನೆಯಿಂದ ಒಂದು ವಿಷಯ ಸ್ಪಷ್ಟ; ಅಂತರರಾಷ್ಟ್ರೀಯ ರಾಜಕೀಯದಲ್ಲಿ, ಒಂದು ಸಣ್ಣ ಕಲ್ಲು ಕೂಡ ಕೋಟ್ಯಂತರ ರೂಪಾಯಿಗಳ ಮೌಲ್ಯವನ್ನು ಹೊಂದಿರಬಹುದು! ಅಲ್ಲವೇ?