- Home
- Entertainment
- TV Talk
- ಮದುವೆ ಬಗ್ಗೆ Kipi Keerthi ಓಪನ್ ಮಾತು: ಆ ಹುಡುಗ ಯಾರು? ನಾಚಿಕೊಂಡು ರೀಲ್ಸ್ ಕ್ವೀನ್ ಹೇಳಿದ್ದೇನು?
ಮದುವೆ ಬಗ್ಗೆ Kipi Keerthi ಓಪನ್ ಮಾತು: ಆ ಹುಡುಗ ಯಾರು? ನಾಚಿಕೊಂಡು ರೀಲ್ಸ್ ಕ್ವೀನ್ ಹೇಳಿದ್ದೇನು?
'ಹೇಳಿ ಜನರೇ' ಮೂಲಕ ಖ್ಯಾತರಾದ ಕಿಪ್ಪಿ ಕೀರ್ತಿ, ಖಾಸಗಿ ವಿಡಿಯೋ ಲೀಕ್ ಪ್ರಕರಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಿಯತಮ ಮುತ್ತು ವಿರುದ್ಧ ದೂರು ದಾಖಲಿಸಿದ್ದು, ಇದರ ನಡುವೆ ಮದುವೆ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ್ದೇನು?

ಹೇಳಿ ಜನರೇ.. ಮೂಲಕ ಫೇಮಸ್
ಹೇಳಿ ಜನರೇ ಎನ್ನುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸ್ತಿರೋ ಯುವತಿ ಕಿಪ್ಪಿ ಕೀರ್ತಿ (Kipi Keerthi). ಬಾಲ್ಯದಿಂದಲೂ ತಮ್ಮ ನೋಟದ ಕಾರಣದಿಂದ ಸಾಕಷ್ಟು ನೋವನ್ನು ಎದುರಿಸುತ್ತಲೇ ಬಂದಿದ್ದರೂ, ಬಾಡಿ ಶೇಮಿಂಗ್ನಿಂದ ತತ್ತರಿಸಿ ಹೋಗಿದ್ದರೂ, ಅದನ್ನೆಲ್ಲಾ ಹಿಮ್ಮೆಟ್ಟಿ ಜನರನ್ನು ನಗಿಸುತ್ತಾ ರೀಲ್ಸ್ ಮಾಡುತ್ತಿದ್ದ ಯುವತಿ ಈಕೆ. ತನ್ನ ಪಾಡಿಗೆ ತಾನು ಇದ್ದಾಕೆಗೆ, ರಿಯಾಲಿಟಿ ಷೋನಲ್ಲಿ ಯಾವಾಗ ಅವಕಾಶ ಸಿಕ್ಕಿತೋ ಅಲ್ಲಿಂದ ಬದುಕು ಬೇರೆಯದ್ದೇ ಟರ್ನ್ ಪಡೆದುಕೊಂಡಿದ್ದರೂ, ಈಕೆಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವವರ ಸಂಖ್ಯೆಯೂ ಅಷ್ಟೇ ಏರತೊಡಗಿತು. ಎಲ್ಲೋ ಇದ್ದ ಇವಳ ಜೊತೆ, ಸಂಬಂಧ ಬೆರೆಸಿ ಒಂದಿಷ್ಟು ವ್ಯೂವ್ಸ್, ಲೈಕ್ ಪಡೆದುಕೊಳ್ಳುವುದು ಒಂದೆಡೆಯಾದರೆ, ಪ್ರಚಾರ ಗಿಟ್ಟಿಸಿಕೊಳ್ಳಲು ಶುರುವಾದದ್ದೇ ಈಕೆಯ ಜೀವನವನ್ನು ಅದೆಲ್ಲೋ ತಂದು ನಿಲ್ಲಿಸಿಬಿಟ್ಟಿದೆ.
ಲವ್, ರೀಲ್ಸ್
ಲವ್ ಮಾಡುವುದಾಗಿ ಹೇಳಿ ಒಂದಿಷ್ಟು ಮಂದಿ, ಈಕೆಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಚಾನ್ಸ್ ಕೊಡಿಸುವುದಾಗಿ ಹೇಳಿ ಮತ್ತೊಂದಿಷ್ಟು ಮಂದಿ.. ಒಟ್ಟಿನಲ್ಲಿ ಕಿಪ್ಪಿ ಕೀರ್ತಿಯ ಖಾಸಗಿ ವಿಡಿಯೋ ಲೀಕ್ ಮಾಡುವ ಮಟ್ಟಿಗೆ ವಿಷಯ ಬೆರೆದು ಬಂದಿದೆ. ಕಿಪ್ಪಿ ಕೀರ್ತಿ ಇದೀಗ ಇದೇ ವಿಷಯವಾಗಿ ಕಣ್ಣೀರು ಕೂಡ ಹಾಕಿದ್ದಾರೆ. ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಕಿಪ್ಪಿ, ತನ್ನನ್ನು ಮೋಸ ಮಾಡಿದವರ ಬಗ್ಗೆ ತಿಳಿಸಿದ್ದಾರೆ.
ಖಾಸಗಿ ವಿಡಿಯೋ ಲೀಕ್
ನನಗೆ ಆತ ಮನೆಗೆ ಕರೆದುಕೊಂಡು ಹೋಗಿ ಡ್ರಿಂಕ್ಸ್ನಲ್ಲಿ ಏನೋ ಮಿಕ್ಸ್ ಮಾಡಿದ್ದು, ಆ ಬಳಿಕ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಹೀಗೆ ಅಂತ ಬೇರೆ ಬೇರೆಯವರು ಹೇಳಿದ್ರು, ಆಮೇಲೆ ಅದು ನನಗೂ ನಿಜ ಅನ್ನಿಸ್ತಿದೆ ಎಂದು ಕಿಪಿ ಹೇಳಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ಆತನ ಸ್ನೇಹಿತ ದರ್ಶನ್ ಎಂಬಾತನ ವಿರುದ್ಧ ಕಿಪ್ಪಿ ಕೀರ್ತಿ ದೂರು ದಾಖಲಿಸಿದ್ದಾರೆ. ಕಿಪಿ ಕೀರ್ತಿ ದಾಖಲು ಮಾಡಿರುವ ಕೇಸ್ ಇನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಕಿಪ್ಪಿ ಕೀರ್ತಿ ಹಾಗೂ ಸ್ನೇಹಿತರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೆ ಈ ರೀತಿ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ಮದುವೆಯ ಬಗ್ಗೆ ಕಿಪ್ಪಿ
ಇದರ ನಡುವೆಯೇ ಕಿಪ್ಪಿ ಈಗ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಕಿಪ್ಪಿ ಜೊತೆ ಕೇಳಿ ಬಂದ ಹೆಸರು ಸುನೀಲ್ ಕಪ್ಪೆ. ಇದೇ ಕಾರಣಕ್ಕೆ ಕಿಪ್ಪಿ ಮತ್ತು ಕಪ್ಪೆಯ ಮದುವೆಯಾಗುತ್ತದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಸದ್ದು ಕೂಡ ಆಗುತ್ತಿದೆ. ಇದೇ ವಿಷಯವನ್ನು ಈಕೆಗೆ ಕೇಳಿದಾಗ, ನಾಚಿಕೊಂಡಿದ್ದಾರೆ ಕಿಪ್ಪಿ. ಆ ರೀತಿ ಏನೂ ಇಲ್ಲ. ನಾನು ಅವರನ್ನು ಪಾಪು ಥರ ನೋಡುತ್ತಿದ್ದೇನೆ ಎನ್ನುತ್ತಲೇ, ನಾನು ಅವರನ್ನು ಮದುವೆಯಾಗಲ್ಲ , ಅರ್ಥ ಮಾಡಿಕೊಂಡಿಲ್ಲ ಅಂತೇನಲ್ಲ. ಆದರೆ ನನಗೆ ಮದುವೆಯ ಬಗ್ಗೆ ಇಂಟರೆಸ್ಟೇ ಹೋಗಿ ಬಿಟ್ಟಿದೆ ಎಂದಿದ್ದಾರೆ.
ನಾನು ಪ್ರೇರೇಪಣೆ ಅಷ್ಟೇ
ಅವನೂ ನನ್ನ ಹಾಗೆ ಹ್ಯಾಂಡಿಕ್ಯಾಪ್. ಅಂಥವರಿಗೆ ಎನ್ಕರೇಜ್ ಮಾಡಬೇಕು ಎನ್ನುವುದು ನನ್ನ ಆಸೆ ಅಷ್ಟೇ. ಅದನ್ನೇ ನಾನು ಮಾಡುತ್ತಿದ್ದೇನೆ. ನನ್ನನ್ನು ನೋಡಿ ಅವರೂ ರೀಲ್ಸ್ ಮಾಡಲು ಬಂದಿದ್ದಾರೆ. ಅವರಿಗೆ ನಾನು ಪ್ರೇರೇಪಣೆ ಆಗಿದ್ದೇನೆ. ಆದ್ದರಿಂದ ಅವರು ಇಷ್ಟ ಅಷ್ಟೇ ಎಂದಿದ್ದಾರೆ ಕಿಪ್ಪಿ.
ಬ್ರೇಕಪ್ ಬಗ್ಗೆ ಕಿಪ್ಪಿ
ಅಷ್ಟಕ್ಕೂ, ಕಿಪ್ಪಿಯ ಲವ್ ಬ್ರೇಕಪ್‌ಗಳ ಕೆಲ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದ್ದು ಇದೆ. ಮುತ್ತು ಜೊತೆಯಲ್ಲಿ ಬ್ರೇಕಪ್ ಮಾಡಿಕೊಂಡದ್ದೇನೆ. ನನ್ನ ಮತ್ತು ಮುತ್ತು ಜೊತೆ ಎಲ್ಲವೂ ಚೆನ್ನಾಗಿಯೇ ಇತ್ತು. ಸುನೀಲ್ ನನ್ನ ಒಳ್ರೆಯ ಫ್ರೆಂಡ್. ಸ್ನೇಹ ಹೊರತುಪಡಿಸಿ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧ ಇರಲಿಲ್ಲ. ಸುನೀಲ್ ಜೊತೆಗಿನ ಸ್ನೇಹವನ್ನು ಮುತ್ತು ಅನುಮಾನದಿಂದ ನೋಡಿದ್ದನು ಎಂದು ಕಿಪಿ ಕೀರ್ತಿ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಹೇಳಿಕೊಂಡಿದ್ದರು.