Published : Sep 16, 2026, 07:18 AM ISTUpdated : Sep 16, 2026, 11:14 PM IST

Karnataka News Live: Dharwad - ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ತಹಶೀಲ್ದಾರ್ ಲೋಕಾ ಬಲೆಗೆ - ₹1 ಕೋಟಿ ಲಂಚದ ಡೀಲ್ ಬಯಲು!

ಸಾರಾಂಶ

ಹೊಳೆನರಸೀಪುರ: ‘ನಾನು ಕೆಪಿಎಸ್ಸಿ, ಬಿಡದಿ, ನೈಸ್‌ ವಿಷಯ ಪ್ರಸ್ತಾಪಿಸಿದಾಗ ಪ್ರಜ್ವಲ್‌ ರೇವಣ್ಣನ ಸೆಲ್‌ನಲ್ಲಿ ಅಶ್ಲೀಲ ಚಿತ್ರಗಳ ಪೆನ್‌ಡ್ರೈವ್‌ ಇದೆ ಎಂದು ಕತೆ ಶುರು ಮಾಡಿದ್ದಾರೆ. ಆ ಹುಡುಗನ ಹೆಸರು ಇಟ್ಕಂಡು ದೇವೇಗೌಡರ ಕುಟುಂಬದ ಬಾಯಿ ಮುಚ್ಚಿಸಲು ನಿಮ್ಮ ಕೈಯಲ್ಲಿ ಆಗುತ್ತಾ?’ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

2 ವರ್ಷಗಳಿಂದ ಆತ ಜೈಲಿನಲ್ಲಿ ಇದ್ದಾನೆ. ನ್ಯಾಯಾಲಯ ತೀರ್ಪು ಕೊಟ್ಟಿದೆ, ತೀರ್ಪು ಸ್ವೀಕರಿಸಿದ್ದೇವೆ. ಆದರೆ 2 ವರ್ಷ ಇಲ್ಲದೆ ಇದ್ದಿದ್ದು, ಬಿಡದಿ, ಕೆಪಿಎಸ್‌ಸಿ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದ ಜೈಲಲ್ಲಿ ಫೋನ್ ಹಾಗೂ ಪೆನ್‌ಡ್ರೈವ್ ಇದೆ, ಅದರಲ್ಲಿ ಅಶ್ಲೀಲ ಚಿತ್ರ ಇದೆ ಎಂದು ಹೊಸದಾಗಿ ಕಥೆ ಶುರು ಮಾಡಿದ್ದಾರೆ ಎಂದರು.

11:14 PM (IST) Sep 16

Dharwad - ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ತಹಶೀಲ್ದಾರ್ ಲೋಕಾ ಬಲೆಗೆ - ₹1 ಕೋಟಿ ಲಂಚದ ಡೀಲ್ ಬಯಲು!

ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರು ಜಮೀನಿನ 'ಅ' ಖರಾಬ್ ತೆಗೆಯಲು ₹1 ಕೋಟಿ ಹಾಗೂ 1 ಎಕರೆ ಜಮೀನಿಗೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹50 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
Read Full Story

10:24 PM (IST) Sep 16

Viral News - ಗಾಂಜಾ ವಿಚಾರದಲ್ಲಿ ನಮ್ಮದು ಸೌಮ್ಯ ನೀತಿ; ಎನ್‌ಡಿಪಿಎಸ್‌ ಬೇಲ್ ವಿಚಾರಣೆಯಲ್ಲಿ ಸುಪ್ರೀಂ ಹೇಳಿಕೆ!

ಎನ್‌ಡಿಪಿಎಸ್ ಕಾಯ್ದೆಯಡಿ ಬರುವ ಗಾಂಜಾ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ತಾವು ತುಂಬಾ ಉದಾರ ಧೋರಣೆ ತಳೆಯುವುದಾಗಿ ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ. ಗಾಂಜಾ ವಶಪಡಿಸಿಕೊಂಡ ಪ್ರಕರಣವೊಂದರಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದರೂ, ಕೆಳ ನ್ಯಾಯಾಲಯಕ್ಕೆ ಶರಣಾಗಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
Read Full Story

10:17 PM (IST) Sep 16

Bengaluru - 'ಕಾಪಾಡಿ ಕಾಪಾಡಿ' ಎಂದು ಕಾರಿನಲ್ಲಿ ಕಿರುಚಾಟ, ಮದುಮಗಳ ಕಿಡ್ನ್ಯಾಪ್ ಮಾಡಿ ಸಿಕ್ಕ ಸಿಕ್ಕವರ ಮೇಲೆ ಕಾರು ಹತ್ತಿಸಿ ಹುಚ್ಚಾಟ

ಬೆಂಗಳೂರಿನಲ್ಲಿ ಸಿನಿಮೀಯ ಮಾದರಿಯಲ್ಲಿ ಕಿಡ್ನ್ಯಾಪ್ ಯತ್ನ ನಡೆದಿದೆ. ಪ್ರಕರಣದಲ್ಲಿ ಹೆತ್ತವರೇ ಮಗಳಿಗೆ ವಿಲನ್ ಆಗಿರುವ ಅನುಮಾನ ಇದೆ. ಅಪಹರಣ ಮಾಡುವ ವೇಳೆ ರಸ್ತೆಯಲ್ಲಿ ಸರಣಿ ಅಪಘಾತ ಮಾಡಿ ತೊಂದರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಾರ್ವಜನಿಕರು ರೋಚಕವಾಗಿ ಚೇಸ್ ಮಾಡಿ ಹಿಡಿದಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

10:00 PM (IST) Sep 16

ಹೆಂಡ್ತಿ ಅನಿತಾಗೆ ವಜ್ರದ ಹಾರ ಗಿಫ್ಟ್‌ ಮಾಡಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ತಮ್ಮ ವಾರ್ಷಿಕ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಹಸು-ಕುರಿಗಳ ಸಂಖ್ಯೆ, ಜಯಂತ್ ಚೌಧರಿ ಅವರ ಕ್ರಿಪ್ಟೋ ಹೂಡಿಕೆ ಹಾಗೂ ಹಳೆಯ ವಾಹನಗಳ ಮೇಲಿನ ಸಚಿವರ ಒಲವು ಬಹಿರಂಗವಾಗಿದೆ.

Read Full Story

08:59 PM (IST) Sep 16

ಸತತ ಫ್ಲಾಪ್ ಸಿನಿಮಾಗಳ ನಡುವೆ ಹೈದರಾಬಾದ್ ಬಿಡ್ತಾರಾ ಶ್ರೀಲೀಲಾ? ಅಷ್ಟಕ್ಕೂ ನಟಿಗೆ ಏನಾಯ್ತು?

ಸೌತ್ ಇಂಡಿಯನ್ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಶ್ರೀಲೀಲಾ ಇದೀಗ ಬಾಲಿವುಡ್‌ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಅವರು ತೆಲುಗು ಸಿನಿಮಾರಂಗವನ್ನು ಸಂಪೂರ್ಣವಾಗಿ ತೊರೆಯಲಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Read Full Story

08:27 PM (IST) Sep 16

CBFC - ಕೇಂದ್ರ ಸರ್ಕಾರದಿಂದ ಸಿಬಿಎಫ್‌ಸಿ ಪುನರ್ ರಚನೆ; ಕನ್ನಡಿಗನಿಗೂ ಒಲಿದ ಸೆನ್ಸಾರ್ ಮಂಡಳಿ ಸದಸ್ಯತ್ವ!

ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳ ಅವಧಿಗೆ ಸೆನ್ಸಾರ್ ಮಂಡಳಿಯನ್ನು (CBFC) ಪುನರ್ ರಚಿಸಿದೆ. 18 ಸದಸ್ಯರ ಈ ನೂತನ ಸಮಿತಿಯಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಕನ್ನಡಿಗ ರಿಕ್ಕಿ ಕೇಜ್ ಅವರಿಗೆ ಸ್ಥಾನ ನೀಡಲಾಗಿದೆ. ಸುನೀಲ್ ಶೆಟ್ಟಿ, ಪ್ರೀತಿ ಜಿಂಟಾ ಸೇರಿದಂತೆ ಹಲವು ಗಣ್ಯರು ಈ ಮಂಡಳಿಯಲ್ಲಿದ್ದಾರೆ.
Read Full Story

08:03 PM (IST) Sep 16

ಸಿನಿಮಾಗಳಿವೆ.. ಕ್ರೇಜ್ ಇದೆ.. ಆದರೆ ಹಿಟ್ ಮಾತ್ರ ಸಿಕ್ತಿಲ್ಲ - ಈ 5 ಸ್ಟಾರ್ ನಟಿಯರಿಗೆ ಏನಾಯ್ತು?

ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ಭಾರೀ ಕ್ರೇಜ್ ಸೃಷ್ಟಿಸಿದ್ದ ಶ್ರೀಲೀಲಾ, ಕೃತಿ ಶೆಟ್ಟಿ, ಮಾಳವಿಕಾ ಮೋಹನನ್, ಆಶಿಕಾ ರಂಗನಾಥ್ ಹಾಗೂ ಪೂಜಾ ಹೆಗ್ಡೆ ಇದೀಗ ಕಮರ್ಷಿಯಲ್ ಸಕ್ಸಸ್‌ಗಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

Read Full Story

07:53 PM (IST) Sep 16

ನಾಳೆ ಸೂರ್ಯ ರಾಶಿಚಕ್ರ ಬದಲಾಯಿಸುತ್ತಾನೆ, ಈ 4 ರಾಶಿಗಳಿಗೆ ಒಂದು ತಿಂಗಳ ಭಾರೀ ತೊಂದರೆ

Surya gochar 2026 : ಸೆಪ್ಟೆಂಬರ್ 17 ಅಂದರೆ ನಾಳೆ ಸೂರ್ಯ ಕನ್ಯಾ ರಾಶಿಗೆ ತನ್ನ ಚಕ್ರವನ್ನ ಬದಲಾಯಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಆ ನಾಲ್ಕು ರಾಶಿಯಲ್ಲಿ ಹುಟ್ಟಿದವರಿಗೆ ಎಚ್ಚರಿಕೆ ನೀಡಿದ್ದಾರೆ.

Read Full Story

07:33 PM (IST) Sep 16

ದರ್ಶನ್‌ಗೆ ಡಬಲ್ ಶಾಕ್ - ರೇಣುಕಾಸ್ವಾಮಿ ಕೇಸ್‌ನಲ್ಲಿ ಅಚ್ಚರಿಯ ತಿರುವು! ಪವಿತ್ರಾ ಗೌಡ ಸೇರಿ ಮೂವರಿಂದ ಜಾಮೀನು ಅರ್ಜಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೂಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯ ಸಮ್ಮತಿಸಿದ್ದು, ನಟ ದರ್ಶನ್‌ಗೆ ಸಂಕಷ್ಟ ಎದುರಾಗಿದೆ. ಇದೇ ವೇಳೆ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಮೂವರು ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಆರೋಪಿ ಲಕ್ಷ್ಮಣ್ ಆರೋಗ್ಯ ವರದಿ ನೀಡಲು ಕೋರ್ಟ್ ಸೂಚಿಸಿದೆ.
Read Full Story

07:30 PM (IST) Sep 16

Viral News - ಚೀನಾಗಾಗಿ ಪಾಕಿಸ್ತಾನದಲ್ಲಿ ಪ್ರತಿದಿನ ನೂರಾರು ಕತ್ತೆಗಳ ಮಾರಣಹೋಮ! ಅಸಲಿ ಕಾರಣ ಏನು?

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಚೀನಾಕ್ಕೆ ಕತ್ತೆಗಳ ಮಾಂಸ ಮತ್ತು ಚರ್ಮವನ್ನು ರಫ್ತು ಮಾಡುವ ಬೃಹತ್ ದಂಧೆಯನ್ನು ಆರಂಭಿಸಿದೆ. ಚೀನಾದ ಸಾಂಪ್ರದಾಯಿಕ ಔಷಧಿ 'ಎಜಿಯಾವೊ' ತಯಾರಿಕೆಗೆ ಕತ್ತೆ ಚರ್ಮದ ಬೇಡಿಕೆ ಹೆಚ್ಚಾಗಿದ್ದು, ಇದಕ್ಕಾಗಿ ಚೀನಾ ಪಾಕಿಸ್ತಾನದಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದೆ. ಈ ಉದ್ಯಮದಿಂದ ಪಾಕಿಸ್ತಾನಕ್ಕೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ಹರಿದುಬರುವ ನಿರೀಕ್ಷೆಯಿದೆ.
Read Full Story

07:28 PM (IST) Sep 16

ಒಬ್ಬರಿಗೆ ಹಿಟ್ ಮೇಲೆ ಹಿಟ್, ಮತ್ತೊಬ್ಬರಿಗೆ ಮಾತ್ರ ಸತತ ಸೋಲು - ಈ ಇಬ್ಬರು ಬ್ಯೂಟಿಗಳ ಕಥೆಯೇನು?

ನಟಿ ಮಮಿತಾ ಬೈಜು ಕೈಹಿಡಿದಿದ್ದೆಲ್ಲವೂ ಚಿನ್ನವಾಗುತ್ತಿದೆ ಎನ್ನುವಂತಾಗಿದೆ. ಕಯಾದು ಲೋಹರ್ ಸದ್ಯ ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ನಿರೀಕ್ಷಿತ ಮಟ್ಟದ ಯಶಸ್ಸು ಮಾತ್ರ ಸಿಗುತ್ತಿಲ್ಲ ಎನ್ನಲಾಗಿದೆ.

Read Full Story

07:19 PM (IST) Sep 16

ಇವರೇ ನೋಡಿ ಮಾಜಿ ಸಿಎಂ ಸಿದ್ದರಾಮಯ್ಯನವರ ಹೊಸ ಬಂಗಲೆಯ ರೂವಾರಿ! ಸ್ವಂತ ಬಂಗಲೆ ಹಿಂದಿದೆ ದಶಕಗಳ ಕನಸು!

ಎರಡು ಬಾರಿ ಮುಖ್ಯಮಂತ್ರಿಯಾದರೂ ಸ್ವಂತ ಮನೆಯಿಲ್ಲದ ಸಿದ್ದರಾಮಯ್ಯ ಅವರ ಹೊಸ ಮನೆಯ ಕನಸು ಮೈಸೂರಿನಲ್ಲಿ ನನಸಾಗಿದೆ. ಆದರೆ, ಮಾಜಿ ಸಿಎಂ ಅವರ ಸ್ವಂತ ಮನೆಯ ಕನಸಿನ ರೂವಾರಿ ಬೇರೊಬ್ಬ ವ್ಯಕ್ತಿಯೇ ಆಗಿದ್ದಾರೆ. ಸ್ವಂತ ಮನೆಗಾಗಿ ನಾಲ್ಕು ದಶಕಗಳಿಂದ ಕಾಣುತ್ತಿದ್ದ ಕನಸು ಇದೀಗ ನೆರವೇರಿದೆ.

Read Full Story

07:16 PM (IST) Sep 16

ಬರಗಾಲದ ಬಿಸಿ, ಗ್ರಾಹಕರಿಗೆ ನಿಂಬೆಹಣ್ಣಿನ ಬರೆ - ರಾಜ್ಯದಲ್ಲಿ ನಾಲ್ಕು ಪಟ್ಟು ಜಿಗಿತ ಕಂಡ ದರ, ಬೆಂಗಳೂರಿನಲ್ಲಿ ಕೆಜಿಗೆ ₹350!

ಕರ್ನಾಟಕದಲ್ಲಿ ತೀವ್ರ ಬರಗಾಲ ಮತ್ತು ಮಳೆಯ ಅಭಾವದಿಂದಾಗಿ ನಿಂಬೆಹಣ್ಣಿನ ಉತ್ಪಾದನೆ ಶೇ. 60ರಷ್ಟು ಕುಸಿದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿ, ಹಬ್ಬದ ಸೀಸನ್‌ನಲ್ಲಿ ನಿಂಬೆಹಣ್ಣಿನ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ.

Read Full Story

07:12 PM (IST) Sep 16

ತುಮಕೂರಲ್ಲಿ ಇಬ್ಬರು ಯುವಕರು ನಿಗೂಢ ಕಣ್ಮರೆ, ಬಟ್ಟೆ ಬೈಕ್ ಮತ್ತು ಶೂ ಪತ್ತೆ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಮಕ್ಕಳ ಬೈಕ್ ಹಾಗೂ ಶೂಗಳು ಪತ್ತೆಯಾದ ಬೆನ್ನಲ್ಲೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Read Full Story

07:03 PM (IST) Sep 16

ಅಂದು ಅಣ್ಣಾವ್ರು, ನಂತರ ಮೂರ್ತಿ, ಈಗ ಅನಂತ್ ಭಾರತೀಯ ಚಿತ್ರರಂಗದ ಉನ್ನತ ಗೌರವ 'ದಾದಾಸಾಹೇಬ್ ಫಾಲ್ಕೆ' ಪಡೆದ 3 ಕನ್ನಡಿಗರು!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಈವರೆಗೆ ಮೂವರು ಕನ್ನಡಿಗರು ಮುಡಿಗೇರಿಸಿಕೊಂಡಿದ್ದಾರೆ. ಡಾ. ರಾಜ್‌ಕುಮಾರ್, ವಿ.ಕೆ. ಮೂರ್ತಿ ಹಾಗೂ ಇತ್ತೀಚೆಗೆ 2024ರಲ್ಲಿ ಅನಂತ್ ನಾಗ್ ಅವರು ಈ ಐತಿಹಾಸಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ದಿಗ್ಗಜರ ಸಾಧನೆಗಳು ಕನ್ನಡ ನಾಡಿಗೆ ಅಪಾರ ಕೀರ್ತಿ ತಂದಿವೆ.
Read Full Story

06:28 PM (IST) Sep 16

ರಾಜ್‌ಕುಮಾರ್, ಅಂಬರೀಶ್ ಜೊತೆ ಮಿಂಚಿದ್ದ ನಟಿ ಅಂಬಿಕಾ ಜೀವನದ ಈ ಸತ್ಯ ನಿಮಗೆ ಗೊತ್ತಾ?

ನಟಿ ಅಂಬಿಕಾ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸ್ಟಾರ್ ಹೀರೋಯಿನ್ ಆಗಿ ಮಿಂಚಿದವರು. ಅಂಬಿಕಾ ಅವರ ವೈಯಕ್ತಿಕ ಜೀವನ, ವಿದೇಶಿ ವೈದ್ಯರೊಂದಿಗಿನ ಮದುವೆ ಹಾಗೂ ವಿಚ್ಛೇದನ ಸೇರಿದಂತೆ ಅವರ ಕುತೂಹಲಕಾರಿ ಸಿನಿ ಜರ್ನಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

06:13 PM (IST) Sep 16

ಕನ್ನಡದ ನಟನಿಗೆ ಅತ್ಯುನ್ನತ ರಾಷ್ಟ್ರೀಯ ಗೌರವ - 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಪುರಸ್ಕೃತ ಅನಂತ್ ನಾಗ್‌ಗೆ ನಮೋ ಪ್ರಶಂಸೆ!

ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಲಭಿಸಿದೆ. ಈ ಐತಿಹಾಸಿಕ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (X) ಖಾತೆಯಲ್ಲಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಇದು ಇಡೀ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.
Read Full Story

05:57 PM (IST) Sep 16

'ಆ ನಟನ ಜೊತೆ ನಟಿಸಿದ್ರೆ ಅವಕಾಶ ಬರಲ್ಲ' ಎಂದರು - ಆದರೂ ನಟಿ ಸೌಂದರ್ಯ ಲೆಕ್ಕಿಸದೇ ಮಾಡಿದ್ದೇನು?

ದಿವಂಗತ ನಟಿ ಸೌಂದರ್ಯ ಅವರ ಸಿನಿ ಜೀವನದ ಆರಂಭದ ದಿನಗಳ ಕುರಿತು ನಟ ಬಾಬು ಮೋಹನ್ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸೌಂದರ್ಯಗೆ ‘ಅಮ್ಮೋರು’ ಸಿನಿಮಾದಲ್ಲಿ ಅವಕಾಶ ಸಿಗಲು ತಾವು ಹೇಗೆ ಕಾರಣರಾದರು ಎಂಬುದನ್ನು ಬಾಬು ಮೋಹನ್ ವಿವರಿಸಿದ್ದಾರೆ.

Read Full Story

05:45 PM (IST) Sep 16

ಹೆಣ್ಣು ಮಕ್ಕಳು ಹೆಚ್ಚು ಇಷ್ಟಪಡ್ತಿರುವ ಎಲೆಕ್ಟ್ರಿಕ್ ಸೈಕಲ್‌ಗಳ ಲಿಸ್ಟ್, ಮಹಿಳೆಯರಿಗೆ ಯಾವುದು ಹೆಚ್ಚು ಸೂಕ್ತ?

E-Bikes: ನೀವು ನಿಮ್ಮ ಗೆಳತಿಗೆ, ಮಡದಿಗೆ ಎಲೆಕ್ಟ್ರಿಕ್ ಬೈಕ್ ಕೊಡಿಸಬೇಕು ಅಂದ್ಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಆಯ್ಕೆ ಯಾವ ಸೈಕಲ್ ಆಗಿರಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Read Full Story

05:31 PM (IST) Sep 16

ಆ ಕಾಲದ ಯುವಕರ ಹೃದಯ ಕದ್ದ ಚೆಲುವೆ ಡಿಸ್ಕೋ ಶಾಂತಿಗೆ ಏನಾಯ್ತು? ಆಸ್ಪತ್ರೆ ಫೋಟೋ ವೈರಲ್

ದಿವಂಗತ ರಿಯಲ್ ಸ್ಟಾರ್ ನಟ ಶ್ರೀಹರಿ ಅವರ ಪತ್ನಿ ಹಾಗೂ ಹಿರಿಯ ನಟಿ ಡಿಸ್ಕೋ ಶಾಂತಿ ಆಸ್ಪತ್ರೆ ಬೆಡ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

Read Full Story

05:21 PM (IST) Sep 16

IAS - ಅಸ್ಸಲಾಮು ಅಲೈಕುಮ್ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿಗೆ ಟ್ರಾನ್ಸಫರ್‌ ಶಾಕ್! ದಂಗಾದ ಸೋಶಿಯಲ್‌ ಮೀಡಿಯಾ!

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವ ವಿಡಿಯೋದಲ್ಲಿ 'ಅಸ್ಸಲಾಮು ಅಲೈಕುಮ್' ಪದ ಬಳಸಿದ್ದಕ್ಕಾಗಿ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಹಿಂದೂ ಬಲಪಂಥೀಯ ಸಂಘಟನೆಯ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.
Read Full Story

05:19 PM (IST) Sep 16

ಸೆ.18ರಂದು ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ಹಿನ್ನೆಲೆ, ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆ, ಎಲ್ಲೆಲ್ಲಿ?

ಕರಾವಳಿ ಭಾಗದ ಅಭಿವೃದ್ಧಿಗಾಗಿ ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತುಳುವಿನಲ್ಲಿ ವಿಡಿಯೋ ಸಂದೇಶ ನೀಡಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Read Full Story

05:14 PM (IST) Sep 16

Bengaluru - ರಾಜ್ಯದ 768 ಪೆಟ್ರೋಲ್ ಬಂಕ್‌ಗಳಲ್ಲಿ ಮಹಾಮೋಸ; ಪೆಟ್ರೋಲ್ ಗನ್‌ಗಳಿಂದ ಇಂಧನ ಅಳತೆ ಗೋಲ್‌ಮಾಲ್

ರಾಜ್ಯದ 805 ಪೆಟ್ರೋಲ್ ಬಂಕ್‌ಗಳ ಪೈಕಿ 768 ಬಂಕ್‌ಗಳಲ್ಲಿ ಇಂಧನ ಅಳತೆಯಲ್ಲಿ ಭಾರೀ ಗೋಲ್‌ಮಾಲ್ ನಡೆಯುತ್ತಿರುವುದು ತಪಾಸಣೆಯಿಂದ ಬಹಿರಂಗವಾಗಿದೆ. ಈ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಮಾಹಿತಿ ನೀಡಿದ್ದು, ಗ್ರಾಹಕರು ದೂರು ನೀಡಲು ಟೋಲ್ ಫ್ರೀ ಸಂಖ್ಯೆ 18005991100 ಬಿಡುಗಡೆ ಮಾಡಿದ್ದಾರೆ. ಕೇಂದ್ರದ ಹೊಸ ನಿಯಮಗಳನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಿದೆ.
Read Full Story

05:05 PM (IST) Sep 16

ಸಿನಿರಂಗದಲ್ಲಿ ಮೈಥಾಲಾಜಿಕಲ್ ಜಾತ್ರೆ ಟ್ರೆಂಡ್ - ದೇವರ ಪಾತ್ರಗಳಿಗೆ ಸ್ಟಾರ್ ಹೀರೋಗಳ ಪೈಪೋಟಿ!

ಸಿನಿರಂಗದಲ್ಲಿ ಸಿನಿಮಾ ಟ್ರೆಂಡ್ ಬದಲಾಗುತ್ತಿದ್ದು, ಮಾಸ್‌, ಲವ್‌ ಹಾಗೂ ಆ್ಯಕ್ಷನ್ ಕಥೆಗಳ ಜೊತೆಗೆ ಮೈಥಾಲಾಜಿಕಲ್ ಮತ್ತು ಡಿವೋಶನಲ್ ಸಿನಿಮಾಗಳತ್ತ ಸ್ಟಾರ್ ಹೀರೋಗಳು ಮುಖ ಮಾಡುತ್ತಿದ್ದಾರೆ.

Read Full Story

04:44 PM (IST) Sep 16

Amit Shah - ಅಂದು ಹೈ-ಅಲರ್ಟ್, ಹೈ-ಸೆಕ್ಯುರಿಟಿ! ಹುಬ್ಬಳ್ಳಿಯಿಂದ ಕೇಂದ್ರ ಸಚಿವ ಅಮಿತ್ ಶಾ ಸಂಚಾರ! ಇಲ್ಲಿದೆ ಟೈಮ್ ಟು ಟೈಮ್ ಕಂಪ್ಲೀಟ್ ಶೆಡ್ಯೂಲ್!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 18 ಮತ್ತು 19ರಂದು ಹುಬ್ಬಳ್ಳಿ ಹಾಗೂ ಬೆಳಗಾವಿಗೆ ದಿಢೀರ್ ಭೇಟಿ ನೀಡಲಿದ್ದಾರೆ. ಅವರು ಕೆಎಲ್‌ಇ ಮೆಡಿಕಲ್ ಕಾಲೇಜು ಮತ್ತು ಬೀರೇಶ್ವರ ಕೋ-ಆಪರೇಟಿವ್ ಸೊಸೈಟಿ ಕಟ್ಟಡಗಳನ್ನು ಉದ್ಘಾಟಿಸಲಿದ್ದು, ಈ ಪ್ರವಾಸವು ತೀವ್ರ ರಾಜಕೀಯ ಕುತೂಹಲ ಸೃಷ್ಟಿಸಿದೆ.

Read Full Story

04:40 PM (IST) Sep 16

ಯಶ್-ಕಿಯಾರಾ ಮುಂದಿನ ಸಿನಿಮಾ ಯಾವುದು? 'ಟಾಕ್ಸಿಕ್' ಬಳಿಕ ಶುರುವಾಯ್ತು ಹೊಸ ಲೆಕ್ಕಾಚಾರ

‘ಟಾಕ್ಸಿಕ್’ ಸಿನಿಮಾದ ಬಳಿಕ ಯಶ್ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರು ಸ್ಟಾರ್‌ಗಳ ಮುಂದಿನ ಸಿನಿಮಾ ಆಯ್ಕೆ ಇದೀಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Read Full Story

04:10 PM (IST) Sep 16

'ಕಾಂತಾರ 3' ಬರೋದು ಪಕ್ಕಾ - ಸಿನಿಮಾ ಯಾವಾಗ? ರಿಷಬ್ ಶೆಟ್ಟಿ ಕೊಟ್ರು ಬಿಗ್ ಅಪ್‌ಡೇಟ್

ಕಾಂತಾರ 3 ಸಿನಿಮಾ ಬಗ್ಗೆರಿಷಬ್ ಶೆಟ್ಟಿ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ತಿರುವನಂತಪುರಂನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ, ‘ಕಾಂತಾರ ಚಾಪ್ಟರ್ 1’ನಲ್ಲಿ ಘೋಷಿಸಿದಂತೆ ‘ಕಾಂತಾರ 3’ ಖಂಡಿತವಾಗಿಯೂ ಬರಲಿದೆ ಎಂದು ತಿಳಿಸಿದ್ದಾರೆ.

Read Full Story

04:10 PM (IST) Sep 16

Vijayanagara - ಗೌರಿ ಗಣೇಶ ಹಬ್ಬಕ್ಕೆ ಮನಸೋತ ವಿದೇಶಿ ಪ್ರಜೆ; ಹಂಪಿಯಲ್ಲಿ ಜರ್ಮನ್ ಪ್ರಜೆಯ ಮಾನವೀಯ ಸೇವೆ

ಹಂಪಿ ಸಮೀಪದ ಕಡ್ಡಿರಾಂಪುರ ತಾಂಡಾದಲ್ಲಿ ನಡೆದ ಗಣೇಶೋತ್ಸವದಲ್ಲಿ ಜರ್ಮನ್ ಪ್ರಜೆ ಹನ್ರಿ ಭಾಗವಹಿಸಿದ್ದರು. ಅವರು ತಮ್ಮ ಸ್ವಂತ ಹಣದಲ್ಲಿ ಹಂಪಿಯ ಇತಿಹಾಸ ಸಾರುವ ಪುಸ್ತಕಗಳನ್ನು ಖರೀದಿಸಿ ಮಕ್ಕಳು ಹಾಗೂ ಮಹಿಳೆಯರಿಗೆ ವಿತರಿಸಿದರು.
Read Full Story

03:44 PM (IST) Sep 16

ಭೂಗತ ಸಿನಿಮಾ ಅಂದ್ರೆ ವಿನಯ್‌ ರಾಜ್‌ಕುಮಾರ್‌ ಕೂಡ ನೆನಪಾಗುತ್ತಾರೆ - ಶಿವಣ್ಣನ ಖಡಕ್ ಮಾತು

ದುನಿಯಾ ವಿಜಯ್ ನಿರ್ದೇಶನದ ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ನಟನೆಯ ‘ಸಿಟಿ ಲೈಟ್ಸ್‌’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ ಕುರಿತು ಮಾತನಾಡಿದ ಶಿವಣ್ಣ, ವಿನಯ್ ರಾಜ್‌ಕುಮಾರ್ ಅವರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ.

Read Full Story

02:56 PM (IST) Sep 16

ಮುಸ್ಲಿಮರಲ್ಲಿ ದಾರಿ ತಪ್ಪಿದರೆ ಜಿಹಾದಿ, ಹಿಂದುತ್ವದಲ್ಲಿ ದಾರಿ ತಪ್ಪಿದರೆ ಕಾಂಗ್ರೆಸ್ಸಿಗರಾಗ್ತಾರೆ; ಛಲವಾದಿ ನಾರಾಯಣಸ್ವಾಮಿ

ಮಂಡ್ಯದ ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಾರಿ ತಪ್ಪಿದ ಹಿಂದೂಗಳು ಕಾಂಗ್ರೆಸ್ಸಿಗರಾಗುತ್ತಾರೆ ಮತ್ತು ಅವರು ಜಿಹಾದಿಗಳಿಗೆ ಸಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.

Read Full Story

02:30 PM (IST) Sep 16

ಮಲಯಾಳಂ ಯಾಕೆ? ಕನ್ನಡದಲ್ಲಿಯೇ ಉಂಟು ಸೈಕಾಲಜಿಕಲ್, ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾ

1991 ಮಲೆನಾಡಿನ ಹಿನ್ನೆಲೆಯಲ್ಲಿ ನಡೆಯುವ ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಪತ್ನಿಯ ಸಾವಿನಿಂದ ಖಿನ್ನತೆಗೆ ಒಳಗಾದ ನಾಯಕ, ಊರಿನಲ್ಲಿ ನಡೆಯುವ ಸರಣಿ ಕೊಲೆಗಳ ಬೆನ್ನತ್ತಿದಾಗ ಎದುರಾಗುವ ನಿಗೂಢ ತಿರುವುಗಳೇ ಈ ಚಿತ್ರದ ಕಥೆ. ವಿಜ್ಞಾನ ಮತ್ತು ಮೂಢನಂಬಿಕೆಯ ಸಂಘರ್ಷವನ್ನು ಹೊಂದಿರುವ ಈ ಚಿತ್ರ ಇದಾಗಿದೆ.

Read Full Story

01:36 PM (IST) Sep 16

Mandya - ಕಸ ಕಡ್ಡಿಗಳಿಂದ ತುಂಬಿದ್ದ 300 ಅಡಿ ಉದ್ದ, 300 ಅಡಿ ಅಗಲ ಮತ್ತು 30 ಅಡಿ ಆಳದ ಕಲ್ಯಾಣಿಗೆ ಮರುಜೀವ

ಮಂಡ್ಯ ಜಿಲ್ಲೆಯ ಗೌಡಗೆರೆ ಗ್ರಾಮದಲ್ಲಿರುವ ಚಿಕ್ಕದೇವರಾಜ ಒಡೆಯರ್ ಕಾಲದ ಐತಿಹಾಸಿಕ 'ಅಮ್ಮನ ಕಲ್ಯಾಣಿ'ಯನ್ನು ಗ್ರಾಮಸ್ಥರು ಹಾಗೂ ಪರಿತ್ರಾಣ ಫೌಂಡೇಶನ್ ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.

Read Full Story

01:11 PM (IST) Sep 16

ಬೆಂಗಳೂರಿಗೆ ವಂಡರ್ ಈ ಎಲೆಕ್ಟ್ರಾನಿಕ್ ಸಿಟಿ ರಿವರ್; ಇದೇ ನೋಡಿ ಫ್ಲೈಓವರ್ ಮೇಲೆ ಹರಿಯುವ ಏಕೈಕ ನದಿ!

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಜಲಾವೃತಗೊಂಡು ಕೃತಕ ನದಿಯಂತೆ ಮಾರ್ಪಟ್ಟಿತು. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿದರು. ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಅಲರ್ಟ್ ಘೋಷಿಸಿದೆ.

Read Full Story

12:42 PM (IST) Sep 16

Hassan - ಸ್ನೇಹಿತರೊಂದಿಗೆ ಲಾಡ್ಜ್‌ಗೆ ಬಂದಿದ್ದ ಬೆಂಗಳೂರು ಯುವತಿಯ ಅನುಮಾಸ್ಪದ ಸಾವು, ಬಾತ್‌ ರೂಂನಲ್ಲಿ ಶವ ಪತ್ತೆ!

ಹಾಸನದ ಸಕಲೇಶಪುರದ ಲಾಡ್ಜ್‌ವೊಂದರ ಬಾತ್‌ರೂಮ್‌ನಲ್ಲಿ ಬೆಂಗಳೂರು ಮೂಲದ 23 ವರ್ಷದ ವರ್ಷ ಎಂಬ ಯುವತಿಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಆಕೆಯೊಂದಿಗೆ ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

12:35 PM (IST) Sep 16

ಗೃಹ ಸಚಿವರ ತವರಲ್ಲೇ ಪೊಲೀಸ್ ಇನ್ಸ್‌ಪೆಕ್ಟರ್ ಕಾರಿಗೆ ಬೆಂಕಿ ಹಚ್ಚಿದ ಕಾನ್‌ಸ್ಟೇಬಲ್!

ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನಿಂದ ಕೋಪಗೊಂಡ ಕಾನ್ಸ್ಟೇಬಲ್ ರಾಜಶೇಖರ ವರನಾಳ್, ಪಿಎಸ್‌ಐ ಬಸವರಾಜ್ ಚಿತಕೋಟೆ ಅವರ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ತನ್ನ ವಿರುದ್ಧ ದೂರು ದಾಖಲಿಸಿಕೊಂಡಿದ್ದಕ್ಕೆ ಸಿಟ್ಟಾಗಿ ಈ ಕೃತ್ಯವೆಸಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Read Full Story

12:01 PM (IST) Sep 16

ಕೊನೆಗೂ ಪೊಲೀಸರ ಬಲೆಗೆ ‘ಸೂಡೋ ನಕ್ಸಲ್’ ಕನಕಲಬಂಡೆ ವೆಂಕಟೇಶ್! ಎಣ್ಣೆ ಹೊಡೆಯುತ್ತಾ ಚಿಕನ್ ಸೇವಿಸುತ್ತಿದ್ದ ಆರೋಪಿ

ತುಮಕೂರಿನ ಪಾವಗಡದಲ್ಲಿ ನಕ್ಸಲ್ ಹೆಸರಿನಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ ನಕಲಿ ನಕ್ಸಲ್ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಹಾಗೂ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿದ್ದಾನೆ. 150ಕ್ಕೂ ಹೆಚ್ಚು ಪೊಲೀಸರ ಸತತ ಕಾರ್ಯಾಚರಣೆ ಬಳಿಕ ಈತನನ್ನು ಸೆರೆಹಿಡಿಯಲಾಗಿದೆ.
Read Full Story

11:53 AM (IST) Sep 16

ಅನೇಕಲ್‌ - ಸರ್ವರ್ ಸಮಸ್ಯೆ, ಅನ್ನಭಾಗ್ಯ ಅಕ್ಕಿಗಾಗಿ ಪರದಾಟ, ಕಿಮೀಗಟ್ಟಲೇ ಸರತಿ ಸಾಲು, ವ್ಯವಸ್ಥೆ ವಿರುದ್ಧ ಜನಾಕ್ರೋಶ

Annabhagya: ಬೆಂಗಳೂರಿನ ಹೊರವಲಯದ ಆನೇಕಲ್‌ನಲ್ಲಿ ಸರ್ವರ್ ಸಮಸ್ಯೆಯಿಂದ ಅನ್ನಭಾಗ್ಯದ ಅಕ್ಕಿ ವಿತರಣೆ ವಿಳಂಬ ಪರಿಣಾಮದಿಂದಾಗ ಪಡಿತರದಾರರು ಕಿಮೀಗಟ್ಟಲೆ ಸರತಿ ಸಾಲಲ್ಲಿ ನಿಂತು ಪರದಾಡುವಂತಾಗಿದೆ.

Read Full Story

11:25 AM (IST) Sep 16

ಯುಟ್ಯೂಬರ್ ಪ್ರಕಾಶ್ ಕಲಬುರಗಿ ನಿಶ್ಚಿತಾರ್ಥ ವಿಡಿಯೋ - ಮಲ್ಲಿಗೆ ಮುಡಿದು ಬಂದ ವಧು!

ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಪ್ರಕಾಶ್ ಕಲಬುರಗಿ ಅವರ ನಿಶ್ಚಿತಾರ್ಥದ ವಿಡಿಯೋವೊಂದು ವೈರಲ್ ಆಗಿದೆ. ಶಾಸ್ತ್ರೋಕ್ತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಧುವನ್ನು ನೋಡಿದ ತಕ್ಷಣ ಪ್ರಕಾಶ್ ಓಡಿಹೋಗಿದ್ದಾರೆ.

Read Full Story

10:57 AM (IST) Sep 16

ಕಲ್ಯಾಣ ಕರ್ನಾಟಕ ಉತ್ಸವ - ನಾಳೆ ಕಲಬುರಗಿಗೆ ಸಿಎಂ, ಬರ ಪರಿಹಾರ, ಸಾಲಮನ್ನಾ.. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ

ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಕಲಬುರಗಿಗೆ ಭೇಟಿ ನೀಡಲಿದ್ದು, 1500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅಪ್ಪಾ ಕೆರೆ ನವೀಕರಣವನ್ನು ಸಮರ್ಥಿಸಿಕೊಂಡಿದ್ದು, ಬರ ಘೋಷಣೆ ವಿಚಾರದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ

Read Full Story

10:47 AM (IST) Sep 16

ಬೆಂಗಳೂರಿಗರ ಸಾರಿಗೆ ಜೀವನಾಡಿ ಬಿಎಂಟಿಸಿಗೆ ಭಾರೀ ಆರ್ಥಿಕ ಸಂಕಷ್ಟ! ಸ್ಥಗಿತವಾಗುತ್ತಾ ಬಸ್ ಸಂಚಾರ?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತೈಲ ಕಂಪನಿಗಳಿಗೆ 400 ಕೋಟಿ ರೂ.ಗೂ ಅಧಿಕ ಡೀಸೆಲ್ ಹಣ ಪಾವತಿಸದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಬಾಕಿ ಹಣ ಪಾವತಿಸದಿದ್ದರೆ ಇಂಧನ ಪೂರೈಕೆ ಸ್ಥಗಿತಗೊಳಿಸುವುದಾಗಿ ತೈಲ ಕಂಪನಿಗಳು ಎಚ್ಚರಿಕೆ ನೀಡಿವೆ. ಇದರಿಂದ ಲಕ್ಷಾಂತರ ಪ್ರಯಾಣಿಕರ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ.
Read Full Story

More Trending News