ನಾಳೆ ಸೂರ್ಯ ರಾಶಿಚಕ್ರ ಬದಲಾಯಿಸುತ್ತಾನೆ, ಈ 4 ರಾಶಿಗಳಿಗೆ ಒಂದು ತಿಂಗಳ ಭಾರೀ ತೊಂದರೆ
Surya gochar 2026 : ಸೆಪ್ಟೆಂಬರ್ 17 ಅಂದರೆ ನಾಳೆ ಸೂರ್ಯ ಕನ್ಯಾ ರಾಶಿಗೆ ತನ್ನ ಚಕ್ರವನ್ನ ಬದಲಾಯಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಆ ನಾಲ್ಕು ರಾಶಿಯಲ್ಲಿ ಹುಟ್ಟಿದವರಿಗೆ ಎಚ್ಚರಿಕೆ ನೀಡಿದ್ದಾರೆ.

ಕೆಲವು ರಾಶಿಗೂ ಒಳ್ಳೆಯದೂ ಆಗಲಿದೆ
Surya gochar 2026 : ಸೆಪ್ಟೆಂಬರ್ 17 ಅಂದರೆ ನಾಳೆ ಸೂರ್ಯ ಕನ್ಯಾ ರಾಶಿಗೆ ತನ್ನ ಚಕ್ರವನ್ನ ಬದಲಾಯಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಮೇಷ, ವೃಷಭ, ತುಲಾ ಮತ್ತು ಕುಂಭ ರಾಶಿಯ ಚಿಹ್ನೆಯಲ್ಲಿ ಜನಿಸಿದವರಿಗೆ ಎಚ್ಚರಿಕೆ ಇದೆ.
ಬುಧನ ಆಳ್ವಿಕೆಯ ಕನ್ಯಾ ರಾಶಿಕೆ ಸೂರ್ಯ ತಲುಪಿದ ನಂತರ ಕೆಲವು ರಾಶಿಗಳಿಗೆ ನಿರೀಕ್ಷೆಗೂ ಮೀರಿ ಒಳ್ಳೆಯದನ್ನ ಮಾಡುತ್ತಾನೆ. ಆದರೆ ಇತರರು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ಮೇಲೆ ತಿಳಿಸಿದ ನಾಲ್ಕು ರಾಶಿ ಹೊಂದಿರೋರು ತುಂಬಾನೇ ಹುಷಾರಾಗಿರಬೇಕು.
ಮೇಷ ರಾಶಿ:
ಆರನೇ ಮನೆಯಲ್ಲಿ ಸೂರ್ಯನ ಸಂಚಾರ ಇರಲಿದೆ. ಇದರಿಂದ ಕೆಲವರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
- ಪ್ರೇಮ ಸಂಬಂಧಗಳಲ್ಲಿ ಏರಿಳಿತ ಉಂಟಾಗಬಹುದು
- ಪ್ರೀತಿ ಸಂಬಂಧ ಮತ್ತು ಮಕ್ಕಳ ವಿಚಾರದಲ್ಲಿ ಹುಷಾರಾಗಿರಬೇಕು
- ಪರಸ್ಪರ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು
- ಸಣ್ಣ ಪ್ರವಾಸ ಸಕಾರಾತ್ಮಕ ಫಲಿತಾಂಶ ನೀಡುತ್ತದೆ
- ಪರಿಹಾರ: ಓಂ ಸೂರ್ಯಾಯ ನಮಃ ಮಂತ್ರವನ್ನ 108 ಬಾರಿ ಪಠಿಸಬೇಕು
ವೃಷಭ:
ಸೂರ್ಯನು ವೃಷಭ ರಾಶಿಯಲ್ಲಿ ಐದನೇ ಮನೆಯಲ್ಲಿ ಸಾಗುತ್ತಾನೆ. ಹೀಗಾಗಿ ಈ ರಾಶಿಯಲ್ಲಿ ಹುಟ್ಟಿದವರು ಕೆಲವು ನಿರ್ಧಾರಗಳನ್ನ ಕೈಗೊಳ್ಳುವಾಗ ಎಚ್ಚರಿದಿಂದ ಇರಬೇಕು.
- ಕೆಲವು ನಿರ್ಧಾರ ಕೈಗೊಳ್ಳುವಾಗ ಅನುಭವಿಗಳ ಸಲಹೆ ಅಗತ್ಯ
- ವಿದ್ಯಾರ್ಥಿಗಳು ಯಶಸ್ಸಿಗೆ ಹೆಚ್ಚು ಶ್ರಮ ನೀಡಬೇಕಾಗುತ್ತದೆ
- ಮನೆಯ ಸೂಕ್ಷ್ಮ ವಿಚಾರಗಳಲ್ಲಿ ಎಚ್ಚರದಿಂದ ವ್ಯವಹರಿಸಬೇಕು
- ಕೆಲವು ಸಂದರ್ಭದಲ್ಲಿ ಒತ್ತಡ, ತಾಳ್ಮೆ ತುಂಬಾನೇ ಮುಖ್ಯ
- ಪರಿಹಾರ: ಸೂರ್ಯ ಚಾಲಿಸಿ ಪಠಿಸಿ
ತುಲಾ:
ಸೂರ್ಯ ಸಂಚಾರವು ತುಲಾ ರಾಶಿಯ 12ನೇ ಮನೆಯ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಈ ರಾಶಿಯವರೂ ಹೆಚ್ಚು ಎಚ್ಚರದಿಂದ ಇರಬೇಕಾಗುತ್ತದೆ.
- ದಿನ ನಿತ್ಯದ ಖರ್ಚು, ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ
- ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಪಾಡಿಕೊಳ್ಳಿ
- ಅನಗತ್ಯ ಪ್ರವಾಸ ಬೇಡ, ನಿಮ್ಮ ಪ್ರಯಾಣ ಸವಾಲಿನಿಂದ ಇರುತ್ತದೆ
- ಆರೋಗ್ಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ
- ಆಯಾಸ ಹೆಚ್ಚಾಗಬಹುದು, ವಿಶ್ರಾಂತಿಗೆ ಮಹತ್ವ ನೀಡಿ
- ಪರಿಹಾರ: ಭಾನುವಾರ ಸೂರ್ಯದೇವನ ಪೂಜೆ, ನಿರ್ಗತಿಕರಿಗೆ ಗೋಧಿ ದಾನ
ಕುಂಭ:
ಸೂರ್ಯನು ಕುಂಭ ರಾಶಿಯ ಎಂಟನೆ ಮನೆಗೆ ಪ್ರವೇಶ ಮಾಡುತ್ತಾನೆ.
- ವೃತ್ತಿ ಜೀವನದಲ್ಲಿ ಏರಿಳಿತ ಆಗಬಹುದು
- ವ್ಯಾಪಾರ, ವ್ಯವಹಾರದಲ್ಲಿ ಜಾಗರೂಕರಾಗಿರಬೇಕು
- ಅಪಾಯಕಾರಿ ನಿರ್ಧಾರಗಳನ್ನು ತಪ್ಪಿಸಿಕೊಳ್ಳಿ
- ಅನಿರೀಕ್ಷಿತ ಸಂದರ್ಭಗಳು ಉದ್ಭವಿಸಬಹುದು
- ವೈವಾಹಿಕ ಜೀವನದಲ್ಲಿ ಸಮಸ್ಯೆ ಶುರುವಾಗುವ ಸಾಧ್ಯತೆ ಇದೆ
- ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
- ಪರಿಹಾರ: ಭಾನುವಾರದಂದು ಬಡವರಿಗೆ ಕೆಂಪುಬಟ್ಟೆ ದಾನ ಮಾಡಿ

