E-Bikes: ನೀವು ನಿಮ್ಮ ಗೆಳತಿಗೆ, ಮಡದಿಗೆ ಎಲೆಕ್ಟ್ರಿಕ್ ಬೈಕ್ ಕೊಡಿಸಬೇಕು ಅಂದ್ಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಆಯ್ಕೆ ಯಾವ ಸೈಕಲ್ ಆಗಿರಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Best E-Bikes: ಎಲೆಕ್ಟ್ರಿಕ್ ಬೈಕ್‌ಗಳು, ಸ್ಕೂಟರ್‍ಗಳ ಬೇಡಿಕೆ ಹೆಚ್ಚಾಗ್ತಿದ್ದಂತೆಯೇ ಸೈಲೆಂಟ್ ಆಗಿ ಎಲೆಕ್ಟ್ರಿಕ್ ಸೈಕಲ್‌ಗಳು ಟ್ರೆಂಡ್ ಆಗ್ತಿವೆ. ಮಹಿಳೆಯರು ಎಲೆಕ್ಟ್ರಿಕ್ ಸೈಕಲ್‌ಗಳನ್ನ ತುಂಬಾನೇ ಇಷ್ಟಪಡ್ತಿದ್ದಾರೆ.
ಯಾವುದೇ ಟ್ರಾಫಿಕ್ ಕಿರಿಕಿರಿ ಮಾಡದೇ, ಪರಿಸರ ಮಾಲಿನ್ಯವೂ ಮಾಡದೇ ಸುಲಭವಾಗಿ ಆಫೀಸ್‌ಗೆ ರೀಚ್ ಆಗಲು, ತರಕಾರಿ ತರಲು ಅಥವಾ ಫಿಟ್‌ನೆಸ್‌ಗಾಗಿ ಉತ್ತಮ ಆಯ್ಕೆ ಆಗಿದೆ. ಪ್ರಸ್ತುತ ಮಾರುಕಟ್ಟೆಗಳಲ್ಲಿ ನೂರಾರು ಬಗೆಯ ಇ-ಸೈಕಲ್‌ಗಳಿದ್ದು, ಮಹಿಳೆಯರಿಗೆ ಯಾವುದು ಸೂಕ್ತ ಅನ್ನೋ ವಿವರ ಈ ಕೆಳಗಿನಂತೆ ಇದೆ.
ಬ್ಯಾಟರಿ ಖಾಲಿಯಾದರೂ ಸಾಮಾನ್ಯ ಸೈಕಲ್‌ನಂತೆಯೇ ಪೆಡಲ್ ತುಳಿದುಕೊಂಡು ಹೋಗಬಹುದು. ಆದರೆ ಈ ಸೈಕಲ್‌ಗಳು ಸ್ವಲ್ಪ ಭಾರ ಎನಿಸಬಹುದು. ಹತ್ತಿ-ಇಳಿಯಲು ಸುಲಭವಾಗಿರುವ ಸ್ಟೆಪ್-ಥ್ರೂ (Step-through) ಫ್ರೇಮ್ ಇರುವ ಸೈಕಲ್‌ಗಳು ಮಹಿಳೆಯರಿಗೆ ಅತ್ಯಂತ ಆರಾಮದಾಯಕ. ಇದೇ ಸೈಕಲ್‌ಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ವರದಿಯಾಗಿದೆ.
ದೈನಂದಿನ ಓಡಾಟಕ್ಕೆ (City/Commuter)
| ಸೈಕಲ್ ಮಾದರಿ | ಯಾಕೆ ಇಷ್ಟವಾಗುತ್ತದೆ? | ಅಂದಾಜು ಬೆಲೆ (ಭಾರತೀಯ ರೂಪಾಯಿಗಳಲ್ಲಿ) |
| Huffy Vienna | ಕಡಿಮೆ ಬಜೆಟ್‌ನ ಬೆಸ್ಟ್ ಆಯ್ಕೆ | ₹59,400 |
| Ride1Up Roadster V3 | ಅತಿ ಕಡಿಮೆ ತೂಕ (ಎತ್ತಿಡಲು ಸುಲಭ) | ₹1,18,500 |
| Aventon Level 4 REC | ಬೆಲೆಗೆ ತಕ್ಕ ಅತ್ಯುತ್ತಮ ಮೋಟಾರ್ & ಬ್ಯಾಟರಿ | ₹1,69,900 |
| Priority Current Plus | ವೇಗವಾಗಿ ಚಲಿಸುವ ಅಲ್ಟಿಮೇಟ್ ಬೈಕ್ | ₹2,80,400 ರಿಂದ |
ಗುಡ್ಡಗಾಡು ಪ್ರದೇಶಗಳಿಗೆ (eMTB)
| ಸೈಕಲ್ ಮಾದರಿ | ಯಾಕೆ ಇಷ್ಟವಾಗುತ್ತದೆ? | ಅಂದಾಜು ಬೆಲೆ (ಭಾರತೀಯ ರೂಪಾಯಿಗಳಲ್ಲಿ) |
| Aventon Current ADV | ಬಜೆಟ್ ಬೆಲೆಯ ಫುಲ್ ಪವರ್ ಮೌಂಟೇನ್ ಬೈಕ್ | ₹3,39,900 |
| Orbea Rise SL | ಹತ್ತುವ ರಸ್ತೆಗಳಿಗೆ ಅತ್ಯುತ್ತಮ | ₹4,83,000 |
| Trek Fuel+ EX | ಅತ್ಯಂತ ನಿಶ್ಯಬ್ದ ಮತ್ತು ಪ್ರೀಮಿಯಂ ಕ್ವಾಲಿಟಿ | ₹6,79,900 |
ಮಕ್ಕಳಿಗಾಗಿ (Family & Cargo)
| ಸೈಕಲ್ ಮಾದರಿ | ಯಾಕೆ ಇಷ್ಟವಾಗುತ್ತದೆ? | ಅಂದಾಜು ಬೆಲೆ (ಭಾರತೀಯ ರೂಪಾಯಿಗಳಲ್ಲಿ) |
| Segway MUXI | ಅತ್ಯುತ್ತಮ ಸೇಫ್ಟಿ ಫೀಚರ್ಸ್ | ₹1,44,400 |
| Aventon Abound LR | ಹೆಚ್ಚು ತೂಕ ಹೊರಬಲ್ಲದು, ಜೊತೆಗೆ ಥ್ರೊಟಲ್ ಇದೆ | ₹1,69,900 |
| Xtracycle Swoop ASM | ಅತ್ಯಂತ ಶಕ್ತಿಶಾಲಿ ಮೋಟಾರ್ | ₹3,82,400 |
| Bunch Bike | ಇದರಲ್ಲಿ ಬರೋಬ್ಬರಿ 4 ಮಕ್ಕಳನ್ನು ಕೂರಿಸಬಹುದು | ₹5,52,400 |
ಆರಾಮದಾಯಕ ಸವಾರಿ (Comfort/Cruiser)
| ಸೈಕಲ್ ಮಾದರಿ | ಯಾಕೆ ಇಷ್ಟವಾಗುತ್ತದೆ? | ಅಂದಾಜು ಬೆಲೆ (ಭಾರತೀಯ ರೂಪಾಯಿಗಳಲ್ಲಿ) |
| Retrospec Beaumont Rev+ | ಬಳಸಲು ಸುಲಭ, ಕ್ಯಾರಿಯರ್ ಲಭ್ಯ | ₹1,35,900 |
| Aventon Pace 5 REC | ಆರಂಭಿಕ ಸವಾರರಿಗೆ ಹೇಳಿಮಾಡಿಸಿದ್ದು | ₹1,52,900 |
| Priority Glide | ಸಾಮಾನ್ಯ ಸೈಕಲ್‌ನಂತೆಯೇ ಮೃದು ಅನುಭವ | ₹1,52,900 |
| Electra Townie Go! | ಸ್ಟೈಲಿಶ್ ಲುಕ್ ಮತ್ತು ಆರಾಮದಾಯಕ ಸೀಟು | ₹1,78,400 |


