ಬೆಳಗಾವಿ: ದಿನ ಒಬ್ಬೊಬ್ಬ ಸ್ಥಳೀಯರು, ನಮ್ಮ ಕ್ಷೇತ್ರದವರು ಪ್ರೀತಿಯಿಂದ ಊಟ ತಂದು ಕೊಡುತ್ತಿದ್ದಾರೆ. ಊಟ ಬೇಡ ಎನ್ನಲು ಆಗುತ್ತದೆಯೇ? ಪ್ರೀತಿಯಿಂದ ಕರೆಯುತ್ತಾರೆ. ಅದಕ್ಕೆ ಒಂದೊಂದು ದಿನ ಒಂದೊಂದು ಕಡೆ ಊಟಕ್ಕೆ ಹೋಗುತ್ತೇವೆ. ಇದು ಯಾವ ಔತಣಕೂಟವೂ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಗುರುವಾರ ಶಾಸಕರ ಜತೆ ಔತಣಕೂಟದ ಬಗ್ಗೆ ಪ್ರತಿಕ್ರಿಯಿಸಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೊಡ್ಡಣ್ಣನವರ ಕಳೆದ 15 ವರ್ಷಗಳಿಂದ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ನಾವೆಲ್ಲ ಹೋಗಿದ್ದೆವು. ನನ್ನ ಕ್ಷೇತ್ರದ ಹುಡುಗನೊಬ್ಬ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ಆತ ಮುದ್ದೆ, ಉಪ್ಸಾರು ಊಟ ಮಾಡಿ ಕಳಿಸುತ್ತೇವೆ ಎನ್ನುತ್ತಿದ್ದಾನೆ. ನಾಡಿದ್ದು ನಮ್ಮ ಆಸೀಫ್ ಸೇಠ್, ಫಿರೋಜ್ ಸೇಠ್ ಊಟಕ್ಕೆ ಕರೆದಿದ್ದಾರೆ ಎಂದರು.
11:54 PM (IST) Dec 13
Golden Star Ganesh wildlife conservation :ಏಷಿಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಆಯೋಜಿಸಿದ್ದ 5ನೇ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ ರಾಯಭಾರಿ ಗೋಲ್ಡನ್ ಸ್ಟಾರ್ ಗಣೇಶ್ ಚಾಮರಾಜನಗರದ ಮೀಣ್ಯಂ ಗ್ರಾಮದಲ್ಲಿ ಭಾಗವಹಿಸಿದ್ದರು. ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರಿದರು.
11:00 PM (IST) Dec 13
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ, ಹೈಟೆಕ್ ಕಾರ್‌ನಲ್ಲಿ ಗೋವುಗಳನ್ನು ಕಳ್ಳತನ ಮಾಡುತ್ತಿದ್ದವರನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದಾರೆ. ಆದರೆ, ಕಳ್ಳರು ಅತಿವೇಗವಾಗಿ ಚಲಾಯಿಸಿ ತಪ್ಪಿಸಿಕೊಂಡಿದ್ದು, ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ..
10:37 PM (IST) Dec 13
10:06 PM (IST) Dec 13
ಹಾವೇರಿಯ ಶಿಗ್ಗಾವಿ ಕೋರ್ಟ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್, 20 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 80 ವರ್ಷದ ಅಜ್ಜ ಮತ್ತು 75 ವರ್ಷದ ಅಜ್ಜಿಯನ್ನು ಯಶಸ್ವಿಯಾಗಿ ಒಂದುಗೂಡಿಸಿದೆ. ನ್ಯಾಯಾಧೀಶರು ಮತ್ತು ವಕೀಲರ ಮನವೊಲಿಕೆಯ ಫಲವಾಗಿ, ನಾಲ್ಕು ಜೋಡಿಗಳು ಒಂದಾಗಿದ್ದಾರೆ.
10:03 PM (IST) Dec 13
ಮೋನಿಕಾ ಜೊತೆ ಪೊಲೀಸಪ್ಪನ ಅಕ್ರಮ ಸಂಬಂಧ ಕೇಸ್‌ಗೆ ಟ್ವಿಸ್ಟ್, ಕಿಚುಕಿಚುಮಾ ಎಂದ ರೀಲ್ಸ್ ರಾಣಿ, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಪೊಲೀಸ್ ಪೇದೆ ಜೊತೆ ಮೋನಿಕಾ ಪರಾರಿಯಾದ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಇದೀಗ ಸ್ವತಃ ಮೋನಿಕಾ ಕೇಸ್‌ಗೆ ಟ್ವಿಸ್ಟ್ ಕೊಟ್ಟಿದ್ದಾಳೆ.
09:43 PM (IST) Dec 13
09:23 PM (IST) Dec 13
ಭಟ್ಕಳ ತಾಲೂಕಿನ ಬೆಳಕೆ ಗರಡಿ ಹಿತ್ತಲು ಪ್ರದೇಶದಲ್ಲಿ, ಕೋರಿಯರ್ ನೀಡುವ ನೆಪದಲ್ಲಿ ಬಂದ ಇಬ್ಬರು ಕಳ್ಳರು 70 ವರ್ಷದ ವೃದ್ಧೆಯೊಬ್ಬರಿಗೆ ನೀರು ಕೇಳಿ ಗಮನ ಬೇರೆಡೆ ಸೆಳೆದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
08:23 PM (IST) Dec 13
ಬೆಂಗಳೂರಿನ ಗಿರಿನಗರದಲ್ಲಿ, ಹೈಟೆನ್ಷನ್ ವೈಯರ್ ಮೇಲೆ ಕುಳಿತಿದ್ದ ಸಾಕು ಗಿಳಿಯನ್ನು ರಕ್ಷಿಸಲು ಯತ್ನಿಸಿದ 32 ವರ್ಷದ ಯುವಕನೊಬ್ಬ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾನೆ. ಅಪಾರ್ಟ್‌ಮೆಂಟ್ ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್ ಬಳಸಿ ಗಿಳಿಯನ್ನು ಓಡಿಸಲು ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ.
08:20 PM (IST) Dec 13
ಗೋವಾದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಅಮೆರಿಕನ್ ಯುವತಿಯೊಬ್ಬರು ಅಸ್ವಸ್ಥರಾದಾಗ, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಸಿಪಿಆರ್ ನೀಡಿ ಪ್ರಾಣ ಉಳಿಸಿದ್ದಾರೆ. ವಿಮಾನ ಇಳಿಯುವವರೆಗೂ ಯುವತಿಯ ಆರೈಕೆ ಮಾಡಿ, ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ. ಸಮಯೋಚಿತ ಸೇವೆಗೆ ವ್ಯಾಪಕ ಪ್ರಶಂಸೆ
07:57 PM (IST) Dec 13
ಶಿರಸಿ ತಾಲೂಕಿನ ಐತಿಹಾಸಿಕ ಶಂಕರ ನಾರಾಯಣ ದೇವಳದ ಪಾಳುಬಿದ್ದಿದ್ದ ಕಲ್ಯಾಣಿಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುನಶ್ಚೇತನಗೊಳಿಸಲಾಗಿದೆ. ಈ ಕಾಮಗಾರಿಯಿಂದಾಗಿ ಕಲ್ಯಾಣಿಯ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾಗಿದ್ದು, ದೈನಂದಿನ ಬಳಕೆಗೆ ಅನುಕೂಲವಾಗಿದೆ ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
07:57 PM (IST) Dec 13
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಬ್ಯಾಸ್ಟಿಯನ್ ಪಬ್‌ನಲ್ಲಿ ಮಧ್ಯರಾತ್ರಿ ಗಲಾಟೆ ನಡೆದಿದೆ. ಸರ್ವೀಸ್ ವಿಚಾರವಾಗಿ ಉದ್ಯಮಿ ಸತ್ಯ ನಾಯ್ಡು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದು, ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪ. ಕಬ್ಬನ್ ಪಾರ್ಕ್ ಪೊಲೀಸರಿಂದ ಘಟನೆ ಬಗ್ಗೆ ತನಿಖೆ
07:42 PM (IST) Dec 13
ಕೇಂದ್ರದ ಸಾಗರಮಾಲಾ ಮತ್ತು ಮತ್ಸ್ಯ ಸಂಪದ ಯೋಜನೆಯಡಿ ಹಂಗಾರಕಟ್ಟೆ ಸೇರಿದಂತೆ ಕರಾವಳಿಯ ಹಲವು ಬಂದರುಗಳ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ಅನುದಾನ ಮಂಜೂರಾತಿ ಪ್ರಕ್ರಿಯೆಯಲ್ಲಿದೆ. ಇದರೊಂದಿಗೆ, ಬೆಂಗಳೂರು-ಕಾರವಾರ ವಂದೇ ಭಾರತ್ ರೈಲು ಶೀಘ್ರ ಆರಂಭಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ
07:22 PM (IST) Dec 13
07:02 PM (IST) Dec 13
ಕಾಂತಾರ ಸಿನೆಮಾದ ಯಶಸ್ಸಿಗಾಗಿ ನಟ ರಿಷಬ್ ಶೆಟ್ಟಿ ಸಲ್ಲಿಸಿದ್ದ ಹರಕೆಯ ಕೋಲದ 'ಎಣ್ಣೆಬೂಳ್ಯ' ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ, ಬಾರೆಬೈಲ್ ಜಾರಂದಾಯ ದೈವಸ್ಥಾನದ ಸಮಿತಿಯು ಸ್ಪಷ್ಟೀಕರಣ ನೀಡಿದೆ. ದೈವದ ಕಟ್ಟುಕಟ್ಟಳೆಯಲ್ಲಿ ಯಾವುದೇ ಲೋಪವಾಗಿಲ್ಲ ಮತ್ತು ದೈವದ ಅನುಮತಿಯಂತೆ ಎಲ್ಲವೂ ನಡೆದಿದೆ ಎಂದಿದೆ.
06:52 PM (IST) Dec 13
Madikeri honey trap case :ಫೇಸ್ಬುಕ್‌ನಲ್ಲಿ ಪರಿಚಯವಾದ ಮಡಿಕೇರಿಯ ಯುವತಿಯನ್ನು ಭೇಟಿಯಾಗಲು ಬಂದ ಮಂಡ್ಯದ ಯುವಕನ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಇದು ಹನಿಟ್ರ್ಯಾಪ್ ಕೃತ್ಯ ಎಂದು ಶಂಕಿಸಲಾಗಿದ್ದು, ಯುವತಿ ಪೊಲೀಸರ ವಶದಲ್ಲಿದ್ದಾಳೆ. ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
06:51 PM (IST) Dec 13
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಮ್ಯಾಗಿ ಟ್ಯಾಬ್ಲೆಟ್ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಬಿಸಿ ನೀರಿಗೆ ಹಾಕಿದ ತಕ್ಷಣ ನೂಡಲ್ಸ್ ಸಿದ್ಧವಾಗುವ ಈ ಟ್ಯಾಬ್ಲೆಟ್ನ ಅಸಲಿಯತ್ತೇನು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಷ್ಯ
06:45 PM (IST) Dec 13
ಬೆಂಗಳೂರಲ್ಲಿ ಪಾಸ್‌ಪೋರ್ಟ್ ಮಾಡಲು ಎಲ್ಲೂ ಹೋಗಬೇಕಿಲ್ಲ, ಮನೆ ಬಾಗಿಲಿಗೆ ಬರಲಿದೆ ವ್ಯಾನ್, ಅತೀ ಸುಲಭವಾಗಿ ಪಾಸ್‌ಪೋರ್ಟ್ ಈಗ ಮನೆಬಾಗಿಲಲ್ಲೇ ಸಿಗುವ ವಿನೂತನ ಯೋಜನೆ ಬೆಂಗಳೂರಿನಲ್ಲಿ ಆರಂಭಗೊಂಡಿದೆ.
06:24 PM (IST) Dec 13
06:16 PM (IST) Dec 13
ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪು ಇಲ್ಲ ಅಂದ್ರೆ ಏನೋ ಮಿಸ್ ಆದಂತಹ ಅನುಭವ ಆಗುವುದು. ಕೊತ್ತಂಬರಿ ಸೊಪ್ಪಿಗೆ ಬಹುತೇಕ ಯಾವಾಗಲೂ ಡಿಮ್ಯಾಂಡ್ ಇರುವುದು. ಒಮ್ಮೆ ಈ ಸೊಪ್ಪು ತಂದರೂ ಕೂಡ ಕೆಲವೊಮ್ಮೆ ಬಳಸೋಕೆ ಮರೆತು ಹೋಗಿ ಅಲ್ಲೇ ಕೊಳೆಯಬಹುದು, ಒಣಗಲೂಬಹುದು. ಕೊತ್ತಂಬರಿ ಬೆಳೆಯೋದು ಹೇಗೆ?
05:59 PM (IST) Dec 13
05:51 PM (IST) Dec 13
ಬೆಂಗಳೂರಿನಲ್ಲಿ ರಾಜ್ಯ ಸರ್ಕಾರವು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಈ ಯೋಜನೆಗಾಗಿ ಕನಕಪುರ ರಸ್ತೆ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯ ಬಳಿ 3 ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದ್ದು, ತಾಂತ್ರಿಕ ಕಾರ್ಯಸಾಧ್ಯತಾ ವರದಿ ತಯಾರಿಸಲು ಟೆಂಡರ್ ಕರೆಯಲಾಗಿದೆ.
05:35 PM (IST) Dec 13
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಕೋಚಿಂಗ್ ನಡೆಸುವ ಶಿಕ್ಷಕರೇ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ, ಪೋಷಕರು ಬಿಇಒಗೆ ತರಾಟೆ.
05:22 PM (IST) Dec 13
05:21 PM (IST) Dec 13
ಬಾಡಿಗೆದಾರರ ಮನೆಯಿಂದ ಹೊರಹಾಕಲು ಬಂದ ಮಾಲೀಕನಿಗೆ ಆಘಾತ, ತಾಯಿ-ಇಬ್ಬರು ಮಕ್ಕಳ ಶವಪತ್ತೆ, ಅಪಾರ್ಟ್‌ಮೆಂಟ್‌ನಲ್ಲಿ ಕೆಲ ತಿಂಗಳಿನಿಂದ ಬಾಡಿಗೆ ನೀಡದೇ ಉಳಿದುಕೊಂಡಿದ್ದ ಬಾಡಿಗೆದಾರರನ್ನು ಹೊರಹಾಕಲು ಕೋರ್ಟ್ ನೋಟಿಸ್ ಹಿಡಿದು ಬಂದ ಮಾಲೀಕ ಕಂಗಾಲಾಗಿದ್ದಾನೆ.
05:06 PM (IST) Dec 13
ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ, ಯುವತಿಯಿಂದ 4.5 ಲಕ್ಷ ರೂ. ಹಣ ಪಡೆದು, ತಾನು ವಿಚ್ಛೇದಿತ ಎಂಬ ಸತ್ಯ ಮುಚ್ಚಿಟ್ಟು ಈಗ ಬೇರೆ ಮದುವೆಗೆ ಸಿದ್ಧತೆ. ಇದರಿಂದ ಆಕ್ರೋಶಗೊಂಡ ಸಂತ್ರಸ್ತ ಯುವತಿ, ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿರುವ ಯುವಕನ ಮನೆ ಮುಂದೆ ನ್ಯಾಯಕ್ಕಾಗಿ ಗಲಾಟೆ ನಡೆಸಿದ್ದಾರೆ.
04:38 PM (IST) Dec 13
04:37 PM (IST) Dec 13
ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ, ದಿವ್ಯಾಂಗ ಯುವತಿಯ ಮೇಲೆ ಬಲತ್ಕಾರ ಎಸಗಿದ ನೆರೆಮನೆಯ ಯುವಕ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಸಂತ್ರಸ್ತೆ ಗರ್ಭಿಣಿಯಾದ ಬಳಿಕ ಮದುವೆಗೆ ನಿರಾಕರಿಸಿದ್ದರಿಂದ, ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
04:35 PM (IST) Dec 13
ಕಳೆದ 3 ವರ್ಷಗಳಲ್ಲಿ ರಾಜ್ಯದ ರೈತರು ಮತ್ತು ಕನ್ನಡಪರ ಹೋರಾಟಗಾರರ ಮೇಲೆ ತಲಾ 41 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಪ್ರಕರಣಗಳ ಹಿಂಪಡೆಯುವ ಸರ್ಕಾರದ ಮಾನದಂಡಗಳ ಬಗ್ಗೆಯೂ ವಿವರಿಸಿದ್ದಾರೆ.
04:15 PM (IST) Dec 13
ಬಿಗ್ ಬಾಸ್ ಕನ್ನಡ 12ರ ವೀಕೆಂಡ್ ಪಂಚಾಯಿತಿಯಲ್ಲಿ, ರಜತ್ ಮತ್ತು ಚೈತ್ರಾ ಕುಂದಾಪುರ ತನ್ನನ್ನು ಅನಗತ್ಯವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಶ್ವಿನಿ ಗೌಡ ಕಿಚ್ಚ ಸುದೀಪ್ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಏನೇನು ಹೇಳಿದ್ರು ನೋಡಿ!
04:13 PM (IST) Dec 13
White Cloth Cleaning Tips: ಬಿಳಿ ಬಟ್ಟೆಗಳನ್ನು ಹಾಕಿಕೊಂಡಾಗ ಅವು ನೀಡುವ ಸೌಂದರ್ಯ, ಪ್ರತಿಷ್ಠೆಯೇ ಬೇರೆ. ಬೇಗ ಕಲೆ ಆಗುತ್ತದೆ, ಮ್ಯಾನೇಜ್ ಮಾಓಕೆ ಆಗೋದಿಲ್ಲ ಎಂದು ಕೆಲವರು ಬಿಳಿ ಬಟ್ಟೆ ಹಾಕಲು ಯೋಚನೆ ಮಾಡುತ್ತಾರೆ. ಆದರೆ ಬಿಳಿ ಬಟ್ಟೆಯನ್ನು ಬಿಳಿಯಾಗಿ ಇಡಲು ಇರುವ ಸಿಂಪಲ್ ಕ್ರಮಗಳು ಇಲ್ಲಿವೆ.
03:10 PM (IST) Dec 13
ಕೇಂದ್ರ ಸಚಿವ ವಿ. ಸೋಮಣ್ಣ ಅವರು, ಡಾ. ಜಿ. ರಮೇಶ್ವರ್ ಮುಖ್ಯಮಂತ್ರಿಯಾಗಬೇಕೆಂಬುದು ತುಮಕೂರಿನಲ್ಲಿ ಬಹಿರಂಗವಾಗಿ ಹೇಳಿದ್ದಾರೆ. ಜಿಲ್ಲೆಗೆ ಸಾವಿರಾರು ಕೋಟಿ ವೆಚ್ಚದ ರೈಲ್ವೆ ಯೋಜನೆಗಳು, 20 ಕೋಟಿ ರೂ. ವೆಚ್ಚದ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಹಾಗೂ ಮೆಟ್ರೋ ಯೋಜನೆಗೆ ಸಂಪೂರ್ಣ ಬೆಂಬಲ ಘೋಷಿಸಿದರು.
03:08 PM (IST) Dec 13
Karna Serial Today Episode Update: ಕರ್ಣ ಧಾರಾವಾಹಿಯಲ್ಲಿ ಸಂಜಯ್‌ಗೆ ನಿಧಿ ಕಂಡರೆ ಆಗೋದಿಲ್ಲ. ಹೀಗಾಗಿ ಅವನು ಈ ಬಾರಿ ಅವಳ ಮರ್ಯಾದೆ ತೆಗೆಯೋ ಕೆಲಸ ಮಾಡಿದ್ದಾನೆ. ಆದರೆ ಕರ್ಣ ಸುಮ್ಮನೆ ಬಿಡಬೇಕಲ್ವಾ? ಬಿಡೋದಿಲ್ಲ. ಕರ್ಣ ಈಗ ಸಿಡಿದೆದ್ದಿದ್ದಾನೆ, ಅವನಿಂದ ಸಂಜಯ್ ಬಚಾವ್ ಆಗಬೇಕಿದೆ.
03:03 PM (IST) Dec 13
03:01 PM (IST) Dec 13
Bengaluru: ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಠಾಣೆಯ ಕಾನ್ಸ್‌ಟೇಬಲ್ ರಾಘವೇಂದ್ರ, ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವಿವಾಹಿತೆ 'ರೀಲ್ಸ್ ರಾಣಿ' ಮೋನಿಕಾ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾನೆ.
02:38 PM (IST) Dec 13
NRI shocked in Bengaluru: ಬೆಂಗಳೂರಿನಲ್ಲಿ ಇಂದು ಎಲ್ಲರೂ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಹೀಗಿರುವಾಗ ಅಮೆರಿಕದಿಂದ ಬೆಂಗಳೂರಿಗೆ ಬಂದ ಉದ್ಯೋಗಿ, ಸಹದ್ಯೋಗಿಗಳ ಫಿಟ್‌ನೆಸ್ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಆತಂಕ ಹೊರಹಾಕಿದ್ದಾರೆ.
02:28 PM (IST) Dec 13
02:18 PM (IST) Dec 13
ಪದ್ಮಶ್ರೀ ಪುರಸ್ಕೃತ, ಗ್ರ್ಯಾಮಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನ ನಡೆದಿದೆ. ಡೆಲಿವರಿ ಬಾಯ್‌ಗಳ ವೇಷದಲ್ಲಿ ಬಂದ ಇಬ್ಬರು ಕಳ್ಳರು, ಮನೆಯ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕದ್ದೊಯ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
01:57 PM (IST) Dec 13
ಸುಮಾ ಅವರ ಮಗ ರೋಶನ್ ಕನಕಾಲ 'ಮೋಗ್ಲಿ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. 'ಮೋಗ್ಲಿ' ಚಿತ್ರದ ಪ್ರಚಾರದ ಭಾಗವಾಗಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು, ಅದರಲ್ಲಿ ಸುಮಾ ಮತ್ತು ರಾಜೀವ್ ಅವರ ವಿಚ್ಛೇದನದ ಬಗ್ಗೆಯೂ ವಿವರಿಸಿದ್ದಾರೆ.
01:46 PM (IST) Dec 13
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳೊಂದಿಗೆ ನಡೆಸಿದ ಸಭೆಯಲ್ಲಿ, ಸರ್ಕಾರಕ್ಕೆ ಎಚ್ಚರಿಕೆ ಪತ್ರ ಬರೆದಿದ್ದ ಕಿರಣ್ ಹೆಬ್ಬಾರ್ ಎಂಬ ಸದಸ್ಯನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
01:30 PM (IST) Dec 13
ಕೆಲವರು ಸೇರಿಕೊಂಡು ನನ್ನನ್ನ ಹನಿಟ್ರ್ಯಾಪ್ ಮಾಡಿದ್ದಾರೆ. ಹನಿಟ್ರ್ಯಾಪ್ ಮೂಲಕ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಹಣ ಕೊಡಲು ಒಪ್ಪದಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟಿದ್ದಾರೆ ಎಂದು ವಾಲ್ಮೀಕಿ ಆಶ್ರಮದ ಬ್ರಹ್ಮಾನಂದ ಗುರೂಜಿ ಹೇಳಿದ್ದಾರೆ.