ಕೆಲವರು ಸೇರಿಕೊಂಡು ನನ್ನನ್ನ ಹನಿಟ್ರ್ಯಾಪ್ ಮಾಡಿದ್ದಾರೆ. ಹನಿಟ್ರ್ಯಾಪ್ ಮೂಲಕ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಹಣ ಕೊಡಲು ಒಪ್ಪದಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟಿದ್ದಾರೆ ಎಂದು ವಾಲ್ಮೀಕಿ ಆಶ್ರಮದ ಬ್ರಹ್ಮಾನಂದ ಗುರೂಜಿ ಹೇಳಿದ್ದಾರೆ.

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೇಳೆಕೋಟೆ ಬಳಿಯಲ್ಲಿರುವ ವಾಲ್ಮೀಕಿ ಆಶ್ರಮದ ಬ್ರಹ್ಮಾನಂದ ಗುರೂಜಿ ವಿರುದ್ಧ ಲೈಂ*ಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಬ್ರಹ್ಮಾನಂದ ಗುರೂಜಿ ವಾಲ್ಮೀಕಿ ಗುರುಕಲ ಪೀಠದ ಮಠಾಧೀಶರಾಗಿದ್ದಾರೆ. ಈ ಆರೋಪ ಸಂಬಂಧ ಬ್ರಹ್ಮಾನಂದ ಗುರೂಜಿ ಪ್ರತಿಕ್ರಿಯೆ ನೀಡಿದ್ದು, ಸುಬ್ಬಲಕ್ಷ್ಮೀ (ಹೆಸರು ಬದಲಾಯಿಸಲಾಗಿದೆ) ಹಾಗೂ ಕೆಲವರು ಸೇರಿಕೊಂಡು ನನ್ನನ್ನ ಹನಿಟ್ರ್ಯಾಪ್ ಮಾಡಿದ್ದಾರೆ. ಹನಿಟ್ರ್ಯಾಪ್ ಮೂಲಕ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಹಣ ಕೊಡಲು ಒಪ್ಪದಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟಿದ್ದಾರೆ ಎಂದು ಹೇಳಿದ್ದಾರೆ.

ಮೆಸೆಂಜರ್ ಮೂಲಕ ಬೆದರಿಕೆ, ಬೇರೆ ನಂಬರ್‌ನಿಂದ ಕರೆ

ಮಹಿಳೆ ಫೇಸ್‌ಬುಕ್ ಮೇಸೆಂಜರ್ ಮೂಲಕ ‌ನನಗೆ ಸಂದೇಶ ಕಳುಹಿಸಿದ್ದಾರೆ. ಬೇರೆ ಬೇರೆ ನಂಬರ್ ಗಳ ಮೂಲಕ ನನಗೆ ಕರೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಕೆಲವೊಂದು ವಿಡಿಯೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಸಂಬಂಧ ನಾನು ಡಿಸೆಂಬರ್ 9 ರಂದು ದೊಡ್ಡಬಳ್ಳಾಪುರ ಠಾಣೆಗೆ ದೂರು‌ ನೀಡಿದ್ದೇನೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಆಕೆಯ ಪತಿಯಿಂದಲೇ ಮಹಿಳೆಯ ಪರಿಚಯ

ಸೈಟ್ ವಿಚಾರದಲ್ಲಿ ನನಗೆ ಈ ಮಹಿಳೆ ಪರಿಚಯ ಆಗಿದೆ. ಕಳೆದ 2 ವರ್ಷಗಳ ಹಿಂದೆ ಪರಿಚಯ ಆಗಿದ್ದಳು. ಅವರ ಪತಿ ನರೇಶ್ ಮೂಲಕವೇ ಪರಿಚಯವಾಗಿದ್ದಾರೆ. ಸೈಟ್ ಹಣ ವಾಪಸ್ ಈಗಾಗಲೇ ನೀಡಲಾಗಿದೆ. ಇದರಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಕೇಳಿದ್ರು‌ ನಾನು ಆಸಕ್ತಿ ತೋರಿಸಿಲ್ಲ ಎಂದು ಗುರೂಜಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!

ವೈರಲ್ ವಿಡಿಯೋದಲ್ಲಿ ಏನಿದೆ?

ಒಟ್ಟು ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಹಿಳೆ ಜೊತೆಗೆ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆ ಮತ್ತು ಮತ್ತೊಂದು ವಿಡಿಯೋ ಕಾಲ್ ತುಣುಕು. ಆಡಿಯೋ ಸಂಭಾಷಣೆಯಲ್ಲಿ ಮಹಿಳೆಯನ್ನು ಸ್ವಾಮೀಜಿ ರೂಮ್‌ಗೆ ಬರುವಂತೆ ಕರೀತಾರೆ. ವಿಡಿಯೋ ಕಾಲ್‌ನಲ್ಲಿ ಸ್ವಾಮೀಜಿ ಅರೆನಗ್ನವಾಗಿರೋದನ್ನು ನೋಡಬಹುದಾಗಿದೆ. ಈ ಎಲ್ಲಾ ಘಟನೆಗಳ ಕುರಿತು ಮಹಿಳೆ ಮಾತನಾಡಿರುವ ವಿಡಿಯೋ ಸಹ ಮುನ್ನಲೆಗೆ ಬಂದಿದೆ. 5 ಸಾವಿರ ರೂಪಾಯಿ ಕೊಡುವೆ ರೂಮ್‌ಗೆ ಬಾ ಅಂತಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಮನೆ ಓನರ್​​​ಳನ್ನೇ ಪಟಾಯಿಸಿಬಿಟ್ಟ; ಅವರನ್​​ ಬಿಟ್​​, ಇವರನ್​ ಬಿಟ್​​ ಅವಳ್ಯಾರು?