Bengaluru: ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಠಾಣೆಯ ಕಾನ್ಸ್‌ಟೇಬಲ್ ರಾಘವೇಂದ್ರ, ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವಿವಾಹಿತೆ 'ರೀಲ್ಸ್ ರಾಣಿ' ಮೋನಿಕಾ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. 

ಬೆಂಗಳೂರು: ಎರಡು ಮಕ್ಕಳಿದ್ರೂ ವಿವಾಹಿತೆಯನ್ನು ಪ್ರೇಮಿಸಿ ಪೊಲೀಸ್ ಕಾನ್ಸ್‌ಟೇಬಲ್ ರಾಘವೇಂದ್ರ ಮತ್ತೊಂದು ಮದುವೆಯಾಗಿದ್ದಾನೆ. ಮೈಸೂರು ಮೂಲದ ರೀಲ್ಸ್ ರಾಣಿ ಮೋನಿಕಾ 15 ವರ್ಷ ದಾಂಪತ್ಯ ಜೀವನ ನಡೆಸಿದ ಗಂಡನನ್ನು ಬಿಟ್ಟು ಪೊಲೀಸಪ್ಪನೊಂದಿಗೆ ಪರಾರಿಯಾಗಿದ್ದಾಳೆ. ಉತ್ತರ ಕರ್ನಾಟಕ ಮೂಲದ ರಾಘವೇಂದ್ರ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಠಾಣೆಯ ಹೊಯ್ಸಳ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು, ಇದೇ ವಿಷಯಕ್ಕಾಗಿ ರಾಘವೇಂದ್ರ ಅಮಾನುತುಗೊಂಡಿದ್ದಾನೆ. ರಾಘವೇಂದ್ರನಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮೋನಿಕಾ ಮೊದಲ ಪತಿಯಿಂದ ದೂರವಾಗಿ ಮಂಜುನಾಥ್ ಎಂಬವರನ್ನು ಮದುವೆಯಾಗಿದ್ದಳು. ಇದೀಗ ಮಂಜುನಾಥ್‌ ಅವರಿಂದನೂ ದೂರವಾಗಿದ್ದಾಳೆ.

ಜೂನ್‌ನಲ್ಲಿ ಮೋನಿಕಾ ಮತ್ತು ರಾಘವೇಂದ್ರನಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿತ್ತು. ಪರಿಚಯವಾದ ಎರಡೇ ತಿಂಗಳಲ್ಲಿ ಇಬ್ಬರಿಗೂ ಲವ್ ಆಗಿದೆ. ನಂತರ ಮೊಬೈಲ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡು ಹಗಲು ರಾತ್ರಿ ಅನ್ನದೇ ಮಾತಾಡಿದ್ದಾರೆ. ಸಲುಗೆ ಹೆಚ್ಚಾದಂತೆ ಇಬ್ಬರು ಸುತ್ತಾಟವೂ ಸಹ ಹೆಚ್ಚಾಗಿತ್ತು.

ಗಂಡನ ವಿರುದ್ಧ ದೂರು ದಾಖಲಿಸಿದ್ದ ಮೋನಿಕಾ

ಈ ಎಲ್ಲಾ ಬೆಳವಣಿಗೆ ನಡುವೆ ಮೂರು ತಿಂಗಳ ಹಿಂದೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಐನಾತಿ ಮೋನಿಕಾ, ನನ್ನ ಜೀವನ ರೂಪಿಸಿಕೊಳ್ಳಲು ನಾನು ಹೋಗ್ತಿದ್ದೇನೆ,ನನ್ನ ಗಂಡನಿಗೆ ಕರೆಸಿ ಬುದ್ದಿ ಹೇಳಿ ಅಂತ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಳು. ದೂರಿನ ಬೆನ್ನಲ್ಲೇ ಪೊಲೀಸರು ಮೋನಿಕಾ ಪತಿ ಮಂಜುನಾಥ್ ಅವರಿಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಇಲ್ಲಿಯವರೆಗೂ ಮಂಜುನಾಥ್ ಅವರಿಗೆ ಪತ್ನಿಯ ಯಾವ ಕಳ್ಳಾಟವೂ ಗೊತ್ತಿರಲಿಲ್ಲ.

ಪತಿ ಮಂಜುನಾಥ್ ಠಾಣೆಯಲ್ಲಿದ್ದಾಗ ಮನೆಗೆ ಬಂದ ಮೋನಿಕಾ, 160 ಗ್ರಾಂ ಚಿನ್ನಾಭರಣ,1.80 ಲಕ್ಷ ಹಣದೊಂದಿಗೆ ಎಸ್ಕೇಪ್ ಆಗಿದ್ದಾಳೆ. ಗಂಡ ಕಾಲ್ ಮಾಡಿದ್ರೆ ಚಾಲಾಕಿ ಮೋನಿಕಾ ರಿಸೀವ್ ಮಾಡಿಲ್ಲ. ನಂತರ ಪೊಲೀಸರು ಮೋನಿಕಾಳ ಇನ್‌ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿದಾಗ ರಾಘವೇಂದ್ರ ಜೊತೆಗಿನ ಸಂಬಂಧ ಗೊತ್ತಾಗಿದೆ. ಈ ವಿಚಾರ ಹಿರಿಯ ಅಧಿಕಾರಿಗಳಿಗೆ ಗೊತ್ತಾಗ್ತಿದ್ದಂತೆ ರಾಘವೇಂದ್ರನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: 5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್

ಮಂಜುನಾಥ್‌ಗೆ ಬೆದರಿಕೆ ಹಾಕಿರೋ ರಾಘವೇಂದ್ರ

ಅಮಾನುತುಗೊಂಡ್ರು ಬುದ್ಧಿ ಕಲಿಯದ ರಾಘವೇಂದ್ರ ಎರಡ್ಮೂರು ತಿಂಗಳಲ್ಲಿ ಮತ್ತೆ ಕೆಲಸಕ್ಕೆ ಬರುತ್ತೀನಿ ಎಂದು ಧಿಮಾಕು ತೋರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಮೋನಿಕಾ ಪತಿ ಮಂಜುನಾಥ್‌ಗೆ ಕರೆ ಮಾಡಿ ನಿನ್ನ 12 ವರ್ಷದ ಮಗನನ್ನ ಕೊ*ಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.

ಮಗನಿಗೆ ಈ ವಿಚಾರವನ್ನು ಹೇಳಬಾರದು ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಎರಡು ಬಾರಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ರೀತಿ ಯಾರಿಗೂ ಆಗಬಾರದು. ಆತನಿಗೂ ಮದುವೆ ಆಗಿ ಎರೆಡು ಗಂಡು ಮಕ್ಕಳಿದ್ದಾರೆ. ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡು ಈಗೆ ಇನ್ನೊಬ್ಬರ ಮನೆ ಹಾಳು ಮಾಡಿದ್ದಾರೆ. ಆತನನ್ನ ಅಮಾನತು ಮಾಡೋದಲ್ಲ. ಕೆಲಸದಿಂದ ವಜಾ ಮಾಡಬೇಕು ಎಂದು ಮಂಜುನಾಥ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿಮ್‌ಗೆ ಹೋದ್ರೆ, ಚಿಕನ್‌ ತಿಂದ್ರೆ ಮ್ಯಾನೇಜರ್‌ ನಗ್ತಾರೆ: NRI ಪೋಸ್ಟ್‌ನಿಂದ ಆಘಾತಕಾರಿ ಸತ್ಯ ಬಯಲು!