ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳೊಂದಿಗೆ ನಡೆಸಿದ ಸಭೆಯಲ್ಲಿ, ಸರ್ಕಾರಕ್ಕೆ ಎಚ್ಚರಿಕೆ ಪತ್ರ ಬರೆದಿದ್ದ ಕಿರಣ್ ಹೆಬ್ಬಾರ್ ಎಂಬ ಸದಸ್ಯನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಬೆಂಗಳೂರು: ರಾಜ್ಯದಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಲಕ್ಷಾಂತರ ನಿವಾಸಿಗಳ ಸಮಸ್ಯೆಗಳು, ಹಕ್ಕುಗಳು ಹಾಗೂ ಆಡಳಿತ ವ್ಯವಸ್ಥೆ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಇಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಈ ಸಭೆಯನ್ನು ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಸಂಯುಕ್ತವಾಗಿ ಆಯೋಜಿಸಿತ್ತು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅಪಾರ್ಟ್ಮೆಂಟ್ ಅಸೋಸಿಯೇಷನ್ ಸದಸ್ಯನ ವಿರುದ್ಧ ಕೆಂಡಾಮಂಡಲವಾದ ಘಟನೆ ನಡೆದಿದೆ.

ಕಿರಣ್ ಹೆಬ್ಬಾರ್ ಎಂಬಾತನ ವಿರುದ್ಧ ಬಹಿರಂಗವಾಗಿ ಡಿಸಿಎಂ ಗರಂ

ಅಪಾರ್ಟ್ಮೆಂಟ್ ಅಸೋಸಿಯೇಷನ್ ಸದಸ್ಯ ಕಿರಣ್ ಹೆಬ್ಬಾರ್ ಎಂಬಾತನ ವಿರುದ್ಧ ಬಹಿರಂಗವಾಗಿ ಡಿಸಿಎಂ ಡಿಕೆ ಶಿವಕುಮಾರ್ ಸಿಡಿದೆದ್ದಿದ್ದಾರೆ.ಕಿರಣ್ ಪತ್ರ ಬರೆದು ಡಿಕೆಶಿಯನ್ನ ಪ್ರಶ್ನಿಸಿದ್ದರು. ನನ್ನನ್ನು ಹೆದರಿಸಲು ಬರಬೇಡಿ..‌ ನಾನು ಯಾವನಿಗೂ ಹೆದರಲ್ಲ. ಕೆಲವ್ರಿಗೆ ನಾನು ಯಾರು ಅನ್ನೋದೇ ಗೊತ್ತಿಲ್ಲ. ಆತ ಕಾಂಗ್ರೆಸ್ ಸರ್ಕಾರ ಕೆಲ್ಸ ಮಾಡಿಲ್ಲ ಅಂತಾ ವಾರ್ನ್ ಮಾಡಿ ಪತ್ರ ಬರೆದಿದ್ದಾನೆ. ಬೇಸಿಕ್ ಕಾಮನ್ ಸೆನ್ಸ್ ಇಟ್ಕೊಂಡು ನನ್ನ ಹತ್ರ ಡೀಲ್ ಮಾಡಬೇಕು. ನಂಗೆ ವಾರ್ನ್ ಮಾಡೋದು ಎಚ್ಚರಿಕೆ ಕೊಡೋದು ನಡೆಯಲ್ಲ. ಪ್ರಧಾನಿ ಕೇಂದ್ರ..ಹೋಂ ಮಿನಿಸ್ಟರ್ ಗೆ ಹೆದರದೇ ಜೈಲಿಗೆ ಹೋದವನು ನಾನು‌. ಇವನು ಯಾರು ಹೆಬ್ಬಾರ್ ಗೆ ಹೆದರ್ತೀನಾ..!? ನಿಮ್ಮ‌ ವಾರ್ನಿಂಗ್ ಗೆ ನಾವು ಹೆದರಲ್ಲ. ನಿಮ್ಮ ಸರ್ವೀಸ್ ಗೆ ಮಾಡಿದ್ರೆ ನಾಲ್ಕು ವೋಟ್ ಬರುತ್ತೆ ಅಂತ. ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಂಡಿಲ್ವಾ? ಈ ಸರ್ಕಾರವನ್ನ ಹೆದರಿಸೋಕೆ ಬರಬೇಡಿ. ನಿಮ್ಮ ಸಮಸ್ಯೆ ಹೇಳಿಕೊಳ್ಳಿ, ನಿಮ್ಮ‌ ಕೆಲಸ ಮಾಡಿಸಿಕೊಳ್ಳಿ.

ಬೆಂಗಳೂರಿನಲ್ಲಿ ಬಿಜೆಪಿಗೆ ಹೆಚ್ಚು ವೋಟು

ಬಿಜೆಪಿಗೆ ಹೆಚ್ಚು ವೋಟು ತಾನೆ ಬೆಂಗಳೂರಿನಲ್ಲಿ ಕೊಟ್ಟಿದ್ದು..!? ಭ್ರಮೆ ಬೇಡ..ಬೆದರಿಕೆ ಹಾಕೋದು ನಮ್ ಸರ್ಕಾರದ ವಿರುದ್ಧ ನಡೆಯಲ್ಲ. ನಾನು ನೇರ ದಿಟ್ಟವಾಗಿ ಮಾತಾನಾಡ್ತೀನಿ. ಬೇಜಾರ್ ಮಾಡ್ಕೋಬೇಡಿ. ನಾನು ನೇರವಾಗಿ, ದಿಟ್ಟವಾಗಿ ಮಾತಾಡಿದ್ದೇನೆ. ಏನು ಬೇಜಾರ್ ಮಾಡಿಕೊಳ್ಳುವ ಅಗತ್ಯ ಇಲ್ಲ. ನಾನು ತುಂಬಾ ಕಟುವಾಗಿ ಮಾತಾಡುದ್ರು ಮನಸ್ಪೂರ್ತಿಯಿಂದ ಕೆಲಸ ಮಾಡ್ತೀನಿ.

ಅವನ್ಯಾರೋ ಹೆಬ್ಬಾರ್ ಅಂತೆ,

ಅವನ್ಯಾರೋ ಹೆಬ್ಬಾರ್ ಅಂತೆ, ನನಗೆ ವಾರ್ನ್ ಕೊಡೋಕೆ ಮುನ್ನ ಹುಷಾರ್. ನಿಮ್ಮನ್ನ ಕರೆಯಬೇಕು ಅಂತ ಯಾವ ನಿಯಮವೂ ಇಲ್ಲ. ಆದರೂ ನಿಮ್ಮನ್ನೆಲ್ಲಾ ಕರೆದು ಈಗ ಮಾತನಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ನಿಮಗೆ ತಲುಪಿಲ್ಲವೇ..? ನಮ್ಮ ಗ್ಯಾರಂಟಿ ಯೋಜನೆ ಬಿಜೆಪಿ ತನ್ನ ರಾಜ್ಯಗಳಲ್ಲಿ ಜಾರಿ ಮಾಡುತ್ತಿದ್ದಾರೆ. ಇದನ್ನೆಲ್ಲಾ ನೀವು ಮೊದಲು ತಿಳಿದುಕೊಳ್ಳಿ, ಎಲ್ಲರನ್ನೂ ನಾವು ದೂಷಣೆ ಮಾಡ್ತಿಲ್ಲ. ನನ್ನ ಮೇಲೆ ವಿಶ್ವಾಸ ಇಟ್ಟು, ನೀವೆಲ್ಲಾ ಬಂದಿದ್ದೀರಿ. ನಾನು ಸಾವಿರಾರು ಅಪಾರ್ಟ್ಮೆಂಟ್ ಕಟ್ಟಿದ್ದೇನೆ, ಜಾಗ ಕೊಟ್ಟಿದ್ದೇನೆ. ನಮ್ಮ ಅಧಿಕಾರಿಗಳು ನಿಮಗೆ ಸಹಕರಿಸಲ್ಲ ಅಂದರೆ ಏನು ಮಾಡ್ತೀರಾ? ಎಂದು ಹೇಳಿದರು.