NRI shocked in Bengaluru: ಬೆಂಗಳೂರಿನಲ್ಲಿ ಇಂದು ಎಲ್ಲರೂ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಹೀಗಿರುವಾಗ ಅಮೆರಿಕದಿಂದ ಬೆಂಗಳೂರಿಗೆ ಬಂದ ಉದ್ಯೋಗಿ, ಸಹೋದ್ಯೋಗಿಗಳ ಫಿಟ್‌ನೆಸ್‌ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಆತಂಕ ಹೊರಹಾಕಿದ್ದಾರೆ. 

ಇತ್ತೀಚೆಗೆ ಅಮೆರಿಕದಿಂದ ಬೆಂಗಳೂರಿಗೆ ಬಂದ ಉದ್ಯೋಗಿಯೋರ್ವರು, ಭಾರತದಲ್ಲಿ ಜಾಬ್‌ ಮಾಡುವವರು ಯಾಕೆ ಫಿಟ್‌ನೆಸ್‌ಗೆ ಆದ್ಯತೆ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದು, ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಾಕಿಕೊಂಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಕಚೇರಿಯ ಸಂಸ್ಕೃತಿ, ಮನುಷ್ಯನದ ಜೀವನಶೈಲಿಯ ಬಗ್ಗೆ ಚರ್ಚೆ ಮಾಡುವಂತೆ ಮಾಡಿದೆ.

“ಕೆಲವು ವಾರಗಳ ಹಿಂದಷ್ಟೇ ನಾನು ಬೆಂಗಳೂರಿಗೆ ಬಂದೆನು. ನನ್ನ ಆಫೀಸ್‌ನಲ್ಲಿ ಇರುವವರು ಮೈಸೂರು ಬೋಂಡಾ, ವಡೆ, ಬಿರಿಯಾನಿಗಳನ್ನು ಪ್ರತಿ ಗಂಟೆಗೊಮ್ಮೆ ತಿನ್ನುತ್ತ, ವಿಪರೀತವಾಗಿ ಕೆಲಸ ಮಾಡುವುದನ್ನು ನೋಡಿ ಆಶ್ಚರ್ಯವಾಯಿತು. ನನ್ನ ಸಹೋದ್ಯೋಗಿ ನೀರು ಕುಡಿಯೋದಿಲ್ಲ, ವಾಕ್‌ ಮಾಡೋದಿಲ್ಲ, ಸೂರ್ಯನ ಬೆಳಕು ಕೂಡ ತಗೊಳ್ಳೋದಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.

ಮಾನಸಿಕವಾಗಿ ಆರೋಗ್ಯವಾಗಿರಬೇಕು ಎಂದು ಅವರು ಜಿಮ್‌ಗೆ ಹೋಗುತ್ತಾರೆ ಅಷ್ಟೇ. ನಾನು ಅವರಿಗೆ ಕಾಮಿಡಿ ಥರ ಕಾಣೋದರ ಬದಲು ಅವರಿಗೆ ಆರೋಗ್ಯ, ಜೀವನಶೈಲಿ ಕಡೆಗೆ ಗಮನ ಕೊಡಲು ಹೇಳುತ್ತೇನೆ ಎಂದಿದ್ದಾರೆ.

ಯಾರಾದರೂ ಆಫೀಸ್‌ನಲ್ಲಿ ಆರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳುತ್ತಾರಾ? ಅಥವಾ ಟೀ ಅಥವಾ ಮಾನಸಿಕ ಒತ್ತಡದ ಮೇಲೆ ಬದುಕುತ್ತಿದ್ದೀವಾ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗಿದೇನು?

ಕೆಲಸದ ಒತ್ತಡದಿಂದ ವ್ಯಾಯಾಮಕ್ಕೆ ಅವಕಾಶ ಸಿಗೋದಿಲ್ಲ ಎಂದು ಕೆಲವರು ಹೇಳಿದರೆ, ನ್ನು ಕೆಲವರು ಲೇಖಕರು ಭಾರತದಲ್ಲಿ ಇರುವ ಕೆಲಸದ ಸಂಸ್ಕೃತಿಯನ್ನು ಸ್ಟೀರಿಯೊಟೈಪ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ದೀರ್ಘ ಪ್ರಯಾಣ, ಟ್ರ್ಯಾಪಿಕ್‌ ಜಾಮ್‌, ಒತ್ತಡದ ಉದ್ಯೋಗ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಫಿಟ್‌ನೆಸ್‌ ಕಡೆಗೆ ಗಮನ ಕೊಡಲು ಆಗುತ್ತಿಲ್ಲ ಎಂದು ಕೆಲವರು ಹೇಳಿದ್ದಾರೆ.

ನಾನು ಪಕ್ಕಾ ಭಾರತೀಯ. ಫಿಟ್‌ನೆಸ್‌ನಲ್ಲಿ ಆಸಕ್ತಿ ಹೊಂದಿದ್ದೇನೆ. ನಿತ್ಯವೂ ಪ್ರೋಟೀನ್ ಭರಿತ ಆಹಾರ ಸ್ವೀಕಾರ ಮಾಡ್ತೀನಿ. ಬೇರೆಯವರಿಗೆ ನಾನು ವ್ಯಾಯಾಮ ಮಾಡಿ ಎಂದು ಹೇಳೋದಿಲ್ಲ, ಆದರೆ ಪ್ರತಿದಿನ ಚಿಕನ್ ತಿನ್ನುತ್ತೇನೆ, ಜಿಮ್‌ಗೆ ಹೋಗುತ್ತೇನೆ ಎಂದು ನನ್ನ ಮ್ಯಾನೇಜರ್, ಸಹೋದ್ಯೋಗಿಗಳು ಗೇಲಿ ಮಾಡುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ. ನಮ್ಮ ಪೋಷಕರನ್ನು ಬಿಟ್ಟು ಬೇರೆ ಯಾರಿಗೂ ವ್ಯಾಯಾಮ ಮಾಡಿ ಎಂದು ಒತ್ತಾಯಿಸಬೇಡಿ ಎಂದಿದ್ದಾರೆ ಒಬ್ಬರು.

ಯಾವಾಗಲೂ ನೀವು ಉಪದೇಶ ನೀಡುವ ವ್ಯಕ್ತಿಯಾಗಬೇಡಿ. ಬದಲಿಗೆ ನೀವು ಉತ್ತಮವಾಗಿ ಕಾಣುವಂತೆ ಆಗಿ, ಆರೋಗ್ಯಕರ ಆಹಾರ ಸೇವಿಸುವ ಮೂಲಕ ಮಾದರಿಯಾಗಿ. ಕೆಲವರು ಅದನ್ನು ನೋಡಿ ಕಲಿಯಬಹುದು ಎಂದಿದ್ದಾರೆ.