- Home
- Life
- Coriander Leaves Farming: ಇಷ್ಟು ಎಲೆಗೆ ಅಷ್ಟು ಯಾಕೆ ಕೊಡ್ತೀರಿ? ಸಣ್ಣ ಪಾಟ್‌ನಲ್ಲೇ ಕೊತ್ತುಂಬರಿ ಬೆಳೆಯಲು Tips
Coriander Leaves Farming: ಇಷ್ಟು ಎಲೆಗೆ ಅಷ್ಟು ಯಾಕೆ ಕೊಡ್ತೀರಿ? ಸಣ್ಣ ಪಾಟ್‌ನಲ್ಲೇ ಕೊತ್ತುಂಬರಿ ಬೆಳೆಯಲು Tips
ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪು ಇಲ್ಲ ಅಂದ್ರೆ ಏನೋ ಮಿಸ್ ಆದಂತಹ ಅನುಭವ ಆಗುವುದು. ಕೊತ್ತಂಬರಿ ಸೊಪ್ಪಿಗೆ ಬಹುತೇಕ ಯಾವಾಗಲೂ ಡಿಮ್ಯಾಂಡ್ ಇರುವುದು. ಒಮ್ಮೆ ಈ ಸೊಪ್ಪು ತಂದರೂ ಕೂಡ ಕೆಲವೊಮ್ಮೆ ಬಳಸೋಕೆ ಮರೆತು ಹೋಗಿ ಅಲ್ಲೇ ಕೊಳೆಯಬಹುದು, ಒಣಗಲೂಬಹುದು. ಕೊತ್ತಂಬರಿ ಬೆಳೆಯೋದು ಹೇಗೆ?

ಬೆಳೆಯುವ ಜಾಗ ಹೇಗಿರಬೇಕು
ಮನೆಯಲ್ಲಿ ಕೊತ್ತಂಬರಿ ಬೆಳೆದು, ಫ್ರೆಶ್ ಆಗಿ ಬಳಸಬಹುದು ಅಲ್ವಾ? ಹಾಗಿದ್ರೆ ಹೇಗೆ ಬೆಳೆಯಬಹುದು? ಈ ಲೇಖನ ನೋಡಿ
ನೆರಳು ಇರುವ ಜಾಗದಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯಿರಿ. ಸಾವಯವ ಪದಾರ್ಥಗಳಿಂದ ಕೂಡಿದ ಮಣ್ಣು ಉತ್ತಮ. ತರಕಾರಿ ಸಿಪ್ಪೆ, ಹಣ್ಣಿನ ತ್ಯಾಜ್ಯಗಳನ್ನು ಕೂಡ ಆ ಮಣ್ಣಿಗೆ ಹಾಕಿದರೆ ಗೊಬ್ಬರ ಆಗುವುದು. ಮಣ್ಣು ಸಡಿಲವಾಗಿರಬೇಕು
ಬೀಜ ಬಿತ್ತನೆ ಹೇಗೆ?
ಕೊತ್ತಂಬರಿ ಬೀಜಗಳನ್ನು ಮೊಳಕೆ ಬರುವವರೆಗೂ ನೀರು ಹಾಕಿ ನೆನೆಸಬೇಕು, ಅದನ್ನು ಒಡೆದು ಸ್ವಲ್ಪ ಒಣಗಿಸಿ
ಯಾವಾಗ ಬಿತ್ತಬೇಕು?
ಬೀಜಗಳನ್ನು 1-2 ಇಂಚು ಆಳದಲ್ಲಿ ಬಿತ್ತನೆ ಮಾಡಿ, 12 ಇಂಚು ಅಂತರವಿರಲಿ, ಮೊಳಕೆ ಆಗುವವರೆಗೂ ಮಣ್ಣಿಗೆ ನೀರು ಹಾಕುತ್ತ ತೇವವಾಗಿಡಿ.
ನೀರು ಹಾಕುತ್ತಿರಬೇಕು
ಯಾವುದೇ ಕಾರಣಕ್ಕೆ ಮಣ್ಣು ಒಣಗಬಾರದು,ನಿರಂತರ ನೀರು ಹಾಕುತ್ತಿರಬೇಕು, ಹಾಗೆಂದು ಕೊತ್ತಂಬರಿ ಬೀಜಗಳು ಕೊಳೆಯಬಾರದು
ಕಟಾವು ಯಾವಾಗ?
ಕೊತ್ತಂಬರಿ ಗಿಡವು ಸಾಕಷ್ಟು ದೊಡ್ಡದಾದಾಗ, ಎಲೆಗಳು ಬಲಿತಾಗ ಕತ್ತರಿಸಿ, ಅದೇ ಹೂವು ಬಿಟ್ಟ ಬಳಿಕ ಕೊಯ್ಲು ಮಾಡುವುದರಿಂದ ಎಲೆಗಳು ಚೆನ್ನಾಗಿ ಬೆಳೆಯುತ್ತವೆ ಪ್ರತಿ 2-3 ವಾರಗಳಿಗೊಮ್ಮೆ ಹೊಸ ಹೊಸ ಬೀಜಗಳನ್ನು ಮಣ್ಣಿಗೆ ಹಾಕಿ ಬಿತ್ತನೆ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

