- Home
- Entertainment
- TV Talk
- Bigg Boss ಟಾಪ್-5 ಯಾರು? ಐಶ್ವರ್ಯ ಸಿಂಧೋಗಿ ಅಚ್ಚರಿ ಹೇಳಿಕೆ- ಅಪ್ಪಿತಪ್ಪಿಯೂ ಬರಲಿಲ್ಲ ಈ ಹೆಸರು!
Bigg Boss ಟಾಪ್-5 ಯಾರು? ಐಶ್ವರ್ಯ ಸಿಂಧೋಗಿ ಅಚ್ಚರಿ ಹೇಳಿಕೆ- ಅಪ್ಪಿತಪ್ಪಿಯೂ ಬರಲಿಲ್ಲ ಈ ಹೆಸರು!
ಮಾಜಿ ಬಿಗ್ ಬಾಸ್ ಸ್ಪರ್ಧಿ ಐಶ್ವರ್ಯ ಸಿಂಧೋಗಿ, ಮುಂಬರುವ ಬಿಗ್ ಬಾಸ್ 12ರ ವಿನ್ನರ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗಿಲ್ಲಿ ನಟ, ಧನುಷ್, ಸ್ಪಂದನಾ ಮತ್ತು ರಘು ಅವರ ಆಟವನ್ನು ಶ್ಲಾಘಿಸಿದ ಅವರು, ತಮ್ಮ ಟಾಪ್ ಲಿಸ್ಟ್‌ನಲ್ಲಿ ಅಶ್ವಿನಿ ಗೌಡರ ಹೆಸರನ್ನು ಹೇಳದಿರುವುದು ಚರ್ಚೆಗೆ ಕಾರಣವಾಗಿದೆ.

ಬಿಗ್ ಬಾಸ್ ಮನೆ ಮಗಳು
ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ ಬ್ಯೂಟಿ ಐಶ್ವರ್ಯ ಸಿಂಧೋಗಿ ಬಿಗ್ ಬಾಸ್ ಮನೆಮಗಳು (Bigg Boss Aishwarya Sindhogi) ಎಂದೇ ಕರೆಯಲ್ಪಟ್ಟವರು. ಬಿಗ್ ಬಾಸ್ ನಿಂದ ಬಂದ ಬಳಿಕ ಸಿನಿಮಾ, ಸೀರಿಯಲ್ ಎಂದು ಬ್ಯುಸಿಯಾಗಿರುವ ಐಶ್ವರ್ಯ, ಇದರ ಜೊತೆಗೆ ಟ್ರಾವೆಲ್ ಮಾಡೋದನ್ನು ಮಾತ್ರ ಮರೆತಿಲ್ಲ. ಹೆಚ್ಚಾಗಿ ಸುಂದರ ತಾಣಗಳಿಗೆ ಸ್ನೇಹಿತರ ಜೊತೆ ಟ್ರಾವೆಲ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ ಈ ಬ್ಯೂಟಿ.
ಲವ್ ವಿಷ್ಯ
ಬಿಗ್‌ಬಾಸ್ ಮನೆಯಲ್ಲಿ ಲವ್, ರೊಮಾನ್ಸ್ ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿ ಕೇಳಿ ಬರುವುದೇ. ಆದರೆ ಹಾಗೆ ಮಾಡದೇ ʼಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ (Shishir Shastry). ಇವರಿಬ್ಬರ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ.
ಬಿಗ್‌ಬಾಸ್ 12 ಬಗ್ಗೆ..
ಇದರ ನಡುವೆಯೇ ಇದೀಗ ಬಿಗ್‌ಬಾಸ್ 12 (Bigg Boss 12) ಬಗ್ಗೆ ಮಾತನಾಡಿದ್ದಾರೆ ನಟಿ. ಸಾಮಾನ್ಯವಾಗಿ ಹೊರಬಂದ ಎಲ್ಲಾ ಸ್ಪರ್ಧಿಗಳ ಬಾಯಲ್ಲೂ ಇಷ್ಟ ಇರಲಿ, ಇಲ್ಲದೇ ಇರಲಿ ಗಿಲ್ಲಿ ನಟನೇ ವಿನ್ನರ್ ಆಗೋ ಛಾನ್ಸ್ ಇದೇ ಎಂದೇ ಬರುತ್ತಿದೆ. ಅದೇ ರೀತಿ ಟಾಪ್ 5 ಸ್ಪರ್ಧಿಗಳ ಲಿಸ್ಟ್‌ನಲ್ಲಿ ಇರುವುದೂ ಸೇಮ್ ಹೆಸರುಗಳೇ.
ಡಿಫರೆಂಟ್ ಅಭಿಪ್ರಾಯ
ಇದೀಗ ಐಶ್ವರ್ಯ ಸಿಂಧೋಗಿ ಅವರು ಸ್ವಲ್ಪ ಡಿಫರೆಂಟ್ ಆಗಿ ಮಾತನಾಡಿದ್ದಾರೆ. ಮ್ಯೂಟೆಂಟ್ ರಘು ಅವರ ಜಿಮ್ನಲ್ಲಿ ನಾನು ವರ್ಕ್ಔಟ್ ಮಾಡ್ತಿದ್ದೆ. ಈಗ ಇರುವವರಲ್ಲಿ ನನ್ನ ಫ್ರೆಂಡ್ಸ್ ತುಂಬಾ ಜನ ಇದ್ದಾರೆ. ಸೋ ಯಾರ ಬಗ್ಗೆ ಹೇಳೋದೋ ಗೊತ್ತಾಗ್ತಿಲ್ಲ ಎಂದು ಮಿ.ಡಿ ಪಿಚ್ಚರ್ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಯಾರು ವಿನ್ ಆಗ್ಬೋದು?
ಯಾರು ವಿನ್ ಆಗಬಹುದು ಎನ್ನುವ ಪ್ರಶ್ನೆಗೆ ಐಶ್ವರ್ಯ ಅವರು, ಇಂಥವರೇ ಎಂದು ಹೇಳಲು ಆಗುವುದಿಲ್ಲ. ಸದ್ಯಕ್ಕೆ ಒಂದೊಂದು ವೀಕ್ನಲ್ಲಿ ಒಬ್ಬೊಬ್ಬರು ಚೆನ್ನಾಗಿ ಆಡ್ತಿದ್ದಾರೆ. ಆದರೆ ಎಲ್ಲರ ಬಾಯಲ್ಲೂ ಗಿಲ್ಲಿ ನಟ (Bigg Boss Gilli Nata) ಹೆಸರು ಬರುತ್ತಿದೆ ಎಂದಿದ್ದಾರೆ.
ಕ್ಲೀನ್ ಗೇಮ್ ಆಡೋರು ಅಂದ್ರೆ...
ಗಿಲ್ಲಿ ನಟ ಪ್ಯೂರ್ ಎಂಟರ್ಟೇನರ್. ಅವರೂ ಗೆಲ್ಲುವ ಛಾನ್ಸ್ ಇದೆ. ಹಾಗೆ ನೋಡಿದ್ರೆ ಕ್ಲೀನ್ ಗೇಮ್ ಆಡ್ತಿರೋರು ಧನುಷ್, ಸ್ಪಂದನಾ ಮತ್ತು ರಘು. ಆದ್ದರಿಂದ ಯಾರು ಚೆನ್ನಾಗಿ ಆಡ್ತಾರೋ ಅವರು ಬರಲಿ ಎನ್ನುವ ಮೂಲಕ ಒಬ್ಬರದ್ದೇ ಹೆಸರನ್ನು ಹೇಳಿಲ್ಲ.
ಅಪ್ಪಿತಪ್ಪಿಯೂ ಬರಲಿಲ್ಲ ಈ ಹೆಸರು
ಆದರೆ ಟಾಪ್ 5ನಲ್ಲಿ ಅವರು ತೆಗೆದುಕೊಂಡ ಹೆಸರು ರಘು, ಸ್ಪಂದನಾ ಮತ್ತು ಗಿಲ್ಲಿ. ಸಾಮಾನ್ಯವಾಗಿ ಎಲ್ಲರೂ ಅಶ್ವಿನಿ ಗೌಡ (Bigg Boss Ashwini Gowda) ಹೆಸರು ಟಾಪ್ 5ನಲ್ಲಿ ಹೇಳಿದ್ದಾರೆ. ಆದರೆ ಅಪ್ಪಿ ತಪ್ಪಿಯೂ ಐಶ್ವರ್ಯ ಅವರು ಅಶ್ವಿನಿ ಅವರ ಹೆಸರು ಏಕೆ ಹೇಳಲಿಲ್ಲ ಎಂದು ಹಲವರು ಕಮೆಂಟ್ನಲ್ಲಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಕಮೆಂಟಿಗರು ಏನಂದ್ರು?
ಅದಕ್ಕೆ ಕೆಲವರು ರಿಪ್ಲೈ ಮಾಡಿದ್ದು, ಎಲ್ಲರ ಹೆಸರೂ ಬೇಗ ನೆನಪಿಗೆ ಬರುವುದಿಲ್ಲ, ಅದಕ್ಕಾಗಿ ಹೇಳದೇ ಇರಬಹುದು ಎಂದಿದ್ದರೆ, ಮತ್ತೆ ಕೆಲವರು ಕ್ಲೀನ್ ಆಗಿ ಆಡುವವರ ಹೆಸರನ್ನು ಮಾತ್ರ ಐಶ್ವರ್ಯ ಹೇಳಿದ್ದು, ಅದು ಅವರಿಗೆ ಅನ್ನಿಸಿದ್ದು ಅಷ್ಟೇ. ಅವರು ತಮ್ಮ ಮನಸ್ಸಿಗೆ ಅನ್ನಿಸಿದವರ ಹೆಸರು ಹೇಳಿದ್ದಾರೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

