Golden Star Ganesh wildlife conservation :ಏಷಿಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಆಯೋಜಿಸಿದ್ದ 5ನೇ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ ರಾಯಭಾರಿ ಗೋಲ್ಡನ್ ಸ್ಟಾರ್ ಗಣೇಶ್ ಚಾಮರಾಜನಗರದ ಮೀಣ್ಯಂ ಗ್ರಾಮದಲ್ಲಿ ಭಾಗವಹಿಸಿದ್ದರು. ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರಿದರು.
ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಡಿ.13): ಅರಣ್ಯ ಸಂರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ, ಅರಣ್ಯ ಸಿಬ್ಬಂದಿ ಅರಣ್ಯ ನಮ್ಮದು, ವನ್ಯಪ್ರಾಣಿ ಗಳು ನಮ್ಮದು ಎಂಬ ಭಾವನೆ ಮೂಡಿಸಿಕೊಂಡರೆ ಅರಣ್ಯ ಉಳಿಯಲು ಸಾಧ್ಯ ಕಾಡಪ್ರಾಣಿಗಳ ಸಂರಕ್ಷಣೆ ಸಾಧ್ಯ ನಾವೆಲ್ಲ ಕಾಡಿನಿಂದಲೆ ಬಂದವರು ಎಂದು ಏಷಿಯಾನೆಟ್ ಸುವರ್ಣ ನ್ಯೂಸ್, ಕನ್ನಡ ಪ್ರಭ ಸಂಸ್ಥೆ ಅರಣ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ 5 ನೇ ಆವೃತಿಯ ರಾಯಭಾರಿ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದರು. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ಮೀಣ್ಯಂ ಗ್ರಾಮದಲ್ಲಿ ವನ್ಯ ಜೀವಿ ಸಂರಕ್ಷಣಾ ಅಭಿಯಾನ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಗ್ರಾಮಸ್ಥರು ಹಾಗು ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ನಂತರ ಅರಣ್ಯ ಸಿಬ್ಬಂದಿ ಜೊತೆ ಸಂವಾದ ನಡೆಸಿದ ಅವರು ಅರಣ್ಯ ಸಿಬ್ಬಂದಿಯ ಸಮಸ್ಯೆ ಸವಾಲುಗಳನ್ನು ಆಲಿಸಿದರು..
ಎಲ್ಲಾ ನ್ಯೂಸ್ ಚಾನಲ್ ಗಳು ಕೂಡ ಇತ್ತಿಚೀನ ದಿನಗಳಲ್ಲಿ ಬ್ರೇಕಿಂಗ್ ನ್ಯೂಸ್ ಹಿಂದೆ ಓಡ್ತಿವೆ. ಈ ನಡುವೆ ನಿಮ್ಮೆಲ್ಲರ ನೆಚ್ಚಿನ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ದಿಂದ ಅರಣ್ಯ ಇಲಾಖೆಯ ಸಹಯೋಗದಿಂದ ಕಳೆದ 10 ವರ್ಷಗಳಿಂದಲೂ ಕೂಡ ವನ್ಯಜೀವಿ ಸಂರಕ್ಷಣಾ ಅಭಿಯಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಮೀಣ್ಯಂ ಗ್ರಾಮದಲ್ಲಿ ವನ್ಯಜೀವಿ ಸಂರಕ್ಷಣಾ ಅಭಿಯಾನ ಸೀಸನ್ 5 ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅಲ್ಲದೇ ಕಾಡಂಚಿನ ಜನರ ಸಂಕಷ್ಟ, ವನ್ಯಜೀವಿ ಸಂರಕ್ಷಣೆ ಹಾಗೂ ಕಾಡಂಚಿನ ಜನರು ಹಾಗೂ ಅರಣ್ಯ ಇಲಾಖೆ ಹೇಗೆ ಸಹಬಾಳ್ವೆಯಿಂದ ಜೀವನ ನಡೆಸಿಕೊಂಡು ಹೋಗಬೇಕು ಅನ್ನೋದು ತೋರಿಸಿಕೊಡುವ ಕೆಲಸ ಮಾಡ್ತಿದ್ದೇವೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಹಮ್ಮಿಕೊಂಡಿರುವ 5 ನೇ ವರ್ಷದ ವನ್ಯಜೀವಿ ಸಂರಕ್ಷಣಾ ಅಭಿಯಾನ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ಮೀಣ್ಯಂ ಗ್ರಾಮದಲ್ಲಿ ನಡೆಯಿತು ವನ್ಯ ಜೀವಿ ಸಂರಕ್ಷಣಾ ಅಭಿಯಾನ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ಜೊತೆ ಪಾಲ್ಗೊಂಡು ಮಕ್ಕಳ ನೃತ್ಯ ವೀಕ್ಷಿಸಿ ನಂತರ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಮಟ್ಟದ ಅಧಿಕಾರಿಯಾಗಬೇಕು ಈಗಿನಿಂದಲೆ ಅರಣ್ಯ ಉಳಿಸಲು ಸಹಕರಿಸಬೇಕು, ನಾವೆಲ್ಲ ಕಾಡಿನಿಂದಲೆ ಬಂದವರು ಒಂದು ಗುರಿ ಇಟ್ಟುಕೊಂಡು ವನ್ಯಜೀವಿ ಸಂರಕ್ಷಣಾ ಅಭಿಯಾನ ಮಾಡಲಾಗುತ್ತಿದೆ.ಈ ಕಾರ್ಯದಲ್ಲಿ ಸಂಪೂರ್ಣ ಯಶಸ್ಸು ದೊರಕಲಿ ಎಂದರು.
ಪ್ರತಿಯೊಬ್ಬರು ಅರಣ್ಯ ಮತ್ತು ಪ್ರಾಣಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ ಎಂದು ತಿಳಿಸಿ ಮುಂಗಾರು ಮಳೆ ಹಾಗು ಚೆಲುವಿನ ಚಿತ್ತಾರ ಸಿನಿಮಾ ಡೈಲಾಗ್ ಹೇಳಿ ವಿದ್ಯಾರ್ಥಿಗಳೊಂದಿಗೆ ಕುಣಿದು ರಂಜಿಸಿದರು. ಅಲ್ಲದೇ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಹರಸಿದರು. ಕಾಡಂಚಿನ ಗ್ರಾಮ ಮೀಣ್ಯಂ ನಲ್ಲಿ ಪಿಯು ಕಾಲೇಜು ತೆರೆಯಲು ಏಷಿಯಾನೆಟ್ ಸುವರ್ಣ ನ್ಯೂಸ್ ಹಾಗು ಕನ್ನಡಪ್ರಭ ಸಹಯೋಗದೊಂದಿಗೆ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಇದೇ ವೇಳೆ ಮೀಣ್ಯಂ ಗ್ರಾಮ ಪಂಚಾಯ್ತಿಗೆ ಅತ್ತುತ್ತಮ ಅರಣ್ಯ ಪರಿಸರ ಸ್ನೇಹಿ ಪ್ರಶಸ್ತಿ ಪ್ರದಾನ ಮಾಡಿದರು..
ಇತ್ತೀಚಿನ ದಿನಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಕೂಡ ಹೆಚ್ಚಾಗಿದೆ. ಇಂತಹ ಪ್ರಕರಣಗಳು ಕಡಿಮೆಯಾಗಬೇಕು ಅಲ್ಲದೇ ಅರಣ್ಯ ಇಲಾಖೆಯ ಜೊತೆಗೆ ಕಾಡಂಚಿನ ಜನರು ಕೂಡ ಸ್ಪಂದಿಸಬೇಕು. ಆ ಮೂಲಕವಷ್ಟೇ ವನ್ಯಜೀವಿ ಮಾನವ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸದಾಕಾಲ ನಿಮ್ಮ ಜೊತೆ ಇದೆ. ನಾವೆಲ್ಲ ಸೇರಿ ವನ್ಯಜೀವಿ ಹಾಗು ಕಾಡನ್ನು ಉಳಿಸಿಕೊಳ್ಳೋಣ.
ಮೀಣ್ಯಂ ಗ್ರಾಮಸ್ಥರು ಮಾತನಾಡಿ ನಾವು ಕಾಡನ್ನೆ ನಂಬಿ ಬದುಕುತ್ತಿದ್ದೆವೆ. ಕಾಡು ಬಿಟ್ಟರೆ ನಮಗೆ ಬೇರೆ ಏನೋ ಗೊತ್ತಿಲ್ಲ ಕಾಡಲ್ಲೆ ಹುಟ್ಟಿ ಕಾಡಲ್ಲೆ ಬೆಳೆದು ಕಾಡಲ್ಲೆ ಸಾಯುತ್ತಿದ್ದೇವೆ. ಹುಲಿಯೋಜನೆ ತರಬೇಕು ಅಂತ ಪರಿಸರವಾದಿಗಳು ಹೇಳುತ್ತಿದ್ದಾರೆ. ಆದರೆ ಹುಲಿ ಯೋಜನೆ ಜಾರಿಯಾದರೆ ಹಲವಾರು ನಿರ್ಬಂಧ ಹೇರುತ್ತಾರೆ. ನಮಗೆ ತೊಂದರೆಯಾಗುತ್ತದೆ. ಹಾಗಾಗಿ ಈ ಯೋಜನೆ ತಡೆ ಹಿಡಿಯಿರಿ. ಕಾಡಿನೊಳಗೆ ಕಾಡು ಪ್ರಾಣಿಗಳಿಂದ ದನ ಕರುಗಳು ಸತ್ತರೆ ಪರಿಹಾರ ಕೊಡಿಸಿಕೊಡುವ ಕೆಲಸವಾಗಬೇಕು ಎಂದು ಗೋಲ್ಡನ್ ಸ್ಟಾರ್ ಗಣೇಶ್ ರವರಲ್ಲಿ ಮನವಿ ಮಾಡಿದರು..
ಒಟ್ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಿಂದ ಕಳೆದ 10 ವರ್ಷಗಳಿಂದಲೂ ಕೂಡ ವನ್ಯಜೀವಿ ಸಂರಕ್ಷಣಾ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು ಆ ಮೂಲಕ ವನ್ಯಜೀವಿಗಳ ಜೊತೆಗೆ ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ನಮ್ಮ ಯತ್ನ ಮುಂದುವರಿದಿದೆ.


