- Home
- Life
- Food
- ಬಿಸಿ ನೀರಿಗೆ ಒಂದು ಟಾಬ್ಲೆಟ್ ಹಾಕಿದ್ರೆ ಸಾಕು, ಎರಡೇ ನಿಮಿಷದಲ್ಲಿ ನೂಡಲ್ಸ್ ರೆಡಿ- ಏನಿದು AI Tablet?
ಬಿಸಿ ನೀರಿಗೆ ಒಂದು ಟಾಬ್ಲೆಟ್ ಹಾಕಿದ್ರೆ ಸಾಕು, ಎರಡೇ ನಿಮಿಷದಲ್ಲಿ ನೂಡಲ್ಸ್ ರೆಡಿ- ಏನಿದು AI Tablet?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಮ್ಯಾಗಿ ಟ್ಯಾಬ್ಲೆಟ್ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಬಿಸಿ ನೀರಿಗೆ ಹಾಕಿದ ತಕ್ಷಣ ನೂಡಲ್ಸ್ ಸಿದ್ಧವಾಗುವ ಈ ಟ್ಯಾಬ್ಲೆಟ್ನ ಅಸಲಿಯತ್ತೇನು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಷ್ಯ

ಅಡುಗೆ ಬರುತ್ತಾ?
ಇಂದಿನ ಕೆಲವು ಹೆಣ್ಣುಮಕ್ಕಳಿಗೆ ಅಡುಗೆ ಮಾಡಲ ಬರುತ್ತಾ ಕೇಳಿದ್ರೆ ಹೌದು, ಮ್ಯಾಗಿ ನೂಡಲ್ಸ್ ಮಾಡಲು ಬರುತ್ತೆ ಎಂದು ಹೇಳ್ತಾರೆ ಎನ್ನುವ ಮಾತು ಇದೆ. ಅದರಲ್ಲಿಯೂ ಕೋವಿಡ್ ಸಮಯದಲ್ಲಿ ಇದರ ಮೀಮ್ಸ್ ಸಾಕಷ್ಟು ಸದ್ದು ಮಾಡಿತ್ತು.
ಎರಡು ನಿಮಿಷ?
ಎರಡೇ ನಿಮಿಷಗಳಲ್ಲಿ ಮ್ಯಾಗಿ ನೂಡಲ್ಸ್ ಮಾಡಿ ಎಂದು ಹೇಳಿದರೂ, ಅದು ಎರಡು ನಿಮಿಷದಲ್ಲಿ ಅಂತೂ ಆಗಲ್ಲ, ಹಾಗೆಂದು ಯಾವುದೇ ಟೆನ್ಷನ್ ಇಲ್ದೇ ಒಂದು ಹತ್ತು ನಿಮಿಷಗಳಲ್ಲಂತೂ ರೆಡಿ ಆಗುವ ಕಾರಣದಿಂದಲೇ ಇದು ಹಲವರಿಗೆ ಅಚ್ಚುಮೆಚ್ಚು.
ಬ್ಯಾನೂ ಆಗಿತ್ತು
ಅದರಲ್ಲಿಯೂ ಅದಕ್ಕೆ ಹಾಕುವ ಟೇಸ್ಟಿ ಪೌಡರ್ನಿಂದಾಗಿ ಕಳೆದ ವರ್ಷ ಮ್ಯಾಗಿ ನೂಡಲ್ಸ್ ಬ್ಯಾನ್ ಕೂಡ ಆಗಿತ್ತು. ಪೌಡರ್ನಲ್ಲಿ ವಿಷಕಾರಿ ಟೇಸ್ಟಿಂಗ್ ಇದೆ ಎನ್ನುವುದು ಸಾಬೀತಾಗಿತ್ತು. ಆ ಸಮಯದಲ್ಲಿ ಬೇರೆ ಕಂಪೆನಿಗಳ ನೂಡಲ್ಸ್ಗಳು ಹುಟ್ಟಿಕೊಂಡವು.
ಬೇರೆ ಬೇರೆ ಕಂಪೆನಿ
ನೂಡಲ್ಸ್ ಯಾವುದೇ ಆಗಿದ್ದರೂ ಅದು ಮ್ಯಾಗಿ ನೂಡಲ್ಸ್ ಎಂದೇ ಫೇಮಸ್ ಆಗಿಬಿಟ್ಟಿದೆ. ಮ್ಯಾಗಿ ಎನ್ನುವುದು ಕಂಪೆನಿಯ ಹೆಸರು ಎಂದು ತಿಳಿಯದವರು ಅದೆಷ್ಟೋ ಮಂದಿ ಇದ್ದಾರೆ ಅನ್ನಿ.
ಮ್ಯಾಗಿ ಟ್ಯಾಬ್ಲೆಟ್
ಈಗ ವಿಷಯ ಅದಲ್ಲ. ಪ್ಯಾಕೇಟ್ ಮ್ಯಾಗಿ ಬದಲು ಟ್ಯಾಬ್ಲೆಟ್ ಮ್ಯಾಗಿಯ ವಿಡಿಯೋ ಒಂದು ಸಕತ್ ವೈರಲ್ ಆಗುತ್ತಿದೆ. ನೂಡಲ್ಸ್ ಈ ಟ್ಯಾಬ್ಲೆಟ್ ಒಳಗೆ ಇದೆ. ಅದನ್ನು ಬಿಸಿ ನೀರಿಗೆ ಹಾಕಿದ್ರೆ ಅಲ್ಲಿ ಎರಡೇ ನಿಮಿಷಗಳಲ್ಲಿ ಮ್ಯಾಗಿ ನೂಡಲ್ಸ್ ರೆಡಿಯಾಗುತ್ತದೆ. ಟೇಸ್ಟಿಂಗ್ ಪೌಡರ್ ಕೂಡ ಅಲ್ಲಿಯೇ ಇರುವ ಕಾರಣ ಅದರ ಟೈಮ್ ಕೂಡ ಉಳಿದಿದೆ!
ವೇಟ್ ವೇಟ್...
ವೇಟ್ ವೇಟ್ ಈ ಟ್ಯಾಬ್ಲೆಟ್ ಎಲ್ಲಿ ಸಿಗುತ್ತೆ ಎಂದು ಗೂಗಲ್ ಸರ್ಚ್ ಮಾಡಲು ಹೋಗಬೇಡಿ. ಹೆಡ್ಡಿಂಗ್ ಅನ್ನು ಒಮ್ಮೆ ಓದಿ. ಇದು ಅಸಲಿ ಮ್ಯಾಗಿ ಟ್ಯಾಬ್ಲೆಟ್ ಅಲ್ಲ, ಬದಲಿಗೆ ಎಐ ಟ್ಯಾಬ್ಲೆಟ್. ಇದರ ಅರ್ಥ ಕೃತಕ ಬುದ್ಧಿಮತ್ತೆ ಉಪಯೋಗಿಸಿ ಎಐ ಮೂಲಕ ಇಂಥದ್ದೊಂದು ಕಲ್ಪನೆಯನ್ನು ಹರಿಬಿಡಲಾಗಿದೆ.
ಇದೇನು ಅಂತ ನೋಡಿ!
ಇದರಿಂದ ಪ್ರೇರೇಪಿತರಾಗಿ ಇಂಥ ಟ್ಯಾಬ್ಲೆಟ್ ಅಸಲಿಗೆ ಬಂದರೂ ಏನೂ ಅಚ್ಚರಿಯಿಲ್ಲ ಎನ್ನಿ. ಆದ್ರೆ ಸದ್ಯ ಅಂತೂ ಇದು ಅಸಲಿಯದ್ದಲ್ಲ, ಕೇವಲ Artificial Intellegenceದು ಅಷ್ಟೇ. ಆದರೆ ಇದು ನಿಜ ಎಂದು ನಂಬಿರುವವರು ವಿಡಿಯೋ ಹಾಕಿದ ಕೆಲವೇ ಗಂಟೆಗಳಲ್ಲಿ 40 ಮಿಲಿಯನ್ ವ್ಯೂವ್ಸ್ ಕಂಡಿದೆ! ಅಂದಹಾಗೆ ಆದಿತ್ಯ ಸೋನಿ ಎನ್ನುವವರು ಇದನ್ನು ಶೇರ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

