- Home
- Entertainment
- TV Talk
- BBK 12: ಎದೆ ತಟ್ಟಿಕೊಂಡು ಹೇಳ್ತೀನಿ ಕಣಣ್ಣಾ, ಇವ್ರು ಸ್ಪರ್ಧಿಗಳೋ, ಎಲಿಮೆಂಟ್ಗಳೊ? ಸುದೀಪ್ ಎದುರೇ ಅಶ್ವಿನಿ ಗೌಡ ಗರಂ
BBK 12: ಎದೆ ತಟ್ಟಿಕೊಂಡು ಹೇಳ್ತೀನಿ ಕಣಣ್ಣಾ, ಇವ್ರು ಸ್ಪರ್ಧಿಗಳೋ, ಎಲಿಮೆಂಟ್ಗಳೊ? ಸುದೀಪ್ ಎದುರೇ ಅಶ್ವಿನಿ ಗೌಡ ಗರಂ
ಬಿಗ್ ಬಾಸ್ ಕನ್ನಡ 12ರ ವೀಕೆಂಡ್ ಪಂಚಾಯಿತಿಯಲ್ಲಿ, ರಜತ್ ಮತ್ತು ಚೈತ್ರಾ ಕುಂದಾಪುರ ತನ್ನನ್ನು ಅನಗತ್ಯವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಶ್ವಿನಿ ಗೌಡ ಕಿಚ್ಚ ಸುದೀಪ್ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಏನೇನು ಹೇಳಿದ್ರು ನೋಡಿ!

ಆರೋಪ- ಪ್ರತ್ಯಾರೋಪಗಳ ಸುರಿಮಳೆ
ಇನ್ನೇನು ಬಿಗ್ಬಾಸ್ (Bigg Boss 12) ಮುಗಿಯಲು ಇನ್ನೊಂದೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಇರುವ ಸ್ಪರ್ಧಿಗಳಿಂದ ಟಾಸ್ಕ್ ಭರಾಟೆ ಜೋರಾಗಿ ನಡೆಯುತ್ತಿದೆ. ಆರೋಪ- ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ.
ಜಗಳದಿಂದ ಫೇಮಸ್
ಅಷ್ಟಕ್ಕೂ ಬಿಗ್ಬಾಸ್ನಲ್ಲಿ ಸದ್ಯ ಜಗಳದಿಂದ ಫೇಮಸ್ ಆಗಿರೋರು ಎಂದರೆ ಅಶ್ವಿನಿ ಗೌಡ ಮಾತ್ರ. ಉಳಿದವರು ಅಷ್ಟೊಂದು ಜಗಳದಲ್ಲಿ ಸ್ಟ್ರಾಂಗ್ ಇರದ ಕಾರಣದಿಂದಲೋ ಏನೋ, ಬಿಗ್ಬಾಸ್ ಸಪ್ಪೆ ಎನ್ನಿಸಬಾರದು ಎಂದು ಜಗಳಕ್ಕೇ ಫೇಮಸ್ ಆಗಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರನ್ನು ಇನ್ನೂ ಮನೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ ಎನ್ನುವ ಮಾತು ಇದೆ.
ಜಾಹ್ನವಿಯೂ ಹೇಳಿದ್ರು...
ಅಶ್ವಿನಿ ಗೌಡ ಅವರ ಬೆಸ್ಟ್ ಫ್ರೆಂಡ್ ಜಾಹ್ನವಿ ಕೂಡ ಹೊರಗಡೆ ಇದೇ ಮಾತನ್ನು ಹೇಳಿದ್ದಾರೆ. ಅಶ್ವಿನಿ ಅವರನ್ನು ಟ್ರಿಗರ್ ಮಾಡುವುದಕ್ಕಾಗಿಯೇ ಅವರಿಬ್ಬರನ್ನೂ ಕರೆಸಿದ್ದಾರೆ ಎಂದಿದ್ದಾರೆ.
ಕಿಚ್ಚನ ಪಂಚಾಯಿತಿ
ಇದೀಗ ವೀಕೆಂಡ್ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ (Bigg Boss Kichcha Sudeep) ಅವರ ಕ್ಯಾಪ್ಟೆನ್ಸಿಗೆ ಮನೆಯಲ್ಲಿ ರಿಯಾಕ್ಷನ್ ಹೇಗಿದೆ ಎಂದು ಕೇಳಿದಾಗ, ರಜತ್ ಅವರು, ಅಶ್ವಿನಿ ಅವರು ತುಂಬಾ ಈಸಿಯಾಗಿ ಸಾಲ್ವ್ ಆಗುವ ವಿಷಯಗಳನ್ನು burst ಮಾಡಿದ್ದಾರೆ ಎನ್ನಿಸತ್ತೆ ಎಂದು ಹೇಳಿದರು.
ಅಶ್ವಿನಿ ಕೆಂಡಾಮಂಡಲ
ಇದರಿಂದ ಅಶ್ವಿನಿ ಗೌಡ ಕೆಂಡಾಮಂಡಲ ಆದರು. ರಜತ್ ಯಾಕೆ ಇಷ್ಟೊಂದು ಸ್ಟುಪಿಡ್ ಆಗಿ ಮಾತಾಡ್ತಾ ಇದ್ದಾರೆ ಅಂತ ನನಗೆ ಅರ್ಥ ಆಗ್ತಿಲ್ಲ. ಅನ್ನೆಸ್ಸಸ್ಸರಿ ಆಗಿ ನನ್ನನ್ನು ರಜತ್ ಮತ್ತು ಚೈತ್ರಾ ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ನನ್ನ ತಂಟೆಗೆ ಬರಬಾರದು ಅಷ್ಟೇ ಎಂದು ಸುದೀಪ್ ಎದುರು ರೇಗಾಡಿದರು.
ಬೇರೆ ಯಾವುದೋ ಎಲಿಮೆಂಟೊ?
ಏ ಸುಬ್ಬಿ ಆ ಮುದುಕಿಯನ್ನು ಹೊಡೀತಿನಿ ಕಣೋ, ಬಿಡಲ್ಲ ಕಣೋ ಅಂತ ಹೇಳ್ತಾರೆ, ಏನಿದು ಎಂದು ಪ್ರಶ್ನಿಸಿರೋ ಅಶ್ವಿನಿ ಗೌಡ, ಬಿಗ್ಬಾಸ್ನವರು ಮನೆಯೊಳಕ್ಕೆ ಕಂಟೆಸ್ಟೆಂಟ್ ಅನ್ನು ಕಳಿಸಿದ್ದಾರೋ ಅಥ್ವಾ ಬೇರೆ ಯಾವುದೋ ಎಲಿಮೆಂಟ್ ಅನ್ನು ಕಳಿಸಿದ್ದಾರೋ ಗೊತ್ತಾಗ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಎದೆ ತಟ್ಟಿಕೊಂಡು ಹೇಳ್ತೀನಿ
ಸೀಸನ್ 12ರಲ್ಲಿ ಇವರಿಬ್ಬರಷ್ಟು ಕಳಪೆ ಯಾರೂ ಇಲ್ಲ ಕಣಣ್ಣ ಎಂದು ನಾನು ಎದೆ ತಟ್ಟಿಕೊಂಡು ಹೇಳ್ತೀನಿ ಎಂದು ಅಶ್ವಿನಿ ಗೌಡ ಕಿಚ್ಚ ಸುದೀಪ್ಗೆ ಹೇಳಿದ್ದಾರೆ. ಒಟ್ಟಿನಲ್ಲಿ ಈ ವಾರ ಯಾರು ಮನೆಯಿಂದ ಹೊರ ಹೋಗ್ತಾರೋ ನೋಡಬೇಕಿದೆ. ಜಗಳದಿಂದ ಟಿಆರ್ಪಿ ಹೆಚ್ಚುತ್ತಿರುವ ಕಾರಣ, ಈ ಮೂವರೂ ಸದ್ಯ ಹೊರಕ್ಕೆ ಹೋಗುವ ಛಾನ್ಸ್ ಇಲ್ಲ ಎನ್ನೋದು ವೀಕ್ಷಕರ ಅಭಿಮತ.
ಹೋಗುವವರು ಯಾರು?
ಒಟ್ಟಿನಲ್ಲಿ ಈ ವಾರ ಯಾರು ಮನೆಯಿಂದ ಹೊರ ಹೋಗ್ತಾರೋ ನೋಡಬೇಕಿದೆ. ಜಗಳದಿಂದ ಟಿಆರ್ಪಿ ಹೆಚ್ಚುತ್ತಿರುವ ಕಾರಣ, ಈ ಮೂವರೂ ಸದ್ಯ ಹೊರಕ್ಕೆ ಹೋಗುವ ಛಾನ್ಸ್ ಇಲ್ಲ ಎನ್ನೋದು ವೀಕ್ಷಕರ ಅಭಿಮತ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

