Published : Sep 21, 2026, 07:55 AM ISTUpdated : Sep 21, 2026, 09:43 PM IST

India News Live Updates 21st Sep: Jio 5G SA Roaming - ಜಿಯೋ ಗ್ರಾಹಕರಿಗೆ ಗುಡ್‌ನ್ಯೂಸ್; ಅಮೆರಿಕದಲ್ಲೂ ಸಿಗಲಿದೆ 5G, ಇದು ವಿಶ್ವದಲ್ಲೇ ಮೊದಲ ಸಾಧನೆ!

ಸಾರಾಂಶ

 

ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಗರಿಷ್ಠ ರನ್ ಗಳಿಕೆ ಪಟ್ಟಿಯಲ್ಲಿ ಸ್ಮೃತಿ ಈಗ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದ್ದಾರೆ. ಅವರು 4,788 ರನ್‌ ಗಳಿಸಿದ್ದು, ನ್ಯೂಜಿಲೆಂಡ್‌ನ ಸುಜೀ ಬೇಟ್ಸ್‌(4758 ರನ್‌) ಅವರನ್ನು ಹಿಂದಿಕ್ಕಿದರು. ಸ್ಮೃತಿ ಈಗಾಗಲೇ ಮಹಿಳಾ ಅಂ.ರಾ. ಕ್ರಿಕೆಟ್‌ನ ಗರಿಷ್ಠ ರನ್‌ ಗಳಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

09:43 PM (IST) Sep 21

Jio 5G SA Roaming - ಜಿಯೋ ಗ್ರಾಹಕರಿಗೆ ಗುಡ್‌ನ್ಯೂಸ್; ಅಮೆರಿಕದಲ್ಲೂ ಸಿಗಲಿದೆ 5G, ಇದು ವಿಶ್ವದಲ್ಲೇ ಮೊದಲ ಸಾಧನೆ!

ರಿಲಯನ್ಸ್ ಜಿಯೋ ಮತ್ತು ಟಿ-ಮೊಬೈಲ್ ವಿಶ್ವದ ಮೊದಲ 5G SA ರೋಮಿಂಗ್ ಸೌಲಭ್ಯವನ್ನು ಯಶಸ್ವಿಯಾಗಿ ಸಾಧಿಸಿವೆ. ಇದರಿಂದ ಜಿಯೋ ಬಳಕೆದಾರರು ಅಮೆರಿಕಕ್ಕೆ ಪ್ರಯಾಣಿಸಿದಾಗ ಸಿಮ್ ಬದಲಾಯಿಸದೆ 5G ನೆಟ್‌ವರ್ಕ್ ಪಡೆಯಬಹುದು. ಈ ತಂತ್ರಜ್ಞಾನವು ಹೆಚ್ಚಿನ ವೇಗ ಮತ್ತು ನಿರಂತರ ಸಂಪರ್ಕವನ್ನು ಒದಗಿಸುತ್ತದೆ.
Read Full Story

09:39 PM (IST) Sep 21

ಕೇವಲ ₹50ಕ್ಕೆ ನಿಮ್ಮಿಷ್ಟದ ಜಿಯೋ VIP ನಂಬರ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್!

ಜಿಯೋ ಬಳಕೆದಾರರು ತಮಗೆ ಇಷ್ಟವಾದ VIP ಅಥವಾ ಚಾಯ್ಸ್ ನಂಬರ್‍‌ಗಳನ್ನು (Jio VIP Number) ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು. ಹಾಗಿದ್ದರೆ ವಿಐಪಿ ನಂಬರ್ ಎಂದರೇನು? ಇದರ ಬೆಲೆ ಎಷ್ಟು? ಮತ್ತು ಇದನ್ನು ಪಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.

Read Full Story

09:06 PM (IST) Sep 21

ತಂದೆ-ಮಗಳ ಸಂಬಂಧದ ಇಂತಹ ಕರಾಳ ಮುಖ ನೋಡಿದ್ದೀರಾ? ಈ ವೆಬ್ ಸೀರೀಸ್ ಕಥೆ ತುಂಬಾ ಕಾಡುತ್ತೆ!

ಕಾಲಿವುಡ್‌ನ ವೆಟ್ರಿಮಾರನ್ ಕೂಡ ಒಂದು ವೆಬ್ ಸೀರೀಸ್ ನಿರ್ದೇಶನ ಮಾಡಿದ್ದಾರೆ ಅನ್ನೋದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಒಟಿಟಿಯಲ್ಲಿರುವ ಈ ಸೀರೀಸ್ ನೋಡಿದರೆ ನೀವು ಖಂಡಿತ ಶಾಕ್ ಆಗ್ತೀರಾ.

Read Full Story

08:53 PM (IST) Sep 21

ಕಾರು ಖರೀದಿ ಪ್ಲಾನ್‌ನಲ್ಲಿ ಇರೋರಿಗೆ ಶಾಕ್ ಕೊಟ್ಟ ಟಾಟಾ ಮೋಟರ್ಸ್‌, ಪ್ಯಾಸೆಂಜರ್ ಕಾರುಗಳ ಬೆಲೆಯೂ ಏರಿಕೆ

ಟಾಟಾ ಮೋಟಾರ್ಸ್ ಸೇರಿದಂತೆ ಪ್ರಮುಖ ಆಟೋಮೊಬೈಲ್ ಕಂಪನಿಗಳು ಕಾರುಗಳ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿವೆ. ಮುಂದೆ ಬರುವ ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸಬೇಕು ಅಂದುಕೊಂಡವರಿಗೆ ದೊಡ್ಡ ಆಘಾತವಾಗಿದೆ. ಮುಂದಿನ ದಿನಗಳಲ್ಲಿ ಕಾರುಗಳ ಬೆಲೆ ಇನ್ನೂ ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Read Full Story

07:53 PM (IST) Sep 21

20 ಸಾವಿರಕ್ಕಿಂತ ಕಮ್ಮಿ ಬೆಲೆಗೆ 4 ಬೆಸ್ಟ್ ಸೆಲ್ಫಿ ಫೋನ್‌ಗಳು, ಸಾಟಿ ಇಲ್ಲದ ಅದ್ಭುತ ಮೊಬೈಲ್‌ಗಳು

20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬೆಸ್ಟ್‌ ಸೆಲ್ಫಿ ಫೋನ್ ಹುಡುಕುತ್ತಿದ್ದರೆ ಈ 4 ಫೋನ್‌ಗಳನ್ನ ಕಣ್ಮುಚ್ಚಿಕೊಂಡು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಬಜೆಟ್ ಸ್ನೇಹಿ ಆಗಿರುವ ಈ ಸ್ಮಾರ್ಟ್‌ಫೋನ್‌ಗಳು ಒಂದಕ್ಕಿತ ಒಂದು ಅದ್ಭುತ ಫೀಚರ್ಸ್‌ ಹೊಂದಿದೆ. ಅವುಗಳ ವಿವರ ಇಲ್ಲಿದೆ.

Read Full Story

07:36 PM (IST) Sep 21

ಸ್ಯಾಂಡಲ್​ವುಡ್​ ತಾರೆ ಅಂಬಿಕಾ ವಿರುದ್ಧ 43 ಕೋಟಿ ರೂ. ವಂಚನೆ ಆರೋಪ! ತಂಗಿಯಿಂದ್ಲೇ ಕೇಸ್​- ಆಗಿದ್ದೇನು

1980ರ ದಶಕದ ಖ್ಯಾತ ನಟಿಯರಾದ ರಾಧಾ ಮತ್ತು ಅಂಬಿಕಾ ನಡುವೆ ಇದೀಗ ಬದ್ಧ ದ್ವೇಷ ಶುರುವಾಗಿದೆ. ತನ್ನ ಕೋಣೆಯಲ್ಲಿದ್ದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ಕದ್ದು 46 ಕೋಟಿ ರೂ. ವಂಚಿಸಲು ಯತ್ನಿಸಿದ್ದಾರೆ ಎಂದು ಅಂಬಿಕಾ ಮತ್ತು ಸಹೋದರನ ವಿರುದ್ಧ ರಾಧಾ ದೂರು ನೀಡಿದ್ದಾರೆ.
Read Full Story

07:17 PM (IST) Sep 21

ದೇಶದ ಅಗ್ರಕಂಪನಿಗಳಿಗೆ ಬಿಸಿಸಿಐ ಅಪಶಕುನ...! ಕ್ರಿಕೆಟ್‌ಗೆ ಸ್ಪಾನ್ಸರ್ ಆದವರೆಲ್ಲಾ ಮಟಾಷ್

ಭಾರತದಲ್ಲಿ ಕ್ರಿಕೆಟ್‌ಗೆ ಸ್ಪಾನ್ಸರ್ ಮಾಡುವ ಪ್ರತಿಷ್ಠಿತ ಕಂಪನಿಗಳು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಿವೆ. ಸಹರಾ, ಬೈಜೂಸ್, ಒಪ್ಪೋ ಬಳಿಕ ಇದೀಗ ಐಪಿಎಲ್ ಟೈಟಲ್ ಸ್ಪಾನ್ಸರ್ ಟಾಟಾ ಗ್ರೂಪ್ ಕೂಡ ಆರ್ಥಿಕ ಮತ್ತು ಆಂತರಿಕ ಸಮಸ್ಯೆಗೆ ಗುರಿಯಾಗಿದೆ. ಇದು ಬಿಸಿಸಿಐ ತಲೆನೋವು ಹೆಚ್ಚಿಸಿದೆ.
Read Full Story

07:14 PM (IST) Sep 21

3.16 ಕೋಟಿ ಮಂದಿಗೆ ಇನ್ಮುಂದೆ ಸಿಗಲ್ಲ ಗ್ಯಾಸ್​! ನೀವೂ ಈ ತಪ್ಪು ಮಾಡಿದ್ರೆ ಕೂಡಲೇ ಸರಿಪಡಿಸಿಕೊಳ್ಳಿ

ಅಕ್ಟೋಬರ್ 1ರಿಂದ ಎಲ್‌ಪಿಜಿ ಗ್ಯಾಸ್ ಬುಕ್ಕಿಂಗ್ ಮತ್ತು ಸಬ್ಸಿಡಿ ಪಡೆಯಲು ಆಧಾರ್ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ದೇಶದಲ್ಲಿ ಇನ್ನೂ 3.16 ಕೋಟಿ ಗ್ರಾಹಕರು ಈ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಗ್ರಾಹಕರು ಗ್ಯಾಸ್ ಏಜೆನ್ಸಿ, ಡೆಲಿವರಿ ಸಿಬ್ಬಂದಿ ಅಥವಾ ಮೊಬೈಲ್ ಆ್ಯಪ್‌ಗಳ ಮೂಲಕ ಸುಲಭವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು.
Read Full Story

06:53 PM (IST) Sep 21

'ಮೈಸಾ' ಸಿನಿಮಾಗಾಗಿ ನನ್ನ ಜೀವನವನ್ನೇ ಕೊಟ್ಟಿದ್ದೇನೆ - ಭಾವುಕರಾದ ನಟಿ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ‘ಮೈಸಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮಹಿಳಾ ಪ್ರಧಾನ ಆ್ಯಕ್ಷನ್ ಕಥಾಹಂದರದ ಈ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story

06:53 PM (IST) Sep 21

ಮೆಕ್ಕಲಂ, ದ್ರಾವಿಡ್ ಇವರ್ಯಾರು ಅಲ್ಲ, ಅಚ್ಚರಿ ರೀತಿಯಲ್ಲಿ ಆರ್‌ಸಿಬಿ ಮಾಜಿ ಕ್ರಿಕೆಟಿಗನನ್ನು ಹೆಡ್‌ ಕೋಚ್ ಆಗಿ ನೇಮಿಸಿದ ಸಿಎಸ್‌ಕೆ..!

2027ರ ಐಪಿಎಲ್ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ಹೆಡ್‌ ಕೋಚ್ ಆಗಿ ನೇಮಿಸಿಕೊಂಡಿದೆ. ಸ್ಟಿಫನ್ ಫ್ಲೆಮಿಂಗ್ ನಿರ್ಗಮನದ ನಂತರ ಹಲವು ದಿಗ್ಗಜರ ಹೆಸರು ಕೇಳಿಬಂದರೂ, ಅಂತಿಮವಾಗಿ ಜಹೀರ್ ಖಾನ್ ಈ ಸ್ಥಾನ ಅಲಂಕರಿಸಿದ್ದಾರೆ. ಇದರಿಂದ ಕಳೆದ ಕೆಲವು ವರ್ಷಗಳಿಂದ ಹಿನ್ನಡೆ ಅನುಭವಿಸುತ್ತಿರುವ ಸಿಎಸ್‌ಕೆ ತಂಡದ ಅದೃಷ್ಟ ಬದಲಾಗುವ ನಿರೀಕ್ಷೆಯಿದೆ.
Read Full Story

06:38 PM (IST) Sep 21

ChatGPT ಬಳಸಿ ಪರೀಕ್ಷೆಯಲ್ಲಿ ಕಾಪಿ? ಸಿಕ್ಕಿಬಿದ್ದ ವಿದ್ಯಾರ್ಥಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್​ - ಜಾತಿ ನಿಂದನೆ ಕೇಸ್​

ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಬಳಸಿದ ಆರೋಪದ ಮೇಲೆ ಸಿಕ್ಕಿಬಿದ್ದಿದ್ದ ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಪೋಷಕರು ಇದು ಜಾತಿ ನಿಂದನೆಯಿಂದಾದ ಸಾವು ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಮುಂಬೈ ಅಪರಾಧ ಶಾಖೆಗೆ ವಹಿಸಲಾಗಿದೆ. ಈ ಬಗ್ಗೆ ಐಐಟಿ ಬಾಂಬೆ ತನ್ನ ಹಿಂದಿನ ಹೇಳಿಕೆಗಳನ್ನು ಹಿಂಪಡೆದು ಕ್ಷಮೆಯಾಚಿಸಿದೆ.
Read Full Story

06:37 PM (IST) Sep 21

ವಿಚ್ಛೇದನದ ಚರ್ಚೆ ನಡುವೆ ನಟಿ ಕಾಜಲ್ ಅಗರ್ವಾಲ್ ಮಾತು - ಪತಿ ಗೌತಮ್ ಬಗ್ಗೆ ಹೇಳಿದ್ದೇನು?

ನಟಿ ಕಾಜಲ್ ಅಗರ್ವಾಲ್ ದಾಂಪತ್ಯ ಸಂಬಂಧಗಳು, ವಿಚ್ಛೇದನದ ಚರ್ಚೆ ಹಾಗೂ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯ ಕುರಿತು ಮಾತನಾಡಿದ್ದಾರೆ. ಸಂಗಾತಿಗಳ ನಡುವೆ ಉತ್ತಮ ಮಾತುಕತೆ ಹಾಗೂ ಪರಸ್ಪರ ಸಮಯ ಮೀಸಲಿಡುವಿಕೆಯ ಮಹತ್ವವನ್ನು ವಿವರಿಸಿದ್ದಾರೆ.

Read Full Story

06:32 PM (IST) Sep 21

Baleno ಅಥವಾ Altroz - 6 ಲಕ್ಷ ರೂಪಾಯಿಗೆ ಯಾವ ಕಾರು ನಿಮ್ಮ ಮನೆಗೆ ಬೆಸ್ಟ್‌? ಇಲ್ಲಿದೆ ಡೀಟೇಲ್ಸ್‌

6 ಲಕ್ಷ ರೂ. ಬಜೆಟ್‌ನಲ್ಲಿ ಮಾರುತಿ ಬಲೆನೊ ಮತ್ತು ಟಾಟಾ ಆಲ್ಟ್ರೋಜ್ ಕಾರುಗಳ ನಡುವಿನ ಸಂಪೂರ್ಣ ಹೋಲಿಕೆ ಇಲ್ಲಿದೆ. ಬಲೆನೊ ಅತ್ಯುತ್ತಮ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚಕ್ಕೆ ಹೆಸರಾಗಿದ್ದರೆ, ಆಲ್ಟ್ರೋಜ್ 5-ಸ್ಟಾರ್ ಸುರಕ್ಷತೆ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ.
Read Full Story

05:28 PM (IST) Sep 21

ಬಾತ್‌ರೂಮ್, ಶೌಚಾಲಯದೊಳಗೆ ಹಾವು ಏಕೆ & ಹೇಗೆ ಬರುತ್ತವೆ? ನಿಯಂತ್ರಣಕ್ಕೆ ಏನು ಮಾಡಬೇಕು?

what to do if you find a snake in bathroom ಶೌಚಾಲಯ ಅಥವಾ ಬಾತ್‌ರೂಮ್‌ಗೆ ಹಾವುಗಳು ಏಕೆ ಬರುತ್ತವೆ? ಪೈಪ್‌ಗಳ ಮೂಲಕ ಹಾವು ಬರದಂತೆ ತಡೆಯುವ ಕ್ರಮಗಳು ಮತ್ತು ಹಾವು ಕಂಡಾಗ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

05:28 PM (IST) Sep 21

ಮದ್ಯಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್, ಕಡಿಮೆ ಬೆಲೆಗೆ ಎಣ್ಣೆ; ಕೇಂದ್ರದಿಂದ ಬಿಗ್ ಅಪ್‌ಡೇಟ್ಸ್‌

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (FTA) ಏರ್ಪಟ್ಟಿದ್ದು, ಅಕ್ಟೋಬರ್ 20 ರಿಂದ ಜಾರಿಗೆ ಬರಲಿದೆ. ಇದರಿಂದ ನ್ಯೂಜಿಲೆಂಡ್‌ನಿಂದ ಬರುವ ವಸ್ತುಗಳ ಮೇಲಿನ ಆಮದು ಸುಂಕ ಶೇ.95ರಷ್ಟು ಕಡಿಮೆಯಾಗಲಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

Read Full Story

05:22 PM (IST) Sep 21

2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ 'ಟಾಕ್ಸಿಕ್' ಸುಂದರಿ ಕಿಯಾರಾ-ಸಿದ್ಧಾರ್ಥ್ ಜೋಡಿ? ಸಲ್ಮಾನ್ ಖಾನ್ ಕೊಟ್ಟ ಸುಳಿವೇನು?

ಸಿದ್ಧಾರ್ಥ್ ತಮ್ಮ ರಹಸ್ಯವನ್ನು ಸರಿಯಾದ ಸಮಯದಲ್ಲಿ ಬಹಿರಂಗಪಡಿಸಿದ್ದರು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಲ್ಮಾನ್, “ಈಗ ಆ ರಹಸ್ಯ ಮಗುವಾಗಿದೆ” ಎಂಬ ಅರ್ಥದಲ್ಲಿ ತಮಾಷೆಯಾಗಿ ಹೇಳಿದರು. ಜೊತೆಗೆ, ಸಲ್ಲೂ ಅವರು ಕಿಯಾರಾ-ಸಿದ್ಧಾರ್ಥ್‌ ಜೋಡಿಯ ಹೊಸ ಸೀಕ್ರೆಟ್ ಒಂದನ್ನು ಜಗಜ್ಜಾಹೀರು ಮಾಡಿದ್ರಾ? ನೋಡಿ..

Read Full Story

04:58 PM (IST) Sep 21

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಾರುತಿ ವ್ಯಾಗನರ್‌ - 1.2 ಲೀಟರ್‌ನ 'Z12E' ಪೆಟ್ರೋಲ್ ಎಂಜಿನ್ ಸೇರ್ಪಡೆ

ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ವ್ಯಾಗನರ್ ಕಾರನ್ನು ಹೊಸ ವಿನ್ಯಾಸ ಮತ್ತು 1.2 ಲೀಟರ್‌ನ ಹೊಸ 'Z12E' ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಈ ಫೇಸ್‌ಲಿಫ್ಟ್ ಮಾದರಿಯಲ್ಲಿ ಸಿಎನ್‌ಜಿ ಟ್ಯಾಂಕ್ ಅನ್ನು ತಳಭಾಗದಲ್ಲಿ ಅಳವಡಿಸುವ ಸಾಧ್ಯತೆ ಇದೆ.

Read Full Story

04:17 PM (IST) Sep 21

₹1,000ದಿಂದ ಹೂಡಿಕೆ ಶುರು; 9 ವರ್ಷ 7 ತಿಂಗಳಲ್ಲಿ ಹಣ ಡಬಲ್‌! Post Officeನ ಈ ಸ್ಕೀಮ್‌ ಗೊತ್ತಾ?

ಕಿಸಾನ್ ವಿಕಾಸ್ ಪತ್ರ (KVP) ಪೋಸ್ಟ್ ಆಫೀಸ್‌ನ ಅತ್ಯುತ್ತಮ ಉಳಿತಾಯ ಯೋಜನೆಗಳಲ್ಲಿ ಒಂದಾಗಿದ್ದು, ಇದರಲ್ಲಿ ಹೂಡಿಕೆ ಮಾಡಿದ ಹಣವು ನಿರ್ದಿಷ್ಟ ಅವಧಿಯ ನಂತರ ದ್ವಿಗುಣಗೊಳ್ಳುತ್ತದೆ. ಕೇವಲ 1,000 ರೂ.ಗಳಿಂದ ಹೂಡಿಕೆ ಆರಂಭಿಸಬಹುದಾದ ಈ ಯೋಜನೆಗೆ ಸರ್ಕಾರದ ಭದ್ರತೆಯಿದೆ. ಇದರಲ್ಲಿ ಸಿಂಗಲ್, ಜಾಯಿಂಟ್ ಮತ್ತು ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯುವ ಅವಕಾಶವಿದೆ.
Read Full Story

04:17 PM (IST) Sep 21

ಸತತ 5ನೇ ಬಾರಿಗೆ iPhone ಕಳೆದುಕೊಂಡ ಭಾರತೀಯ ಮಹಿಳೆ, ಮತ್ತೆ ಮತ್ತೆ ಫೋನ್ ಹುಡುಕಿಕೊಂಡ ಸಿಕ್ರೇಟ್ ರಿವೀಲ್

ಜಪಾನ್‌ನಲ್ಲಿ ವಾಸಿಸುತ್ತಿರುವ ಪ್ರಗತಿ ಎಂಬ ಭಾರತೀಯ ಮಹಿಳೆ ಮರೆವಿನಿಂದಾಗಿ ಬರೋಬ್ಬರಿ ಐದು ಬಾರಿ ತಮ್ಮ ಐಫೋನ್ ಕಳೆದುಕೊಂಡಿದ್ದಾರೆ. ಇದೀಗ ಫೋನ್ ವಾಪಸ್ ಹುಡುಕಿಕೊಂಡಿದ್ದಾರೆ. ಅದನ್ನು ಹೇಗೆ ವಾಪಸ್ ಪಡೆದೆ? ಪ್ರತಿಸಾರಿ ಕಳೆದು ಹೋದರೂ ನನಗೆ ಯಾಕೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

Read Full Story

04:12 PM (IST) Sep 21

ಟಿಗೋರ್‌ಗೆ ಬೈ ಬೈ ಹೇಳಲು ಟಾಟಾ ಮೋಟಾರ್ಸ್ ರೆಡಿ, ಹೊಸ 'ಟಾಟಾ ಏರಿಸ್' ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಟಿಗೋರ್ ಕಾರಿನ ಬದಲಾಗಿ 'ಟಾಟಾ ಏರಿಸ್' ಎಂಬ ಹೊಸ ಕಾಂಪ್ಯಾಕ್ಟ್ ಸೆಡಾನ್ ಅನ್ನು ಸೆ.25ರಂದು ಬಿಡುಗಡೆ ಮಾಡಲಿದೆ. ಈ ಹೊಸ ಕಾರು ಸ್ಪೋರ್ಟಿ ವಿನ್ಯಾಸ, ಹೈಟೆಕ್ ಇಂಟೀರಿಯರ್, 6 ಏರ್‌ಬ್ಯಾಗ್‌ಗಳು ಮತ್ತು ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ.

Read Full Story

03:36 PM (IST) Sep 21

100 ವರ್ಷಗಳಲ್ಲಿ ಇದೇ ಮೊದಲು, ಚಿರತೆಯಂತಹ ಹೊಸ ಬೆಕ್ಕಿನ ಪ್ರಭೇದ ಪತ್ತೆ; DNA ಪರೀಕ್ಷೆಯಲ್ಲಿ ಶಾಕಿಂಗ್ ಸಂಗತಿ ರಿವೀಲ್

ಬೊಲಿವಿಯಾದ ಕಾಡಿನಲ್ಲಿ ಪತ್ತೆಯಾದ ಸಾಮಾನ್ಯ ಬೆಕ್ಕೊಂದು, ಡಿಎನ್‌ಎ ಪರೀಕ್ಷೆಯ ಬಳಿಕ 100 ವರ್ಷಗಳಲ್ಲೇ ಮೊದಲ ಬಾರಿಗೆ ಪತ್ತೆಯಾದ ಹೊಸ ಪ್ರಭೇದ ಎಂದು ತಿಳಿದುಬಂದಿದೆ. 'ಲಿಯೋಪಾರ್ಡಸ್ ಟಿಲ್ಕಾಯೊ' ಎಂದು ಕರೆಯಲ್ಪಡುವ ಈ ಬೆಕ್ಕು ಚಿರತೆಯಂತಹ ಕಪ್ಪು ಚುಕ್ಕೆಗಳನ್ನು ಹೊಂದಿದ್ದು, 1.4 ದಶಲಕ್ಷ ವರ್ಷಗಳ ಹಿಂದೆಯೇ ವಿಕಸನಗೊಂಡಿದೆ. ಇದರ ಆಹಾರ ಮತ್ತು ಸಂತಾನೋತ್ಪತ್ತಿಯಂತಹ ಹಲವು ರಹಸ್ಯಗಳು ಇನ್ನೂ ನಿಗೂಢವಾಗಿವೆ.
Read Full Story

03:18 PM (IST) Sep 21

2027ರಲ್ಲಿ ಬರಲಿದೆ ಹೊಸ Tata Nexon; ಡಿಸೈನ್‌ನಿಂದ ಟೆಕ್ನಾಲಜಿವರೆಗೆ ಭರ್ಜರಿ ಅಪ್‌ಡೇಟ್‌! ಬೆಲೆ ಎಷ್ಟು ಗೊತ್ತಾ?

ಟಾಟಾ ಮೋಟಾರ್ಸ್ 2027ರಲ್ಲಿ ಹೊಸ ತಲೆಮಾರಿನ ನೆಕ್ಸಾನ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದರ ಟೆಸ್ಟಿಂಗ್ ನಡೆಯುತ್ತಿದೆ. ಈ ಹೊಸ ಕಾರು ಅಟ್ಲಾಸ್ (ATLAS) ಪ್ಲಾಟ್‌ಫಾರ್ಮ್, ಆಧುನಿಕ ಇಂಟೀರಿಯರ್ ಮತ್ತು ಹೊಸ ವಿನ್ಯಾಸದೊಂದಿಗೆ ಬರಲಿದೆ. ಆದರೆ, ಈಗಿರುವ ಎಂಜಿನ್ ಆಯ್ಕೆಗಳೇ ಮುಂದುವರಿಯಲಿದ್ದು, ಬೆಲೆಯಲ್ಲಿ 50,000 ರೂ. ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.
Read Full Story

02:49 PM (IST) Sep 21

ಸಲೂನ್‌ನ VIP ಕಸ್ಟಮರ್‌ ಈ ಕೋತಿ! ಆರಾಮಾಗಿ ಹೆಡ್‌ ಮಸಾಜ್‌ ಮಾಡಿಸಿಕೊಂಡ ವಿಡಿಯೋ ವೈರಲ್‌

ಸಲೂನ್‌ಗೆ ಬಂದ ಕೋತಿಯೊಂದು ಬಾರ್ಬರ್ ಚೇರ್ ಮೇಲೆ ಕುಳಿತು ಆರಾಮಾಗಿ ಹೆಡ್ ಮಸಾಜ್ ಮಾಡಿಸಿಕೊಂಡಿದೆ. ಕಣ್ಣು ಮುಚ್ಚಿಕೊಂಡು ಮಸಾಜ್ ಎಂಜಾಯ್ ಮಾಡುತ್ತಿರುವ ಈ ಕೋತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಕೋತಿಯನ್ನು ವಿಐಪಿ ಕಸ್ಟಮರ್ ಎಂದು ಕರೆದು ತಮಾಷೆ ಮಾಡುತ್ತಿದ್ದಾರೆ.
Read Full Story

02:15 PM (IST) Sep 21

Tata Sons vs Trusts - ಟಾಟಾ ಸನ್ಸ್‌ಗೆ ಚಂದ್ರಶೇಖರನ್ ನೇಮಕ ಒಪ್ಪದ ಟ್ರಸ್ಟ್‌, ದೇಶದ ಅಗ್ರಗಣ್ಯ ವಕೀಲರ ನೇಮಕ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ಮರುನೇಮಕವನ್ನು ಟಾಟಾ ಟ್ರಸ್ಟ್ಸ್ ತೀವ್ರವಾಗಿ ವಿರೋಧಿಸಿದ್ದು, ಇದು ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿದೆ. ಈ ಆಡಳಿತಾತ್ಮಕ ಬಿಕ್ಕಟ್ಟು ಮತ್ತು ಐಪಿಒ ಭಿನ್ನಾಭಿಪ್ರಾಯದಿಂದಾಗಿ ಎರಡೂ ಬಣಗಳು ಬೃಹತ್ ಕಾನೂನು ಹೋರಾಟಕ್ಕೆ ಸಿದ್ಧವಾಗಿವೆ.
Read Full Story

01:58 PM (IST) Sep 21

'ಕೈಲಾಗದವ ಮೈ ಪರ್ಚೊಂಡ' ಅಂತಾರಲ್ಲ, ಹಾಗಾಯ್ತು ಇವರ ಕಥೆ - ನಟ ಅನಂತ್​ ನಾಗ್​ ತಿರುಗೇಟು

ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಹೊಗಳಿದ್ದಕ್ಕೇ ಈ ಪ್ರಶಸ್ತಿ ಸಿಕ್ಕಿದೆ ಎಂಬ ಟೀಕೆಗಳಿಗೆ ಅನಂತ್ ನಾಗ್ ಖಡಕ್ ತಿರುಗೇಟು ನೀಡಿದ್ದಾರೆ.

Read Full Story

01:41 PM (IST) Sep 21

'ಡಿಸೆಂಬರ್‌ನಲ್ಲಿ ಮೇಧಾ ಪಾಟ್ಕರ್ ಜೊತೆ ಮದುವೆ ಆಗೋಕಾಗಲ್ಲ!'.. ಸಮಯ್ ರೈನಾ ಪೋಸ್ಟ್‌ಗೆ ನೆಟ್ಟಿಗರು ಸುಸ್ತೋ ಸುಸ್ತು!

ಹೀಗಾಗಿ ಡಿಸೆಂಬರ್ ಮದುವೆ ಸುದ್ದಿ ನಿಜವೇ, ಅಥವಾ ಇದು ಸಾಮಾಜಿಕ ಜಾಲತಾಣದ ಮತ್ತೊಂದು ಗಾಸಿಪ್ ಅಷ್ಟೇನಾ ಎಂಬ ಪ್ರಶ್ನೆ ಸದ್ಯಕ್ಕೆ ಹಾಗೆಯೇ ಉಳಿದಿದೆ. ಆದರೆ ಒಂದು ವಿಷಯ ಮಾತ್ರ ಖಚಿತ—ಮದುವೆ ವದಂತಿಗೂ ಸಮಯ್ ರೈನಾ ಕೊಟ್ಟ ಉತ್ತರ ಮಾತ್ರ ಅವರ ಸ್ಟೈಲ್‌ನಲ್ಲೇ ಸಿಕ್ಕಿದೆ!

Read Full Story

01:34 PM (IST) Sep 21

ವಂದೇ ಭಾರತ್ 1 ಕಿ.ಮೀ ಚಲಿಸಲು ತಗುಲುವ ವಿದ್ಯುತ್ ವೆಚ್ಚವೆಷ್ಟು? ಡೀಸೆಲ್ ರೈಲಿಗಿಂತ ಇದು ಎಷ್ಟು ಅಗ್ಗ?

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರತಿ ಕಿಲೋಮೀಟರ್‌ಗೆ ಕೇವಲ 130 ರೂಪಾಯಿ ವಿದ್ಯುತ್ ವೆಚ್ಚದಲ್ಲಿ ಚಲಿಸುತ್ತವೆ. ಇವುಗಳಲ್ಲಿರುವ 'ಪುನರುತ್ಪಾದಕ ಬ್ರೇಕಿಂಗ್' ತಂತ್ರಜ್ಞಾನವು ಬ್ರೇಕ್ ಹಾಕಿದಾಗ ವಿದ್ಯುತ್ ಉತ್ಪಾದಿಸಿ ಇಂಧನ ಉಳಿತಾಯ ಮಾಡುತ್ತದೆ. ಸಾಂಪ್ರದಾಯಿಕ ಡೀಸೆಲ್ ರೈಲುಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ವೆಚ್ಚದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ.
Read Full Story

01:25 PM (IST) Sep 21

10 ರೂ. ಚಿಲ್ಲರೆಗಾಗಿ ಏರಿಯಾದ ಬಾಂಧವರನ್ನು ಕರೆಸಿ ಆಟೋಚಾಲಕನ ಕೊಲೆ ಮಾಡಿದ ಪ್ರಯಾಣಿಕ

ಹೈದರಾಬಾದ್‌ನ ವಟ್ಟಪಲ್ಲಿಯಲ್ಲಿ ಕೇವಲ 10 ರೂಪಾಯಿ ಚಿಲ್ಲರೆಗಾಗಿ ನಡೆದ ಜಗಳದಲ್ಲಿ ಆಟೋ ಚಾಲಕನನ್ನು ಗುಂಪೊಂದು ಹೊಡೆದು ಕೊಂದಿದೆ. ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Read Full Story

01:24 PM (IST) Sep 21

Numerology ಪ್ರಕಾರ ಈ 4 Birth Dates ತುಂಬಾ ಸ್ಪೆಷಲ್‌; ಹಣದ ವಿಚಾರದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ..!

ಸಂಖ್ಯಾಶಾಸ್ತ್ರದ ಪ್ರಕಾರ, ನಮ್ಮ ಹುಟ್ಟಿದ ದಿನಾಂಕ ಕೇವಲ ವ್ಯಕ್ತಿತ್ವವನ್ನಷ್ಟೇ ಅಲ್ಲ, ಹಣದ ವಿಚಾರದಲ್ಲಿ ನಮ್ಮ ಅದೃಷ್ಟವನ್ನೂ ಹೇಳುತ್ತದೆ. ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದವರಿಗೆ ಆರ್ಥಿಕವಾಗಿ ಭರ್ಜರಿ ಅವಕಾಶಗಳು ಒಲಿದು ಬರುತ್ತವೆ. ಆ ಲಕ್ಕಿ ದಿನಾಂಕಗಳು ಯಾವುವು ಅಂತ ಇಲ್ಲಿ ನೋಡೋಣ.

Read Full Story

12:59 PM (IST) Sep 21

ಸಾಗರದ ಮಧ್ಯದಲ್ಲಿ ಅಪರೂಪದ ಸಂಗಮ - ವಿರುದ್ಧ ದಿಕ್ಕಿನಲ್ಲಿ ಹಡಗು ಹಾದುಹೋಗುವಾಗ ಮುಖಾಮುಖಿಯಾದ ತಂದೆ-ಮಗ!

ಮರ್ಚೆಂಟ್ ನೇವಿ ನಾವಿಕರಾದ ರುಶೀಲ್ ಸರನ್ ಮತ್ತು ಅವರ ತಂದೆ ರವಿರಾಜ್ ಸರನ್ ಪ್ರಯಾಣಿಸುತ್ತಿದ್ದ ಹಡಗುಗಳು ಉತ್ತರ ಅಟ್ಲಾಂಟಿಕ್ ಸಾಗರದ ಮಧ್ಯದಲ್ಲಿ ಆಕಸ್ಮಿಕವಾಗಿ ಮುಖಾಮುಖಿಯಾಗಿವೆ. ಯಾವುದೇ ಪೂರ್ವ ಯೋಜನೆಯಿಲ್ಲದೆ ನಡೆದ ಈ ಅಪರೂಪದ ತಂದೆ-ಮಗನ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Full Story

12:35 PM (IST) Sep 21

ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ ಅಲ್ಲ, ಈತನೇ ಭಾರತದ ಭವಿಷ್ಯದ ಸೂಪರ್ ಸ್ಟಾರ್ ಎಂದ ಸನತ್ ಜಯಸೂರ್ಯ..!

ಶ್ರೀಲಂಕಾದ ಮಾಜಿ ದಿಗ್ಗಜ ಸನತ್ ಜಯಸೂರ್ಯ ಅವರು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಯನ್ನು ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸೂಪರ್ ಸ್ಟಾರ್ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ವೈಭವ್, ಜಿಂಬಾಬ್ವೆ ವಿರುದ್ಧ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.
Read Full Story

12:34 PM (IST) Sep 21

DLಗೆ ಮೊಬೈಲ್​ ನಂಬರ್​ ಅಪ್​ಡೇಟ್​ ಕಡ್ಡಾಯ - ಅಂತಿಮ ದಿನ ಎಂದು? ಮನೆಯಿಂದ್ಲೇ ಮಾಡೋದು ಹೇಗೆ

ಸಾರಿಗೆ ಇಲಾಖೆಯು ಡ್ರೈವಿಂಗ್ ಲೈಸೆನ್ಸ್‌ಗೆ ಪ್ರಸ್ತುತ ಬಳಕೆಯಲ್ಲಿರುವ ಮೊಬೈಲ್ ನಂಬರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇ-ಚಲನ್ ಮತ್ತು ಇತರ ಮಾಹಿತಿಗಳು ಸರಿಯಾಗಿ ತಲುಪಲು ಈ ಕ್ರಮ ಕೈಗೊಳ್ಳಲಾಗಿದೆ. ಸಾರಥಿ ಪರಿವಾಹನ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ನಂಬರ್ ಅಪ್‌ಡೇಟ್ ಮಾಡಬಹುದು.
Read Full Story

12:20 PM (IST) Sep 21

₹1.45 ಲಕ್ಷ ನೀಡಿ ಗಣೇಶನ ಲಡ್ಡು ಪ್ರಸಾದ ಖರೀದಿಸಿದ ಮುಸ್ಲಿಂ ದಂಪತಿ

ಆಂಧ್ರಪ್ರದೇಶದ ಧರ್ಮಾವರಂನಲ್ಲಿ ಮುಸ್ಲಿಂ ದಂಪತಿಯೊಂದು ಹರಕೆ ಈಡೇರಿದ ಹಿನ್ನೆಲೆಯಲ್ಲಿ 1.45 ಲಕ್ಷ ರೂ. ನೀಡಿ ಗಣೇಶನ ಲಡ್ಡು ಖರೀದಿಸಿದ್ದಾರೆ. ಇನ್ನು ಈ ದಂಪತಿಗೆ ಗಣಪ ಏನು ಕರುಣಿಸಿದ್ದಾನೆ ಗೊತ್ತಾ? ಸ್ಟೋರಿ ಓದಿ.

Read Full Story

12:09 PM (IST) Sep 21

ಮದ್ಯಪಾನ ಮಾಡಿದ ಮೇಲೆ ಮಾತ್ರೆ ಸೇವಿಸಿದ್ರೆ ಏನಾಗುತ್ತೆ? ವೈದ್ಯರು ಏನಂತಾರೆ ಗೊತ್ತಾ?

ಮದ್ಯಪಾನ ಮಾಡಿದ ಮೇಲೆ ಕೆಲವರಿಗೆ ಮಾತ್ರೆ ನುಂಗುವ ಅಭ್ಯಾಸ ಇರುತ್ತದೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ಎಷ್ಟು ಸೇಫ್? ಇದರಿಂದ ದೇಹದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

11:51 AM (IST) Sep 21

ಮೈಥಿಲಿ ಠಾಕೂರ್ ಭಾರೀ ಐಷಾರಾಮಿ ಕಾರ್‌ ವಿವಾದ; ಶಾಸಕಿ ಪರ ನಿಂತ ಕಂಗನಾ ಹೇಳಿದ್ದೇನು ಗೊತ್ತಾ?

ಮೈಥಿಲಿ ಠಾಕೂರ್ ಐಷಾರಾಮಿ ಕಾರಿನಲ್ಲಿ ಕಾಣಿಸಿಕೊಂಡಿದ್ದರಿಂದ ಆರಂಭವಾದ ಚರ್ಚೆ ಇದೀಗ ರಾಜಕಾರಣಿಗಳ ಜೀವನಶೈಲಿ, ಸಾರ್ವಜನಿಕ ಸೇವೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದವರೆಗೆ ಬಂದು ನಿಂತಿದೆ. ಮೈಥಿಲಿ ಠಾಕೂರ್ ಅವರ ಕಾರಿನ ವಿಡಿಯೋ ವೈರಲ್ ಆಗಿದ್ದರೆ, ಅದಕ್ಕೆ ಕಂಗನಾ ನೀಡಿರುವ ಪ್ರತಿಕ್ರಿಯೆ ಇದೀಗ ಮತ್ತೊಂದು ಚರ್ಚೆಗೆ ವೇದಿಕೆ ಸೃಷ್ಟಿಸಿದೆ.

Read Full Story

11:25 AM (IST) Sep 21

ತೀವ್ರ ವಿವಾದದ ನಡುವೆಯೇ ಅಚ್ಚರಿಯ ಹೇಳಿಕೆ, ಪೆರಿಯಾರ್‌ರ ಬ್ರಾಹ್ಮಣ ವಿರೋಧಿ ನಡೆ ಒಪ್ಪಲ್ಲ - ಅಣ್ಣಾಮಲೈ ಸ್ಪಷ್ಟನೆ

ಪೆರಿಯಾರ್ ಅವರ ಮಹಿಳಾ ಸಬಲೀಕರಣವನ್ನು ಒಪ್ಪುವ ಕೆ. ಅಣ್ಣಾಮಲೈ, ಅವರ ನಾಸ್ತಿಕ ಮತ್ತು ಬ್ರಾಹ್ಮಣ ವಿರೋಧಿ ನೀತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಹಿಂದೂ ದೇವಾಲಯಗಳ ಮುಂದಿರುವ ನಾಸ್ತಿಕ ಶಾಸನಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ವೈಗೈ ನದಿ ಸ್ವಚ್ಛತಾ ಕಾರ್ಯವನ್ನು ಶ್ಲಾಘಿಸಿ, ಸ್ಥಳೀಯ ಆಡಳಿತದ ವೈಫಲ್ಯವನ್ನು ಟೀಕಿಸಿದ್ದಾರೆ.
Read Full Story

10:46 AM (IST) Sep 21

ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಅರವಣ ಪ್ರಸಾದದ ಕೊರತೆ, ಭಕ್ತರಲ್ಲಿ ಆತಂಕ! ಈ ಪ್ರಸಾದದ ವಿಶೇಷತೆ ಏನು?

ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಅರವಣ ಪಾಯಸಂ ಪ್ರಸಾದದ ಕೊರತೆ ಉಂಟಾಗಿದ್ದು, ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ. ಪ್ರಸಾದ ಘಟಕದ ನವೀಕರಣ ಹಾಗೂ ಭಕ್ತರ ದಿಢೀರ್ ಆಗಮನವೇ ಈ ಸಮಸ್ಯೆಗೆ ಕಾರಣವಾಗಿದೆ. ಇದನ್ನು ಶೀಘ್ರವೇ ಬಗೆಹರಿಸುವುದಾಗಿ ಸಚಿವ ಕೆ.ಮುರಳೀಧರನ್‌ ಭರವಸೆ ನೀಡಿದ್ದಾರೆ.
Read Full Story

09:05 AM (IST) Sep 21

ಏಷ್ಯನ್‌ ಗೇಮ್ಸ್‌ ಮಹಿಳಾ ಕ್ರಿಕೆಟ್‌ - ಬಾಂಗ್ಲಾಗೆ ಮಣ್ಣುಮುಕ್ಕಿಸಿದ ಭಾರತ; ಫೈನಲ್‌ಗೆ ಎಂಟ್ರಿ! ಶಫಾಲಿ ಸಿಡಿಲಬ್ಬರದ ಶತಕ

ಮಹಿಳಾ ಕ್ರಿಕೆಟ್ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಸತತ 2ನೇ ಬಾರಿ ಫೈನಲ್ ಪ್ರವೇಶಿಸಿದೆ. ಶಫಾಲಿ ವರ್ಮಾ ಅವರ ಅಜೇಯ ಶತಕದ ನೆರವಿನಿಂದ ಭಾರತ ಭರ್ಜರಿ ಜಯ ಸಾಧಿಸಿದ್ದು, ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಇದೇ ವೇಳೆ ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ಬರೆದಿದ್ದಾರೆ.
Read Full Story

08:49 AM (IST) Sep 21

ವೇ*ಶ್ಯಾ ಪದ್ದತಿಯಿಂದ ಪಾರಾಗಲು ಗುಜರಾತ್‌ನ ವಾಡಿಯಾ ಗ್ರಾಮದಲ್ಲಿ 7ನೇ ವಯಸ್ಸಿಗೆ ಹಸುಳೆಗಳಿಗೆ ನಿಶ್ಚಿತಾರ್ಥ!

ಗುಜರಾತ್‌ನ ವಾಡಿಯಾ ಗ್ರಾಮದಲ್ಲಿ ತಲೆತಲಾಂತರಗಳಿಂದ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಅನಿಷ್ಟ ಪದ್ಧತಿಯಿದೆ. ಈ ನರಕದಿಂದ ಹೆಣ್ಣುಮಕ್ಕಳನ್ನು ಪಾರು ಮಾಡಲು ಪೋಷಕರು ಕೇವಲ 7ನೇ ವಯಸ್ಸಿಗೆ ಅವರಿಗೆ ನಿಶ್ಚಿತಾರ್ಥ ಮಾಡುತ್ತಿದ್ದಾರೆ. ಪ್ರಸ್ತುತ ಎನ್‌ಜಿಒ ನೆರವಿನಿಂದ ಈ ಗ್ರಾಮದ ಜನರು ಪರ್ಯಾಯ ಜೀವನೋಪಾಯ ಕಂಡುಕೊಳ್ಳುತ್ತಿದ್ದಾರೆ.
Read Full Story

08:49 AM (IST) Sep 21

ಏಷ್ಯನ್‌ ಗೇಮ್ಸ್‌ 2026 - ಭಾರತ ಪದಕ ಖಾತೆ ಓಪನ್‌; ಇಳವೆನಿಲ್‌ ವಲರಿವನ್‌ಗೆ ಡಬಲ್‌ ಸಿಲ್ವರ್‌!

ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಶೂಟಿಂಗ್ ವಿಭಾಗದಲ್ಲಿ 2 ಬೆಳ್ಳಿ ಗೆಲ್ಲುವ ಮೂಲಕ ಪದಕದ ಖಾತೆ ತೆರೆದಿದೆ. ಇಳವೆನಿಲ್‌ ವಲರಿವನ್‌ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಜೊತೆಗೆ ಮಹಿಳಾ ಕ್ರಿಕೆಟ್, ಬ್ಯಾಡ್ಮಿಂಟನ್ ಮತ್ತು ಹಾಕಿಯಲ್ಲೂ ಭಾರತ ಉತ್ತಮ ಪ್ರದರ್ಶನ ನೀಡಿದೆ.
Read Full Story

More Trending News