MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • Entertainment
  • ತಂದೆ-ಮಗಳ ಸಂಬಂಧದ ಇಂತಹ ಕರಾಳ ಮುಖ ನೋಡಿದ್ದೀರಾ? ಈ ವೆಬ್ ಸೀರೀಸ್ ಕಥೆ ತುಂಬಾ ಕಾಡುತ್ತೆ!

ತಂದೆ-ಮಗಳ ಸಂಬಂಧದ ಇಂತಹ ಕರಾಳ ಮುಖ ನೋಡಿದ್ದೀರಾ? ಈ ವೆಬ್ ಸೀರೀಸ್ ಕಥೆ ತುಂಬಾ ಕಾಡುತ್ತೆ!

ಕಾಲಿವುಡ್‌ನ ವೆಟ್ರಿಮಾರನ್ ಕೂಡ ಒಂದು ವೆಬ್ ಸೀರೀಸ್ ನಿರ್ದೇಶನ ಮಾಡಿದ್ದಾರೆ ಅನ್ನೋದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಒಟಿಟಿಯಲ್ಲಿರುವ ಈ ಸೀರೀಸ್ ನೋಡಿದರೆ ನೀವು ಖಂಡಿತ ಶಾಕ್ ಆಗ್ತೀರಾ.

2 Min read
Author : Govindaraj S
Published : Sep 21 2026, 09:06 PM IST
Share this Photo Gallery
  • FB
  • TW
  • Linkdin
  • Whatsapp
14
ಒಟಿಟಿಯಲ್ಲಿ ಮಿಸ್ ಮಾಡದೇ ನೋಡಬೇಕಾದ ಸೀರೀಸ್
Image Credit : others

ಒಟಿಟಿಯಲ್ಲಿ ಮಿಸ್ ಮಾಡದೇ ನೋಡಬೇಕಾದ ಸೀರೀಸ್

ಇತ್ತೀಚೆಗೆ ನೈಜ ಘಟನೆಗಳ ಆಧಾರಿತ ಸಿನಿಮಾಗಳು ಹಾಗೂ ವೆಬ್ ಸೀರೀಸ್‌ಗಳಿಗೆ ವೀಕ್ಷಕರಿಂದ ಭಾರಿ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲೂ ಒಟಿಟಿಯಲ್ಲಿ ರಿಲೀಸ್ ಆಗುವ ಕ್ರೈಮ್ ಸ್ಟೋರಿಗಳು ಜನರ ಗಮನ ಸೆಳೆಯುತ್ತಿವೆ. ತಮಿಳುನಾಡಿನಲ್ಲಿ ನಡೆದಿದೆ ಎನ್ನಲಾದ ಒಂದು ಆಘಾತಕಾರಿ ಘಟನೆಯನ್ನೇ ಇಟ್ಟುಕೊಂಡು 'ಪಾವ ಕದೈಗಳ್' (Paava Kadhaigal) ಎಂಬ ಆಂಥಾಲಜಿ ಸೀರೀಸ್ ಮಾಡಿದ್ದಾರೆ. ಈ ಸೀರೀಸ್‌ನಲ್ಲಿ ಬರುವ 'ಓರ್ ಇರವು' (Oor Iravu) ಎಂಬ ಕಿರುಚಿತ್ರ ತಂದೆ-ಮಗಳ ಸಂಬಂಧದ ಕರಾಳ ಮುಖವನ್ನು ತೋರಿಸುತ್ತದೆ. ಇದರಲ್ಲಿ ಸಾಯಿ ಪಲ್ಲವಿ 'ಸುಮತಿ' ಎಂಬ ಪಾತ್ರ ಮಾಡಿದ್ದಾರೆ. ಅವರ ತಂದೆಯಾಗಿ ಪ್ರಕಾಶ್ ರಾಜ್ ನಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಮಗಳ ಮದುವೆ ಒಪ್ಪದ ತಂದೆ
Image Credit : netflix

ಮಗಳ ಮದುವೆ ಒಪ್ಪದ ತಂದೆ

ಸುಮತಿ ತನ್ನ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿ ಗಂಡನ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿರುತ್ತಾಳೆ. ವೈವಾಹಿಕ ಜೀವನದಲ್ಲಿ ಖುಷಿಯಾಗಿರುವ ಆಕೆ ಗರ್ಭಿಣಿ ಕೂಡ ಆಗಿರುತ್ತಾಳೆ. ಈ ಸಮಯದಲ್ಲಿ ಮಗಳನ್ನು ನೋಡಲು ಬರುವ ತಂದೆ, ಕೆಲವು ದಿನಗಳ ಕಾಲ ಮನೆಯಲ್ಲೇ ಇದ್ದು ಸೀಮಂತ ಮಾಡುವುದಾಗಿ ಹೇಳುತ್ತಾನೆ. ಇದನ್ನು ನಂಬುವ ಸುಮತಿ, ತಂದೆಯ ಜೊತೆ ತನ್ನ ತವರು ಮನೆಗೆ ಹೋಗುತ್ತಾಳೆ. ಆದರೆ ಮರುದಿನ ನಡೆಯುವ ಸೀಮಂತದ ನಂತರ ಸುಮತಿಗೆ ದೊಡ್ಡ ಆಘಾತವೇ ಕಾದಿರುತ್ತದೆ. ಕುಟುಂಬದ ಮರ್ಯಾದೆ ಹೆಸರಿನಲ್ಲಿ ತಂದೆ ತೆಗೆದುಕೊಳ್ಳುವ ಕ್ರೂರ ನಿರ್ಧಾರ ಕಥೆಯ ದಿಕ್ಕನ್ನೇ ಬದಲಾಯಿಸುತ್ತದೆ.

Related Articles

Related image1
'ಜನರು ನನ್ನ ಮೊಡವೆಗಳನ್ನೇ ನೋಡುತ್ತಿದ್ದರು': ರಾಮಾಯಣ ವಿವಾದದ ನಡುವೆ ಸಾಯಿ ಪಲ್ಲವಿ ಹೇಳಿದ್ದೇನು?
Related image2
ಕಾಂಜೀವರಂ ಸೀರೆ, ಟೆಂಪಲ್ ಜ್ಯುವೆಲ್ಲರಿಯಲ್ಲಿ ದೈವಿಕ ಕಳೆ ಚೆಲ್ಲಿದ ಸಾಯಿ ಪಲ್ಲವಿ: ಫೋಟೋಸ್ ವೈರಲ್
34
ಹಾಲಿನಲ್ಲಿ ವಿಷ.. ವೀಕ್ಷಕರಿಗೆ ಶಾಕ್
Image Credit : netflix

ಹಾಲಿನಲ್ಲಿ ವಿಷ.. ವೀಕ್ಷಕರಿಗೆ ಶಾಕ್

ಎಲ್ಲರೂ ಮಲಗಿದ ಮೇಲೆ ತಂದೆ ತನ್ನ ಮಗಳಿಗೆ ಕೊಡುವ ಹಾಲಿನಲ್ಲಿ ವಿಷ ಬೆರೆಸುತ್ತಾನೆ. ಇದು ಗೊತ್ತಿಲ್ಲದೆ ಆ ಹಾಲನ್ನು ಕುಡಿಯುವ ಸುಮತಿ, ನರಳಿ ನರಳಿ ಪ್ರಾಣ ಬಿಡುತ್ತಾಳೆ. ಮಗಳ ಜೀವಕ್ಕಿಂತ ಕುಟುಂಬದ ಮರ್ಯಾದೆಗೆ ಹೆಚ್ಚು ಬೆಲೆ ಕೊಡುವ ಕ್ರೂರ ತಂದೆಯ ಮನಸ್ಥಿತಿಯನ್ನು ಈ ಕಥೆ ಬಹಳ ಪರಿಣಾಮಕಾರಿಯಾಗಿ ತೋರಿಸುತ್ತದೆ. ವಿಶೇಷವಾಗಿ ಸಾಯಿ ಪಲ್ಲವಿ ಮತ್ತು ಪ್ರಕಾಶ್ ರಾಜ್ ನಡುವಿನ ದೃಶ್ಯಗಳು ವೀಕ್ಷಕರ ಮನಕಲಕುತ್ತವೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ದೃಶ್ಯಗಳು ತಂದೆ-ಮಗಳ ಸಂಬಂಧದ ಅತ್ಯಂತ ದುರಂತ ಮುಖವನ್ನು ಅನಾವರಣಗೊಳಿಸುತ್ತವೆ.

44
ಸಮಾಜದ ಕರಾಳ ಮುಖ ಬಿಚ್ಚಿಡುವ 'ಪಾವ ಕದೈಗಳ್'
Image Credit : netflix

ಸಮಾಜದ ಕರಾಳ ಮುಖ ಬಿಚ್ಚಿಡುವ 'ಪಾವ ಕದೈಗಳ್'

'ಪಾವ ಕದೈಗಳ್' ಒಟ್ಟು ನಾಲ್ಕು ವಿಭಿನ್ನ ಕಥೆಗಳನ್ನು ಒಳಗೊಂಡಿರುವ ಆಂಥಾಲಜಿ ವೆಬ್ ಸೀರೀಸ್. ಜಾತಿ, ಧರ್ಮ, ಮರ್ಯಾದೆ, ಪುರುಷಪ್ರಧಾನ ಸಮಾಜ, ಮರ್ಯಾದಾ ಹತ್ಯೆ ಮತ್ತು ಕೌಟುಂಬಿಕ ಸಂಬಂಧಗಳಲ್ಲಿ ಬರುವ ಬಿಕ್ಕಟ್ಟುಗಳಂತಹ ಸಾಮಾಜಿಕ ಸಮಸ್ಯೆಗಳನ್ನು ಇಟ್ಟುಕೊಂಡು ಈ ಸೀರೀಸ್ ನಿರ್ಮಿಸಿದ್ದಾರೆ. ಇದರಲ್ಲಿರುವ ಪ್ರತಿಯೊಂದು ಕಥೆಯೂ ಬೇರೆ ಬೇರೆ ಹಿನ್ನೆಲೆ ಹೊಂದಿದ್ದರೂ, ಸಮಾಜದ ಹೆಸರಿನಲ್ಲಿ ವ್ಯಕ್ತಿಗಳು ಎದುರಿಸುವ ಕ್ರೌರ್ಯವನ್ನು ಎತ್ತಿ ತೋರಿಸುತ್ತವೆ. ಅದರಲ್ಲಿ ಸಾಯಿ ಪಲ್ಲವಿ ಮತ್ತು ಪ್ರಕಾಶ್ ರಾಜ್ ನಟಿಸಿರುವ 'ಓರ್ ಇರವು' ತನ್ನ ಭಾವನಾತ್ಮಕ ದೃಶ್ಯಗಳಿಂದ ಹೆಚ್ಚು ಗಮನ ಸೆಳೆದಿದೆ. ಈ ವೆಬ್ ಸೀರೀಸ್ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ವೆಬ್ ಸರಣಿ
ಸಾಯಿ ಪಲ್ಲವಿ
ಮನರಂಜನಾ ಸುದ್ದಿ
ಕಾಲಿವುಡ್
 

Latest Videos
Recommended Stories
Recommended image1
Karna Serial: ನಿತ್ಯಾಳ ಮನದಲ್ಲಿ ಕರ್ಣನ ಮೇಲೆ ಮತ್ತೆ ಚಿಗುರಿತಾ ಪ್ರೀತಿ? ನಿಧಿ ಕಥೆ ಏನು
Recommended image2
Bigg Bossನಲ್ಲಿ ಅಪರೂಪದ ಘಟನೆ: ಕ್ಯಾನ್​ ತುಳಿದು ತುಳಿದು ಒಬ್ಬರನ್ನೇ ನಾಮಿನೇಟ್​ ಮಾಡಿದ ಸ್ಪರ್ಧಿಗಳು
Recommended image3
ಸಾಧ್ವಿ ಪಾತ್ರಕ್ಕೆ ಮೇಘನಾರನ್ನೇ ಆಯ್ಕೆ ಮಾಡಿದ್ದು ಯಾಕೆ? ಸಿಂಪಲ್ ಸುನಿ ಬಗ್ಗೆ ನಟಿ ಹೇಳೋದೇನು?
Related Stories
Recommended image1
'ಜನರು ನನ್ನ ಮೊಡವೆಗಳನ್ನೇ ನೋಡುತ್ತಿದ್ದರು': ರಾಮಾಯಣ ವಿವಾದದ ನಡುವೆ ಸಾಯಿ ಪಲ್ಲವಿ ಹೇಳಿದ್ದೇನು?
Recommended image2
ಕಾಂಜೀವರಂ ಸೀರೆ, ಟೆಂಪಲ್ ಜ್ಯುವೆಲ್ಲರಿಯಲ್ಲಿ ದೈವಿಕ ಕಳೆ ಚೆಲ್ಲಿದ ಸಾಯಿ ಪಲ್ಲವಿ: ಫೋಟೋಸ್ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved