ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ವ್ಯಾಗನರ್ ಕಾರನ್ನು ಹೊಸ ವಿನ್ಯಾಸ ಮತ್ತು 1.2 ಲೀಟರ್‌ನ ಹೊಸ 'Z12E' ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಈ ಫೇಸ್‌ಲಿಫ್ಟ್ ಮಾದರಿಯಲ್ಲಿ ಸಿಎನ್‌ಜಿ ಟ್ಯಾಂಕ್ ಅನ್ನು ತಳಭಾಗದಲ್ಲಿ ಅಳವಡಿಸುವ ಸಾಧ್ಯತೆ ಇದೆ.
ನವದೆಹಲಿ (ಸೆ.21): ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಬೃಹತ್ ಗ್ರಾಹಕ ಬಳಗವನ್ನು ಹೊಂದಿರುವ 'ಮಾರುತಿ ಸುಜುಕಿ' (Maruti Suzuki) ಸಂಸ್ಥೆಯು, ತನ್ನ ಅತ್ಯಂತ ಜನಪ್ರಿಯ 'ಟಾಲ್-ಬಾಯ್' ಶೈಲಿಯ ಹ್ಯಾಚ್‌ಬ್ಯಾಕ್ 'ವ್ಯಾಗನರ್' (WagonR) ಕಾರನ್ನು ಹೊಸ ಅವತಾರದಲ್ಲಿ ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಈ ನೂತನ 'ವ್ಯಾಗನರ್ ಫೇಸ್‌ಲಿಫ್ಟ್' (WagonR Facelift) ಮಾದರಿಯು ರಸ್ತೆಗಳಲ್ಲಿ ಸುಧೀರ್ಘ ಪರೀಕ್ಷಾರ್ಥ ಸಂಚಾರ (Testing) ನಡೆಸುತ್ತಿರುವುದು ಇತ್ತೀಚೆಗೆ ಪತ್ತೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕಾರಿನ ಬಾಕ್ಸಿ ಡಿಸೈನ್ (Boxy Design) ಶೈಲಿಯನ್ನು ಹಾಗೆಯೇ ಉಳಿಸಿಕೊಂಡು, ವಿನ್ಯಾಸ ಹಾಗೂ ಎಂಜಿನ್‌ನಲ್ಲಿ ಕೆಲವು ಪ್ರಮುಖ ಮತ್ತು ಆಧುನಿಕ ಬದಲಾವಣೆಗಳನ್ನು ಮಾಡಲಾಗುತ್ತಿದೆ.
ಕಾರಿನ ಮುಂಭಾಗದಲ್ಲಿ ಹೊಸ ಫ್ರಂಟ್ ಗ್ರಿಲ್, ಸುಧಾರಿತ ಬಂಪರ್ ಹಾಗೂ ಬದಲಾದ ಹೆಡ್‌ಲ್ಯಾಂಪ್ ಡಿಸೈನ್ ನೀಡುವ ನಿರೀಕ್ಷೆಯಿದೆ. ಹಿಂಭಾಗದಲ್ಲೂ ನವೀಕೃತ ಬಂಪರ್ ಮತ್ತು ಟೇಲ್‌ಲ್ಯಾಂಪ್‌ಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದರ ಜೊತೆಗೆ ಹೊಸ ವಿನ್ಯಾಸದ ಅಲಾಯ್ ವೀಲ್ಸ್ ಅಥವಾ ವೀಲ್ ಕವರ್‌ಗಳು ಸಿಗಲಿವೆ.
1.2 ಲೀಟರ್‌ನ ಹೊಸ 'Z12E' ಪೆಟ್ರೋಲ್ ಎಂಜಿನ್ ಸೇರ್ಪಡೆ
ಹೊಸ ವ್ಯಾಗನರ್‌ನಲ್ಲಿ ಆಗುತ್ತಿರುವ ಅತಿ ದೊಡ್ಡ ಬದಲಾವಣೆಯೆಂದರೆ ಅದರ ಎಂಜಿನ್. ಪ್ರಸ್ತುತ ಮಾರುಕಟ್ಟೆಯಲ್ಲಿರುವ ವ್ಯಾಗನರ್ ಕಾರಿನಲ್ಲಿ 998 ಸಿಸಿ (1.0 ಲೀಟರ್) ಮೂರು ಸಿಲಿಂಡರ್ K10C ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ನಾಲ್ಕು ಸಿಲಿಂಡರ್ K12N ಪೆಟ್ರೋಲ್ ಎಂಜಿನ್ ಆಯ್ಕೆಗಳಿವೆ.
ಆದರೆ, ನೂತನ ಫೇಸ್‌ಲಿಫ್ಟ್ ಮಾದರಿಯಲ್ಲಿ ಮಾರುತಿ ಸುಜುಕಿಯ ಹೊಸ 1.2 ಲೀಟರ್, ಮೂರು ಸಿಲಿಂಡರ್ 'Z12E' ಪೆಟ್ರೋಲ್ ಎಂಜಿನ್ ಅನ್ನು ಬಳಸುವ ಸಾಧ್ಯತೆಯಿದೆ. ಈ ಅತ್ಯಾಧುನಿಕ ಎಂಜಿನ್ ಅನ್ನು ಈಗಾಗಲೇ ಹೊಸ ಸ್ವಿಫ್ಟ್, ಡಿಸೈರ್ ಹಾಗೂ ಬಲೆನೊ ಕಾರುಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ. ಆದರೆ, ಹಳೆಯ 1.0 ಲೀಟರ್ ಎಂಜಿನ್ ಅನ್ನು ಮುಂದುವರಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕಂಪನಿ ಇನ್ನು ಸ್ಪಷ್ಟನೆ ನೀಡಿಲ್ಲ.
ಸಿಎನ್‌ಜಿ ಮಾದರಿಯಲ್ಲಿ ಸಿಗಲಿದೆ ಬೃಹತ್ ಬೂಟ್ ಸ್ಪೇಸ್!
ವ್ಯಾಗನರ್ ಸಿಎನ್‌ಜಿ (CNG) ಪ್ರಿಯರಿಗೆ ಈ ಬಾರಿ ಕಂಪನಿಯು ದೊಡ್ಡ ಸರ್ಪ್ರೈಸ್ ನೀಡಲು ಮುಂದಾಗಿದೆ. ಸಾಮಾನ್ಯ ಸಿಎನ್‌ಜಿ ಕಾರುಗಳಲ್ಲಿ ಗ್ಯಾಸ್ ಟ್ಯಾಂಕ್ ಅನ್ನು ಬೂಟ್ ಸ್ಪೇಸ್‌ನಲ್ಲಿ (ಡಿಕ್ಕಿ) ಇರಿಸುವುದರಿಂದ ಲಗೇಜ್ ಇಡಲು ಜಾಗ ಇರುವುದಿಲ್ಲ.
ವರದಿಗಳ ಪ್ರಕಾರ, ಹೊಸ ವ್ಯಾಗನರ್ ಸಿಎನ್‌ಜಿ ಮಾದರಿಯಲ್ಲಿ ಸಿಎನ್‌ಜಿ ಟ್ಯಾಂಕ್ ಅನ್ನು ಕಾರಿನ ತಳಭಾಗದಲ್ಲಿ (Underbody CNG Tank) ಅಳವಡಿಸುವ ತಂತ್ರಜ್ಞಾನವನ್ನು ತರಲಾಗುತ್ತಿದೆ. ಇದರಿಂದಾಗಿ ಕಾರಿನ ಡಿಕ್ಕಿಯಲ್ಲಿ ಲಗೇಜ್ ಇಡಲು ವಿಶಾಲವಾದ ಜಾಗ (Boot Space) ಸಿಗಲಿದೆ. ಆದರೆ, ಈ ಕುರಿತು ಅಧಿಕೃತ ಮಾಹಿತಿಯನ್ನು ಕಂಪನಿ ಲಾಂಚ್ ವೇಳೆಯಷ್ಟೇ ಖಚಿತಪಡಿಸಲಿದೆ.
ಕ್ಯಾಬಿನ್ ಒಳಗೂ ಇರಲಿದೆ ಹೈಟೆಕ್ ಫೀಚರ್ಸ್
ಹೊಸ ವ್ಯಾಗನರ್ ಫೇಸ್‌ಲಿಫ್ಟ್ ಆವೃತ್ತಿಯ ಇಂಟೀರಿಯರ್‌ನಲ್ಲಿಯೂ ಕೆಲವು ಸುಧಾರಣೆಗಳನ್ನು ಮಾಡಲಾಗುತ್ತಿದೆ. ಕಾರಿನಲ್ಲಿ ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನೂತನ ಸೀಟ್ ಕವರ್‌ಗಳು ಹಾಗೂ ಡ್ಯಾಶ್‌ಬೋರ್ಡ್‌ನಲ್ಲಿ ಸಣ್ಣಪುಟ್ಟ ಅಪ್‌ಡೇಟ್‌ಗಳನ್ನು ಕಾಣಬಹುದು. ಪ್ರಸ್ತುತ ಇರುವ ಮಾಡೆಲ್‌ನಲ್ಲಿ 17.78 ಸೆಂ.ಮೀ ಟಚ್‌ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಹಾಗೂ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ನಂತಹ ಫೀಚರ್‌ಗಳಿದ್ದು, ಹೊಸ ಕಾರಿನಲ್ಲಿ ಇವು ಮತ್ತಷ್ಟು ಅಪ್‌ಗ್ರೇಡ್ ಆಗಲಿವೆ.
ಬಿಡುಗಡೆ ಯಾವಾಗ?
ಮಾರುತಿ ಸುಜುಕಿ ಸಂಸ್ಥೆಯು ವ್ಯಾಗನರ್ ಫೇಸ್‌ಲಿಫ್ಟ್‌ನ ಬಿಡುಗಡೆ ದಿನಾಂಕ ಅಥವಾ ತಾಂತ್ರಿಕ ವಿವರಗಳನ್ನು ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಪರೀಕ್ಷಾರ್ಥ ಸಂಚಾರ ತೀವ್ರಗೊಂಡಿರುವುದರಿಂದ ಈ ಕಾರು 2026ರ ಕೊನೆಯ ವೇಳೆಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.


