ಸಲೂನ್‌ಗೆ ಬಂದ ಕೋತಿಯೊಂದು ಬಾರ್ಬರ್ ಚೇರ್ ಮೇಲೆ ಕುಳಿತು ಆರಾಮಾಗಿ ಹೆಡ್ ಮಸಾಜ್ ಮಾಡಿಸಿಕೊಂಡಿದೆ. ಕಣ್ಣು ಮುಚ್ಚಿಕೊಂಡು ಮಸಾಜ್ ಎಂಜಾಯ್ ಮಾಡುತ್ತಿರುವ ಈ ಕೋತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಕೋತಿಯನ್ನು ವಿಐಪಿ ಕಸ್ಟಮರ್ ಎಂದು ಕರೆದು ತಮಾಷೆ ಮಾಡುತ್ತಿದ್ದಾರೆ.

ಸಲೂನ್‌ಗೆ ಬಂದ ರೆಗ್ಯುಲರ್ ಕಸ್ಟಮರ್ ತರಹ ಕೋತಿಯೊಂದು ಆರಾಮಾಗಿ ಹೆಡ್ ಮಸಾಜ್ ಮಾಡಿಸಿಕೊಂಡಿದೆ. ಈ ತಮಾಷೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಾರ್ಬರ್ ಚೇರ್ ಮೇಲೆ ಕುಳಿತಿರುವ ಈ ಕೋತಿ, ಮಸಾಜ್ ಮಾಡಿಸಿಕೊಳ್ಳುತ್ತಾ ಫುಲ್ ರಿಲ್ಯಾಕ್ಸ್ ಮೂಡ್‌ಗೆ ಹೋಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಕ್ಷೌರಿಕ ನಿಧಾನವಾಗಿ ತಲೆಗೆ ಮಸಾಜ್ ಮಾಡುತ್ತಿದ್ದರೆ, ಕೋತಿ ಮಾತ್ರ ಚೇರ್ ಮೇಲೆ ಸುಮ್ಮನೆ ಕುಳಿತಿದೆ. ಅದು ಅಲ್ಲಿಂದ ಓಡಿಹೋಗುವ ಅಥವಾ ಗಲಾಟೆ ಮಾಡುವ ಯಾವುದೇ ಲಕ್ಷಣ ತೋರಿಲ್ಲ. ಬದಲಾಗಿ, ಕಣ್ಣು ಮುಚ್ಚಿಕೊಂಡು ಮಸಾಜ್ ಎಂಜಾಯ್ ಮಾಡಿದೆ. ಇದನ್ನು ನೋಡಿದರೆ, ಮನುಷ್ಯರು ಸಲೂನ್‌ನಲ್ಲಿ ರಿಲ್ಯಾಕ್ಸ್ ಆಗುವ ದೃಶ್ಯವೇ ಕಣ್ಣ ಮುಂದೆ ಬರುತ್ತದೆ.

ನೆಟ್ಟಿಗರ ಕಮೆಂಟ್ಸ್‌ ಕೂಡಾ ವೈರಲ್

ಕೋತಿಯ ಈ ಶಾಂತ ಸ್ವಭಾವ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಇವತ್ತು ದಿನ ಪೂರ್ತಿ ಹೀಗೆ ಮಸಾಜ್ ಮಾಡಿಸಿಕೊಳ್ಳಬೇಕು ಅಂತಲೇ ಈ ಕೋತಿ ಪ್ಲಾನ್ ಮಾಡಿಕೊಂಡು ಬಂದಂತಿದೆ' ಎಂದು ಜನ ತಮಾಷೆ ಮಾಡುತ್ತಿದ್ದಾರೆ.

ಸಲೂನ್‌ಗೆ ಬಂದ ಈ ಅನಿರೀಕ್ಷಿತ ಅತಿಥಿಯ ವಿಡಿಯೋ ನೋಡಿದವರು ಬಿದ್ದು ಬಿದ್ದು ನಗುತ್ತಿದ್ದಾರೆ. ಕೆಲವರು ಈ ಕೋತಿಯನ್ನು "ವಿಐಪಿ ಕಸ್ಟಮರ್" ಎಂದು ಕರೆದಿದ್ದಾರೆ. ಇನ್ನು ಕೆಲವರು, 'ಸಲೂನ್ ಮಸಾಜ್‌ನ ಮಜಾ ಸಿಕ್ಕಿರುವುದರಿಂದ ಇದು ಸದ್ಯಕ್ಕೆ ಅಲ್ಲಿಂದ ಕದಲುವುದಿಲ್ಲ' ಎಂದು ಕಾಲೆಳೆದಿದ್ದಾರೆ.

View post on Instagram
 

ಕೋತಿಯ ಆರಾಮದಾಯಕ ಭಂಗಿ ನೋಡಿದರೆ, 'ಮಸಾಜ್ ನಿಲ್ಲಿಸಬೇಡ, ಕಂಟಿನ್ಯೂ ಮಾಡು' ಎಂದು ಅದು ಕ್ಷೌರಿಕನಿಗೆ ಹೇಳುತ್ತಿರುವಂತೆ ಕಾಣುತ್ತಿದೆ ಎಂದು ಹಲವರು ತಮಾಷೆ ಮಾಡಿದ್ದಾರೆ.

ಒಂದು ಸಾಮಾನ್ಯ ಸಲೂನ್ ಚೇರ್, ಈ ಕೋತಿಯಿಂದಾಗಿ ಈಗ ಇಂಟರ್‌ನೆಟ್‌ನಲ್ಲಿ ಫೇಮಸ್ ಆಗಿದೆ. ಆದರೆ, ಈ ತಮಾಷೆಯ ಘಟನೆ ನಿಖರವಾಗಿ ಎಲ್ಲಿ ನಡೆದಿದೆ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.