Published : May 28, 2026, 07:56 AM ISTUpdated : May 28, 2026, 11:43 PM IST

India News Live Updates: ಅಪ್ಪನ ಕಂಡ್ರೆ ಇಷ್ಟವಿಲ್ಲ, ಆ ದೊಡ್ಡ ಹೀರೋ ನನ್ನ ನಂಬರ್ ತಗೊಂಡ್ರು - ಆಂಕರ್ ಸೌಮ್ಯ ಸ್ಫೋಟಕ ಹೇಳಿಕೆ

ಸಾರಾಂಶ

ನವದೆಹಲಿ: ಮತದಾರರಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ನಡೆಸುವ ಹಕ್ಕನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್‌, ನ್ಯಾಯಸಮ್ಮತ ಚುನಾವಣೆ ನಡೆಸುವ ಸಂವಿಧಾನದ ಆಶಯಕ್ಕೆ ವಿಶೇಷ ಮತಪಟ್ಟಿ ಪರಿಷ್ಕರಣೆ ಜೀವಸೆಲೆ ಎಂದು ಬಣ್ಣಿಸಿದೆ. ಈ ಮೂಲಕ ಚುನಾವಣಾ ಆಯೋಗದ ಹಕ್ಕನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾ ಮಾಡಿದೆ. ಅಲ್ಲದೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಕೂಡಲೇ ಅದು ಅವರ ಕಾನೂನಾತ್ಮಕವಾಗಿ ಪೌರತ್ವವನ್ನೇನು ರದ್ದುಪಡಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

Sowmya Rao

11:43 PM (IST) May 28

ಅಪ್ಪನ ಕಂಡ್ರೆ ಇಷ್ಟವಿಲ್ಲ, ಆ ದೊಡ್ಡ ಹೀರೋ ನನ್ನ ನಂಬರ್ ತಗೊಂಡ್ರು - ಆಂಕರ್ ಸೌಮ್ಯ ಸ್ಫೋಟಕ ಹೇಳಿಕೆ

ಆಂಕರ್ ಸೌಮ್ಯ ರಾವ್ ಅವರು ಟಾಲಿವುಡ್‌ನಲ್ಲಿರುವ ಸಿಂಡಿಕೇಟ್ ಮತ್ತು ತಾರತಮ್ಯದ ಬಗ್ಗೆ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ, ಟಾಲಿವುಡ್‌ನ ದೊಡ್ಡ ಹೀರೋ ಒಬ್ಬರ ಬಗ್ಗೆಯೂ ಅವರು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Read Full Story

11:11 PM (IST) May 28

ಕಂಗನಾ ರಣಾವತ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ‘ಅದೃಶ್ಯ ಹೀರೋಗಳು’ ಯಾರು? - ಮೋಶನ್ ಪೋಸ್ಟರ್ ವೈರಲ್

ಕಂಗನಾ ರಣಾವತ್ ಅವರ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. 'ದಿ ಅನ್‌ಸೀನ್ ಹೀರೋಸ್' ಅನ್ನೋ ಟೈಟಲ್‌ನಡಿ, ಸಂಕಷ್ಟದ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜವಾಬ್ದಾರಿ ಮೆರೆದ ಆಸ್ಪತ್ರೆ ಸಿಬ್ಬಂದಿಯಂತಹ ಸಾಮಾನ್ಯ ಜನರಿಗೆ ಈ ಚಿತ್ರ ಗೌರವ ಸಲ್ಲಿಸುತ್ತಿದೆ.

Read Full Story

10:51 PM (IST) May 28

'ಕೊಹ್ಲಿ ಬಹುಶಃ ಮುದುಕ ಇರಬಹುದು, ನಾನಲ್ಲ..' - ಐಪಿಎಲ್ ಫೈನಲ್‌ಗೂ ಮುನ್ನ ಕಿಂಗ್ ಕೊಹ್ಲಿ ಕಾಲೆಳೆದ ಭುವಿ

ಐಪಿಎಲ್ 2026 ಫೈನಲ್ ತಲುಪಿರುವ ಆರ್‌ಸಿಬಿ ತಂಡದಲ್ಲಿ ಸಂಭ್ರಮ ಮನೆಮಾಡಿದೆ. ಈ ನಡುವೆ, ತಂಡದ ವೇಗಿ ಭುವನೇಶ್ವರ್ ಕುಮಾರ್, ಸಂದರ್ಶನವೊಂದರಲ್ಲಿ ತಮಾಷೆಯಾಗಿ ವಿರಾಟ್ ಕೊಹ್ಲಿಯನ್ನು 'ಮುದುಕ' ಎಂದು ಕರೆದಿರುವುದು ವೈರಲ್ ಆಗಿದೆ. 

Read Full Story

10:19 PM (IST) May 28

ಕೋಲ್ಕತ್ತಾದಲ್ಲಿ ದಾದಾ ಹವಾ - ಸೌರವ್ ಗಂಗೂಲಿ ಬಯೋಪಿಕ್ ಶೂಟಿಂಗ್ ಆರಂಭ!

ಸೌರವ್ ಗಂಗೂಲಿ ಅವರ ಜೀವನ ಆಧಾರಿತ 'ದಾದಾ' ಸಿನಿಮಾದ ಚಿತ್ರೀಕರಣ ಕೋಲ್ಕತ್ತಾದಲ್ಲಿ ಭರದಿಂದ ಸಾಗುತ್ತಿದೆ. ರಾಜ್‌ಕುಮಾರ್ ರಾವ್ ಗಂಗೂಲಿ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವು ಗಂಗೂಲಿಯವರ ಕ್ರಿಕೆಟ್ ಪಯಣ ಮತ್ತು ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲಲಿದೆ.

Read Full Story

10:08 PM (IST) May 28

ಬಕ್ರೀದ್ ದಿನವೇ ಕೊಂದ ಪಾಪಿ ಪತಿ... ಚನ್ನರಾಯಪಟ್ಟಣದಲ್ಲಿ ನಿಜಕ್ಕೂ ಏನಾಯ್ತು?

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದ ಕಂಚಗಾರ ಬೀದಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಬಕ್ರೀದ್ ಹಬ್ಬದ ದಿನವೇ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯನ್ನು..

Read Full Story

09:44 PM (IST) May 28

ಕಳೆದ ಆರು ವರ್ಷದಿಂದ ರಿಲಯನ್ಸ್‌ ಗ್ರೂಪ್‌ನಿಂದ ಒಂದೇ ಒಂದು ರೂಪಾಯಿ ವೇತನ ಪಡೆಯದ ಮುಖೇಶ್‌ ಅಂಬಾನಿ!

ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸತತ ಆರನೇ ವರ್ಷವೂ ಸಂಬಳವನ್ನು ತ್ಯಜಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ ಈ ನಿರ್ಧಾರ ಮುಂದುವರೆಸಿದ್ದು, ಅವರ ಆದಾಯದ ಪ್ರಮುಖ ಮೂಲ ಈಗ ಕಂಪನಿಯಿಂದ ಬರುವ ಲಾಭಾಂಶವಾಗಿದೆ. 

Read Full Story

09:16 PM (IST) May 28

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಟೆನ್ಷನ್ ಬಿಡಿ - ಭಾರತದ ಅತ್ಯಂತ ಅಗ್ಗದ ಇವಿ Tata Tiago ಹೊಸ ರೂಪದಲ್ಲಿ ಬಿಡುಗಡೆ!

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರ್ 'ಟಾಟಾ ಟಿಯಾಗೊ ಇವಿ'ಯನ್ನು ಹೊಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ಈ ಕಾರು, ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಯೋಜನೆಯಡಿ ಇನ್ನಷ್ಟು ಅಗ್ಗವಾಗಲಿದೆ.

Read Full Story

09:13 PM (IST) May 28

Off Campus - - 12 ದಿನದಲ್ಲಿ 36 ಮಿಲಿಯನ್ ವೀಕ್ಷಣೆ - ಈ ಅಡಲ್ಟ್ ವೆಬ್ ಸಿರೀಸ್‌ಗೆ ಜೆನ್‌ ಜಿ ಯುವಜನತೆ ಫಿದಾ!

ಇತ್ತೀಚೆಗೆ ಬಿಡುಗಡೆಯಾದ ವೆಬ್ ಸಿರೀಸ್‌ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಜೆನ್‌ ಜಿ ಯುವಜನತೆಯನ್ನು ಆಕರ್ಷಿಸುವಂತಹ ಅಡಲ್ಟ್ ಕಂಟೆಂಟ್ ಹೊಂದಿರುವ ಈ ವೆಬ್ ಸಿರೀಸ್ ಬಗ್ಗೆಯೇ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

Read Full Story

08:50 PM (IST) May 28

ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗ್ತಾರಾ? ಸಂಚಲನ ಮೂಡಿಸಿದ ಎಸ್ ಬದ್ರಿನಾಥ್ ಮೆಗಾ ಟ್ರೇಡ್ ಐಡಿಯಾ!

ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದ್ರಿನಾಥ್, ಮುಂಬೈ ಇಂಡಿಯನ್ಸ್‌ನ ಹಾರ್ದಿಕ್ ಪಾಂಡ್ಯರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ನೀಡಿ, ಪ್ರತಿಯಾಗಿ ಶಿವಂ ದುಬೆ ಮತ್ತು ಆಯುಷ್ ಮಾತ್ರೆಯನ್ನು ಮುಂಬೈಗೆ ಸೇರಿಸಿಕೊಳ್ಳುವ ಮೆಗಾ ಟ್ರೇಡ್ ಸಲಹೆಯನ್ನು ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಹಾರ್ದಿಕ್ CSKಗೆ ಬಂದರೆ ಅವರನ್ನೇ ನಾಯಕನನ್ನಾಗಿ ಮಾಡಬೇಕು ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.

Read Full Story

08:25 PM (IST) May 28

IPL 2026 Qualifier 2 - ಗುಜರಾತ್ ಟೈಟಾನ್ಸ್ - ರಾಜಸ್ಥಾನ ರಾಯಲ್ಸ್ ಮ್ಯಾಚ್ ನಡಿಯೋದೇ ಡೌಟ್..! ಟೈಟಾನ್ಸ್ ಫೈನಲ್‌ಗೆ, ರಾಯಲ್ಸ್‌ಗೆ ನಿರಾಸೆ?

ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಒಂದು ವೇಳೆ ಪಂದ್ಯ ರದ್ದಾದರೆ, ಲೀಗ್ ಹಂತದಲ್ಲಿ ಉತ್ತಮ ಅಂಕ ಹೊಂದಿರುವ ಗುಜರಾತ್ ತಂಡವು ಐಪಿಎಲ್ ನಿಯಮದ ಪ್ರಕಾರ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ.
Read Full Story

08:21 PM (IST) May 28

ಸ್ಲೀಪರ್ ಟಿಕೆಟ್‌ನಲ್ಲೇ AC ಕೋಚ್‌ನಲ್ಲಿ ಪ್ರಯಾಣ ಮಾಡೋದು ಹೇಗೆ? TTE ಹೇಳಿದ ಸೀಕ್ರೆಟ್ ಏನು?

ಸ್ಲೀಪರ್ ಟಿಕೆಟ್ ಇಟ್ಕೊಂಡು AC ಕೋಚ್‌ನಲ್ಲಿ ಪ್ರಯಾಣ ಮಾಡಬಹುದಾ? ಯಾವ ನಿಯಮಗಳ ಅಡಿಯಲ್ಲಿ TTE ನಿಮಗೆ AC ಸೀಟ್ ಕೊಡಬಹುದು? ರೈಲ್ವೆಯ ಈ ವಿಶೇಷ ನಿಯಮ ಮತ್ತು ದರ ಅಪ್‌ಗ್ರೇಡ್ ಮಾಡುವ ಸಂಪೂರ್ಣ ವಿಧಾನ ಇಲ್ಲಿದೆ.

Read Full Story

08:06 PM (IST) May 28

ಪ್ರಖ್ಯಾತ ರಿಯಾಲಿಟಿ ಶೋ ವಿನ್ನರ್‌ಗೆ ಸ್ತನ ಕ್ಯಾನ್ಸರ್‌, ಆಸ್ಪತ್ರೆಯ ಬೆಡ್‌ನಿಂದಲೇ ಮಾಡಿದ್ರು ವಿಡಿಯೋ..

'ಮಾಸ್ಟರ್‌ಚೆಫ್ ಇಂಡಿಯಾ' ಮೊದಲ ಸೀಸನ್ ವಿಜೇತೆ, ಖ್ಯಾತ ಚೆಫ್ ಪಂಕಜ್ ಭದೌರಿಯಾ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಆಸ್ಪತ್ರೆಯಿಂದಲೇ ಈ ಸುದ್ದಿಯನ್ನು ಹಂಚಿಕೊಂಡಿರುವ ಅವರು, ಈ ಕಠಿಣ ಸಮಯದಲ್ಲಿ ತಮ್ಮ ಅಭಿಮಾನಿಗಳ ಪ್ರಾರ್ಥನೆ ಮತ್ತು ಬೆಂಬಲವನ್ನು ಕೋರಿದ್ದಾರೆ.
Read Full Story

07:40 PM (IST) May 28

'ಪೆದ್ದಿ' ಫಸ್ಟ್ ರಿವ್ಯೂ ವೈರಲ್.. - ರಾಮ್ ಚರಣ್-ಶಿವಣ್ಣ ಕಾಂಬಿನೇಷನ್ ಹಿಟ್ಟಾ? ಫ್ಲಾಪಾ?

ದುಬೈ ಸೆನ್ಸಾರ್ ವರದಿಯ ಪ್ರಕಾರ, 'ಪೆದ್ದಿ' ಸಿನಿಮಾ ಮೊದಲ ನಿಮಿಷದಿಂದಲೇ ಪ್ರೇಕ್ಷಕರನ್ನು ಕಥೆಯೊಳಗೆ ಹಿಡಿದಿಡುತ್ತದೆ. ಚಿತ್ರದಲ್ಲಿ ಎಲ್ಲೂ ಬೋರ್ ಹೊಡೆಯುವುದಿಲ್ಲ. ಈ ಸಿನಿಮಾ ಖಂಡಿತವಾಗಿಯೂ ಬ್ಲಾಕ್‌ಬಸ್ಟರ್ ಹಿಟ್ ಆಗಲಿದೆ.

Read Full Story

07:37 PM (IST) May 28

ಜಿಯೋ ಗ್ರಾಹಕರಿಗೆ ಬಂಪರ್ ಧಮಾಕಾ - ಕೇವಲ 200 ರೂಪಾಯಿಗೆ 15 OTT ಆಪ್ಸ್, 1000 ಟಿವಿ ಚಾನೆಲ್ಸ್ ಫ್ರೀ!

ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಕೇವಲ 200 ರೂಪಾಯಿಗೆ 'ಜಿಯೋ ಒಟಿಟಿ ಪಾಸ್' ಎಂಬ ಹೊಸ ಆಡ್-ಆನ್ ಯೋಜನೆಯನ್ನು ಪರಿಚಯಿಸಿದೆ. 28 ದಿನಗಳ ವ್ಯಾಲಿಡಿಟಿಯ ಈ ಪ್ಲಾನ್‌ನಲ್ಲಿ 15 ಪ್ರಮುಖ ಒಟಿಟಿಗಳ ಚಂದಾದಾರಿಕೆ, 30GB ಡೇಟಾ ಹಾಗೂ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಲಭ್ಯವಿದೆ.

Read Full Story

07:34 PM (IST) May 28

'ಅದೊಂದು ಕಾರಣಕ್ಕಾಗಿ ರಾಜಸ್ಥಾನ ರಾಯಲ್ಸ್‌ ಬಿಟ್ಟು ಈ ತಂಡಕ್ಕೆ ಹೋಗು' - ಯಶಸ್ವಿ ಜೈಸ್ವಾಲ್‌ಗೆ ಅಂಬಟಿ ರಾಯುಡು ಖಡಕ್ ಸಲಹೆ!

ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಯಶಸ್ವಿ ಜೈಸ್ವಾಲ್ ನೆರಳಿಗೆ ಸರಿಯುತ್ತಿದ್ದಾರೆ ಎಂದು ಮಾಜಿ ಆಟಗಾರ ಅಂಬಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಜೈಸ್ವಾಲ್ ತಮ್ಮ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸಲು ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್‌ನಂತಹ ತಂಡಕ್ಕೆ ಸೇರುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
Read Full Story

06:58 PM (IST) May 28

ಖಿಚಡಿ ಅಲ್ಲ.. 92 ವರ್ಷದ ಅಜ್ಜಿ ಪಿಜ್ಜಾ ತಿನ್ನುವ ವಿಡಿಯೋ ಯಾಕೆ ಇಷ್ಟು ವೈರಲ್ ಆಯ್ತು ಗೊತ್ತಾ?

ಮೊಮ್ಮಗಳು ತಂದುಕೊಟ್ಟ ಪಿಜ್ಜಾವನ್ನು 92 ವರ್ಷದ ಅಜ್ಜಿಯೊಬ್ಬರು ಖುಷಿಯಿಂದ ತಿನ್ನುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಜೊತೆಗೆ ತಂಪು ಪಾನೀಯವನ್ನೂ ಕೇಳಿ ಪಡೆದ ಈ ಅಜ್ಜಿಯ ಮುದ್ದುತನಕ್ಕೆ ನೆಟ್ಟಿಗರು ಮನಸೋತಿದ್ದಾರೆ.

Read Full Story

06:36 PM (IST) May 28

ವೈಭವ್ ಸೂರ್ಯವಂಶಿ ವಿಚಾರದಲ್ಲಿ ಅದೊಂದು ತಪ್ಪು ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌..! ಇದೀಗ ಹಳೆ ವಿಡಿಯೋ ವೈರಲ್

15 ವರ್ಷದ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ, ಐಪಿಎಲ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ 97 ರನ್ ಸಿಡಿಸಿ, ಆರೆಂಜ್ ಕ್ಯಾಪ್ ಗೆದ್ದಿರುವ ಇವರನ್ನು ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಖರೀದಿಸಿತ್ತು. ಆದರೆ, ಕಡಿಮೆ ಮೊತ್ತಕ್ಕೆ ಕೈಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್ ಈಗ ಪಶ್ಚಾತ್ತಾಪ ಪಡುತ್ತಿರುವ ಕುತೂಹಲಕಾರಿ ಕಥೆ ಇಲ್ಲಿದೆ.
Read Full Story

06:32 PM (IST) May 28

ತ್ವಿಶಾ ಶರ್ಮಾ ಸಾವು - ಸಿಬಿಐನಿಂದ ನಿವೃತ್ತ ಜಡ್ಜ್‌, ಅತ್ತೆ ಗಿರಿಬಾಲಾ ಸಿಂಗ್‌ ಬಂಧನ

ಭೋಪಾಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಮಾಡೆಲ್ ತ್ವಿಶಾ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ಆಕೆಯ ಅತ್ತೆ, ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

Read Full Story

06:14 PM (IST) May 28

ನನ್ನ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ - ಕಣ್ಣೀರು ಹಾಕುತ್ತಾ ಆ ಕರಾಳ ನೋವಿನ ಕಥೆ ಬಿಚ್ಚಿಟ್ಟ ನಟಿ!

ಟಿವಿ ನಟಿ ರಶ್ಮಿ ದೇಸಾಯಿ ತಮ್ಮ ಜೀವನದ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ, ಜೀವನವೇ ಮುಗೀತು ಅಂದುಕೊಂಡಿದ್ದೆ ಎಂದು ಕಣ್ಣೀರು ಹಾಕಿದ್ದಾರೆ. ಸಲ್ಮಾನ್ ಖಾನ್ ಅವರಿಂದಾಗಿ ಅಮ್ಮನ ಜೊತೆ ಮತ್ತೆ ಮಾತುಕತೆ ಶುರುವಾದ ಕಥೆಯನ್ನೂ ಹಂಚಿಕೊಂಡಿದ್ದಾರೆ.

Read Full Story

05:43 PM (IST) May 28

Bakrid Special - ಹೆಸರು 'ಸುಲ್ತಾನ್', ತೂಕ 200 ಕೆಜಿ, ಬೆಲೆ 8 ಲಕ್ಷ - ಬಕ್ರೀದ್‌ಗೆ ಬಂದ ಈ ಕಿಂಗ್ ಮೇಕೆ ಕಥೆ ಕೇಳಿ

ಬಕ್ರೀದ್ ಹಬ್ಬ ಹತ್ರ ಬಂತು ಅಂದ್ರೆ ಸಾಕು, ಮಾರುಕಟ್ಟೆಗಳಲ್ಲಿ ಸಂಭ್ರಮ ಜೋರಾಗಿರುತ್ತೆ. ಗೋಹತ್ಯೆ ನಿಷೇಧ ಮತ್ತು ಗೋರಕ್ಷಕರ ಕಣ್ಗಾವಲಿನಿಂದಾಗಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. 

Read Full Story

05:30 PM (IST) May 28

ಒಬ್ಬನ ಜೊತೆ ಸಂಬಂಧದಲ್ಲಿ ನಂಬಿಕೆ ಇಲ್ಲ - ದೈಹಿಕ ಕ್ರಿಯೆಯ ಬಗ್ಗೆ ನಟಿ ಶಹಾನಾ ಗೋಸ್ವಾಮಿ ಓಪನ್​ ಮಾತೇನು

ನಟಿ ಶಹನಾ ಗೋಸ್ವಾಮಿ ತಮ್ಮ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತಾನು ಅನೇಕ ಮುಕ್ತ ಸಂಬಂಧಗಳಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರೀತಿಯು ಒಬ್ಬ ವ್ಯಕ್ತಿಗೆ ಸೀಮಿತವಾಗಬಾರದು ಮತ್ತು ಕೆಲವು ಸಂಬಂಧಗಳು ದೈಹಿಕವಾಗಿಯೂ ಬೆಳೆಯಬಹುದು ಎಂಬುದು ತಮ್ಮ ದೃಷ್ಟಿಕೋನ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

05:20 PM (IST) May 28

ಬೆಂಗಳೂರಿನ ಪ್ರಸಿದ್ಧ ಸ್ಟಾರ್ಟಪ್ ಕಂಪೆನಿ ಸಂಸ್ಥಾಪಕನಿಗೆ ಸಿಂಗಾಪುರ ಕೋರ್ಟಿಂದ 6 ತಿಂಗಳು ಜೈಲು, 90,000 ಡಾಲರ್ ದಂಡ!

ಮಾಹಿತಿ ಮುಚ್ಚಿಟ್ಟ ಆರೋಪದ ಮೇಲೆ ಸಿಂಗಾಪುರ ನ್ಯಾಯಾಲಯವು ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.  ಒಂದು ಕಾಲದಲ್ಲಿ ಭಾರತದ ನಂ.1 ಸ್ಟಾರ್ಟಪ್ ಆಗಿದ್ದ ಬೈಜೂಸ್‌ನ ಉತ್ತುಂಗದ ಏರಿಕೆ,   ಪತನ, ಬಿಸಿಸಿಐ ಜೊತೆಗಿನ ವಿವಾದ ಮತ್ತು ದಿವಾಳಿತನದ ಹಾದಿಯನ್ನು ವಿವರಿಸುತ್ತದೆ.

Read Full Story

05:00 PM (IST) May 28

IPL 2026 ಕ್ವಾಲಿಫೈಯರ್-2 - ಗುಜರಾತ್ ಟೈಟಾನ್ಸ್‌ - ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ರದ್ದಾದ್ರೆ ಫೈನಲ್‌ಗೇರೋದು ಯಾರು?

IPL 2026 Qualifier 2 Rain Rules: 2026ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಒಂದು ವೇಳೆ ಈ ಪಂದ್ಯ ರದ್ದಾದ್ರೆ ಫೈನಲ್‌ಗೇರೋದು ಯಾರು? ಮೀಸಲು ದಿನ ಇದೆಯಾ? ನೋಡೋಣ ಬನ್ನಿ.

 

Read Full Story

04:59 PM (IST) May 28

ಅಮೆರಿಕದ ಎಫ್‌-35ಗೆ ಸಡ್ಡು ಹೊಡೆವ ದೇಶಿ ವಿಮಾನಕ್ಕೆ ಪ್ಲ್ಯಾನ್‌, 5ನೇ ತಲೆಮಾರಿನ ಫೈಟರ್‌ಜೆಟ್‌ ತಯಾರಿಗೆ ಸಿದ್ಧತೆ

ಭಾರತ ಸರ್ಕಾರವು ವಾಯುಪಡೆಗಾಗಿ 5ನೇ ತಲೆಮಾರಿನ ಸ್ವದೇಶಿ ಸ್ಟೆಲ್ತ್‌ ಫೈಟರ್‌ಜೆಟ್‌ (ಆ್ಯಮ್ಕಾ) ನಿರ್ಮಾಣ ಯೋಜನೆಗೆ ಚಾಲನೆ ನೀಡಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಟಾಟಾ, ಎಲ್ & ಟಿ, ಮತ್ತು ಭಾರತ್ ಫೋರ್ಜ್‌ಗೆ ಆಹ್ವಾನ ನೀಡಲಾಗಿದ್ದು, ಎಚ್‌ಎಎಲ್‌ ಅನ್ನು ಪರಿಗಣಿಸದಿರುವುದು ಕುತೂಹಲ ಮೂಡಿಸಿದೆ.
Read Full Story

04:57 PM (IST) May 28

ಶಾರುಖ್ ಖಾನ್ ಜಾಗಕ್ಕೆ ಹೃತಿಕ್ ರೋಷನ್ ಎಂಟ್ರಿ? ತಲೈವಾ ಸಿನಿಮಾದಲ್ಲಿ ಬಿಗ್ ಟ್ವಿಸ್ಟ್!

ಸೌತ್ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮೋಸ್ಟ್ ಅವೇಟೆಡ್ ಸಿನಿಮಾ 'ಜೈಲರ್ 2' ಬಗ್ಗೆ ಒಂದು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಈ ಸಿನಿಮಾದಲ್ಲಿ ಒಂದು ಪವರ್‌ಫುಲ್ ಅತಿಥಿ ಪಾತ್ರಕ್ಕಾಗಿ ಚಿತ್ರತಂಡ ಬಾಲಿವುಡ್ ಸ್ಟಾರ್..

Read Full Story

04:38 PM (IST) May 28

'ಮದ್ವೆ ಆಗಿ ನೀನೇನು ಕಿತ್ತಾಕಿದ್ದೀಯಾ?' - ಟ್ರೋಲಿಗನ ಬಾಯಿ ಮುಚ್ಚಿಸಿದ ಶಿಲ್ಪಾ ಶೆಟ್ಟಿ ತಂಗಿ!

ನಟಿ ಶಮಿತಾ ಶೆಟ್ಟಿ ಅವರಿಗೆ 47 ವರ್ಷ. ಮದುವೆ, ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದ ಟ್ರೋಲಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. 'ಸರಿಯಾದ ಸಮಯಕ್ಕೆ ಮದುವೆ ಆಗಿದ್ರೆ ಇಷ್ಟೊತ್ತಿಗೆ ಮಕ್ಕಳೇ ದೊಡ್ಡವರಾಗ್ತಿದ್ರು' ಅಂದವನಿಗೆ ಶಮಿತಾ ಕೊಟ್ಟ ಉತ್ತರ ಈಗ ವೈರಲ್ ಆಗಿದೆ.

Read Full Story

04:29 PM (IST) May 28

CBSE Three Language Policy ತ್ರಿಭಾಷಾ ಸೂತ್ರ ವಿರುದ್ಧ ಸಿಬಿಎಸ್‌ಇ, ಕೇಂದ್ರಕ್ಕೆ ಸುಪ್ರೀಂ ನೋಟಿಸ್‌ ಜಾರಿ

9ನೇ ತರಗತಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸುವ ಸಿಬಿಎಸ್‌ಇ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇಗೆ ನೋಟಿಸ್ ಜಾರಿ ಮಾಡಿದೆ. ಈ ನಿಯಮ ಜಾರಿಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದ್ದು, ಜುಲೈನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.
Read Full Story

04:16 PM (IST) May 28

'ಒಂದು ದಿನ ನೀನು ಸಂಪೂರ್ಣ ನಾಶವಾಗುತ್ತೀಯ' - ಹನಿ ಸಿಂಗ್‌ಗೆ ಶಾರುಖ್-ಅಕ್ಷಯ್ ನೀಡಿದ ಎಚ್ಚರಿಕೆ ಏನು?

ರಾಪರ್ ಮತ್ತು ಸಿಂಗರ್ ಯೋ ಯೋ ಹನಿ ಸಿಂಗ್‌ ತಮ್ಮ ಕೆರಿಯರ್‌ನ ಅತ್ಯಂತ ಕಷ್ಟದ ದಿನಗಳ ಬಗ್ಗೆ ದೊಡ್ಡ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಯಶಸ್ಸಿನ ಶಿಖರದಲ್ಲಿದ್ದಾಗ ತಾನು ಡ್ರಗ್ಸ್, ಅಹಂಕಾರ ಮತ್ತು ಮಾನಸಿಕ..

Read Full Story

04:12 PM (IST) May 28

ಮತ್ತೆ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ವೈಭವ್ ಸೂರ್ಯವಂಶಿ! ಟಾಪ್-5 ಗರಿಷ್ಠ ರನ್ ಸರದಾರರ ಪಟ್ಟಿಯಿಂದ ವಿರಾಟ್ ಕೊಹ್ಲಿ ಔಟ್!

ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸ್ಪೋಟಕ 97 ರನ್ ಗಳಿಸಿದ ವೈಭವ್ ಸೂರ್ಯವಂಶಿ, ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರದರ್ಶನದ ಮೂಲಕ ಅವರು ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಮತ್ತು 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 600+ ರನ್ ಗಳಿಸಿದ ಮೊದಲ ಆಟಗಾರ ಎಂಬಂತಹ ಹಲವು ದಾಖಲೆಗಳನ್ನು ಬರೆದಿದ್ದಾರೆ.
Read Full Story

03:42 PM (IST) May 28

Wipro ಅಧ್ಯಕ್ಷ ಅಜೀಂ ಪ್ರೇಮ್‌ಜೀಗೆ ಭಾರಿ ರಿಲೀಫ್ - ಕ್ರಿಮಿನಲ್ ಕೇಸ್ ಮತ್ತು ಸಮನ್ಸ್ ರದ್ದುಗೊಳಿಸಿದ ಹೈಕೋರ್ಟ್!

ವಿಪ್ರೋದ ಗಾಜಿಯಾಬಾದ್ ಕಚೇರಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಪಾಲಿಸದ ಆರೋಪದ ಮೇಲೆ ಕಾರ್ಮಿಕ ಇಲಾಖೆ ಸಲ್ಲಿಸಿದ ದೂರಿನಿಂದ ಈ ಪ್ರಕರಣ ದಾಖಲಾಗಿತ್ತು.

Read Full Story

02:50 PM (IST) May 28

ಅಸ್ಸಾಂನಲ್ಲಿ ಯುಸಿಸಿ ಮಸೂದೆ ಅಂಗೀಕಾರ - ದೇಶದ 4ನೇ ರಾಜ್ಯ, ಮದುವೆ, ಆಸ್ತಿ, ಡೈವೋರ್ಸ್‌ಗಿನ್ನು ಎಲ್ಲರಿಗೂ ಒಂದೇ ಕಾಯ್ದೆ

ಅಸ್ಸಾಂ ವಿಧಾನಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆಯೂ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆ ಅಂಗೀಕಾರಗೊಂಡಿದೆ. ಈ ಮೂಲಕ, ಮದುವೆ, ವಿಚ್ಛೇದನ, ಮತ್ತು ಸಹಜೀವನಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯವಾಗುವ ಹೊಸ ಕಾನೂನನ್ನು ಜಾರಿಗೆ ತಂದ ನಾಲ್ಕನೇ ರಾಜ್ಯವಾಗಿ ಅಸ್ಸಾಂ ಹೊರಹೊಮ್ಮಿದೆ.
Read Full Story

02:44 PM (IST) May 28

ಹಸು ಸಾಕಲು ಆಗ್ತಿಲ್ವಾ, ನಮಗೆ ಕೊಡಿ - ಗೋ ರಕ್ಷಣೆಗೆ ಸ್ವಾಮೀಜಿಯಿಂದ ಹೊಸ ವೇದಿಕೆ ಆರಂಭ

ಬಕ್ರೀದ್ ಹಬ್ಬದಂದು ಗೋಹತ್ಯೆ ಮಾಡದಿರಲು ಮುಸ್ಲಿಂ ಸಂಘಟನೆಗಳು ಕರೆ ನೀಡಿವೆ. ಇದರಿಂದ ವಯಸ್ಸಾದ ಗೋವುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ ಹಿಂದೂ ವ್ಯಾಪಾರಿಗಳ ನೆರವಿಗಾಗಿ ಹಾಗೂ ಗೋರಕ್ಷಣೆಗಾಗಿ, ಸ್ವಾಮಿ ಅವಿಮುಕ್ತೇಶ್ವರಾನಂದರು 'ಗೋ-ಎಲ್‌ಎಕ್ಸ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದ್ದಾರೆ.
Read Full Story

01:22 PM (IST) May 28

20 ಲಕ್ಷಕ್ಕೆ RCB ಸೇರಿ ನಾಲ್ಕೇ ನಾಲ್ಕು ಪಂದ್ಯಗಳಲ್ಲಿ ತಂಡಕ್ಕೆ ಬೇಡವಾಗಿದ್ದನು ಈಗ ಬೆಲೆ ಕಟ್ಟಲಾಗದ ನಾಯಕನಾಗಿ ಬಿಟ್ಟ..!

ಒಮ್ಮೆ ತಂಡದಿಂದ ಕೈಬಿಡಲ್ಪಟ್ಟ ರಜತ್ ಪಾಟಿದಾರ್, ಆರ್.ಸಿ.ಬಿಯ 18 ವರ್ಷಗಳ ಕಪ್ ಕನಸನ್ನು ನನಸು ಮಾಡಿದ ನಾಯಕನಾಗಿ ಹೊರಹೊಮ್ಮಿದ. ಹರಾಜಿನಲ್ಲಿ ಮಾರಾಟವಾಗದೆ, ಬದಲಿ ಆಟಗಾರನಾಗಿ ಬಂದು ತಂಡವನ್ನು ಮುನ್ನಡೆಸಿ ಕಪ್ ಗೆದ್ದುಕೊಟ್ಟ ಅವನ ರೋಚಕ ಪಯಣದ ಕಥೆಯಿದು.
Read Full Story

12:20 PM (IST) May 28

ಒಂದೇ ದಿನ ಬರೋಬ್ಬರಿ 2,230 ರುಪಾಯಿ ಕುಸಿತ ಕಂಡ ಚಿನ್ನದ ಬೆಲೆ..! ಬಂಗಾರ ಕೊಳ್ಳೋ ಮೊದಲು ಇವತ್ತಿನ ಗೋಲ್ಡ್‌ ರೇಟ್ ಇಲ್ಲಿದೆ ನೋಡಿ!

ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೇ.28ರಂದು ಚಿನ್ನ ಖರೀದಿಸಬೇಕು ಎನ್ನುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಗುರುವಾರ(ಮೇ.28)ವಾದ ಇಂದಿನ ಗೋಲ್ಡ್ ರೇಟ್ ಎಷ್ಟು ನೋಡೋಣ ಬನ್ನಿ.

 

Read Full Story

12:19 PM (IST) May 28

Shocking - 50 ಕೋಟಿಯ ಪ್ರವೇಟ್‌ ಜೆಟ್‌ನಲ್ಲಿಓಡಾಡುವ ಈ CA ಆಗ್ಬೇಕಿತ್ತು, ಆದ್ರೆ ಸೂಪರ್ ಸ್ಟಾರ್ ಆಗಿದ್ದು ಹೇಗೆ?

ಸಿಎ ಆಗಬೇಕಿದ್ದ ಹುಡುಗಿ ಇವತ್ತು ಭಾರತೀಯ ಚಿತ್ರರಂಗದ ಅತಿ ದೊಡ್ಡ ಬ್ರಾಂಡ್ ಆಗಿ ಬೆಳೆದು ನಿಂತಿರುವುದು ಒಂದು ರೋಚಕ ಸಿನಿಮಾದಂತೆಯೇ ಭಾಸವಾಗುತ್ತದೆ. ಸೋಲು-ಗೆಲುವು, ವಿವಾದಗಳ ನಡುವೆಯೂ ಫೀನಿಕ್ಸ್‌ನಂತೆ ಎದ್ದು ಬಂದ ಈ ತಾರೆ ಕೋಟ್ಯಂತರ ಯುವತಿಯರಿಗೆ ಸ್ಫೂರ್ತಿ!

Read Full Story

12:07 PM (IST) May 28

ಬಕ್ರೀದ್​ ಬಲಿಯಿಂದ ಬಚಾವಾಯ್ತು ಡೊನಾಲ್ಡ್​ ಟ್ರಂಪ್​ ಎಮ್ಮೆ - ಝೂಗೆ ಶಿಫ್ಟ್​- ಏನಿದು ಸ್ಟೋರಿ

ಬಾಂಗ್ಲಾದೇಶದಲ್ಲಿ 'ಡೊನಾಲ್ಡ್ ಟ್ರಂಪ್' ಎಂದು ಅಡ್ಡಹೆಸರಿಟ್ಟಿದ್ದ ಅಪರೂಪದ ಆಲ್ಬಿನೋ ಎಮ್ಮೆ ಬಕ್ರೀದ್‌ಗೆ ಬಲಿಯಾಗಲು ಮಾರಾಟವಾಗಿತ್ತು. ಆದರೆ, ಕೊನೆಗೆ ಅದನ್ನು ಬಲಿ ಕೊಡದೆ, ಮೃಗಾಲಯಕ್ಕೆ ಕಳುಹಿಸಲಾಗಿದೆ ಎಂಬ ವರದಿಗಳು ಬಂದಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Read Full Story

11:19 AM (IST) May 28

ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ - ಈ 5 ಜಿಲ್ಲೆಗಳಿಗೆ ಗುಡ್‌ ನ್ಯೂಸ್! ನೂತನ ಮಾರ್ಗ ಎಲ್ಲಿಂದ ಎಲ್ಲಿಗೆ?

ಶಿವಮೊಗ್ಗ: ಮಲೆನಾಡು-ಕರಾವಳಿ ಸಂಪರ್ಕದ ಕೊಂಡಿ ಎನಿಸಿಕೊಂಡಿರುವ ನೂತನ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ವೇಗ ಸಿಕ್ಕಿದ್ದು, ಈ ಯೋಜನೆ ಸಾಕಾರಗೊಂಡರೆ ಐದು ಜಿಲ್ಲೆಗಳಿಗೆ ರೈಲ್ವೇ ನೇರ ಸಂಪರ್ಕ ಸಿಗಲಿದೆ. ನೂತನ ರೈಲ್ವೇ ಮಾರ್ಗದ ಬಗ್ಗೆ ಕುತೂಹಲ ಮನೆ ಮಾಡಿದೆ.

 

Read Full Story

10:11 AM (IST) May 28

IPL 2026 ಎಲಿಮಿನೇಟರ್ ಪಂದ್ಯದಲ್ಲೇ ಹೊರಬಿದ್ದ ಸನ್‌ರೈಸರ್ಸ್ ಹೈದರಾಬಾದ್‌ಗೆ ಸಿಕ್ಕ ನಗದು ಬಹುಮಾನ ಎಷ್ಟು?

19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಸನ್‌ರೈಸರ್ಸ್ ಹೈದರಾಬಾದ್ ಅಭಿಯಾನ ಎಲಿಮಿನೇಟರ್ ಪಂದ್ಯದಲ್ಲಿಯೇ ಕೊನೆಯಾಗಿದೆ. ಎಲಿಮಿನೇಟರ್ ಪಂದ್ಯದಲ್ಲೇ ಹೊರಬಿದ್ದ ಆರೆಂಜ್ ಆರ್ಮಿಗೆ ಬಿಸಿಸಿಐನಿಂದ ಸಿಗುವ ನಗದು ಬಹುಮಾನ ಎಷ್ಟು ಎಂದು ತಿಳಿಯೋಣ.

 

Read Full Story

08:58 AM (IST) May 28

IPL 2026 ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ ಮ್ಯಾಚ್ ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಇದೀಗ ಎಲಿಮಿನೇಟರ್ ಪಂದ್ಯ ಮುಕ್ತಾಯವಾಗಿದ್ದು, ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇದೀಗ ಕ್ವಾಲಿಫೈಯರ್-2 ಮ್ಯಾಚ್ ಎಲ್ಲಿ? ಯಾವಾಗ? ನೇರ ಪ್ರಸಾರ ಎಲ್ಲಿ? ಎಷ್ಟು ಗಂಟೆಗೆ ಆರಂಭ ನೋಡೋಣ ಬನ್ನಿ.

 

Read Full Story

08:54 AM (IST) May 28

ED Raid - ಕೇರಳ ಮಾಜಿ ಸಿಎಂ ಪಿಣರಾಯಿ, ಅಳಿಯ, ಪುತ್ರಿಗೆ ಶಾಕ್, ಬೆಂಗಳೂರಿನ ಕಚೇರಿ ಸೇರಿ 10ಕ್ಕೂ ಹೆಚ್ಚು ಕಡೆ ಇಡಿ ದಾಳಿ

ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರಿಗೆ ಸೇರಿದ 'ಎಕ್ಸಾಲಾಜಿಕ್ ಸೊಲ್ಯೂಷನ್ಸ್' ಕಂಪನಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರು ಮತ್ತು ಕೇರಳದ 6 ಕಡೆ ದಾಳಿ ನಡೆಸಿದೆ. ಸಿಎಂಆರ್‌ಎಲ್ ಕಂಪನಿಯು ಕಾನೂನುಬಾಹಿರವಾಗಿ ಹಣ ಪಾವತಿಸಿದ ಆರೋಪದ ಮೇಲೆ ಈ ಪರಿಶೀಲನೆ ನಡೆದಿದೆ.
Read Full Story

More Trending News