MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2026 ಕ್ವಾಲಿಫೈಯರ್-2: ಗುಜರಾತ್ ಟೈಟಾನ್ಸ್‌ - ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ರದ್ದಾದ್ರೆ ಫೈನಲ್‌ಗೇರೋದು ಯಾರು?

IPL 2026 ಕ್ವಾಲಿಫೈಯರ್-2: ಗುಜರಾತ್ ಟೈಟಾನ್ಸ್‌ - ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ರದ್ದಾದ್ರೆ ಫೈನಲ್‌ಗೇರೋದು ಯಾರು?

IPL 2026 Qualifier 2 Rain Rules: 2026ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಒಂದು ವೇಳೆ ಈ ಪಂದ್ಯ ರದ್ದಾದ್ರೆ ಫೈನಲ್‌ಗೇರೋದು ಯಾರು? ಮೀಸಲು ದಿನ ಇದೆಯಾ? ನೋಡೋಣ ಬನ್ನಿ. 

2 Min read
Author : Naveen Kodase
Published : May 28 2026, 05:00 PM IST
Share this Photo Gallery
  • FB
  • TW
  • Linkdin
  • Whatsapp
16
ನಿರ್ಣಾಯಕ ಘಟ್ಟದತ್ತ 19ನೇ ಆವೃತ್ತಿಯ ಐಪಿಎಲ್
Image Credit : ANI

ನಿರ್ಣಾಯಕ ಘಟ್ಟದತ್ತ 19ನೇ ಆವೃತ್ತಿಯ ಐಪಿಎಲ್

19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇನ್ನುಳಿದ ಎರಡು ಪಂದ್ಯಗಳು ಈ ಬಾರಿಯ ಚಾಂಪಿಯನ್ ಯಾರು ಎನ್ನುವುದನ್ನು ನಿರ್ಧರಿಸಲಿದೆ. ಈಗಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ ಪ್ರವೇಶಿಸಿದ್ದು, ಎರಡನೇ ಕ್ವಾಲಿಫೈಯರ್ ಆಡಲು ಸಜ್ಜಾಗಿರುವ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕ್ವಾಲಿಫೈಯರ್-1 ಮ್ಯಾಚ್ ಗೆದ್ದು ಫೈನಲ್ ಪ್ರವೇಶಿಸಿದ ಆರ್‌ಸಿಬಿ
Image Credit : IPL MEDIA

ಕ್ವಾಲಿಫೈಯರ್-1 ಮ್ಯಾಚ್ ಗೆದ್ದು ಫೈನಲ್ ಪ್ರವೇಶಿಸಿದ ಆರ್‌ಸಿಬಿ

ಕ್ವಾಲಿಫೈಯರ್-1 ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಗುಜರಾತ್ ಟೈಟಾನ್ಸ್‌ ಪಡೆಯನ್ನು ಅನಾಯಾಸವಾಗಿ ಮಣಿಸಿ ಫೈನಲ್ ಪ್ರವೇಶಿಸಿದೆ. ಇನ್ನೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗುಬಡಿದ ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫೈಯರ್-2 ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.

Related Articles

Related image1
IPL 2026 ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ ಮ್ಯಾಚ್ ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
Related image2
IPL 2026 ಎಲಿಮಿನೇಟರ್ ಪಂದ್ಯದಲ್ಲೇ ಹೊರಬಿದ್ದ ಸನ್‌ರೈಸರ್ಸ್ ಹೈದರಾಬಾದ್‌ಗೆ ಸಿಕ್ಕ ನಗದು ಬಹುಮಾನ ಎಷ್ಟು?
36
ಮೇ 29ರಂದು ಕ್ವಾಲಿಫೈಯರ್-2 ಮ್ಯಾಚ್
Image Credit : ChatGPT

ಮೇ 29ರಂದು ಕ್ವಾಲಿಫೈಯರ್-2 ಮ್ಯಾಚ್

ಇದೀಗ ಮೇ 29ರ ಶುಕ್ರವಾರ ಮುಲ್ಲನ್‌ಪುರದ ಹೊಸ ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾಲಿಫೈಯರ್-2 ಪಂದ್ಯದಲ್ಲಿ ಮಾಜಿ ಚಾಂಪಿಯನ್ನರಾದ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಇದು ನಾಕೌಟ್ ಪಂದ್ಯವಾಗಿದ್ದು, ಗೆಲ್ಲುವ ತಂಡ ಫೈನಲ್ ಪ್ರವೇಶಿಸಿದರೆ, ಸೋಲುವ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.

46
ಐಪಿಎಲ್‌ ಪ್ಲೇ ಆಫ್‌ ಮ್ತಾಚ್
Image Credit : Twitter

ಐಪಿಎಲ್‌ ಪ್ಲೇ ಆಫ್‌ ಮ್ತಾಚ್

ಹೀಗಿರುವಾಗಲೇ ಒಂದು ವೇಳೆ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ಮಳೆಯಿಂದ ರದ್ದಾದರೇ ಫೈನಲ್ ಪ್ರವೇಶಿಸುವುದು ಯಾರು? ಕ್ವಾಲಿಫೈಯರ್-2 ಪಂದ್ಯಕ್ಕೆ ಮೀಸಲು ದಿನ ವಿದೆಯೇ ಎನ್ನುವ ಕುತೂಹಲ ಕಾಡುತ್ತಿದೆ. ಈ ಎಲ್ಲಾ ಕುತೂಹಲಕ್ಕೆ ನಾವಿಂದು ಉತ್ತರು ಕೊಡುತ್ತಿದ್ದೇವೆ.

56
ಐಪಿಎಲ್ ಪ್ಲೇ ಆಫ್ ಪಂದ್ಯಗಳಿಗೆ ಮೀಸಲು ದಿನವಿಲ್ಲ
Image Credit : ANI

ಐಪಿಎಲ್ ಪ್ಲೇ ಆಫ್ ಪಂದ್ಯಗಳಿಗೆ ಮೀಸಲು ದಿನವಿಲ್ಲ

ಐಪಿಎಲ್‌ನ ಪ್ಲೇ ಆಫ್‌ ಪಂದ್ಯಗಳಿಗೆ ದುರಾದೃಷ್ಟವಶಾತ್ ಯಾವುದೇ ಮೀಸಲು ದಿನಗಳು ಲಭ್ಯವಿಲ್ಲ. ಫೈನಲ್‌ ಪಂದ್ಯಕ್ಕೆ ಮಾತ್ರ ಮೀಸಲು ದಿನ ಲಭ್ಯವಿದೆ. ಕ್ವಾಲಿಫೈಯರ್-2 ಪಂದ್ಯವು ಮಳೆ ಅಡ್ಡಿ ಪಡಿಸಿದರೆ ಕೊನೆಯ ಪಕ್ಷ 5 ಓವರ್‌ಗಳ ಮ್ಯಾಚ್ ನಡೆಸಲು ಬಿಸಿಸಿಐ ಪ್ರಯತ್ನಿಸಲಿದೆ. ಅದೂ ಸಾಧ್ಯವಾಗದಿದ್ದರೇ, ಭಾರತೀಯ ಕಾಲಮಾನ ತಡರಾತ್ರಿ 12.50ಕ್ಕೆ ಒಂದು ಓವರ್ ಸೂಪರ್ ಓವರ್ ಆಡಿಸಿಯಾದರೂ ಫಲಿತಾಂಶ ಪಡೆಯಲು ಪ್ರಯತ್ನಿಸಲಿದೆ.

66
ಮಳೆಯಿಂದ ಕ್ವಾಲಿಫೈಯರ್-2 ಮ್ಯಾಚ್ ರದ್ದಾದ್ರೆ ಗುಜರಾತ್ ಟೈಟಾನ್ಸ್‌ ಫೈನಲ್‌ಗೆ
Image Credit : AI Generated

ಮಳೆಯಿಂದ ಕ್ವಾಲಿಫೈಯರ್-2 ಮ್ಯಾಚ್ ರದ್ದಾದ್ರೆ ಗುಜರಾತ್ ಟೈಟಾನ್ಸ್‌ ಫೈನಲ್‌ಗೆ

ಒಂದು ವೇಳೆ ಐದು ಓವರ್ ಇಲ್ಲವೇ ಸೂಪರ್ ಓವರ್ ಕೂಡಾ ಆಡಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾದರೇ, ಆಗ ಪಂದ್ಯವನ್ನು ಅಧಿಕೃತ ರದ್ದು ಎಂದು ಘೋಷಿಸಲಾಗುತ್ತದೆ. ಹೀಗಾದಲ್ಲಿ ಗ್ರೂಪ್‌ ಹಂತದಲ್ಲಿ ಯಾವ ತಂಡ ಗರಿಷ್ಠ ಅಂಕ ಸಂಪಾದಿಸಿರುತ್ತದೋ ಆ ತಂಡ ಫೈನಲ್‌ಗೆ ಪ್ರವೇಶಿಸಲಿದೆ. ಒಂದು ವೇಳೆ ಕ್ವಾಲಿಫೈಯರ್-2 ಪಂದ್ಯವು ಮಳೆಯಿಂದ ರದ್ದಾದರೆ, ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಲಿದೆ. ಯಾಕೆಂದರೆ ಲೀಗ್ ಹಂತದ ಕೊನೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವು 18 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ರಾಜಸ್ಥಾನ ರಾಯಲ್ಸ್ ತಂಡವು ಗ್ರೂಪ್ ಹಂತದ ಅಂತ್ಯಕ್ಕೆ 16 ಅಂಕ ಗಳಿಸಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ರಾಜಸ್ಥಾನ್ ರಾಯಲ್ಸ್
ಗುಜರಾತ್ ಟೈಟನ್ಸ್

Latest Videos
Recommended Stories
Recommended image1
ಮತ್ತೆ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ವೈಭವ್ ಸೂರ್ಯವಂಶಿ! ಟಾಪ್-5 ಗರಿಷ್ಠ ರನ್ ಸರದಾರರ ಪಟ್ಟಿಯಿಂದ ವಿರಾಟ್ ಕೊಹ್ಲಿ ಔಟ್!
Recommended image2
ಆಂಟಿಲಿಯಾದಲ್ಲಿ ಫ್ಲಾಟ್, ಮಾಲ್ಡೀವ್ಸ್‌ ನಲ್ಲಿ ಐಲ್ಯಾಂಡ್ ಜೊತೆ 30 ಕೋಟಿ ಚೆಕ್ ! ಮುಂಬೈ ಇಂಡಿಯನ್ಸ್ ಸೇರ್ತಾರಾ ವೈಭವ್ ಸೂರ್ಯವಂಶಿ?
Recommended image3
20 ಲಕ್ಷಕ್ಕೆ RCB ಸೇರಿ ನಾಲ್ಕೇ ನಾಲ್ಕು ಪಂದ್ಯಗಳಲ್ಲಿ ತಂಡಕ್ಕೆ ಬೇಡವಾಗಿದ್ದನು ಈಗ ಬೆಲೆ ಕಟ್ಟಲಾಗದ ನಾಯಕನಾಗಿ ಬಿಟ್ಟ..!
Related Stories
Recommended image1
IPL 2026 ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ ಮ್ಯಾಚ್ ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
Recommended image2
IPL 2026 ಎಲಿಮಿನೇಟರ್ ಪಂದ್ಯದಲ್ಲೇ ಹೊರಬಿದ್ದ ಸನ್‌ರೈಸರ್ಸ್ ಹೈದರಾಬಾದ್‌ಗೆ ಸಿಕ್ಕ ನಗದು ಬಹುಮಾನ ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved