- Home
- Karnataka Districts
- ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ: ಈ 5 ಜಿಲ್ಲೆಗಳಿಗೆ ಗುಡ್ ನ್ಯೂಸ್! ನೂತನ ಮಾರ್ಗ ಎಲ್ಲಿಂದ ಎಲ್ಲಿಗೆ?
ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ: ಈ 5 ಜಿಲ್ಲೆಗಳಿಗೆ ಗುಡ್ ನ್ಯೂಸ್! ನೂತನ ಮಾರ್ಗ ಎಲ್ಲಿಂದ ಎಲ್ಲಿಗೆ?
ಶಿವಮೊಗ್ಗ: ಮಲೆನಾಡು-ಕರಾವಳಿ ಸಂಪರ್ಕದ ಕೊಂಡಿ ಎನಿಸಿಕೊಂಡಿರುವ ನೂತನ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ವೇಗ ಸಿಕ್ಕಿದ್ದು, ಈ ಯೋಜನೆ ಸಾಕಾರಗೊಂಡರೆ ಐದು ಜಿಲ್ಲೆಗಳಿಗೆ ರೈಲ್ವೇ ನೇರ ಸಂಪರ್ಕ ಸಿಗಲಿದೆ. ನೂತನ ರೈಲ್ವೇ ಮಾರ್ಗದ ಬಗ್ಗೆ ಕುತೂಹಲ ಮನೆ ಮಾಡಿದೆ.

ಶಿವಮೊಗ್ಗ ಮಂಗಳೂರು ನೂತನ ರೈಲ್ವೇ ಮಾರ್ಗ
ಬಹುದಿನಗಳ ಕನಸಾಗಿರುವ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ಬರೋಬ್ಬರಿ 332 ಕಿಲೋಮೀಟರ್ ಉದ್ದವಿರಲಿದ್ದು, ಈ ನೂತನ ರೈಲ್ವೇ ಟ್ರ್ಯಾಕ್‌ಗೆ ಸುಮಾರು 3,300 ಕೋಟಿ ರುಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಯೋಜನೆ ಸಾಕಾರಗೊಂಡರೇ ಮಲೆನಾಡು, ಅರೆ ಮಲೆನಾಡು ಹಾಗೂ ಕರಾವಳಿಯನ್ನು ಬೆಸೆಯುವ ಕೊಂಡಿಯಾಗಲಿದೆ.
ಡಿಪಿಆರ್ ತಯಾರಿಕೆಗೆ ಟೆಂಡರ್ ಆಹ್ವಾನ
ಈ ರೈಲ್ವೇ ಮಾರ್ಗದ ಕುರಿತಂತೆ ಭಾರತೀಯ ರೈಲ್ವೇ ಇಲಾಖೆಯೂ ಈಗಾಗಲೇ ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ ನೀಡಿದೆ. ಇದೀಗ ಈ ಬೃಹತ್ ಯೋಜನೆಯ ಕುರಿತಂತೆ ಡಿಪಿಆರ್ ತಯಾರಿಕೆಗೆ ಟೆಂಡರ್ ಕರೆಯಲು ರೈಲ್ವೇ ಇಲಾಖೆ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ.
ಐದು ಜಿಲ್ಲೆಯ ಜನರಿಗೆ ಪ್ರಯೋಜನ!
ಈ ಮೊದಲು 2018ರ ರೈಲ್ವೇ ಬಜೆಟ್‌ನಲ್ಲಿ ಆಗಿನ ಕೇಂದ್ರ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರು ಮೊದಲ ಬಾರಿಗೆ ಶಿವಮೊಗ್ಗ-ಮಂಗಳೂರು ಮಾರ್ಗದ ಕುರಿತಂತೆ ಪ್ರಸ್ತಾಪ ಮಾಡಿದ್ದರು. ಇದು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಸೇರಿದಂತೆ ಐದು ಜಿಲ್ಲೆಯ ಜನರಿಗೆ ನೇರ ರೈಲು ಸಂಪರ್ಕ ಸಿಗುವಂತೆ ಮಾಡಲಿದೆ.
ನೂತನ ರೈಲ್ವೆ ಮಾರ್ಗ ಎಲ್ಲಿಂದ ಎಲ್ಲಿಗೆ?
ಇದೀಗ ಈ ನೂತನ ರೈಲು ಮಾರ್ಗವು ಎಲ್ಲಿಂದ ಎಲ್ಲಿಗೆ ತಲುಪಲಿದೆ ಎನ್ನುವ ಕುತೂಹಲ ಮನೆ ಮಾಡಿದೆ. ಈ ಮೊದಲು ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ, ಶೃಂಗೇರಿ ಮಾರ್ಗವಾಗಿ ಮಂಗಳೂರು ತಲುಪುವ ಬಗ್ಗೆ ಚಿಂತನೆ ನಡೆದಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಅರಸಾಳುವಿನಿಂದ ಮಂಗಳೂರು ನಡುವೆ ಹೊಸ ರೈಲ್ವೇ ಟ್ರ್ಯಾಕ್?
ಇದೀಗ ಹೊಸ ಬೆಳವಣಿಗೆಯೊಂದರಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಅರಸಾಳು(ಮಾಲ್ಗುಡಿ ಮ್ಯೂಸಿಯಂ)ವಿನಿಂದ ರಿಪ್ಪನ್‌ಪೇಟೆ, ಹುಂಚ, ಕೋಣಂದೂರು, ತೀರ್ಥಹಳ್ಳಿ, ಶೃಂಗೇರಿ ಮಾರ್ಗವಾಗಿ ಮಂಗಳೂರು ತಲುಪುವಂತೆ ನೂತನ ಟ್ರ್ಯಾಕ್ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ಶಿವಮೊಗ್ಗ-ಮಂಗಳೂರು ನೂತನ ರೈಲ್ವೇ ಮಾರ್ಗದ ಸವಾಲು
ಈ ರೈಲ್ವೇ ಮಾರ್ಗವು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಬರುವುದರಿಂದ ಈ ಮಾರ್ಗ ಅನುಷ್ಟಾನಕ್ಕೆ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆ ಒಪ್ಪಿಗೆ ಪಡೆಯುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಈಗಾಗಲೇ ಈಗಾಗಲೇ ತಾಳಗುಪ್ಪದಿಂದ ಹೊನ್ನಾವರ ರೈಲ್ವೇ ಮಾರ್ಗ ಯೋಜನೆ ಕುಂಟುತ್ತಲೇ ಸಾಗುತ್ತಿದೆ.

