MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಒಂದೇ ದಿನ ಬರೋಬ್ಬರಿ 2,230 ರುಪಾಯಿ ಕುಸಿತ ಕಂಡ ಚಿನ್ನದ ಬೆಲೆ..! ಬಂಗಾರ ಕೊಳ್ಳೋ ಮೊದಲು ಇವತ್ತಿನ ಗೋಲ್ಡ್‌ ರೇಟ್ ಇಲ್ಲಿದೆ ನೋಡಿ!

ಒಂದೇ ದಿನ ಬರೋಬ್ಬರಿ 2,230 ರುಪಾಯಿ ಕುಸಿತ ಕಂಡ ಚಿನ್ನದ ಬೆಲೆ..! ಬಂಗಾರ ಕೊಳ್ಳೋ ಮೊದಲು ಇವತ್ತಿನ ಗೋಲ್ಡ್‌ ರೇಟ್ ಇಲ್ಲಿದೆ ನೋಡಿ!

ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೇ.28ರಂದು ಚಿನ್ನ ಖರೀದಿಸಬೇಕು ಎನ್ನುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಗುರುವಾರ(ಮೇ.28)ವಾದ ಇಂದಿನ ಗೋಲ್ಡ್ ರೇಟ್ ಎಷ್ಟು ನೋಡೋಣ ಬನ್ನಿ. 

1 Min read
Author : Naveen Kodase
Published : May 28 2026, 12:20 PM IST
Share this Photo Gallery
  • FB
  • TW
  • Linkdin
  • Whatsapp
16
ಇಂದು ಭಾರೀ ಕುಸಿತ ಕಂಡ ಚಿನ್ನದ ಬೆಲೆ
Image Credit : chatgpt

ಇಂದು ಭಾರೀ ಕುಸಿತ ಕಂಡ ಚಿನ್ನದ ಬೆಲೆ

ಕಳೆದೊಂದು ವಾರದ ಹಿಂದಷ್ಟೇ 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ ಸುಮಾರು 16 ಸಾವಿರ ಸಮೀಪ(15,993) ಬಂದು ನಿಂತಿತ್ತು. ನಿರಂತವಾದ ಚಿನ್ನದ ಬೆಲೆಯಲ್ಲಿನ ಏರಿಕೆ ಆಭರಣ ಖರೀದಿಸುವ ಸಾಮಾನ್ಯ ವರ್ಗದ ಮಂದಿ ಕೊಂಚ ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆಭರಣ ಖರೀದಿಸುವವರಿಗೆ ಗುಡ್ ನ್ಯೂಸ್
Image Credit : AI Generated Photo

ಆಭರಣ ಖರೀದಿಸುವವರಿಗೆ ಗುಡ್ ನ್ಯೂಸ್

ಹೌದು, ಕಳೆದೆರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿತ್ತು. ಆದರೆ ಗುರುವಾರವಾದ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಆಭರಣ ಖರೀದಿಸುವ ಮಂದಿಯ ಮುಖದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

Related Articles

Related image1
Bell Gold Earrings: ಕೇವಲ 1 ಗ್ರಾಂ ಚಿನ್ನದಲ್ಲಿ 7 ಫ್ಯಾನ್ಸಿ ಪ್ಯಾಟರ್ನ್‌ಗಳು
Related image2
Gold Cleaning Tips: ನಿಮ್ಮ ಬಂಗಾರ ಕಪ್ಪಾಗಿದ್ಯಾ? ಪಳ ಪಳ ಹೊಳೆಯಬೇಕಾ? ಹೀಗೆ ಕ್ಲೀನ್‌ ಮಾಡಿ!
36
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 2,230 ರುಪಾಯಿ ಕುಸಿತ
Image Credit : Pixabay

24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 2,230 ರುಪಾಯಿ ಕುಸಿತ

24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಇಂದು ಬರೋಬ್ಬರಿ 2230 ರುಪಾಯಿ ಇಳಿಕೆಯಾಗಿದೆ. ಮೇ 28ರಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,606 ರುಪಾಯಿಗೆ ಇಳಿಕೆ ಕಂಡಿದೆ. ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿಂದು 223 ರುಪಾಯಿ ಇಳಿಕೆಯಾಗಿದೆ.

46
22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2,050 ರುಪಾಯಿ ಕುಸಿತ
Image Credit : Getty

22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2,050 ರುಪಾಯಿ ಕುಸಿತ

ಇನ್ನು ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. ಇಂದು 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯ ಮೇಲೆ ಸುಮಾರು 2,050 ರುಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,305 ರುಪಾಯಿಗಳಾಗಿದೆ.

56
ಕಳೆದ 10 ದಿನಗಳಲ್ಲಿ ಕನಿಷ್ಠ ಮೊತ್ತಕ್ಕೆ ಕುಸಿದ ಚಿನ್ನದ ಬೆಲೆ
Image Credit : Getty

ಕಳೆದ 10 ದಿನಗಳಲ್ಲಿ ಕನಿಷ್ಠ ಮೊತ್ತಕ್ಕೆ ಕುಸಿದ ಚಿನ್ನದ ಬೆಲೆ

ಕಳೆದ 10 ದಿನಗಳಿಗೆ ಹೋಲಿಸಿದರೆ ಇದು ಕನಿಷ್ಠ ಮೊತ್ತಕ್ಕೆ ಕುಸಿದ ಚಿನ್ನದ ಬೆಲೆ ಎನಿಸಿಕೊಂಡಿದೆ. 10 ದಿನಗಳ ಹಿಂದೆ ಅಂದರೆ ಮೇ 19ರಂದು 24 ಕ್ಯಾರಟ್ ಚಿನ್ನದ ಬೆಲೆ 15,704 ರುಪಾಯಿಗಳಾಗಿದ್ದರೇ, 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,395 ರುಪಾಯಿಗಳಾಗಿತ್ತು.

66
ಬೆಳ್ಳಿ ಬೆಲೆಯಲ್ಲಿಂದು 10 ಸಾವಿರ ರುಪಾಯಿ ಕುಸಿತ
Image Credit : iSTOCK

ಬೆಳ್ಳಿ ಬೆಲೆಯಲ್ಲಿಂದು 10 ಸಾವಿರ ರುಪಾಯಿ ಕುಸಿತ

ಚಿನ್ನದ ಬೆಲೆಯಲ್ಲಿ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಇಂದು ಭಾರೀ ಇಳಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಇಂದು ಬರೋಬ್ಬರಿ 10,000 ರುಪಾಯಿ ಇಳಿಕೆ ಕಂಡಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ಇಂದು 2,75,000 ರುಪಾಯಿಗಳಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಚಿನ್ನ
ಚಿನ್ನದ ಬೆಲೆ
ಬೆಳ್ಳಿ ದರ
ವ್ಯಾಪಾರ ಸುದ್ದಿ

Latest Videos
Recommended Stories
Recommended image1
ಇಂದಿನ ಸಿಎಂಒಗಳ ಮೇಲೆ ಯಾಕಿಷ್ಟು ಒತ್ತಡ? ‘ದಿ ಸಿಎಂಒ ಅಸೆಂಬ್ಲಿ’ ಸಂಸ್ಥಾಪಕ ವಿವೇಕ್ ಸೇಠ್‌ ಬಿಚ್ಚಿಟ್ಟ ಮಾರ್ಕೆಟಿಂಗ್ ಜಗತ್ತಿನ ಕಹಿ ಸತ್ಯ
Recommended image2
8th Pay Commission: ಬರುತ್ತಾ 5 ಹಂತಗಳ ‘ಫಿಟ್‌ಮೆಂಟ್ ಫ್ಯಾಕ್ಟರ್’: ಹಿರಿಯ ಅಧಿಕಾರಿಗಳ ಬೇಸಿಕ್ ಪೇ ನೇರ ₹10.95 ಲಕ್ಷಕ್ಕೆ ಜಿಗಿತ!
Recommended image3
ಒಂದೇ ಪಾಲಿಸಿಯಲ್ಲಿ ಗಂಡ-ಹೆಂಡ್ತಿ ಇಬ್ಬರಿಗೂ ರಕ್ಷಣೆ: ಜೂನ್ 1 ರಿಂದ ಖರೀದಿಗೆ ಸಿಗಲಿವೆ ಎಲ್‌ಐಸಿಯ ಸೂಪರ್ ಪ್ಲಾನ್‌ಗಳು!
Related Stories
Recommended image1
Bell Gold Earrings: ಕೇವಲ 1 ಗ್ರಾಂ ಚಿನ್ನದಲ್ಲಿ 7 ಫ್ಯಾನ್ಸಿ ಪ್ಯಾಟರ್ನ್‌ಗಳು
Recommended image2
Gold Cleaning Tips: ನಿಮ್ಮ ಬಂಗಾರ ಕಪ್ಪಾಗಿದ್ಯಾ? ಪಳ ಪಳ ಹೊಳೆಯಬೇಕಾ? ಹೀಗೆ ಕ್ಲೀನ್‌ ಮಾಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved