ಶ್ರೀಹರಿಕೋಟಾ: ಭಾರತದ ದಿಕ್ಸೂಚಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿರುವ ಎನ್‌ವಿಎಸ್-03 ದಿಕ್ಸೂಚಿ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಶುಕ್ರವಾರ ಉಡ್ಡಯನ ಮಾಡಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ನೆಲೆಯಿಂದ ರಾತ್ರಿ 11.51ಕ್ಕೆ ಉಪಗ್ರಹ ಹಾರಿಬಿಡಲು ನಿರ್ಧರಿಸಲಾಗಿದೆ.
ಇದು ಹೊಸ ತಲೆಮಾರಿನ ದಿಕ್ಸೂಚಿ ಉಪಗ್ರಹವಾಗಿದ್ದು, ಐಆರ್‌ಎನ್‌ಎಸ್‌ಎಸ್ (ಭಾರತೀಯ ವಲಯ ದಿಕ್ಸೂಚಿ ಉಪಗ್ರಹ ವ್ಯವಸ್ಥೆ)ನ ಭಾಗವಾಗಿ ನಭಕ್ಕೆ ಹಾರಲಿದೆ. ಎನ್‌ವಿಎಸ್-03 ಸ್ಥಳೀಯವಾಗಿ ತಯಾರಿಸಿದ ಪರಮಾಣು ಗಡಿಯಾರವನ್ನು ಹೊಂದಿದೆ.
ಇದು ಭಾರತೀಯ ಭೂಪ್ರದೇಶ ಮತ್ತು ಭಾರತೀಯ ಭೌಗೋಳಿಕ ಗಡಿಯ ಸುತ್ತಲೂ 1500 ಕಿ.ಮೀ ವಿಸ್ತಾರವಾದ ಪ್ರದೇಶದ ಮೇಲೆ ವ್ಯಾಪ್ತಿಯನ್ನು ಹೊಂದಿರಲಿದೆ
11:41 PM (IST) Oct 30
ಪ್ರಸ್ತುತ 50 ವರ್ಷದ ನಮಿತ್, 2007ರಲ್ಲಿ ಜಾಗತಿಕ ಮಟ್ಟದ ನಿರ್ಮಾಣ ಸಂಸ್ಥೆ ಕಟ್ಟುವ ಕನಸಿನೊಂದಿಗೆ ಅಮೆರಿಕದ ಲಾಸ್ ಏಂಜಲೀಸ್‌ಗೆ ತೆರಳಿದ್ದರು. ಪೂರ್ವ ಮತ್ತು ಪಾಶ್ಚಿಮಾತ್ಯ ದೇಶಗಳ ಸಿನಿಮಾ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಅವರದ್ದಾಗಿತ್ತು. ಆದರೆ 2008ರಲ್ಲಿ ಆಗಿದ್ದೇನು? ನೋಡಿ..
10:32 PM (IST) Oct 30
ಎರಡು ವಾರಗಳಲ್ಲಿ ಜೈಲರ್ 2 ತಮಿಳು ಚಿತ್ರರಂಗದ ಸಾರ್ವಕಾಲಿಕ ಯಶಸ್ವಿ ಸಿನಿಮಾಗಳ ಸಾಲಿಗೆ ಸೇರಿದೆ. ಭಾರತದಲ್ಲಿ 500 ಕೋಟಿ ನೆಟ್ ಗಡಿ ದಾಟುವುದು ಈಗಿನ ಮುಂದಿನ ಗುರಿಯಾಗಿದೆ. ಮೂರನೇ ವಾರದಲ್ಲೂ ರಜನಿ ಹವಾ ಹೀಗೆಯೇ ಮುಂದುವರಿದರೆ ಈ ಮೈಲಿಗಲ್ಲು ತಲುಪುವುದು ಕಷ್ಟವೇನಲ್ಲ. ಹಾಗಿದ್ರೆ ಏಷ್ಟಾಗಿದೆ ಗಳಿಕೆ?
10:27 PM (IST) Oct 30
09:07 PM (IST) Oct 30
ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿದ್ದ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಕೊನೆಗೂ ಚಾಲನೆ ನೀಡಿದ್ದು, 2027 ರ ಆರಂಭದಲ್ಲಿ ದೇಶಾದ್ಯಂತ ಪೂರ್ಣಪ್ರಮಾಣದ ಗಣತಿ ನಡೆಯಲಿದೆ. ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಸ್ವಯಂ ವಿವರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
08:36 PM (IST) Oct 30
ಮಲಯಾಳಂನಲ್ಲಿ ಸೂಪರ್ ಫಾರ್ಮ್‌ನಲ್ಲಿರುವ ಅನುಪಮಾ ಪರಮೇಶ್ವರನ್, ಮಮಿತಾ ಬೈಜು, ಕಲ್ಯಾಣಿ ಪ್ರಿಯದರ್ಶನ್‌ಗೆ ಟಾಲಿವುಡ್‌ನಲ್ಲಿ ಸ್ಟಾರ್ ಪಟ್ಟ ಸಿಗುತ್ತಿಲ್ಲವೇಕೆ? ಮಲಯಾಳಿ ನಟಿಯರ ಸಿನಿ ಜರ್ನಿ ಇಲ್ಲಿದೆ.
08:05 PM (IST) Oct 30
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ತಮ್ಮ ಇಂಡೋ-ಪಾಕ್ ಡ್ರೀಮ್ XIನಲ್ಲಿ ಬಹುತೇಕ ಭಾರತೀಯ ಆಟಗಾರರನ್ನೇ ಆಯ್ಕೆ ಮಾಡಿದ್ದು, ಸಯೀದ್ ಅನ್ವರ್ ಮಾತ್ರ ಜಾಗ ಪಡೆದ ಏಕೈಕ ಪಾಕಿಸ್ತಾನಿ ಆಟಗಾರರಾಗಿದ್ದಾರೆ.
07:34 PM (IST) Oct 30
ರಾಮ್ ಚರಣ್ ನಟನೆಯ ಪೆದ್ದಿ ಚಿತ್ರದ ಆಚ್ಚಿಯಮ್ಮ ಪಾತ್ರದ ಬಗ್ಗೆ ಬಂದ ಟೀಕೆಗಳಿಗೆ ಬಾಲಿವುಡ್‌ನ ಯುವ ನಟಿ ಜಾನ್ವಿ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಮುಂದೆ ಇಂಥ ಪಾತ್ರ ಮಾಡದಿರುವ ಬಗ್ಗೆ ನಟಿ ಹೇಳಿದ್ದೇನು?
06:40 PM (IST) Oct 30
ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸದಿರಲು ತೀರ್ಮಾನಿಸಿದ್ದು, ಹೊಸ ನಾಯಕನ ಹುಡುಕಾಟ ಆರಂಭವಾಗಿದೆ. ಯಶಸ್ವಿ ನಾಯಕ ರೋಹಿತ್ ಶರ್ಮಾ ಮತ್ತೆ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದ್ದು, ತಿಲಕ್ ವರ್ಮಾ ಹೆಸರೂ ಪರಿಶೀಲನೆಯಲ್ಲಿದೆ.
06:38 PM (IST) Oct 30
ಕ್ರಿಕೆಟ್ ಮ್ಯಾಚ್ ಸೋತ ಮೇಲೆ ಅಂಪೈರ್ ದೂರುವುದಲ್ಲ ಎಂದು ರಾಹುಲ್ ಗಾಂಧಿಗೆ ಅಮಿತ್ ಶಾ ಗೂಗ್ಲಿ ಎಸೆದಿದ್ದಾರೆ. ವೋಟ್ ಚೋರಿ ಕುರಿತು ಮಾತನಾಡಿದ ಅಮಿತ್ ಶಾ, ರಾಹುಲ್ ಹಾಗೂ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.
06:12 PM (IST) Oct 30
ಟಾಲಿವುಡ್ ನಟಿ ತಮನ್ನಾ ಭಾಟಿಯಾ ತಮ್ಮ ಸ್ಕಿನ್ ಕೇರ್ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ಮೊಡವೆ ಕಡಿಮೆ ಮಾಡಿಕೊಳ್ಳಲು ಅವರು ಅನುಸರಿಸುವ ವಿಚಿತ್ರ ವಿಧಾನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
05:51 PM (IST) Oct 30
05:50 PM (IST) Oct 30
05:35 PM (IST) Oct 30
ಜ್ಯೋತಿ ಪೂರ್ವಜ್ ನಟನೆಯ ಕಿಲ್ಲರ್ ಸಿನಿಮಾ ಹೇಗಿದೆ? ಏಲಿಯನ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಥಾಹಂದರದ ಈ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಚಿತ್ರದ ಕಥೆ, ಅಭಿನಯ, ಪ್ಲಸ್ ಮತ್ತು ಮೈನಸ್ ಕುರಿತ ಸಂಪೂರ್ಣ ವಿಮರ್ಶೆ ಇಲ್ಲಿದೆ.
05:17 PM (IST) Oct 30
ಒಮಾನ್‌ನಲ್ಲಿ ನಡೆಯಲಿರುವ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್‌ಗೆ 15 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಲಕ್ಷ್ಯ ರೈಚಂದಾನಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ವಿನೂ ಮಂಕಡ್ ಟ್ರೋಫಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್.
05:10 PM (IST) Oct 30
‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ನವೆಂಬರ್ 5ರಂದು ತೆರೆಕಾಣಲಿದ್ದು, ಎರಡನೇ ಭಾಗ 2028ರಲ್ಲಿ ಬಿಡುಗಡೆಯಾಗುವ ಯೋಜನೆಯಿದೆ. ಹೀಗಾಗಿ ಇದು ಒಂದೇ ಸಿನಿಮಾದ ನಿರೀಕ್ಷೆಯಲ್ಲ, ಎರಡು ಭಾಗಗಳ ಬೃಹತ್ ಸಿನಿಮಾಟಿಕ್ ಅನುಭವಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ಸಿನಿಮಾ ಕರ್ನಾಟಕದಲ್ಲಿ ಬೆಳ್ಳಂಬೆಳಿಗ್ಗೆ ಬಿಡುಗಡೆ ಆಗಲಿದೆ.
05:02 PM (IST) Oct 30
ಉತ್ತರ ಪ್ರದೇಶದ ಆಗ್ರಾದ ತಾಜ್ ಹೋಟೆಲ್‌ನಲ್ಲಿ ಇಂಗ್ಲಿಷ್ ಮಾತನಾಡಲು ಬಾರದ ಕಾರಣ ಗ್ರಾಹಕನೊಬ್ಬ ವೇಟರ್‌ಗೆ ಕಪಾಳಮೋಕ್ಷ ಮಾಡಿದ್ದಾನೆ. ಕೆಲಸ ಕಳೆದುಕೊಳ್ಳುವ ಭಯದಿಂದ ವೇಟರ್ ಮೌನವಾಗಿದ್ದರೂ, ವಿಷಯ ತಿಳಿದ ಹೋಟೆಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಪರಿತೋಷ್ ಲಧಾನಿ ಗ್ರಾಹಕನನ್ನು ಹೋಟೆಲ್‌ನಿಂದ ಶಾಶ್ವತವಾಗಿ ನಿಷೇಧಿಸಿದ್ದಾರೆ.
04:59 PM (IST) Oct 30
04:46 PM (IST) Oct 30
ಫ್ರೆಂಚ್ ಫ್ರೈಸ್ ಹಲವರ ನೆಚ್ಚಿನ ತಿನಿಸು. ಇದೀಗ ಪ್ರಧಾನಿ ನರೇಂದ್ರ ಮೋದಿ ಫ್ರೆಂಚ್ ಫ್ರೈಸ್ ಫೋಟೋ ಹಂಚಿಕೊಂಡಿದ್ದಾರೆ. ದಿಢೀರ್ ಮೋದಿ ಫ್ರೆಂಚ್ ಫ್ರೈಸ್ ಫೋಟೋ ಹಂಚಿಕೊಂಡು ಹಂಗಾಮ ಸೃಷ್ಟಿಸಿದ್ದಾರೆ.
04:12 PM (IST) Oct 30
ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಬೆನ್ ಡಕೆಟ್ 167 ರನ್ ಗಳಿಸುವ ಮೂಲಕ ಒಂದೇ ಒಂದು ಸಿಕ್ಸರ್ ಬಾರಿಸದೆ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಡಕೆಟ್ ಪಾಕಿಸ್ತಾನದ ನೆಲದಲ್ಲಿ ಹಲವು ಅಪರೂಪದ ಕ್ರಿಕೆಟ್ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
03:51 PM (IST) Oct 30
ಜಾನ್ವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಗೋಲ್ಡನ್ ಕಲರ್‌ನ ಬ್ಯಾಕ್‌ಲೆಸ್ ಮಿನಿ ಡ್ರೆಸ್, ಬೋಲ್ಡ್ ಲಿಪ್‌ಸ್ಟಿಕ್ ಮತ್ತು ಕರ್ಲಿ ಹೈರ್‌ನಲ್ಲಿ ಜಾನ್ವಿ ಮಿಂಚುತ್ತಿದ್ದು, ಈ ಗ್ಲಾಮರಸ್ ಫೋಟೋಗಳು ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
03:42 PM (IST) Oct 30
ಛತ್ತೀಸ್‌ಗಢದ ದಂತೇವಾಡ ಮತ್ತು ಕಿರಂಡೂಲ್‌ನಲ್ಲಿ ಅರ್ನಬ್ ಚಂಡಮಾರುತದ ನಡುವೆ ಆಕಾಶವು ರಕ್ತ ಕೆಂಪು ಬಣ್ಣಕ್ಕೆ ತಿರುಗಿದ ವಿಡಿಯೋಗಳು ವೈರಲ್ ಆಗಿವೆ. ಬಲವಾದ ಮಾರುತಗಳು ಕಬ್ಬಿಣದ ಅಂಶವಿರುವ ಕೆಂಪು ಮಣ್ಣಿನ ಧೂಳನ್ನು ವಾತಾವರಣಕ್ಕೆ ಚಿಮ್ಮಿಸಿರುವುದು ಇದಕ್ಕೆ ಕಾರಣವೆಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
03:38 PM (IST) Oct 30
ಲೇಖಕರು ತಮ್ಮ ಎರಡು ದಶಕಗಳ ಸಾರ್ವಜನಿಕ ಜೀವನದ ಅನುಭವದಿಂದ ಭಾರತದ ರಾಜಕೀಯ ಮತ್ತು ಆಡಳಿತ ವೈಖರಿಯನ್ನು ವಿಶ್ಲೇಷಿಸಿದ್ದಾರೆ. ಜನ್ ಧನ್, ಆಧಾರ್ ಮತ್ತು ಮೊಬೈಲ್ ತಂತ್ರಜ್ಞಾನದ ಬಳಕೆಯಿಂದ ಪಾರದರ್ಶಕತೆ ಹೆಚ್ಚಿ ಬಡತನ ಇಳಿಕೆಯಾಗಿದ್ದರೆ, ಮತ್ತೊಂದೆಡೆ ಕೆಲವು ರಾಜ್ಯಗಳು ಸಾಲದ ಸುಳಿಯಲ್ಲಿ ಸಿಲುಕಿ ಮೂಲಸೌಕರ್ಯದ ಕೊರತೆ ಎದುರಿಸುತ್ತಿವೆ.
03:29 PM (IST) Oct 30
03:22 PM (IST) Oct 30
ಇಸ್ರೇಲ್‌ನ ಅಂತಿಮ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಿಲ್ಲ. ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಆಡಳಿತಾರೂಢ ಮೈತ್ರಿಕೂಟ 53 ಸ್ಥಾನಗಳನ್ನು ಗೆದ್ದಿದ್ದರೆ, ಪ್ರಮುಖ ಪ್ರತಿಪಕ್ಷ ಮೈತ್ರಿಕೂಟ 48 ಸ್ಥಾನಗಳನ್ನು ಪಡೆದಿದೆ. ಎರಡು ಅರಬ್ ಪಕ್ಷಗಳು ಒಟ್ಟು 19 ಸ್ಥಾನಗಳನ್ನು ಗೆದ್ದು ಗಮನ ಸೆಳೆದಿವೆ.
03:16 PM (IST) Oct 30
ಹವಾಮಾನ ವೈಪರಿತ್ಯದಿಂದ ಬದ್ರಿನಾಥದಿಂದ ಡೆಹ್ರಡೂನ್‌ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟಪ್ ಪತನಗೊಂಡಿದೆ. ಪೈಲೆಟ್ ಸೇರಿ 6 ಮಂದಿ ಸಜೀವ ದಹನವಾಗಿದ್ದಾರೆ. ಜೋಶಿಮಠ ಮಾರ್ಗದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.
03:13 PM (IST) Oct 30
ಸೂಪರ್‌ಸ್ಟಾರ್ ರಜನಿಕಾಂತ್ ಅವರ ‘ಜೈಲರ್ 2’ ಸಿನಿಮಾ ಆರಂಭದಲ್ಲಿ ಭರ್ಜರಿ ಗಳಿಕೆ ಮಾಡಿ ಒಟ್ಟು 766 ಕೋಟಿ ರೂಪಾಯಿ ಸಂಗ್ರಹಿಸಿದೆ. ಆದರೆ, ಎರಡನೇ ವಾರದಲ್ಲಿ ಕಲೆಕ್ಷನ್ ಮತ್ತು ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಹೀಗಾದ್ರೆ ತಮಿಳರ ಕನಸು ನನಸಾಗೋದು ಡೌಟ್ ಎನ್ನಲಾಗ್ತಿದೆ!
02:57 PM (IST) Oct 30
01:36 PM (IST) Oct 30
ಕೋಮಾದಲ್ಲಿದ್ದ ಯುವತಿಯ ಪಕ್ಕದಲ್ಲೇ 7 ವರ್ಷಗಳ ಕಾಲ ಕಾದಿದ್ದ ಪ್ರೇಮಿಯ ಭಾವನಾತ್ಮಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಕಣ್ತೆರೆದ ನಂತರ ಯುವಕ ಮದುವೆಯಾಗಿದ್ದಾನೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಇದು ಕ್ಯಾನ್ಸರ್ ರೋಗಿಯ ಕೊನೆಯ ಆಸೆ ಈಡೇರಿಸಿದ ಕ್ಷಣ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಜನರ ಕಣ್ಣಾಲಿಗಳನ್ನು ಒದ್ದೆ ಮಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
01:28 PM (IST) Oct 30
ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ನೂತನ ಬ್ಯಾಟಿಂಗ್ ಕೋಚ್ ಆಗಿ ಹಾಗೂ ಕೀರನ್ ಪೊಲಾರ್ಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.
01:19 PM (IST) Oct 30
PM Modi Banaskantha Visit: ಬನಸ್ಕಾಂತದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು PM-KISAN ಕಂತು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಬಿಕ್ಕಟ್ಟು ಎದುರಿಸುವಾಗ ವಿರೋಧ ಪಕ್ಷಗಳು ಸಂತೋಷಪಡುತ್ತವೆ ಎಂದು ವಾಗ್ದಾಳಿ ನಡೆಸಿದರು.
01:09 PM (IST) Oct 30
ಮಾನವರನ್ನು ಸ್ವಚ್ಛಗೊಳಿಸುವ ವಿಶಿಷ್ಟ 'ಹ್ಯೂಮನ್ ವಾಷಿಂಗ್ ಮೆಷಿನ್' ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ಯಾಪ್ಸುಲ್ ಶೈಲಿಯ ಸಾಧನವು ಮೈಕ್ರೋಬಬಲ್‌ಗಳು ಮತ್ತು ಹಿತವಾದ ಸಂಗೀತದೊಂದಿಗೆ ಕೇವಲ 15 ನಿಮಿಷಗಳಲ್ಲಿ ದೇಹವನ್ನು ಸ್ವಚ್ಛಗೊಳಿಸಿ ಒಣಗಿಸುತ್ತದೆ. ಬಳಕೆದಾರರ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡುವ ಸಂವೇದಕಗಳನ್ನು ಹೊಂದಿರುವ ಈ ಯಂತ್ರದ ಬೆಲೆ ಸುಮಾರು 3.63 ಕೋಟಿ ರೂಪಾಯಿಗಳಾಗಿದೆ.
12:41 PM (IST) Oct 30
ಮಹಿಳಾ ಪ್ರೀಮಿಯರ್ ಲೀಗ್ (WPL) ಮಿನಿ ಹರಾಜಿನಲ್ಲಿ 26 ಆಟಗಾರ್ತಿಯರು ಮಾರಾಟವಾಗಿದ್ದು, ಸೋಫಿ ಮೊಲಿನ್ಯೂ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಐದೂ ಫ್ರಾಂಚೈಸಿಗಳು ಹೊಸ ಆಟಗಾರ್ತಿಯರನ್ನು ಸೇರಿಸಿಕೊಂಡು ತಮ್ಮ ಅಂತಿಮ ತಂಡಗಳನ್ನು ಸಜ್ಜುಗೊಳಿಸಿವೆ. 2027ರ WPL ಆವೃತ್ತಿಯು ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದೆ.
12:31 PM (IST) Oct 30
ODI Most runs without hitting six manoj prabhakar: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸ್ ಹೊಡೆಯದೆ ಸಾವಿರಾರು ರನ್ ಗಳಿಸಿದ ಈ ಮೂವರು ಆಟಗಾರರಲ್ಲಿ ಭಾರತದ ಮಾಜಿ ಕ್ರಿಕೆಟಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅವರ ಪಟ್ಟಿ, ಆಡಿದ ಪಂದ್ಯ, ಗಳಿಸಿದ ರನ್‌ಗಳ ವಿವರ ಇಲ್ಲಿದೆ.
11:55 AM (IST) Oct 30
ರಾಷ್ಟ್ರರಾಜಧಾನಿಯಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂದಿನ ಮೂರು ಗಂಟೆ ಗುಡುಗು ಸಹಿತ ಭಾರಿ ಮಳೆಯಿಂದ ಅಪಾಯದ ಸಾಧ್ಯತೆಯೂ ಇದೆ. ಹವಾಮಾನ ಇಲಾಖೆ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿದೆ.
11:33 AM (IST) Oct 30
ಭೂತಾನ್‌ನ ಶಿಂಟಾಫು ಸರೋವರ ಸ್ಫೋಟಗೊಂಡು ಉಂಟಾದ ಭೀಕರ ಹಠಾತ್ ಪ್ರವಾಹದಿಂದಾಗಿ ಲಯಾ ಪ್ರದೇಶದಲ್ಲಿ ರಸ್ತೆ ಮತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಪ್ರವಾಹದ ನೀರು ಮೊಫು ಮತ್ತು ಸಂಕೋಶ್ ನದಿಗಳ ಮೂಲಕ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
11:23 AM (IST) Oct 30
ಹಾಂಗ್‌ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಪಾಕಿಸ್ತಾನ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸುವ ಗುರಿ ಹೊಂದಿದ್ದರೆ, ಭಾರತ ತಂಡವೂ ಗೆಲುವಿನ ನಿರೀಕ್ಷೆಯಲ್ಲಿದೆ. ಪಂದ್ಯದ ಸಮಯ, ನೇರ ಪ್ರಸಾರದ ಟಿವಿ ಚಾನೆಲ್ ಮತ್ತು ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.
11:04 AM (IST) Oct 30
10:55 AM (IST) Oct 30
ಟಿವಿ ವಾಹಿನಿಯ 'ಭವಿಷ್ಯವಾಣಿ' ಖ್ಯಾತಿಯ ಜ್ಯೋತಿಷಿ ಆಚಾರ್ಯ ಇಂದುಪ್ರಕಾಶ್ ಮಿಶ್ರಾ ಅವರ ಪತ್ನಿ ಸ್ಮಿತಾ ಮಿಶ್ರಾ ಉತ್ತರ ಪ್ರದೇಶದ ಎಂಎಲ್‌ಸಿ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು ಕನಿಷ್ಠ 300 ಮತಗಳನ್ನು ಪಡೆಯಲು ವಿಫಲರಾಗಿದೆ.
10:42 AM (IST) Oct 30
09:52 AM (IST) Oct 30
ಪ್ರಪಂಚದಾದ್ಯಂತ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿರುವ 'ಎಲ್‌ನಿನೋ' ವಿದ್ಯಮಾನದಿಂದಾಗಿ ಬರುವ ಮಾರ್ಚ್ ವೇಳೆಗೆ ಭಾರತದಲ್ಲಿ ಹೆಚ್ಚುವರಿಯಾಗಿ 55,000 ಜನರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಕ್ಲೈಮ್ಯಾಟ್ ಇಂಪ್ಯಾಕ್ಟ್ ಲ್ಯಾಬ್ ವರದಿ ಮಾಡಿದೆ. ವಿಶ್ವದಾದ್ಯಂತ ಸುಮಾರು 3,73,000 ಹೆಚ್ಚುವರಿ ಸಾವುಗಳು ಸಂಭವಿಸುವ ಭೀತಿಯಿದೆ.