ಮಹಿಳಾ ಪ್ರೀಮಿಯರ್ ಲೀಗ್ (WPL) ಮಿನಿ ಹರಾಜಿನಲ್ಲಿ 26 ಆಟಗಾರ್ತಿಯರು ಮಾರಾಟವಾಗಿದ್ದು, ಸೋಫಿ ಮೊಲಿನ್ಯೂ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಐದೂ ಫ್ರಾಂಚೈಸಿಗಳು ಹೊಸ ಆಟಗಾರ್ತಿಯರನ್ನು ಸೇರಿಸಿಕೊಂಡು ತಮ್ಮ ಅಂತಿಮ ತಂಡಗಳನ್ನು ಸಜ್ಜುಗೊಳಿಸಿವೆ. 2027ರ WPL ಆವೃತ್ತಿಯು ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದೆ.

ಕೊಚ್ಚಿ(ಅ.30): ಮಹಿಳಾ ಪ್ರೀಮಿಯರ್ ಲೀಗ್‌ (WPL) 2027ರ ಮಿನಿ ಹರಾಜು ಮಂಗಳವಾರ ಕೊಚ್ಚಿಯಲ್ಲಿ ನಡೆಯಿತು. ಹರಾಜಿನಲ್ಲಿ ಒಟ್ಟು 26 ಆಟಗಾರ್ತಿಯರು ಮಾರಾಟವಾಗಿದ್ದು, ಐದು ತಂಡಗಳು ಮುಂಬರುವ ಋತುವಿಗಾಗಿ ಅಳೆದುತೂಗಿ ಬಲಿಷ್ಠ ಪಡೆಯನ್ನು ಕಟ್ಟಿಕೊಂಡಿವೆ. ಆಟಗಾರ್ತಿಯರ ಖರೀದಿಯಲ್ಲಿ ಯುಪಿ ವಾರಿಯರ್ಸ್ 8 ಅಟಗಾರ್ತಿಯರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಆಸ್ಟ್ರೇಲಿಯಾದ ಆಲ್‌ರೌಂಡರ್‌ ಸೋಫಿ ಮೊಲಿನ್ಯೂ ಹರಾಜಿನ ಅತ್ಯಂತ ದುಬಾರಿ ಆಟಗಾರ್ತಿಯಾದರು. ಅವರನ್ನು ಯುಪಿ ವಾರಿಯರ್ಜ್‌ ತಂಡ ₹1.10 ಕೋಟಿಗೆ ಖರೀದಿಸಿತು. ಅವರ ಮೂಲ ಬೆಲೆ ₹50 ಲಕ್ಷವಾಗಿತ್ತು. ಇನ್ನು ಭಾರತದ ಬ್ಯಾಟರ್‌ ಕಿರಣ್ ನವಗಿರೆ ಈ ಹರಾಜಿನಲ್ಲಿ ಅತ್ಯಂತ ದುಬಾರಿ ಭಾರತೀಯ ಆಟಗಾರ್ತಿಯಾದರು. ದೆಹಲಿ ಕ್ಯಾಪಿಟಲ್ಸ್‌ ಅವರನ್ನು ₹75 ಲಕ್ಷಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿತು.

ಗುಜರಾತ್ ಜೈಂಟ್ಸ್‌ ಯುವ ಭಾರತೀಯ ಬ್ಯಾಟರ್‌ ಜಿ. ಕಮಲಿನಿ ಅವರನ್ನು ₹40 ಲಕ್ಷಕ್ಕೆ ಖರೀದಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಅನುಭವಿ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಜೆಸ್ ಜೊನಾಸೆನ್ ಅವರನ್ನು ₹40 ಲಕ್ಷಕ್ಕೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ವುಮೆನ್ಸ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಮುಗಿದ ಬಳಿಕ ಯಾವ ತಂಡ ಹೇಗಿದೆ? ಮೇಲ್ನೋಟಕ್ಕೆ ಯಾವ ತಂಡ ಬಲಿಷ್ಠವಾಗಿದೆ ಎನ್ನುವುದನ್ನು ನೋಡೋಣ ಬನ್ನಿ.

1. ದೆಹಲಿ ಕ್ಯಾಪಿಟಲ್ಸ್‌ (DC) ತಂಡ

ಜೆಮಿಮಾ ರೋಡ್ರಿಗಸ್ ನಾಯಕತ್ವದ ದೆಹಲಿ ಕ್ಯಾಪಿಟಲ್ಸ್‌ ತಂಡವು ಶಫಾಲಿ ವರ್ಮಾ ಮತ್ತು ಮರಿಜಾನ್ ಕಾಪ್ ಸೇರಿದಂತೆ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಇದೀಗ ಮಿನಿ ಹರಾಜಿನಲ್ಲಿ ಕಿರಣ್ ನವಗಿರೆ, ಕನ್ನಡತಿ ಉಮಾ ಕಾಶ್ವಿ, ಕರ್ಸ್ಟಿ ಗಾರ್ಡನ್ ಹಾಗೂ ನಜ್ಮಾ ಖಾನ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

ಸಂಪೂರ್ಣ ತಂಡ:

ಜೆಮಿಮಾ ರೋಡ್ರಿಗಸ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ ಕಾಪ್, ನಿಕಿ ಪ್ರಸಾದ್, ಲಾರಾ ವೋಲ್ವಾರ್ಟ್, ಚಿನೆಲ್ಲೆ ಹೆನ್ರಿ, ಶ್ರೀ ಚರಣಿ, ದಿಯಾ ಯಾದವ್, ಮಮತಾ ಮಡಿವಾಳ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್, ಮಿನ್ನು ಮಣಿ, ಅನ್ನಾಬೆಲ್ ಸದರ್‌ಲ್ಯಾಂಡ್, ಕಿರಣ್ ನವಗಿರೆ, ಉಮಾ ಕಾಶ್ವಿ, ಕರ್ಸ್ಟಿ ಗಾರ್ಡನ್, ನಜ್ಮಾ ಖಾನ್.

ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರು:

ಕಿರಣ್ ನವಗಿರೆ – ₹75 ಲಕ್ಷ

ಉಮಾ ಕಾಶ್ವಿ – ₹10 ಲಕ್ಷ

ಕರ್ಸ್ಟಿ ಗಾರ್ಡನ್ – ₹10 ಲಕ್ಷ

ನಜ್ಮಾ ಖಾನ್ – ₹10 ಲಕ್ಷ

2. ಮುಂಬೈ ಇಂಡಿಯನ್ಸ್‌ (MI) ತಂಡ

ಎರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ತನ್ನ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸಿವರ್-ಬ್ರಂಟ್, ಹ್ಯಾಲಿ ಮ್ಯಾಥ್ಯೂಸ್ ಮತ್ತು ಅಮೆಲಿಯಾ ಕೆರ್ ತಂಡದ ಪ್ರಮುಖ ಆಟಗಾರ್ತಿಯರಾಗಿದ್ದಾರೆ. ಹರಾಜಿನಲ್ಲಿ ಆರು ಹೊಸ ಆಟಗಾರ್ತಿಯರನ್ನು ಖರೀದಿಸಿದ್ದು, ಯುವ ಭಾರತೀಯ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಸಂಪೂರ್ಣ ತಂಡ:

ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಹ್ಯಾಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜನಾ ಸಜೀವನ್, ರಹಿಲಾ ಫಿರ್ದೌಸ್, ನಿಕೋಲಾ ಕ್ಯಾರಿ, ವೈಷ್ಣವಿ ಶರ್ಮಾ, ತಾರಾ ನಾರ್ರಿಸ್, ಶ್ವೇತಾ ಸೆಹ್ರಾವತ್, ಅಕ್ಷಿತಾ ಭಗತ್, ಸಾನಿಕಾ ಚಾಲ್ಕೆ, ಲತಿಕಾ ಇನಾಮ್ದಾರ್, ದಿಶಾ ಕಸತ್, ಭಾರತಿ ರಾವಲ್.

ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರು:

ಶ್ವೇತಾ ಸೆಹ್ರಾವತ್ – ₹20 ಲಕ್ಷ

ದಿಶಾ ಕಸತ್ – ₹10 ಲಕ್ಷ

ಲತಿಕಾ ಇನಾಮ್ದಾರ್ – ₹10 ಲಕ್ಷ

ಭಾರತಿ ರಾವಲ್ – ₹10 ಲಕ್ಷ

ಸಾನಿಕಾ ಚಾಲ್ಕೆ – ₹10 ಲಕ್ಷ

ಅಕ್ಷಿತಾ ಭಗತ್ – ₹10 ಲಕ್ಷ

3. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ

ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡವು ನಾಯಕಿ ಸ್ಮೃತಿ ಮಂಧನಾ, ರಿಚಾ ಘೋಷ್ ಮತ್ತು ಎಲಿಸ್ ಪೆರ್ರಿ ಸೇರಿದಂತೆ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿತ್ತು. ಹರಾಜಿನಲ್ಲಿ ಅನುಭವ ಹೊಂದಿರುವ ಆಟಗಾರ್ತಿಯರನ್ನು ಸೇರಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದೆ. ಆಸೀಸ್ ಮೂಲದ ಜೆಸ್ ಜೊನಾಸೆನ್, ತೇಜಲ್ ಹಸಬ್ನಿಸ್, ಕ್ಲೋಯ್ ಟ್ರಯಾನ್ ಹಾಗೂ ಕನ್ನಡತಿ ವೃಂದಾ ದಿನೇಶ್ ಅವರನ್ನು ಬೆಂಗಳೂರು ಫ್ರಾಂಚೈಸಿ ಖರೀದಿಸಿದೆ.

ಸಂಪೂರ್ಣ ತಂಡ:

ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ಎಲಿಸ್ ಪೆರ್ರಿ, ಲಾರೆನ್ ಬೆಲ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ಸಯಾಲಿ ಸಟ್ಘರೆ, ಪ್ರೇಮಾ ರಾವತ್, ಪ್ರತ್ಯೂಷಾ ಕುಮಾರ್, ಜೆಸ್ ಜೊನಾಸೆನ್, ತೇಜಲ್ ಹಸಬ್ನಿಸ್, ವೃಂದಾ ದಿನೇಶ್, ಕ್ಲೋಯ್ ಟ್ರಯಾನ್.

ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರು:

ಜೆಸ್ ಜೊನಾಸೆನ್ – ₹40 ಲಕ್ಷ

ತೇಜಲ್ ಹಸಬ್ನಿಸ್ – ₹30 ಲಕ್ಷ

ಕ್ಲೋಯ್ ಟ್ರಯಾನ್ – ₹30 ಲಕ್ಷ

ವೃಂದಾ ದಿನೇಶ್ – ₹10 ಲಕ್ಷ

4. ಯುಪಿ ವಾರಿಯರ್ಸ್ (UPW) ತಂಡ

ಮಿನಿ ಹರಾಜಿನಲ್ಲಿ ಎಂಟು ಆಟಗಾರ್ತಿಯರನ್ನು ಖರೀದಿಸಿರುವ ಯುಪಿ ವಾರಿಯರ್ಸ್ ಐದು ತಂಡಗಳ ಪೈಕಿ ಅತ್ಯಂತ ಸಕ್ರಿಯವಾಗಿತ್ತು. ಆರ್‌ಸಿಬಿ ಜತೆ ಪೈಪೋಟಿ ನಡೆಸಿ ಅಂತಿಮವಾಗಿ ಸೋಫಿ ಮೊಲಿನ್ಯೂ ಅವರನ್ನು ₹1.10 ಕೋಟಿಗೆ ಖರೀದಿಸಿದ್ದು ತಂಡದ ಪ್ರಮುಖ ಸೇರ್ಪಡೆಯಾಗಿದೆ.

ಸಂಪೂರ್ಣ ತಂಡ:

ಮೆಗ್ ಲ್ಯಾನಿಂಗ್ (ನಾಯಕಿ), ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಫೋಬಿ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರನ್ ಶೇಖ್, ಪ್ರತಿಕಾ ರಾವಲ್, ಸೋಫಿ ಮೊಲಿನ್ಯೂ, ಗ್ರೇಸ್ ಹ್ಯಾರಿಸ್, ಸ್ನೇಹ್ ರಾಣಾ, ಸುಷ್ಮಾ ವರ್ಮಾ, ಕ್ಯಾಥರಿನ್ ಬ್ರೈಸ್, ಮನಾಲಿ ದಕ್ಷಿಣಿ, ಸಹನಾ ಪವಾರ್, ಆಶಾ ಶೋಭನಾ.

5. ಗುಜರಾತ್ ಜೈಂಟ್ಸ್‌ (GG) ತಂಡ

ಗುಜರಾತ್ ಜೈಂಟ್ಸ್‌ ತಂಡವು ನಾಯಕಿ ಆಶ್ಲೆ ಗಾರ್ಡ್ನರ್ ಮತ್ತು ಬೆತ್ ಮೂನಿ ಸೇರಿದಂತೆ ತನ್ನ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಹರಾಜಿನಲ್ಲಿ ಯುವ ಭಾರತೀಯ ಬ್ಯಾಟರ್‌ ಜಿ. ಕಮಲಿನಿ ಅವರನ್ನು ₹40 ಲಕ್ಷಕ್ಕೆ ಖರೀದಿಸಿದೆ.

ಸಂಪೂರ್ಣ ತಂಡ:

ಆಶ್ಲೆ ಗಾರ್ಡ್ನರ್ (ನಾಯಕಿ), ಬೆತ್ ಮೂನಿ, ಸೋಫಿ ಡಿವೈನ್, ರೇಣುಕಾ ಸಿಂಗ್ ಠಾಕೂರ್, ಭಾರತಿ ಫುಲ್ಮಾಲಿ, ಕಾಶ್ವೀ ಗೌತಮ್, ಕನಿಕಾ ಅಹುಜಾ, ತನುಜಾ ಕನ್ವರ್, ಜಾರ್ಜಿಯಾ ವೇರ್‌ಹ್ಯಾಮ್, ಅನುಷ್ಕಾ ಶರ್ಮಾ, ಹ್ಯಾಪಿ ಕುಮಾರಿ, ಕಿಮ್ ಗಾರ್ತ್, ಯಾಸ್ತಿಕಾ ಭಾಟಿಯಾ, ರಾಜೇಶ್ವರಿ ಗಾಯಕ್ವಾಡ್, ಜಿಂತಿಮಣಿ ಕಲಿತಾ, ಜಿ. ಕಮಲಿನಿ, ಓರ್ಲಾ ಪ್ರೆಂಡರ್‌ಗಾಸ್ಟ್, ಸಮೈರಾ ರಾಘವ್.

WPL 2027 ಯಾವಾಗ ಆರಂಭ?

ಮಹಿಳಾ ಪ್ರೀಮಿಯರ್ ಲೀಗ್‌ 2027ರ ಋತು ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ. ಐದು ತಂಡಗಳು ತಮ್ಮ ಆಟಗಾರ್ತಿಯರ ಪಟ್ಟಿಯನ್ನು ಅಂತಿಮಗೊಳಿಸಿರುವುದರಿಂದ ಮುಂಬರುವ ಋತುವಿನಲ್ಲಿ ಪ್ರಶಸ್ತಿಗಾಗಿ ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.