ದಾಖಲೆಯ ಗರಿಷ್ಠ ಮಟ್ಟದಿಂದ ಚಿನ್ನದ ಬೆಲೆಯು ಸುಮಾರು ಶೇ.20ರಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದೆ. ಜಾಗತಿಕ ಮಾರುಕಟ್ಟೆಯ ಹಲವು ಕಾರಣಗಳಿಂದ ಈ ಬೆಲೆ ಕುಸಿತ ಉಂಟಾಗಿದ್ದು, ಈಗಲೇ ಚಿನ್ನ ಖರೀದಿಸಬೇಕೇ ಅಥವಾ ಇನ್ನು ಕಾಯಬೇಕೇ ಎಂಬ ಬಗ್ಗೆ ತಜ್ಞರು ಮಹತ್ವದ ಸಲಹೆ ನೀಡಿದ್ದಾರೆ.

Gold Price today in india: ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದರೆ, ಅಥವಾ ಚಿನ್ನದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದರೆ. ಇದು ನಿಮಗೆ ಒಳ್ಳೆಯ ಸಮಯವಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತವಾಗುತ್ತಿದೆ. ಈ ಬಾರಿ ಮತ್ತೆ ಚಿನ್ನ ಇಳಿಕೆಯಾಗಿದೆ. ಜನವರಿ 2026ರಲ್ಲಿ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ಬೆಲೆಯು ಈಗ ಸುಮಾರು ಶೇ.20ರಷ್ಟು ಇಳಿದಿದೆ. ಅಂದರೆ ಅಕ್ಟೋಬರ್ 23ರಂದು 10 ಗ್ರಾಂ ಚಿನ್ನದ ಬೆಲೆ ₹1,41,031ಕ್ಕೆ ಇಳಿದಿತ್ತು. ಇದು ಜನವರಿಯಲ್ಲಿದ್ದ ಬೆಲೆಗೆ ಹೋಲಿಸಿದರೆ ಸುಮಾರು ಶೇ.19.42ರಷ್ಟು ಕಮ್ಮಿ. ಹೀಗಾಗಿ ಜನೆವರಿಯಲ್ಲಿ ಹೆಚ್ಚಿನ ಬೆಲೆಗೆ ಚಿನ್ನ ಖರೀದಿಸಿದವರು ನಷ್ಟ ಅನುಭವಿಸುವಂತಾಗಿದೆ. ಮತ್ತೊಂದೆಡೆ, ಹೊಸದಾಗಿ ಹೂಡಿಕೆ ಮಾಡಲು ಬಯಸುವವರಿಗೆ ಈಗಿನ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ ಸಿಕ್ಕಿದೆ.

ಆದರೆ, ಚಿನ್ನದ ಬೆಲೆ ಮತ್ತೆ ಹಿಂದಿನ ದಾಖಲೆಯ ಮಟ್ಟ ತಲುಪಲು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯ. ಹಾಗಾದರೆ, ಈಗಲೇ ಚಿನ್ನ ಖರೀದಿಸುವುದು ಸೂಕ್ತವೇ? ಅಥವಾ ಬೆಲೆ ಮತ್ತಷ್ಟು ಇಳಿಕೆಯಾಗುವವರೆಗೆ ಕಾಯಬೇಕೇ ಎಂಬ ಪ್ರಶ್ನೆ ಹೂಡಿಕೆದಾರರನ್ನು ಕಾಡುತ್ತಿದೆ.

ಚಿನ್ನದ ಬೆಲೆ ಕುಸಿಯಲು ಕಾರಣವೇನು?

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ದತ್ತಾಂಶದ ಪ್ರಕಾರ ಹೇಳುವುದಾದರೆ, ಜನವರಿ 29, 2026ರಂದು 10 ಗ್ರಾಂ ಚಿನ್ನದ ಬೆಲೆ ₹1,75,231ಕ್ಕೆ ತಲುಪಿತ್ತು. ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿತ್ತು. ಇನ್ನು ಕೆಲವು ತಿಂಗಳಲ್ಲೇ ಎರಡು ಲಕ್ಷ ರೂಪಾಯಿಗೆ ದಾಟಬಹುದು ಎಂದು ಹೇಳಲಾಗಿತ್ತು. ಇದರಿಂದಾಗಿ ಚಿನ್ನದ ಬೆಲೆ ಏರಿಕೆ ನಡುವೆಯೂ ಜನರು ಕಳೆದ ಜನೆವರಿಯಲ್ಲಿ ಬೆಲೆ ಏರಿಕೆ ಲೆಕ್ಕಿಸದೆ ಮುಗಿಬಿದ್ದು ಚಿನ್ನ ಖರೀದಿಸಿದ್ದರು. ಆದರೆ ಅವರ ಲೆಕ್ಕಾಚಾರ ಈಗ ತಲೆಕೆಳಗಾಗಿದೆ, ಚಿನ್ನದ ಬೆಲೆ ಹೆಚ್ಚುವ ಬದಲು ಇದೀಗ ದಿಢೀರ್ ಇಳಿಕೆಯಾಗಿದೆ. ಅಕ್ಟೋಬರ್ 27ರಂದು 10 ಗ್ರಾಂ ಚಿನ್ನದ ಬೆಲೆ ₹1,40,664ಕ್ಕೆ ಇಳಿದಿದೆ. ಜನವರಿ ಬೆಲೆಗೆ ಹೋಲಿಸಿದರೆ ಇದು ಸುಮಾರು ಶೇ.20ರಷ್ಟು ಕಡಿಮೆಯಾಗಿದೆ.

ಪೃಥ್ವಿರಾಜ್ ಕೊಠಾರಿ ಹೇಳುವುದೇನು?

ಭಾರತೀಯ ಬೆಳ್ಳಿ ಮತ್ತು ಆಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಅವರ ಪ್ರಕಾರ, ಚಿನ್ನದ ಬೆಲೆ ಇಳಿಕೆಗೆ ಹಲವು ಕಾರಣಗಳಿವೆ. ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಏರಿಕೆ, ಅಮೆರಿಕದ 10 ವರ್ಷಗಳ ಬಾಂಡ್ ಇಳುವರಿಯ ಹೆಚ್ಚಳ, ಕೇಂದ್ರ ಬ್ಯಾಂಕ್‌ಗಳ ಚಿನ್ನದ ಖರೀದಿಯಲ್ಲಿ ಇಳಿಕೆ ಹಾಗೂ ಕಚ್ಚಾ ತೈಲದ ಬೆಲೆ ಹೆಚ್ಚಳ ಪ್ರಮುಖ ಕಾರಣಗಳಾಗಿವೆ.

ಈಗ ಚಿನ್ನ ಖರೀದಿಸಬೇಕೆ? ಇನ್ನು ಕಾಯುವುದು ಉತ್ತಮವೇ?

ಚಿನ್ನದ ಬೆಲೆ ಈಗ ಇಳಿಕೆಯಾಗಿರಬಹುದು. ಆದರೆ ಇದೇ ಸ್ಥಿತಿ ಯಾವಾಗಲೂ ಇರುತ್ತದೆ ಎಂದಲ್ಲ, ಮುಂದಿನ ದಿನಗಳಲ್ಲಿ ಮತ್ತೆ ಬೆಲೆ ಹೆಚ್ಚಳವಾಗಬಹುದು ಅಥವಾ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯೂ ಬರಬಹುದು. ಆದರೆ ಅದು ಬೇಗನೇ ಬೆಲೆ ಏರಿಕೆಯಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಹೂಡಿಕೆದಾರರು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಕಾಯುವುದು ಒಳ್ಳೆಯದು. ಆದರೆ ಈಗಿನ ಚಿನ್ನದ ಬೆಲೆ ಕುಸಿತವಾಗಿರುವುದು ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಉತ್ತಮ ಅವಕಾಶ ಸಿಕ್ಕಿರುವುದಂತೂ ಹೌದು.

ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ಈ ವಿಷಯ ನೆನಪಿರಲಿ

  • ಒಂದೇ ಬಾರಿಗೆ ದೊಡ್ಡ ಮೊತ್ತ ಹೂಡಿಕೆ ಬೇಡ. ಅದರ ಬದಲು ಹಂತ ಹಂತವಾಗಿ ಕಡಿಮೆ ಪ್ರಮಾಣದಲ್ಲಿ ಚಿನ್ನ ಖರೀದಿಸಿ.
  • ನಿಮ್ಮ ಹೂಡಿಕೆಯ ಮೊತ್ತ 4ರಿಂದ 6 ಭಾಗಗಳಾಗಿ ವಿಂಗಡಿಸಿ ಮುಂದಿನ 3 ರಿಂದ 6 ತಿಂಗಳ ಅವಧಿಯಲ್ಲಿ ಹೂಡಿಕೆ ಮಾಡಿ.
  • ಗೋಲ್ಡ್ ಇಟಿಎಫ್ (Gold ETF) ಮೂಲಕವೂ ಚಿನ್ನದಲ್ಲಿ ಹೂಡಿಕೆ ಮಾಡಬಹುದು.
  • ಭೌತಿಕ ಚಿನ್ನ ಖರೀದಿಸುವ ಮೊದಲು ನಿಮ್ಮ ಅಗತ್ಯ, ಹೂಡಿಕೆಯ ಉದ್ದೇಶವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ.
  • ಯಾವ್ಯಾವ ತಿಂಗಳುಗಳಲ್ಲಿ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತವಾಗಿದೆ?

2026ರ ಜನೆವರಿಯಿಂದ ಇಲ್ಲಿವರೆಗೆ ಪ್ರತಿ ತಿಂಗಳು ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಪ್ರತಿ ತಿಂಗಳ ಗರಿಷ್ಠ ಮತ್ತು ಕನಿಷ್ಠ ಬೆಲೆಯ ವಿವರ ಇಲ್ಲಿದೆ.

ತಿಂಗಳು | ಗರಿಷ್ಠ ಬೆಲೆ (₹/10 ಗ್ರಾಂ) | ಕನಿಷ್ಠ ಬೆಲೆ (₹/10 ಗ್ರಾಂ)

  • ಜನವರಿ | 1,76,306 | 1,32,614
  • ಫೆಬ್ರವರಿ | 1,59,383 | 1,43,926
  • ಮಾರ್ಚ್ | 1,67,090 | 1,33,513
  • ಏಪ್ರಿಲ್ | 1,52,647 | 1,46,006
  • ಮೇ | 1,60,651 | 1,47,018
  • ಜೂನ್ | 1,56,132 | 1,39,714
  • ಜುಲೈ | 1,45,789 | 1,39,076
  • ಆಗಸ್ಟ್ | 1,61,945 | 1,42,121
  • ಸೆಪ್ಟೆಂಬರ್ | 1,54,494 | 1,46,566
  • ಅಕ್ಟೋಬರ್ | 1,49,170 | 1,40,664