ಅಯೋಧ್ಯೆ: ರಾಮಮಂದಿರ ದೇಣಿಗೆ ಕಳ್ಳತನದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಮಂದಿರದಲ್ಲಿ ಪ್ರತಿ ದಿನ 6- 8 ಲಕ್ಷ ರು. ಹಣವನ್ನು ಆರೋಪಿಗಳು ವಂಚಿಸುತ್ತಿದ್ದರು ಎಂಬ ಸಂಶಯ ವ್ಯಕ್ತವಾಗಿದೆ. ಕಾರಣ ಹಗರಣ ತನಿಖೆ ಬರುವ ಮುನ್ನ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಾತೆಗೆ ಅಂದಾಜು ಸರಾಸರಿ 16 ರಿಂದ 18 ಲಕ್ಷ ರು. ಜಮೆಯಾಗುತ್ತಿತ್ತು. ಆದರೆ ಇದೀಗ ಅಕ್ರಮ ಬಯಲಾಗಿ, ಆರೋಪಿಗಳ ಬಂಧನ ಬಳಿಕ ಆ ಪ್ರಮಾಣ 24- 26 ಲಕ್ಷ ರು.ಗೆ ಏರಿಕೆಯಾಗಿದೆ. ಈ ಅಂಕಿ ಅಂಶಗಳ ಆಧಾರದ ಮೇಲೆ ನಿತ್ಯ 6 ರಿಂದ 8 ಲಕ್ಷ ರು. ವಂಚನೆಯಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ರಜಾ ದಿನಗಳ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಾದ ಕಾರಣವೂ ದೇಣಿಗೆ ಹಣ ಏರಿಕೆಯಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
11:08 PM (IST) Jul 06
ನಟ ಚಿರಂಜೀವಿ ಹಾಗು ರಜಿನಿಕಾಂತ್ ಈ ಇಬ್ಬರ ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್ ಕ್ಲಾಶ್ ಆಗಿರೋ ಉದಾಹರಣೆಯೇ ಇಲ್ಲ. ಆದ್ರೆ ಈ ಭಾರಿ ಅಂತದ್ದೊಂದು ಕದನ ಕಣ ಏರ್ಪಡುತ್ತಿದೆ. ಚಿರಂಜೀವಿಯ ವಿಶ್ವಂಭರ ಹಾಗು ರಜನಿಕಾಂತ್ರ ಜೈಲರ್-2 ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿವೆ.
10:44 PM (IST) Jul 06
ಅಖಿಲ್ ಅಕ್ಕಿನೇನಿ ನಟನೆಯ 'ಲೆನಿನ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ, ಜೂ.ಎನ್‌ಟಿಆರ್ ಮತ್ತು ಅಖಿಲ್ ಒಟ್ಟಿಗೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಸಂಪೂರ್ಣ ವಿವರ ಇಲ್ಲಿದೆ.
09:28 PM (IST) Jul 06
'ಧುರಂಧರ್' ಮತ್ತು 'ಭಾಭಿ ಜಿ ಘರ್ ಪರ್ ಹೈ' ಧಾರಾವಾಹಿಯಲ್ಲಿನ ಪಾತ್ರಗಳ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿರುವ ನಟಿ ಸೌಮ್ಯ ಟಂಡನ್, ಇತ್ತೀಚೆಗೆ ಸ್ಕರ್ಟ್-ಟಾಪ್‌ನಲ್ಲಿ ತಮ್ಮ ಯಂಗ್ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
08:38 PM (IST) Jul 06
ಜುಲೈ 7 ರಂದು ಎಂ.ಎಸ್ ಧೋನಿ ಅವರ ಹುಟ್ಟುಹಬ್ಬದ ಸಂಭ್ರಮ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮತ್ತು ವಿಕೆಟ್ ಕೀಪರ್ ಆಗಿ ಅವರು ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಯಸ್ಸಿನ ಕಾರಣದಿಂದ ಮುಂಬರುವ ಐಪಿಎಲ್ 2024 ಅವರ ಕೊನೆಯ ಸೀಸನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.
08:22 PM (IST) Jul 06
'ಸ್ಪಾರ್ಟಾದ ಹೆಲೆನ್' ಖ್ಯಾತಿಯ ಯುಟ್ಯೂಬರ್ ಧನ್ಯಾ ಎಸ್.ಆರ್ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಕಾಸರಗೋಡಿನಲ್ಲಿ ಪೊಲೀಸರ ವಶವಾಗಿದ್ದಾರೆ. 17 ಕಿಲೋಮೀಟರ್‌ಗಳ ಚೇಸ್ ನಂತರ ಅವರನ್ನು ತಡೆದಾಗ, ಅವರ ಆಲ್ಕೋಹಾಲ್ ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿತ್ತು.
07:46 PM (IST) Jul 06
Ranveer Singh Performance: ನಟ ರಣವೀರ್ ಸಿಂಗ್ ಅವರ ಹುಟ್ಟುಹಬ್ಬದ ದಿನ, 'ಧುರಂಧರ್' ಚಿತ್ರದ ನಿರ್ದೇಶಕ ಆದಿತ್ಯ ಧರ್ ಒಂದು ಭಾವುಕ ಸೋಶಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದಾರೆ.
06:41 PM (IST) Jul 06
ಪೆಹಲ್ಗಾಂ ಉಗ್ರರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಯೊಬ್ಬರ ಪುತ್ರಿ ಇತ್ತೀಚೆಗೆ ದುರಂತ ನೆನೆದು ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋಗೆ ಉಗ್ರರ ದಾಳಿ ಸಮರ್ಥಿಸಿ ಕಮೆಂಟ್ ಮಾಡಿದ್ದ ಯುವಕನನ್ನು ಪೊಲೀಸ್ ಬಂಧಿಸಿದ್ದಾರೆ.
06:15 PM (IST) Jul 06
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು, ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಆರಂಭಿಕರಾಗಿ ಕಳುಹಿಸಿದ ಕೋಚ್ ಗೌತಮ್ ಗಂಭೀರ್ ಅವರ ತಂತ್ರವನ್ನು ಮೊಹಮ್ಮದ್ ಕೈಫ್ ತೀವ್ರವಾಗಿ ಟೀಕಿಸಿದ್ದಾರೆ. ಇದೊಂದು 'ಹಿಮಾಲಯದಷ್ಟು ದೊಡ್ಡ ಪ್ರಮಾದ' ಎಂದಿರುವ ಅವರು, ಬಲಗೈ-ಎಡಗೈ ಆರಂಭಿಕ ಜೋಡಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ.
06:10 PM (IST) Jul 06
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು, ಅರಣ್ಯ ಇಲಾಖೆಯ 'ಕ್ಷಮಾದಾನ ಯೋಜನೆ' ಅಡಿಯಲ್ಲಿ ತಮ್ಮ ಬಳಿ 10 ಆನೆ ದಂತಗಳು ಮತ್ತು ದಂತದಿಂದ ಮಾಡಿದ 13 ವಿಗ್ರಹಗಳಿವೆ ಎಂದು ಸ್ವಯಂಪ್ರೇರಿತರಾಗಿ ಘೋಷಿಸಿಕೊಂಡಿದ್ದಾರೆ.
06:00 PM (IST) Jul 06
Indian Railways Update: ರೈಲ್ವೆ ಇಲಾಖೆಯು ವಿವಿಧ ತಾಂತ್ರಿಕ / ನಿರ್ವಹಣಾ ಕಾರಣಗಳಿಂದಾಗಿ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಿದೆ. ಜುಲೈ 5, ಜುಲೈ 6, 2026 ರಂದು ಪ್ರಾರಂಭವಾಗುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ.
05:58 PM (IST) Jul 06
05:28 PM (IST) Jul 06
ಬೆಂಗಳೂರು: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ದಾಖಲೆಯ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಆಸೀಸ್ ಐಸಿಸಿ ಟೂರ್ನಿಯಲ್ಲಿ 24ನೇ ಟ್ರೋಫಿ. ಇನ್ನು ಭಾರತ ಎಷ್ಟು ಐಸಿಸಿ ಟ್ರೋಫಿ ಗೆದ್ದಿದೆ ಎನ್ನುವುದನ್ನು ನೋಡೋಣ ಬನ್ನಿ.
05:28 PM (IST) Jul 06
04:42 PM (IST) Jul 06
ಭಾರತವು 'ಕೆಳ-ಮಧ್ಯಮ ಆದಾಯ'ದ ದೇಶವಾಗಿದ್ದರೂ, ದೆಹಲಿ ಮತ್ತು ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ವಿಶ್ವಬ್ಯಾಂಕ್‌ನ 'ಮೇಲ್ಮಧ್ಯಮ ಆದಾಯ'ದ ಮಟ್ಟವನ್ನು ದಾಟಿವೆ. ಆದರೆ, ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಅತ್ಯಂತ ಹಿಂದುಳಿದಿದ್ದು, ದೇಶದ ರಾಜ್ಯಗಳ ನಡುವಿನ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ.
03:59 PM (IST) Jul 06
ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ 'Pixxel' ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಯಿಂದ ಬಂದು, ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಖಾಸಗಿ ಸಂಸ್ಥೆ ಆಗಿದೆ.
03:56 PM (IST) Jul 06
03:07 PM (IST) Jul 06
02:11 PM (IST) Jul 06
ಮಾಯಾ ಟಾಟಾ, ಟ್ರೆಂಟ್ ಲಿಮಿಟೆಡ್‌ನ 'ವೆಸ್ಟ್‌ಸೈಡ್' ಬ್ರ್ಯಾಂಡ್‌ನ ಗ್ಲೋಬಲ್ ಡಿಜಿಟಲ್ ಬಿಸಿನೆಸ್ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ. ಟಾಟಾ ಡಿಜಿಟಲ್‌ನಲ್ಲಿನ ತಮ್ಮ ಅನುಭವವನ್ನು ಬಳಸಿಕೊಂಡು, ಅವರು ವೆಸ್ಟ್‌ಸೈಡ್‌ನ ಆನ್‌ಲೈನ್ ಮತ್ತು ಅಂತರರಾಷ್ಟ್ರೀಯ ಇ-ಕಾಮರ್ಸ್ ವಿಸ್ತರಣೆಯನ್ನು ಮುನ್ನಡೆಸಲಿದ್ದಾರೆ.
01:50 PM (IST) Jul 06
01:36 PM (IST) Jul 06
01:14 PM (IST) Jul 06
12:54 PM (IST) Jul 06
ಅದು 300 ವರ್ಷಗಳ ಹಳೆಯ ಪ್ರಸಿದ್ಧ ದೇಗುಲ. ಆ ಶಿವನ ಆಲಯದಲ್ಲಿ ಉತ್ಖನ ನಡೆಯುತ್ತಿತ್ತು. ಜೆಸಿಬಿಯಿಂದ ಆವರಣ ಅಗೆಯುತ್ತಿದ್ದಾಗ ವಿಚಿತ್ರ ಧ್ವನಿಯೊಂದು ಕೇಳಿಬಂದಿತ್ತು. ಜಾಗೃತರಾದ ಸ್ಥಳೀಯರು, ಪರಿಶೀಲನೆ ನಡೆಸಿದಾಗ ಆ ಜಾಗ ದೊಡ್ಡ ರಹಸ್ಯಗಳನ್ನೇ ಹೊದ್ದು ನಿಂತಿತ್ತು.
12:44 PM (IST) Jul 06
ಟೆಲಿಕಾಂ ಕಂಪನಿಯೊಂದು 225 ರೂಪಾಯಿಗೆ ಬಂಪರ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ 30 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2.5GB ಡೇಟಾ ಮತ್ತು ಅನಿಯಮಿತ ಕರೆಗಳು ಲಭ್ಯವಿದ್ದು, ಇದು ಜಿಯೋ ಮತ್ತು ಏರ್‌ಟೆಲ್‌ನ ದುಬಾರಿ ಪ್ಲಾನ್‌ಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.
12:37 PM (IST) Jul 06
12:24 PM (IST) Jul 06
ನಟಿ ತ್ರಿಷಾ ಅವರು ಸದ್ಯಕ್ಕೆ ಭಾರೀ ಟ್ರೆಂಡಿಂಗ್‌ನಲ್ಲಿ ಇರೋ ನಟಿ. ಕಾರಣ, ಸಿನಿಮಾ ನಟಿಯಾಗಿ ಮಾತ್ರವಲ್ಲ ವೈಯಕ್ತಿಕ ವಿಷಯದ ಮೂಲಕವೂ ಕೂಡ ನಟಿ ತ್ರಿಷಾ ಅವರು ಸಖತ್ ಸುದ್ದಿಯಲ್ಲಿದ್ದಾರೆ. ಈಗ ಮತ್ತೊಂದು ಹೊಸ ಸುದ್ದಿ ಬಂದಿದೆ..
12:03 PM (IST) Jul 06
11:40 AM (IST) Jul 06
ಗಂಡ ಹೆಂಡತಿಯನ್ನ ಸಾಯಿಸೋದು, ಹೆಂಡತಿ ಗಂಡನ ಸಾಯಿಸೋ ಪ್ರಕರಣಗಳು ಇತ್ತೀಚೆಗೆ ಜೋರಾಗಿ ನಡೆಯುತ್ತಿದೆ. ಸಮಾಜದಲ್ಲಿ ದೊಡ್ಡ ಆತಂಕ ಸೃಷ್ಟಿಯಾಗಿದ್ದು, ಇಲ್ಲಿ ಯಾರನ್ನ ಯಾರು ನಂಬಬೇಕು, ಯಾರನ್ನ ನಂಬಬಾರದು ಎಂಬ ಭಯ ಶುರುವಾಗಿದೆ. ಈ ಮಧ್ಯೆ ಹರಿಯಾಣದಲ್ಲಿ ಘೋರ ಕೃತ್ಯ ನಡೆದಿದೆ.
11:09 AM (IST) Jul 06
10:25 AM (IST) Jul 06
ಟ್ರಕ್‌ಗಳ ಮೇಲಿನ 'Use Dipper At Night' ಘೋಷಣೆಯು ರಾತ್ರಿ ವೇಳೆ ಸುರಕ್ಷಿತ ಡ್ರೈವಿಂಗ್‌ಗಾಗಿ ಲೋ ಬೀಮ್ ಲೈಟ್ ಬಳಸಲು ಸೂಚಿಸುತ್ತದೆ. ಇದಲ್ಲದೆ, 2016ರಲ್ಲಿ ಟ್ರಕ್ ಡ್ರೈವರ್‌ಗಳಲ್ಲಿ ಎಚ್‌ಐವಿ/ಏಡ್ಸ್ ಜಾಗೃತಿ ಮೂಡಿಸಲು ಇದೇ ಹೆಸರಿನಲ್ಲಿ 'ಡಿಪ್ಪರ್' ಕಾಂಡೋಮ್ ಬ್ರ್ಯಾಂಡ್ ಅನ್ನು ಪರಿಚಯಿಸಲಾಗಿತ್ತು.
10:21 AM (IST) Jul 06
09:57 AM (IST) Jul 06
09:48 AM (IST) Jul 06
09:40 AM (IST) Jul 06
Actress Bhagyashree: ಅಮ್ರಾವ್ರ ಗಂಡ ಸಿನಿಮಾ ಖ್ಯಾತಿಯ ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಇನ್‌ಸ್ಟಾಗ್ರಾಮ್ ರೀಲ್ಸ್‌ಗೋಸ್ಕರ ಲಸ್ಸಿ ತಿಂದ ಹಾಗೆ ನಾಟಕ ಮಾಡಿ, ಆಮೇಲೆ ಸಿಕ್ಕಾಪಟ್ಟೆ ಸಕ್ಕರೆ ಎಂದು ರಿಜೆಕ್ಟ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
08:46 AM (IST) Jul 06
ದೆಹಲಿಯ ಲೋಧಿ ಕಾಲೋನಿಯಲ್ಲಿ ನವವಿವಾಹಿತೆ ಆಕೃತಿ ಸುತಾರ್ (Aakruti Sutar) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯಲ್ಲ, 20 ಲಕ್ಷ ವರದಕ್ಷಿಣೆಗಾಗಿ ಪತಿಯೇ ಮಾಡಿದ ಕೊಲೆ ಎಂದು ಮೃತರ ಕುಟುಂಬ ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
08:46 AM (IST) Jul 06
ಪುರಾತತ್ತ್ವಜ್ಞರು ಸುಮಾರು 1700 ವರ್ಷಗಳಷ್ಟು ಹಳೆಯ, ಸಂಪೂರ್ಣವಾಗಿ ಹೂತುಹೋಗಿದ್ದ ನಗರವನ್ನು ಪತ್ತೆ ಮಾಡಿದ್ದಾರೆ. ಸುಸಜ್ಜಿತ ಮನೆಗಳು, ಚರ್ಚ್‌ಗಳನ್ನು ಹೊಂದಿದ್ದ ಈ ನಗರದ ಸಮಾಧಿಗಳಲ್ಲಿ ಚಿನ್ನದ ನಾಲಿಗೆಗಳು ಕಂಡುಬಂದಿದ್ದು, ಇದು ಸಾವಿನ ನಂತರದ ಬದುಕಿನ ನಂಬಿಕೆಗಳ ಬಗ್ಗೆ ಕುತೂಹಲ ಮೂಡಿಸಿದೆ.
06:57 AM (IST) Jul 06
05:27 AM (IST) Jul 06