MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Chikkamagaluru
  • NASA ಜೊತೆ ಕೈಜೋಡಿಸಿದ ಕರ್ನಾಟಕದ ಸ್ಪೇಸ್ ಸ್ಟಾರ್; ಕನ್ನಡ ಮಣ್ಣಿನ ಅಪ್ರತಿಮ ಪ್ರತಿಭೆಯ ಸಾಹಸದ ಕತೆ..!

NASA ಜೊತೆ ಕೈಜೋಡಿಸಿದ ಕರ್ನಾಟಕದ ಸ್ಪೇಸ್ ಸ್ಟಾರ್; ಕನ್ನಡ ಮಣ್ಣಿನ ಅಪ್ರತಿಮ ಪ್ರತಿಭೆಯ ಸಾಹಸದ ಕತೆ..!

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ 'Pixxel' ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಯಿಂದ ಬಂದು, ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಖಾಸಗಿ ಸಂಸ್ಥೆ ಆಗಿದೆ.

2 Min read
Author : Ganesh Mabla Gowda
Published : Jul 06 2026, 03:59 PM IST
Share this Photo Gallery
  • FB
  • TW
  • Linkdin
  • Whatsapp
16
NASA ಜೊತೆ ಐತಿಹಾಸಿಕ ಒಪ್ಪಂದ
Image Credit : Asianet News

NASA ಜೊತೆ ಐತಿಹಾಸಿಕ ಒಪ್ಪಂದ

ಕನಸು ಕಾಣಲು ಬಡತನ ಅಡ್ಡಿಯಾಗಬಾರದು, ಗುರಿ ತಲುಪಲು ಅಡೆತಡೆಗಳು ಎದುರಾದಾಗ ಎದೆಗುಂದಬಾರದು ಎನ್ನುವುದಕ್ಕೆ ಚಿಕ್ಕಮಗಳೂರಿನ ಈ ಯುವಕನೇ ಸಾಕ್ಷಿ. ಹಳ್ಳಿಯೊಂದರಲ್ಲಿ ಇಂಟರ್ನೆಟ್ ಸೌಲಭ್ಯವೂ ಇಲ್ಲದ ವಾತಾವರಣದಲ್ಲಿ ಬೆಳೆದ ಯುವಕ ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರೇ ಅವೈಸ್ ಅಹ್ಮದ್. ಅವರ ನೇತೃತ್ವದ 'Pixxel' ಸಂಸ್ಥೆ ಈಗ ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ 'NASA' ಜೊತೆ ಐತಿಹಾಸಿಕ ಒಪ್ಪಂದ ಮಾಡಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬಾಲ್ಯದ ದಿನಗಳು..
Image Credit : Asianet News

ಬಾಲ್ಯದ ದಿನಗಳು..

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಎಂಬ ಪುಟ್ಟ ಗ್ರಾಮದವರಾದ ಅವೈಸ್ ಅಹ್ಮದ್ ಪಯಣ ಸುಲಭದ್ದಾಗಿರಲಿಲ್ಲ. ಬಾಲ್ಯದಲ್ಲಿ ಇಂಟರ್ನೆಟ್ ಸಂಪರ್ಕವೂ ಸರಿಯಾಗಿಲ್ಲದ ಹಳ್ಳಿಯಲ್ಲಿ ಬೆಳೆದ ಈ ಹುಡುಗನಿಗೆ ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಅಪಾರ ಆಸಕ್ತಿ. ಮಗನ ದೊಡ್ಡ ಕನಸಿಗೆ ಪೋಷಕರು ಬೆನ್ನೆಲುಬಾಗಿ ನಿಂತರು. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮಗನ ಶಿಕ್ಷಣಕ್ಕಾಗಿ ಸಾಲ ಮಾಡಿದರು, ಮನೆಯಲ್ಲಿದ್ದ ಚಿನ್ನವನ್ನು ಅಡವಿಟ್ಟರು. ಪೋಷಕರ ಈ ತ್ಯಾಗ ಇಂದು ವಿಶ್ವಮಟ್ಟದಲ್ಲಿ ಪ್ರತಿಫಲ ನೀಡಿದೆ.

Related Articles

Related image1
ಟಿಕೆಟ್‌ನಲ್ಲಿ ಬೆಂಗಳೂರಿನ 1 ವರ್ಷದ ಮಗು ಏಕಾಂಗಿ ಪ್ರಯಾಣ ಎಂದು ತೋರಿಸ್ತಿತ್ತು.. ಆಮೇಲೆ?
Related image2
ನಾನು ಇರೋವರೆಗೂ RSS ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ -ಪ್ರಿಯಾಂಕ್ ಖರ್ಗೆ ವಾರ್ನಿಂಗ್
36
BITS Pilani ಇಂದ Pixxel ವರೆಗೆ..
Image Credit : Asianet News

BITS Pilani ಇಂದ Pixxel ವರೆಗೆ..

ಅವೈಸ್ ಅಹ್ಮದ್ ಬಿಟ್ಸ್ ಪಿಲಾನಿ (BITS Pilani) ಸಂಸ್ಥೆಯಲ್ಲಿ ಓದುತ್ತಿದ್ದಾಗಲೇ ಏನಾದರೂ ಹೊಸತು ಮಾಡಬೇಕೆಂಬ ಹಂಬಲ ಹೊಂದಿದ್ದರು. ಈ ಆಲೋಚನೆಯ ಫಲವೇ 'Pixxel'. ವಿದ್ಯಾರ್ಥಿಯಾಗಿದ್ದಾಗಲೇ ಈ ಸ್ಟಾರ್ಟ್‌ಅಪ್‌ಗೆ ಚಾಲನೆ ನೀಡಿದ ಅವರು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಲು ಮುಂದಾದರು. ಇಸ್ರೋ (ISRO) ಸಹಯೋಗದೊಂದಿಗೆ ಬೆಳೆದ ಈ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.

46
ಭಾರತದ ಮೊದಲ ಖಾಸಗಿ ಸಂಸ್ಥೆ
Image Credit : Asianet News

ಭಾರತದ ಮೊದಲ ಖಾಸಗಿ ಸಂಸ್ಥೆ

ಅವೈಸ್ ಅಹ್ಮದ್ ಅವರ ಸಾಧನೆಯ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೊದಲ ಖಾಸಗಿ ಸ್ಪೇಸ್ ಸ್ಟಾರ್ಟ್‌ಅಪ್ ಎಂಬ ಹೆಗ್ಗಳಿಕೆಗೆ Pixxel ಪಾತ್ರವಾಗಿದೆ.

ಇದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ವಿಷಯ.

56
ಸಂಖ್ಯೆಗಳಲ್ಲಿ Pixxelನ ಯಶಸ್ಸು
Image Credit : Asianet News

ಸಂಖ್ಯೆಗಳಲ್ಲಿ Pixxelನ ಯಶಸ್ಸು

  • ಇದುವರೆಗೆ 9 ಅತ್ಯಾಧುನಿಕ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
  • ಜಾಗತಿಕ ಹೂಡಿಕೆದಾರರಿಂದ ಸುಮಾರು 960 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯನ್ನು ಈ ಸಂಸ್ಥೆ ಪಡೆದಿದೆ.
  • ಇಂದು ಈ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ 275ಕ್ಕೂ ಹೆಚ್ಚು ಪರಿಣಿತ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

 

ಯುವಜನತೆಗೆ ಸ್ಫೂರ್ತಿ

ಗ್ರಾಮೀಣ ಭಾಗದ ಪ್ರತಿಭೆಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವೈಸ್ ಅಹ್ಮದ್ ಅವರ ಈ ಪಯಣವೇ ಸಾಕ್ಷಿ. ಇಂಟರ್ನೆಟ್ ಇಲ್ಲದ ಬಾಲ್ಯದಿಂದ ಬಾಹ್ಯಾಕಾಶದ ಯಶಸ್ವಿ ಉದ್ಯಮಿಯವರೆಗೆ ಅವರ ಈ ಜರ್ನಿ ಸಾವಿರಾರು ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.

66
ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿ
Image Credit : Asianet News

ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿ

ತಮ್ಮ ಪೋಷಕರ ತ್ಯಾಗಕ್ಕೆ ವಿಶ್ವಮಟ್ಟದ ಸಾಧನೆಯ ಮೂಲಕ ಗೌರವ ತಂದಿರುವ ಅವೈಸ್ ಅಹ್ಮದ್, ಇಂದು ಕಾಫಿನಾಡು ಚಿಕ್ಕಮಗಳೂರಿನ ಹೆಮ್ಮೆಯ ಪುತ್ರನಾಗಿ ಹೊರಹೊಮ್ಮಿದ್ದಾರೆ. ಅವರ ಈ ಪಯಣ ಇನ್ನೂ ಎತ್ತರಕ್ಕೆ ಬೆಳೆಯಲಿ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿ ಎಂಬುದು ನಮ್ಮ ಆಶಯ.

About the Author

GM
Ganesh Mabla Gowda
ನಾಸಾ
ಇಸ್ರೋ
ಬಾಹ್ಯಾಕಾಶ ಅನ್ವೇಷಣೆ
ಚಿಕ್ಕಮಗಳೂರು

Latest Videos
Recommended Stories
Recommended image1
ಉಳೀತು ಬಡಪಾಯಿ ಜೀವ! ಭಾರೀ ಮಳೆ-ಗಾಳಿಗೆ ಪುಟ್ಟ ಮನೆ ಮೇಲೆಯೇ ಬಿದ್ದ ಬೃಹತ್ ಮರ!
Recommended image2
ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ, ಕಾಲಲ್ಲಿ ಹಾಕಿ ತುಳಿದ ಪಾಗಲ್ ಪ್ರೇಮಿ!
Recommended image3
ಗೃಹಜ್ಯೋತಿ ಸ್ಕೀಂಗೆ ಜಾತಿ, ಪಾನ್‌ ಕಾರ್ಡ್‌ ಕೇಳೋದ್ರಲ್ಲಿ ತಪ್ಪೇನಿದೆ?: ಸಚಿವ ಜಾರ್ಜ್‌
Related Stories
Recommended image1
ಟಿಕೆಟ್‌ನಲ್ಲಿ ಬೆಂಗಳೂರಿನ 1 ವರ್ಷದ ಮಗು ಏಕಾಂಗಿ ಪ್ರಯಾಣ ಎಂದು ತೋರಿಸ್ತಿತ್ತು.. ಆಮೇಲೆ?
Recommended image2
ನಾನು ಇರೋವರೆಗೂ RSS ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ -ಪ್ರಿಯಾಂಕ್ ಖರ್ಗೆ ವಾರ್ನಿಂಗ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved