15 ವರ್ಷದ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿ ಸಚಿನ್ ತೆಂಡುಲ್ಕರ್ ದಾಖಲೆ ಮುರಿದಿದ್ದಾರೆ. ಟೀಂ ಇಂಡಿಯಾದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿರುವ ಇವರು, ಅಭಿಷೇಕ್ ಶರ್ಮಾ ಅವರ ಗೆಳತಿಯ ಫೋಟೋವನ್ನು ರೀಪೋಸ್ಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಬೆಂಗಳೂರು: ವೈಭವ್ ಸೂರ್ಯವಂಶಿ ಸದ್ಯ ಏನು ಮಾಡಿದ್ರೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಠಿ ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಮನೆಮಾತಾಗಿರುವ ಬಿಹಾರ ಮೂಲದ ಆಟಗಾರ, ಇದೀಗ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎನ್ನುವ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ಇದೇ ವೈಭವ್ ಸೂರ್ಯವಂಶಿ, ಸೋಷಿಯಲ್ ಮೀಡಿಯಾದಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ನಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಪಾದಾರ್ಪಣೆ ಮಾಡುವ ಮೂಲಕ, ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಇನ್ನು ಇದೇ ವೇಳೆ, ವೈಭವ್ ಸೂರ್ಯವಂಶಿ, ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಗರ್ಲ್‌ಫ್ರೆಂಡ್ ಆಗಿರುವ ಲೈಲಾ ಫೈಸಲ್ ಅವರ ಹೆಸರಿನ ಜತೆ ವೈಭವ್ ಹೆಸರು ಥಳುಕು ಹಾಕಿಕೊಂಡಿದೆ.

ಏನೋ ಮಾಡಲು ಹೋಗಿ ವೈಭವ್ ಯಡವಟ್ಟು?

ವೈಭವ್ ಸೂರ್ಯವಂಶಿ, ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಕೊಂಚ ಆಕ್ಟೀವ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ವೈಭವ್ ಸೂರ್ಯವಂಶಿ ಟೈಮ್‌ಲೈನ್‌ನಲ್ಲಿ ಅಭಿಷೇಕ್ ಶರ್ಮಾ ಅವರ ರೋಮರ್ಡ್‌ ಗರ್ಲ್‌ಫ್ರೆಂಡ್‌ ಲೈಲಾ ಫೈಸಲ್ ಅವರ ಫೋಟೋ ಕಾಣಿಸಿಕೊಂಡಿದೆ. ಆ ಫೋಟೋವನ್ನು ತಮ್ಮ ಪ್ರೊಫೈಲ್‌ನಲ್ಲಿ ಅಭಿಷೇಕ್ ಶರ್ಮಾ ರೀಪೋಸ್ಟ್‌ ಮಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.

ಅಷ್ಟಕ್ಕೂ ಏನಾಗಿರಬಹುದು?

ಕೇವಲ 15 ವರ್ಷಕ್ಕೆ ವೈಭವ್ ಸೂರ್ಯವಂಶಿ, ಸೋಷಿಯಲ್ ಮೀಡಿಯಾದಲ್ಲಿ ಅಭಿಷೇಕ್ ಶರ್ಮಾ ಅವರ ಗರ್ಲ್‌ಫ್ರೆಂಡ್ ಎನ್ನಲಾದ ಲೈಲಾ ಫೈಸಲ್ ಫೋಟೋ ರೀಪೋಸ್ಟ್‌ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಹಲವು ತಮಾಷೆಗಳಿಗೆ ಸಾಕ್ಷಿಯಾಗಿದೆ. ಈ ಪೈಕಿ ಓರ್ವ ನೆಟ್ಟಿಗ, ವೈಭವ್ ಸೂರ್ಯವಂಶಿ, ಲೈಲಾ ಫೈಸಲ್ ಅವರ ಪ್ರೊಫೈಲ್ ಚೆಕ್ ಮಾಡಲು ಹೋಗಿ, ಮಿಸ್ಟೇಕ್‌ ಆಗಿ ರೀಲ್ಸ್ ರೀಪೋಸ್ಟ್‌ ಮಾಡಿರಬೇಕು ಎಂದು ತಮಾಷೆ ಮಾಡಿದ್ದಾರೆ.

Scroll to load tweet…

15ರ ವೈಭವ್‌ ಭಾರತದ ಪರ ಕಣಕ್ಕೆ: ಸಚಿನ್ ದಾಖಲೆ ಭಗ್ನ

15 ವರ್ಷದ ಯುವ ಕ್ರಿಕೆಟಿಗ ವೈಭವ್‌ ಸೂರ್ಯವಂಶಿ ಹಲವು ದಿನಗಳ ಕಾಯುವಿಕೆ ಬಳಿಕ ಕೊನೆಗೂ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಟೀಂ ಇಂಡಿಯಾ ಪರ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ 37 ವರ್ಷಗಳ ಕಾಲ ಸಚಿನ್‌ ತೆಂಡುಲ್ಕರ್‌ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

15 ವರ್ಷ, 99 ದಿನ ಪ್ರಾಯದ ವೈಭವ್‌ ಶನಿವಾರ ಇಂಗ್ಲೆಂಡ್‌ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಈ ಹಿಂದೆ ಸಚಿನ್‌ ತೆಂಡುಲ್ಕರ್‌ 1989ರಲ್ಲಿ ತಮಗೆ 16 ವರ್ಷ 205 ದಿನಗಳಾಗಿದ್ದಾಗ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಭಾರತ ತಂಡದ ಪರ ಆಡಿದ್ದರು. ಇನ್ನು, ಶಫಾಲಿ ವರ್ಮಾ 15 ವರ್ಷ, 8 ತಿಂಗಳಾಗಿದ್ದಾಗ ಭಾರತ ಮಹಿಳಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಸದ್ಯ ವೈಭವ್‌ ಇವರಿಬ್ಬರನ್ನೂ ಹಿಂದಿಕ್ಕಿದ್ದಾರೆ.

ವಿಶ್ವದ 2ನೇ ಅತಿ ಕಿರಿಯ:

ಐಸಿಸಿ ಪೂರ್ಣ ಸದಸ್ಯ ದೇಶಗಳ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 2ನೇ ಅತಿ ಕಿರಿಯ ಕ್ರಿಕೆಟಿಗ ವೈಭವ್‌. ಪಾಕಿಸ್ತಾನದ ಹಸನ್‌ ರಜಾ 1996ರಲ್ಲಿ ತಮಗೆ 14 ವರ್ಷ, 227 ದಿನಗಳಾಗಿದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದರು. ಅವರು 15 ವರ್ಷ ಪೂರ್ಣಗೊಳ್ಳುವ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಮೊದಲ ಆಟಗಾರ.