ಪೆಹಲ್ಗಾಂ ಉಗ್ರರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಯೊಬ್ಬರ ಪುತ್ರಿ ಇತ್ತೀಚೆಗೆ ದುರಂತ ನೆನೆದು ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋಗೆ ಉಗ್ರರ ದಾಳಿ ಸಮರ್ಥಿಸಿ ಕಮೆಂಟ್ ಮಾಡಿದ್ದ ಯುವಕನನ್ನು ಪೊಲೀಸ್ ಬಂಧಿಸಿದ್ದಾರೆ.
ತಿರುವಂತನಪುರಂ (ಜು.04) ಪೆಹಲ್ಗಾಂ ಉಗ್ರ ದಾಳಿಯನ್ನು ಇಡೀ ಭಾರತ ಖಂಡಿಸಿದೆ. ಈ ದಾಳಿ ಬಳಿಕ ಪಾಕಿಸ್ತಾನ ವಿರುದ್ದ ಭಾರತೀಯ ಆಕ್ರೋಶ ತೀವ್ರಗೊಂಡಿದೆ. ಈ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಧರ್ಮ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಕೇರಳದ 65 ವರ್ಷದ ಎನ್ ರಾಮಚಂದ್ರನ್ ಮೃತಪಟ್ಟಿದ್ದರು. ಇತ್ತೀಚೆಗೆ ರಾಮಚಂದ್ರನ ಪುತ್ರಿ ಪೆಹಲ್ಗಾಂ ದಾಳಿ ನೆನೆದು ವಿಡಿಯೋ ಒಂದು ಪೋಸ್ಟ್ ಮಾಡಿದ್ದರು. ಈ ವಿಡಿಯೋಗೆ ಕೇರಳದ 26ರ ಯುವಕ ಮೊಹಮ್ಮದ್ ಸನೂಫ್ ಉಗ್ರ ದಾಳಿ ಸಮರ್ಥಿಸಿ ಕಮೆಂಟ್ ಹಾಕಿದ್ದರು. ಇದೀಗ ಈ ಯುವಕನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಮಾನ ನಿಲ್ದಾಣದಲ್ಲೇ ಬಂಧನ
ಶೇಕಡಾ 100ರಷ್ಟು ಸಾಕ್ಷರತೆಯ ಕೇರಳದ ಯುವಕ ಮೊಹಮ್ಮದ್ ಸನೂಫ್ ಅರಬ್ ರಾಷ್ಟ್ರದಲ್ಲಿದ್ದು ಕಮೆಂಟ್ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ಕಮೆಂಟ್ ಮಾಡಿ ತನ್ನ ಶೂರತ್ವ ಮೆರೆದಿದ್ದ. ಆದರೆ ಈ ಕುರಿತು ಕೇರಳ ಬಿಜೆಪಿ ಯುವ ಮೋರ್ಚಾ ದೂರು ನೀಡಿತ್ತು. ಇತ್ತ ಯುವಕ ಸೌದಿಯಲ್ಲಿದ್ದ ಕಾರಣ ತನ್ನನ್ನ ಏನು ಮಾಡಲು ಸಾಧ್ಯವಿಲ್ಲ ಎಂದು ಹಿರಿ ಹಿರಿ ಹಿಗ್ಗಿದ್ದ. ಕೆಲ ದಿನಗಳ ಬಳಿಕ ಈ ಪ್ರಕರಣ ತಣ್ಣಗಾಗಿದೆ. ಇದರ ನಡುವೆ ದುಬೈನಿಂದ ಆಗಮಿಸಿದ ಯುವಕನನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿದೆ.
ಮೊಹಮ್ಮದ್ ಸನೂಫ್ ಬಂಧಿಸಿದ ಪೊಲೀಸರು UAPA ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈತನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಈತನ ಮೊಬೈಲ್‌ನಲ್ಲಿ ಉಗ್ರರ ಸಮರ್ಥಿಸಿರುವ ಹಲವು ಪೋಸ್ಟ್‌ಗಳು, ಬರಹಗಳು ಪತ್ತೆಯಾಗಿದೆ. ಹೀಗಾಗಿ ಪ್ರಕರಣದ ಗಂಭೀರತೆ ಅರಿತ ಪೊಲೀಸರು UAPA ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೇಶದ್ರೋಹಕ್ಕೆ ಸಂಚು, ದ್ವೇಷ ಬಿತ್ತನೆ, ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲೆ ಬಿದ್ದಿದೆ.
ಇದೀಗ ಪೊಲೀಸರು ಈತನಿಗೆ ಉಗ್ರರೊಂದಿಗೆ ಸಂಪರ್ಕವಿದೆಯಾ ಅನ್ನೋ ಕುರಿತು ತನಿಖೆ ನಡಸೆುತ್ತಿದ್ದಾರೆ. ಧಾರ್ಮಿಕ ಗುಂಪುಗಳು, ಸಂಘಟನೆಗಳ ನಡುವೆ ವಿಷ ಬೀಜ ಬಿತ್ತಿ ಸಂಘರ್ಷಕ್ಕೆ ಎಡೆ ಮಾಡಿಕೊಡಲು ತಯಾರಿ ನಡೆಸಿದ್ದ ಎನ್ನಾಲಗುತ್ತಿದೆ. ಹೀಗಾಗಿ ಈತನ ವಿಚಾರಣೆ ತೀವ್ರಗೊಳಿಸಲಾಗಿದೆ.


