ಶ್ರೀಲಂಕಾದ ಬೆರುವಾಲಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ, 46 ವರ್ಷದ ಆಟಗಾರ ಝುಲ್ಫಿಕರ್ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆಯು ಪಂದ್ಯದ ನೇರ ಪ್ರಸಾರದ ವೇಳೆ ನಡೆದಿದ್ದು, ಹೃದಯಘಾತದಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಕೊಲಂಬೊ: ಸಾವು ಎನ್ನುವುದು ಹೇಗೆಲ್ಲಾ ಬರುತ್ತೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಖುಷಿ ಖುಷಿಯಿಂದ ಕ್ರಿಕೆಟ್ ಮೈದಾನದಲ್ಲಿ ಆಡುತ್ತಿದ್ದ ಶ್ರೀಲಂಕಾದ ಹಿರಿಯ ಆಟಗಾರನ ಪ್ರಾಣಪಕ್ಷಿ ಹಾರಿ ಹೋಗಿದೆ. ಲಂಕಾದ 46 ವರ್ಷದ ಆಟಗಾರನೊಬ್ಬ ಮೈದಾನದಲ್ಲೇ ಕುಸಿದು ಬಿಟ್ಟು ಪ್ರಾಣಬಿಟ್ಟಿರುವ ಆಘಾತಕಾರಿ ಘಟನೆ ಇದೀಗ ಬೆಳಕಿಗೆ ಬಂದಿದೆ. ಶಾಲೆಯೊಂದರ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ವೇಳೆಯಲ್ಲಿ ಈ ದುರಂತ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈರ್‌ ನ್ಯೂಸ್ ವರದಿಯ ಪ್ರಕಾರ, ಬ್ಯಾಟಿಂಗ್ ಮಾಡುತ್ತಿದ್ದ ಆಟಗಾರ ಮೂರು ಎಸೆತಗಳನ್ನು ಎದುರಿಸಿ ಆರು ರನ್ ಗಳಿಸಿದ್ದ. ಈ ವೇಳೆ ಬ್ಯಾಟರ್ ಇದ್ದಕ್ಕಿದ್ದಂತೆಯೇ ಪಿಚ್‌ನಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮೈದಾನದಲ್ಲಿದ್ದ ಎಲ್ಲಾ ಆಟಗಾರರು ಬ್ಯಾಟರ್‌ನತ್ತ ಓಡಿದ್ದಾರೆ. ತಕ್ಷಣವೇ ವೈದ್ಯಕೀಯ ತಂಡವು ಮೈದಾನದತ್ತ ಓಡಿ ಬಂದಿದೆ. ಇದಾಗಿ ಕೆಲ ಸಮಯದಲ್ಲೇ ಆ ಬ್ಯಾಟರ್‌ನನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ವೈದ್ಯರು ಆ ಆಟಗಾರ ಸಾವನ್ನಪ್ಪಿರುವ ವಿಚಾರವನ್ನು ಖಚಿತಪಡಿಸಿದರು. ಈ ಪಂದ್ಯವು ಆನ್‌ಲೈನ್‌ನಲ್ಲಿ ನೇರ ಪ್ರಸಾರವಾಗುತ್ತಿತ್ತು. ಶ್ರೀಲಂಕಾದ ಬೆರುವಾಲಾದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಹೀಗಿದೆ ನೋಡಿ ಆ ವೈರಲ್ ವಿಡಿಯೋ:

Scroll to load tweet…

ಆ ಆಟಗಾರನಿಗೆ ಏನಾಗಿರಬಹುದು?

ಮಾಥ್ಯಮಗಳ ಪ್ರಾಥಮಿಕ ವರದಿಗಳ ಪ್ರಕಾರ, 46 ವರ್ಷದ ಆ ಆಟಗಾರನಿಗೆ ಹೃದಯಘಾತ ಸಂಭವಿಸಿರಬಹುದು ಎಂದು ಊಹಿಸಲಾಗುತ್ತಿದೆ. ಆದರೆ ಈ ಕುರಿತಂತೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬೆರುವಾಲಾದಲ್ಲಿ ನಡೆದ ಈ ದುರ್ಘಟನೆ ಇಡೀ ಶ್ರೀಲಂಕಾದ ಕ್ರಿಕೆಟ್ ವಲಯ ಒಂದು ರೀತಿ ಆಘಾತಕ್ಕೊಳಗಾಗಿದ್ದು, ಕಂಬನಿ ಮಿಡಿದಿದೆ.

ಬೆರುವಾಲಾದಲ್ಲಿ ಸಾವನ್ನಪ್ಪಿದ ಕ್ರಿಕೆಟಿಗ ಯಾರು?

ಬೆರುವಾಲಾದಲ್ಲಿ ಸಾವನ್ನಪ್ಪಿದ 46 ವರ್ಷದ ಆಟಗಾರನ ಹೆಸರು ಝುಲ್ಫಿಕರ್. ಲೈವ್ ಸ್ಕೋರ್‌ಕಾರ್ಡ್ ವರದಿ ಪ್ರಕಾರ, ಝುಲ್ಫಿಕರ್ ಆಡುತ್ತಿದ್ದಾಗ ಅವರ ತಂಡದ ಸ್ಕೋರ್ 3.4 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 37 ರನ್‌ಗಳಾಗಿದ್ದವು. ಈ ದುರ್ಘಟನೆ ನಡೆಯುತ್ತಿದ್ದಂತೆಯೇ, ಈ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.