MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಮರಳಲ್ಲಿ ಹೂತಿದ್ದ 1700 ವರ್ಷಗಳ ನಗರ ಪತ್ತೆ; ಚಿನ್ನದ ನಾಲಿಗೆ, ಓವನ್ ಮಾದರಿ ಒಲೆ ಪತ್ತೆ

ಮರಳಲ್ಲಿ ಹೂತಿದ್ದ 1700 ವರ್ಷಗಳ ನಗರ ಪತ್ತೆ; ಚಿನ್ನದ ನಾಲಿಗೆ, ಓವನ್ ಮಾದರಿ ಒಲೆ ಪತ್ತೆ

ಪುರಾತತ್ತ್ವಜ್ಞರು ಸುಮಾರು 1700 ವರ್ಷಗಳಷ್ಟು ಹಳೆಯ, ಸಂಪೂರ್ಣವಾಗಿ ಹೂತುಹೋಗಿದ್ದ ನಗರವನ್ನು ಪತ್ತೆ ಮಾಡಿದ್ದಾರೆ. ಸುಸಜ್ಜಿತ ಮನೆಗಳು, ಚರ್ಚ್‌ಗಳನ್ನು ಹೊಂದಿದ್ದ ಈ ನಗರದ ಸಮಾಧಿಗಳಲ್ಲಿ ಚಿನ್ನದ ನಾಲಿಗೆಗಳು ಕಂಡುಬಂದಿದ್ದು, ಇದು ಸಾವಿನ ನಂತರದ ಬದುಕಿನ ನಂಬಿಕೆಗಳ ಬಗ್ಗೆ ಕುತೂಹಲ ಮೂಡಿಸಿದೆ.

2 Min read
Author : Mahmad Rafik
Published : Jul 06 2026, 08:46 AM IST
Share this Photo Gallery
  • FB
  • TW
  • Linkdin
  • Whatsapp
15
ಸುಮಾರು 1700 ವರ್ಷಗಳಷ್ಟು ಹಳೆಯ ನಗರ ಪತ್ತೆ
Image Credit : Ministry of Tourism and Antiquities

ಸುಮಾರು 1700 ವರ್ಷಗಳಷ್ಟು ಹಳೆಯ ನಗರ ಪತ್ತೆ

ಸುಮಾರು 1700 ವರ್ಷಗಳಷ್ಟು ಹಳೆಯದಾದ ನಗರವೊಂದನ್ನು ಪುರಾತತ್ತ್ವಜ್ಞರು ಪತ್ತೆ ಮಾಡಿದ್ದಾರೆ. ಮರಭೂಮಿಯ ಮರಳಿನಲ್ಲಿ ನಗರವೊಂದು ಸಂಪೂರ್ಣವಾಗಿ ಹೂತು ಆಗಿತ್ತು ಎಂಬ ವಿಷಯ ತಿಳಿದು ಇಡೀ ವಿಶ್ವ ಆಶ್ಚರ್ಯಗೊಂಡಿದೆ. ಪತ್ತೆಯಾಗಿರುವ ನಗರವನ್ನು 4ನೇ ಶತಮಾನದ ಈಜಿಪ್ಟ್‌ನ ಬೈಜಾಂಟೈನ್ ಎಂದು ಗುರುತಿಸಲಾಗಿದೆ. ಇಲ್ಲಿಯ ಸಮಾಧಿಗಳಲ್ಲಿ ಚಿನ್ನದ ನಾಲಿಗೆ ಕಂಡು ಬಂದಿರೋದು ಈ ನಗರದ ಕುರಿತು ಕುತೂಹಲ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ದಖ್ಲಾ ಓಯಸಿಸ್‌ನಲ್ಲಿ ಸುಸಜ್ಜಿತ ಸಂಘಟಿತ ನಗರ
Image Credit : Ministry of Tourism and Antiquities

ದಖ್ಲಾ ಓಯಸಿಸ್‌ನಲ್ಲಿ ಸುಸಜ್ಜಿತ ಸಂಘಟಿತ ನಗರ

ದಿ ಗಾರ್ಡಿಯನ್ ವರದಿ ಪ್ರಕಾರ, ದಖ್ಲಾ ಓಯಸಿಸ್‌ನಲ್ಲಿ ಬೈಜಾಂಟೈನ್ ನಗರವನ್ನು ಪತ್ತೆ ಮಾಡಲಾಗಿದೆ. ಇದೊಂದು ಸುಸಜ್ಜಿತ ಸಂಘಟಿತ ನಗರವಾಗಿತ್ತು ಎಂದು ತಜ್ಞರು ಉಲ್ಲೇಖಿಸಿದ್ದಾರೆ. ಸುಸಜ್ಜಿತ ಮನೆಗಳು, ವಸತಿ ಪ್ರದೇಶಗಳಲ್ಲಿ ಪ್ರಮುಖ ಬೀದಿಗಳು, ದೊಡ್ಡದಾದ ಚರ್ಚ್ ಸೇರಿದಂತೆ ಹಲವು ಅವಶೇಷಗಳು ಬೈಜಾಂಟನ್ ನಗರದ ಭವ್ಯತೆಯನ್ನು ಬಹಿರಂಗಪಡಿಸುತ್ತಿವೆ. ಈ ಪ್ರದೇಶದಲ್ಲಿ ನಾಲ್ಕನೇ ಶತಮಾನದಲ್ಲಿಯೇ ಸುಧಾರಿತ ಮಾದರಿಯಲ್ಲಿ ಗೋಡೆಗಳ ನಿರ್ಮಾಣ ಮತ್ತು ಗುಮ್ಮಟ ಆಕಾರ ಛಾವಣಿಗಳು ಆ ಯುಗದ ಎಂಜಿನಿಯರಿಂಗ್ ಕೌಶಲ್ಯವನ್ನು ಹೇಳುತ್ತಿವೆ.

Related Articles

Related image1
ಲಕ್ಕುಂಡಿ ಉತ್ಖನನ: ಮನೆಯೊಳಗೆ ಪತ್ತೆಯಾಯ್ತು 10ನೇ ಶತಮಾನದ ಈಶ್ವರ ದೇಗುಲ; ಪುರಾತತ್ವ ಇಲಾಖೆ ಫುಲ್ ಖುಷ್!
Related image2
ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನ ನಿಧಿಯಲ್ಲ ಎಂದ ಪುರಾತತ್ವ ಇಲಾಖೆ, ಕುಟುಂಬಕ್ಕೆ ಸಂಕಷ್ಟ! ಬಂಗಾರ ಮರಳಿಸುವಂತೆ ಊರವರ ಆಗ್ರಹ
35
ಓವನ್ ಶೈಲಿಯ ಒಲೆಗಳು, ರುಬ್ಬುವ ಕಲೆ
Image Credit : Ministry of Tourism and Antiquities

ಓವನ್ ಶೈಲಿಯ ಒಲೆಗಳು, ರುಬ್ಬುವ ಕಲೆ

ಇಷ್ಟು ಮಾತ್ರವಲ್ಲ ಇಂದಿನ ಓವನ್ ಶೈಲಿಯ ಒಲೆಗಳು, ರುಬ್ಬುವ ಕಲ್ಲುಗಳನ್ನು ಸಹ ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಉತ್ಖನನದಲ್ಲಿ ಕ್ರಿ.ಶ. 337 ರಿಂದ 361 ರ ನಡುವೆ ಆಳ್ವಿಕೆ ನಡೆಸಿದ ರೋಮನ್ ಚಕ್ರವರ್ತಿ ಕಾನ್ಸ್ಟಾಂಟಿಯಸ್ II ರ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ವರದಿಯಾಗಿದೆ.ಆಸ್ಟ್ರಾಕಾ ಎಂದು ಕರೆಯಲ್ಪಡುವ ಸುಮಾರು 200 ಜೇಡಿಮಣ್ಣಿನ ತುಣುಕುಗಳು ಪತ್ತೆಯಾಗಿದ್ದು, ಇಲ್ಲಿ ಜನರು ತಮ್ಮ ವ್ಯವಹಾರದ ದಾಖಲೆಗಳನ್ನು ಇರಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ. ನಗರದ ಸುತ್ತಲೂ ಕಾವಲು ಗೋಪುರ, ಪ್ರವೇಶ ದ್ವಾರಗಳು ಅಂದಿನ ಜನರು ಸುರಕ್ಷತೆಗೆ ತೆಗೆದುಕೊಂಡ ಮುಂಜಾಗ್ರತ ಕ್ರಮಗಳನ್ನು ವಿವರಿಸುತ್ತದೆ.

45
ಚಿನ್ನದ ನಾಲಿಗೆಯ ರಹಸ್ಯ
Image Credit : Ministry of Tourism and Antiquities

ಚಿನ್ನದ ನಾಲಿಗೆಯ ರಹಸ್ಯ

ಅಲೆಕ್ಸಾಂಡ್ರಿಯಾ ಬಳಿಯ ಮರೀನಾ ಎಲ್-ಅಲಮೈನ್‌ನಲ್ಲಿ ಹದಿನೆಂಟು ಹೊಸ ಸಮಾಧಿಗಳು ಪತ್ತೆಯಾಗಿದ್ದು, ಉತ್ಖನನದಲ್ಲಿ ಹೊಸ ತಿರುವು ನೀಡಿದೆ. ಈ ಪ್ರದೇಶದಲ್ಲಿ ಕಂಡು ಬಂದ ಅಸ್ಥಿಪಂಜರಗಳು ಬಾಯಿಯಲ್ಲಿ ಚಿನ್ನದ ನಾಲಿಗೆಗಳು ಪತ್ತೆಯಾಗಿವೆ. ಸಾವಿನ ನಂತರ ದೇವರುಗಳೊಂದಿಗೆ ಸಂವಹನ ನಡೆಸಲು ಚಿನ್ನದ ನಾಲಿಗೆಗಳನ್ನು ನೀಡಲಾಗಿತ್ತು ಎಂಬ ನಂಬಿಕೆ ಹಿನ್ನೆಲೆ ಈ ರೀತಿಯಾಗಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

55
ಮರಭೂಮಿಯಲ್ಲಿ ಬದುಕು ಕಟ್ಟಿಕೊಂಡ ಜನರ ಕಥೆ
Image Credit : Ministry of Tourism and Antiquities

ಮರಭೂಮಿಯಲ್ಲಿ ಬದುಕು ಕಟ್ಟಿಕೊಂಡ ಜನರ ಕಥೆ

ಆದ್ರೆ ಈ ಆಚರಣೆ ಕುರಿತು ಯಾವುದೇ ಸ್ಪಷ್ಟತೆಗಳಿಲ್ಲ. ಹಾಗೆಯೇ ಇಲ್ಲಿಯ ಸ್ಫಿಂಕ್ಸ್ ಪ್ರತಿಮೆ ಅನೇಕ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈಜಿಪ್ಟ್‌ನಲ್ಲಿನ ಈ ಆವಿಷ್ಕಾರವು ಕೇವಲ ಹಳೆಯ ಇಟ್ಟಿಗೆಗಳಲ್ಲ, ಬದಲಾಗಿ ಸಾವಿರಾರು ವರ್ಷಗಳ ಹಿಂದೆ ಮರುಭೂಮಿಯನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡ ಜನರ ಕಥೆಯಾಗಿದೆ. ಈ ಆವಿಷ್ಕಾರವು ಶತಮಾನಗಳಿಂದ ಹೂತುಹೋಗಿದ್ದ ಇತಿಹಾಸದ ಪುಟಗಳನ್ನು ಬಹಿರಂಗಗೊಳಿಸಿದೆ. ಇಂದಿಗೂ ಈ ಭಾಗದಲ್ಲಿ ಉತ್ಖನನ ಮುಂದುವರಿದಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಪುರಾತತ್ವ ಇಲಾಖೆ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಜೀವಂತ ಇದ್ದಾರಾ ಇರಾನ್ ಸುಪ್ರೀಂ ಲೀಡರ್? ಅಲ್ ಖಮೇನಿ ಅಂತ್ಯಕ್ರಿಯೆಲ್ಲಿ ಪುತ್ರರ ಪೈಕಿ ಮೊಜ್ತಾಬ ಗೈರು
Recommended image2
ಡಾಲರ್ ನಾಡಲ್ಲಿ ಭಾರತದ ದೇಸಿ ಸೊಗಡಿಗಾಗಿ ಮುಗಿಬಿದ್ದ ಜನ: ಇದು ನಮ್ಮ ತಾಕತ್ತು ಅಂತಿರೋ ಭಾರತೀಯರು
Recommended image3
ಇತಿಹಾಸದಲ್ಲೇ 5 ಅತ್ಯಂತ ದುಬಾರಿ ಅಂತ್ಯಕ್ರಿಯೆಗಳಿವು! ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ, ಅಲಿ ಖಮೇನಿ ಸ್ಥಾನ ಎಷ್ಟು?
Related Stories
Recommended image1
ಲಕ್ಕುಂಡಿ ಉತ್ಖನನ: ಮನೆಯೊಳಗೆ ಪತ್ತೆಯಾಯ್ತು 10ನೇ ಶತಮಾನದ ಈಶ್ವರ ದೇಗುಲ; ಪುರಾತತ್ವ ಇಲಾಖೆ ಫುಲ್ ಖುಷ್!
Recommended image2
ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನ ನಿಧಿಯಲ್ಲ ಎಂದ ಪುರಾತತ್ವ ಇಲಾಖೆ, ಕುಟುಂಬಕ್ಕೆ ಸಂಕಷ್ಟ! ಬಂಗಾರ ಮರಳಿಸುವಂತೆ ಊರವರ ಆಗ್ರಹ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved