MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • ಟ್ರಕ್‌ ಹಿಂದೆ ಬರೆಯೋ 'Use Dipper At Night' ಬರಹಕ್ಕೂ ಕಾಂಡೋಮ್‌ಗೆ ಅವಿನಾಭವ ಸಂಬಂಧ

ಟ್ರಕ್‌ ಹಿಂದೆ ಬರೆಯೋ 'Use Dipper At Night' ಬರಹಕ್ಕೂ ಕಾಂಡೋಮ್‌ಗೆ ಅವಿನಾಭವ ಸಂಬಂಧ

ಟ್ರಕ್‌ಗಳ ಮೇಲಿನ 'Use Dipper At Night' ಘೋಷಣೆಯು ರಾತ್ರಿ ವೇಳೆ ಸುರಕ್ಷಿತ ಡ್ರೈವಿಂಗ್‌ಗಾಗಿ ಲೋ ಬೀಮ್ ಲೈಟ್ ಬಳಸಲು ಸೂಚಿಸುತ್ತದೆ. ಇದಲ್ಲದೆ, 2016ರಲ್ಲಿ ಟ್ರಕ್ ಡ್ರೈವರ್‌ಗಳಲ್ಲಿ ಎಚ್‌ಐವಿ/ಏಡ್ಸ್ ಜಾಗೃತಿ ಮೂಡಿಸಲು ಇದೇ ಹೆಸರಿನಲ್ಲಿ 'ಡಿಪ್ಪರ್' ಕಾಂಡೋಮ್ ಬ್ರ್ಯಾಂಡ್ ಅನ್ನು ಪರಿಚಯಿಸಲಾಗಿತ್ತು. 

2 Min read
Author : Mahmad Rafik
Published : Jul 06 2026, 10:25 AM IST
Share this Photo Gallery
  • FB
  • TW
  • Linkdin
  • Whatsapp
16
Use Dipper At Night ಘೋಷಣೆ
Image Credit : Gemini

Use Dipper At Night ಘೋಷಣೆ

ರಾತ್ರಿ ಹೊತ್ತು ಸುರಕ್ಷಿತವಾಗಿ ಡ್ರೈವಿಂಗ್ ಮಾಡಲಿ ಅನ್ನೋ ಉದ್ದೇಶದಿಂದ ಟ್ರಕ್‌ಗಳ ಮೇಲೆ Use Dipper At Night ಘೋಷಣೆಯನ್ನು ಬರೆಯಲು ಶುರುಮಾಡಿದರು. ವಾಹನಗಳಲ್ಲಿ 'ಡಿಪ್ಪರ್' ಅಂದ್ರೆ ಹೆಡ್‌ಲೈಟ್‌ನ ಲೋ ಬೀಮ್ ಸೆಟ್ಟಿಂಗ್. ರಾತ್ರಿ ವೇಳೆ ಎದುರಿಗೆ ವಾಹನ ಬಂದಾಗ, ಹೈ ಬೀಮ್ ಲೈಟ್ ಆಫ್ ಮಾಡಿ ಲೋ ಬೀಮ್‌ಗೆ ಬದಲಾಯಿಸಬೇಕು. ಹೀಗೆ ಮಾಡಿದರೆ ಎದುರಿಗಿರೋ ಡ್ರೈವರ್ ಕಣ್ಣಿಗೆ ಲೈಟ್ ಹೊಡೆಯುವುದಿಲ್ಲ, ಇದರಿಂದ ಅಪಘಾತಗಳೂ ಕಡಿಮೆಯಾಗುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
2016ರಲ್ಲಿ ಈ ಘೋಷಣೆಗೆ ಒಂದು ವಿಶೇಷ ಅರ್ಥ
Image Credit : Gemini

2016ರಲ್ಲಿ ಈ ಘೋಷಣೆಗೆ ಒಂದು ವಿಶೇಷ ಅರ್ಥ

ದೇಶದಾದ್ಯಂತ ಟ್ರಕ್ ಡ್ರೈವರ್‌ಗಳಲ್ಲಿ ಎಚ್‌ಐವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸುರಕ್ಷಿತ ಲೈಂಗಿಕತೆಯ ಬಗ್ಗೆ ತಿಳಿಸಲು ಟಾಟಾ ಮೋಟರ್ಸ್ ಹಾಗೂ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ವಿಶೇಷ ಅಭಿಯಾನವೊಂದನ್ನು ಶುರುಮಾಡಿದವು. ಟ್ರಕ್ ಡ್ರೈವರ್‌ಗಳಿಗೆ 'Use Dipper At Night' ಘೋಷಣೆ ಮೊದಲೇ ಗೊತ್ತಿದ್ದರಿಂದ, ಅದೇ ಹೆಸರಲ್ಲಿ 'ಡಿಪ್ಪರ್' ಅನ್ನೋ ಕಾಂಡೋಮ್ ಬ್ರ್ಯಾಂಡ್ ಪರಿಚಯಸಲಾಯ್ತು. ಹೀಗೆ ರಸ್ತೆ ಸುರಕ್ಷತೆಯ ಸಂದೇಶವನ್ನು ಸಾರ್ವಜನಿಕ ಆರೋಗ್ಯ ಜಾಗೃತಿಯೊಂದಿಗೆ ಜೋಡಿಸಲಾಯ್ತು.

Related Articles

Related image1
ಚೀಟಿ ಕೊಟ್ಟು ಕಾಂಡೋಮ್ ತರೋದಕ್ಕೆ ಮೆಡಿಕಲ್ ಶಾಪ್‌ಗೆ ಮಗನನ್ನು ಕಳಹಿಸಿದ ತಂದೆ: ವಿಡಿಯೋ
Related image2
ಬಾಲ್ಕನಿ ಹೂವಿನ ಕುಂಡದಲ್ಲಿ ಫ್ಲೈಯಿಂಗ್ ಕಾಂಡೋಮ್; ನಿಮ್ಮ ಶೃಂಗಾರದ ಕುರುಹು ಬೇಡ ಎಂದ ಮಾಲೀಕ
36
ಮೂರು ಕಾಂಡೋಮ್ ಹೊಂದಿರುವ ಒಂದು ಪ್ಯಾಕ್‌ಗೆ 2 ರೂಪಾಯಿ
Image Credit : Gemini

ಮೂರು ಕಾಂಡೋಮ್ ಹೊಂದಿರುವ ಒಂದು ಪ್ಯಾಕ್‌ಗೆ 2 ರೂಪಾಯಿ

ಈ ಅಭಿಯಾನವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, 'ಡಿಪ್ಪರ್' ಹೆಸರಿನ ಕಾಂಡೋಮ್‌ಗಳನ್ನು ಜನರಿಗೆ ತುಂಬಾನೇ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದರು. ಮೂರು ಕಾಂಡೋಮ್‌ಗಳಿದ್ದ ಒಂದು ಪ್ಯಾಕ್‌ಗೆ ಕೇವಲ 2 ರೂಪಾಯಿ ನಿಗದಿಪಡಿಸಲಾಯ್ತು. ಈ ಅಭಿಯಾನ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

46
ಡಾಬಾ, ಪೆಟ್ರೋಲ್ ಬಂಕ್‌, ಟೈರ್ ಅಥವಾ ಪಂಕ್ಚರ್ ಅಂಗಡಿಗಳಲ್ಲಿ ಕಾಂಡೋಮ್ ಮಾರಾಟ
Image Credit : Gemini

ಡಾಬಾ, ಪೆಟ್ರೋಲ್ ಬಂಕ್‌, ಟೈರ್ ಅಥವಾ ಪಂಕ್ಚರ್ ಅಂಗಡಿಗಳಲ್ಲಿ ಕಾಂಡೋಮ್ ಮಾರಾಟ

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಡಾಬಾ, ಪೆಟ್ರೋಲ್ ಬಂಕ್‌, ಟೈರ್ ಅಥವಾ ಪಂಕ್ಚರ್ ಅಂಗಡಿಗಳು ಮತ್ತು ಗ್ಯಾರೇಜ್‌ಗಳಂತಹ ಕಡೆಗಳಲ್ಲಿ ಡಿಪ್ಪರ್ ಹೆಸರಿನ ಕಾಂಡೋಮ್‌ಗಳನ್ನು ಮಾರಾಟಕ್ಕೀಡಲಾಯ್ತು. ಈ ಮೂಲಕ ಸುರಕ್ಷಿತ ಲೈಂಗಿಕ ಜೀವನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯ್ತು.

56
ಆರೋಗ್ಯ ಜಾಗೃತಿ
Image Credit : Gemini

ಆರೋಗ್ಯ ಜಾಗೃತಿ

'Use Dipper At Night' ಅನ್ನೋ ಘೋಷಣೆಯನ್ನು ಮುಖ್ಯವಾಗಿ ರಾತ್ರಿ ಡ್ರೈವಿಂಗ್‌ನಲ್ಲಿ ಲೋ ಬೀಮ್ ಲೈಟ್ ಬಳಸಬೇಕು ಅನ್ನೋ ಸೂಚನೆಗಾಗಿಯೇ ರೂಪಿಸಲಾಗಿತ್ತು. ಆದರೆ ನಂತರ ಅದೇ ಘೋಷಣೆಯನ್ನು ಸಾರ್ವಜನಿಕ ಆರೋಗ್ಯ ಅಭಿಯಾನಕ್ಕೂ ಬಳಸಿಕೊಂಡಿದ್ದು ವಿಶೇಷ. ಈ ಅಭಿಯಾನದ ಮೂಲಕ, ಒಂದು ಸಾಮಾನ್ಯ ರಸ್ತೆ ಸುರಕ್ಷತಾ ಸಂದೇಶವನ್ನು ಬದಲಿಸದೆ, ಅದೇ ಪದಗಳಿಂದ ಆರೋಗ್ಯ ಜಾಗೃತಿಯನ್ನೂ ಜನರಿಗೆ ತಲುಪಿಸಬಹುದು ಅಂತ ಸಾಬೀತುಪಡಿಸಿದರು.

66
ಹೆಚ್‌ಐವಿ/ಏಡ್ಸ್ ಜಾಗೃತಿ ಅಭಿಯಾನ
Image Credit : Gemini

ಹೆಚ್‌ಐವಿ/ಏಡ್ಸ್ ಜಾಗೃತಿ ಅಭಿಯಾನ

ಇವತ್ತಿಗೂ ದೇಶದಾದ್ಯಂತ ಹಲವಾರು ಟ್ರಕ್‌ಗಳ ಹಿಂದೆ 'Use Dipper At Night' ಅನ್ನೋ ಘೋಷಣೆ ಕಾಣಸಿಗುತ್ತದೆ. ಇದು ಡ್ರೈವರ್‌ಗಳಿಗೆ ರಾತ್ರಿ ಹೊತ್ತು ಸುರಕ್ಷಿತವಾಗಿ ಗಾಡಿ ಓಡಿಸಲು ನೆನಪಿಸುವುದಲ್ಲದೆ, ಒಂದು ಕಾಲದಲ್ಲಿ ಎಚ್‌ಐವಿ/ಏಡ್ಸ್ ಜಾಗೃತಿ ಅಭಿಯಾನದಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ಅದಕ್ಕಾಗಿಯೇ ಈ ಚಿಕ್ಕ ಘೋಷಣೆಯ ಹಿಂದೆ ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯ ಎಂಬ ಎರಡು ಮುಖ್ಯ ಸಂದೇಶಗಳು ಅಡಗಿವೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ನಿರೋಧ
ವೈರಲ್ ಸುದ್ದಿ
ಆರೋಗ್ಯ

Latest Videos
Recommended Stories
Recommended image1
ಚೀಟಿ ಕೊಟ್ಟು ಕಾಂಡೋಮ್ ತರೋದಕ್ಕೆ ಮೆಡಿಕಲ್ ಶಾಪ್‌ಗೆ ಮಗನನ್ನು ಕಳಹಿಸಿದ ತಂದೆ: ವಿಡಿಯೋ
Recommended image2
ಅರಬ್ಬಿ ಸಮುದ್ರದ ಆಳದಲ್ಲಿ ಹೊಸ ಪ್ರಭೇದದ ಮೀನು ಪತ್ತೆ; ಅಟ್ಲಾಂಟಿಕ್ ಸಾಗರದ ನಂಟು ಬಿಚ್ಚಿಟ್ಟ ವಿಜ್ಞಾನಿಗಳು!
Recommended image3
Viral News: 2 ಜೀವಂತ ಹಾವುಗಳನ್ನು ಚಪ್ಪರಿಸಿ ತಿಂದ ಪತಿರಾಯ! ಆಸ್ಪತ್ರೆಯಲ್ಲಿ ಹೆಂಡತಿ ಬಿಚ್ಚಿಟ್ಟ ಭಯಾನಕ ಕಥೆ ಏನು ಗೊತ್ತಾ!
Related Stories
Recommended image1
ಚೀಟಿ ಕೊಟ್ಟು ಕಾಂಡೋಮ್ ತರೋದಕ್ಕೆ ಮೆಡಿಕಲ್ ಶಾಪ್‌ಗೆ ಮಗನನ್ನು ಕಳಹಿಸಿದ ತಂದೆ: ವಿಡಿಯೋ
Recommended image2
ಬಾಲ್ಕನಿ ಹೂವಿನ ಕುಂಡದಲ್ಲಿ ಫ್ಲೈಯಿಂಗ್ ಕಾಂಡೋಮ್; ನಿಮ್ಮ ಶೃಂಗಾರದ ಕುರುಹು ಬೇಡ ಎಂದ ಮಾಲೀಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved