- Home
- Entertainment
- TV Talk
- Train Timing: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್: ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!
Train Timing: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್: ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!
Indian Railways Update: ರೈಲ್ವೆ ಇಲಾಖೆಯು ವಿವಿಧ ತಾಂತ್ರಿಕ / ನಿರ್ವಹಣಾ ಕಾರಣಗಳಿಂದಾಗಿ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಿದೆ. ಜುಲೈ 5, ಜುಲೈ 6, 2026 ರಂದು ಪ್ರಾರಂಭವಾಗುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ.

ರೈಲುಗಳ ಮಾರ್ಗ ಬದಲಾವಣೆ
ರೈಲು ಸಂಖ್ಯೆ 16587 (ಯಶವಂತಪುರ - ಬಿಕಾನೇರ್ ಜಂಕ್ಷನ್): ಜುಲೈ 5, 2026 ರಂದು ಪ್ರಯಾಣ ಆರಂಭಿಸುವ ಈ ರೈಲು ಇನ್ಮುಂದೆ ದೌಂಡ್ - ಮನ್ಮಾಡ್ - ಜಲಗಾಂವ್ - ಪಾಲ್ಧಿ - ಸೂರತ್ ಮಾರ್ಗವಾಗಿ ಸಂಚರಿಸಲಿದೆ.
ರೈಲು ಸಂಖ್ಯೆ 16537 (ಕೆ.ಎಸ್.ಆರ್ ಬೆಂಗಳೂರು - ಜೋಧ್‌ಪುರ): ಜುಲೈ 5, 2026 ರಂದು ಪ್ರಯಾಣ ಆರಂಭಿಸುವ ಈ ರೈಲನ್ನು ದೌಂಡ್ - ಮನ್ಮಾಡ್ - ಜಲಗಾಂವ್ - ಪಾಲ್ಧಿ - ಸೂರತ್ ಮಾರ್ಗಕ್ಕೆ ಬದಲಾಯಿಸಲಾಗಿದೆ.
ರೈಲು ಸಂಖ್ಯೆ 16588 (ಬಿಕಾನೇರ್ ಜಂಕ್ಷನ್ - ಯಶವಂತಪುರ): ಜುಲೈ 5, 2026 ರಂದು ಹೊರಡುವ ಈ ರೈಲು ಸೂರತ್ - ಪಾಲ್ಧಿ - ಜಲಗಾಂವ್ - ಮನ್ಮಾಡ್ - ದೌಂಡ್ ಮಾರ್ಗವಾಗಿ ಸಂಚರಿಸಲಿದೆ.
ರೈಲು ಸಂಖ್ಯೆ 16531 (ಅಜ್ಮೀರ್ - ಕೆ.ಎಸ್.ಆರ್ ಬೆಂಗಳೂರು): ಜುಲೈ 6, 2026 ರಂದು ಪ್ರಯಾಣ ಆರಂಭಿಸುವ ಈ ರೈಲು ಸೂರತ್ - ಪಾಲ್ಧಿ - ಮನ್ಮಾಡ್ - ದೌಂಡ್ ಕಾರ್ಡ್ ಲೈನ್ - ಪುಣೆ ಮಾರ್ಗವಾಗಿ ಚಲಿಸಲಿದೆ.
ರೈಲು ಸೇವೆ ಭಾಗಶಃ ರದ್ದು
ರೈಲು ಸಂಖ್ಯೆ 11302 (ಕೆ.ಎಸ್.ಆರ್ ಬೆಂಗಳೂರು - ಸಿ.ಎಸ್.ಎಮ್.ಟಿ ಮುಂಬೈ): ಜುಲೈ 5, 2026 ರಂದು ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಸೋಲಾಪುರ ನಿಲ್ದಾಣದಲ್ಲೇ ಕೊನೆಗೊಳಿಸಲಾಗುವುದು (ಶಾರ್ಟ್ ಟರ್ಮಿನೇಟ್). ಅಂದರೆ ಈ ರೈಲು ಸೋಲಾಪುರದಿಂದ ಮುಂಬೈ ನಡುವೆ ಸಂಚರಿಸುವುದಿಲ್ಲ.
ಭಾಗಶಃ ಆರಂಭವಾಗುವ ರೈಲು
ರೈಲು ಸಂಖ್ಯೆ 11139 (ಸಿ.ಎಸ್.ಎಮ್.ಟಿ ಮುಂಬೈ - ಹೊಸಪೇಟೆ): ಜುಲೈ 6, 2026 ರಂದು ಹೊರಡಬೇಕಿದ್ದ ಈ ರೈಲು ಮುಂಬೈ ಬದಲಿಗೆ ಖಡ್ಕಿ (Khadki) ನಿಲ್ದಾಣದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ಸೂಚನೆ: ಪ್ರಯಾಣಿಕರು ಅನಾನುಕೂಲತೆಯನ್ನು ತಪ್ಪಿಸಲು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ರೈಲ್ವೆ ಇಲಾಖೆಯ ಅಧಿಕೃತ ಹೆಲ್ಪ್‌ಲೈನ್ ಅಥವಾ ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿ ಹಾಗೂ ನಿಖರವಾದ ಸಮಯವನ್ನು ಖಚಿತಪಡಿಸಿಕೊಳ್ಳಲು ಕೋರಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

