Jio ಹಣೆಯಲ್ಲಿ ಬೆವರು ತರಿಸಿದ ಕೇವಲ 225 ರೂ. ಪ್ಲಾನ್; ಕಡಿಮೆ ಬೆಲೆಯಲ್ಲಿ ಬಂಪರ್ ಆಫರ್
ಟೆಲಿಕಾಂ ಕಂಪನಿಯೊಂದು 225 ರೂಪಾಯಿಗೆ ಬಂಪರ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ 30 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2.5GB ಡೇಟಾ ಮತ್ತು ಅನಿಯಮಿತ ಕರೆಗಳು ಲಭ್ಯವಿದ್ದು, ಇದು ಜಿಯೋ ಮತ್ತು ಏರ್‌ಟೆಲ್‌ನ ದುಬಾರಿ ಪ್ಲಾನ್‌ಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.

ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಹಣೆ ಮೇಲೆ ಬೆವರು
ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಹಣೆ ಮೇಲೆ ಬೆವರು ಬರುವಂತೆ ಮಾಡಿದ ಜಸ್ಟ್ 225 ರೂಪಾಯಿಯ ರೀಚಾರ್ಜ್ ಪ್ಲಾನ್. ಕಡಿಮೆ ಬೆಲೆಯಲ್ಲಿ ಬಂಪರ್ ಆಫರ್ ನೀಡಿರೋದರಿಂದ ರಿಲಯನ್ಸ್ ಜಿಯೋ ಅಂಗಳದಲ್ಲಿ ಸಂಚಲನವನ್ನು ಸೃಷ್ಟಿಸಿದೆ. 225 ರೂಪಾಯಿ ರೀಚಾರ್ಜ್ ಪ್ಲಾನ್ ವಿಶೇಷತೆ ಮತ್ತು ಲಾಭಗಳು ಏನು ಎಂಬುದನ್ನು ನೋಡೋಣ ಬನ್ನಿ.
BSNL Rs 225 Recharge Plan Benefits
ದೇಶದ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 225 ರೂಪಾಯಿ ಬಂಪರ್ ಆಫರ್ ನೀಡಿದೆ. ಈ ರೀಚಾರ್ಜ್‌ನಲ್ಲಿ ದೇಶದಲ್ಲಿನ ಯಾವುದೇ ಸಂಖ್ಯೆಗೆ ಅನಿಯಮಿತವಾಗಿ ಕರೆ ಮಾಡಬಹುದಾಗಿದೆ. ಹಾಗೆಯೇ ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದಾಗಿದೆ.
ಡೇಟಾ ಮತ್ತು ವ್ಯಾಲಿಡಿಟಿ
225 ರೂಪಾಯಿ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 2.5GB ಡೇಟಾ 30 ದಿನಗಳವರೆಗೆ ಲಭ್ಯವಾಗುತ್ತದೆ. ಅಂದ್ರೆ ಒಂದು ತಿಂಗಳಲ್ಲಿ ನಿಮಗೆ 75GB ಡೇಟಾ ಸಿಗಲಿದೆ. ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜಿಯೋ ಮತ್ತು ಏರ್‌ಟೆಲ್‌ಗೆ ಹೋಲಿಕೆ ಮಾಡಿದ್ರೆ ಇದು ಕಡಿಮೆ ಬೆಲೆ ಮತ್ತು ಹೆಚ್ಚು ಬೆನೆಫಿಟ್‌ಗಳನ್ನು ಒಳಗೊಂಡಿದೆ.
ಜಿಯೋ ನೀಡುತ್ತಿರುವ 2.5GB ಡೇಟಾ ಪ್ಲಾನ್
ರಿಲಯನ್ಸ್ ಜಿಯೋ 399 ರೂಪಾಯಿಯಲ್ಲಿ 2.5GB ಡೇಟಾ ಪ್ಲಾನ್ ನೀಡುತ್ತಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಯನ್ನು ಹೊಂದಿದ್ದು, ಬಿಎಸ್‌ಎನ್‌ಎಲ್‌ಗಿಂತ ಎರಡು ದಿನ ಕಡಿಮೆಯಾಗಿದೆ. ಜಿಯೋ ಪ್ಲಾನ್ ದುಬಾರಿಯಾದ್ರೂ ಹೆಚ್ಚುವರಿ ಲಾಭಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. 99 ರೂಪಾಯಿ ರೀಚಾರ್ಜ್‌ನಲ್ಲಿ ದಿನಕ್ಕೆ 2.5GB ಡೇಟಾ, ಅನ್‌ಲಿಮಿಟೆಡ್ ಕಾಲ್, ದಿನಕ್ಕೆ 100 ಎಸ್‌ಎಂಎಸ್ ಉಚಿತ, JioAI ಕ್ಲೌಡ್‌ನಲ್ಲಿ 50GB ಸ್ಟೋರೇಜ್, 18 ತಿಂಗಳವರೆಗೆ Google Gemini Pro ಚಂದಾದಾರಿಕೆ ಮತ್ತು JioHotstar ಮತ್ತು FanCode ಗೆ ಫ್ರೀ ಸಬ್‌ಸ್ಕ್ರಿಪ್ಷನ್ ಸಿಗುತ್ತದೆ.
ಏರ್‌ಟೆಲ್ ನೀಡುತ್ತಿರುವ 2.5GB ಡೇಟಾ ಪ್ಲಾನ್
ದೈನಂದಿನ 2.5GB ಡೇಟಾ ಪ್ಲಾನ್ ನಿಮಗೆ ಏರ್‌ಟೆಲ್‌ನಲ್ಲಿ 429 ರೂಪಾಯಿಗೆ ಲಭ್ಯವಾಗುತ್ತದೆ. ಒಂದು ತಿಂಗಳ ವ್ಯಾಲಿಡಿಟಿಯ ಪ್ಲಾನ್‌ನಲ್ಲಿ 5 ರೂಪಾಯಿ ಟಾಕ್‌ಟೈಮ್, ಏರ್‌ಟೆಲ್ ಅಡೋಬ್ ಎಕ್ಸ್‌ಪ್ರೆಸ್‌ಗೆ ಪ್ರೀಮಿಯಂ ಆಕ್ಸೆಸ್, ಫ್ರೀ ಹೆಲೋಟ್ಯೂನ್ಸ್, OTT ಪ್ಲಾಟ್‌ಫಾರ್ಮ್ ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ ಆಕ್ಸೆಸ್, ಅನ್‌ಲಿಮಿಟೆಡ್ 5ಜಿ, ದಿನಕ್ಕೆ 100 ಎಸ್‌ಎಂಎಸ್ ಕಳುಹಿಸುವ ಆಯ್ಕೆ ಗ್ರಾಹಕರಿಗೆ ಸಿಗಲಿದೆ. ಏರ್ಟೆಲ್ ಮತ್ತು ಜಿಯೋಗಿಂತ ಬಿಎಸ್ಎನ್ಎಲ್ ಪ್ಲಾನ್ ಕಡಿಮೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

