ಪ್ರಯಾಗರಾಜ್: ಸೋದರರಿಬ್ಬರ ನಡುವಣ ಜಗಳ ಅವರ ಹೂತಿಟ್ಟಿದ್ದ ಅಂದಾಜು 5 ಕೋಟಿ ರು. ಹಣ ಪತ್ತೆಗೆ ಕಾರಣವಾದ ಅಚ್ಚರಿಯ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಪುಣೆ ಮೂಲದ ರಾಕೇಶ್ ಮತ್ತು ರಾಜೇಶ್ 4 ವರ್ಷಗಳ ಹಿಂದೆ ಪ್ರಯಾಗ್‌ರಾಜ್‌ಗೆ ಆಗಮಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆದಾಯ ಇಲ್ಲದಿದ್ದರೂ ಇವರ ಐಷಾರಾಮಿ ಜೀವನ ಶೈಲಿ ಬಗ್ಗೆ ಜನರಿಗೆ ಅನುಮಾನ ಬಂದು ಯಾರೋ ಇವರ ಬಳಿ ಕಪ್ಪು ಹಣ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮನೆಗೆ ಆಗಮಿಸಿದ ಪೊಲೀಸರು ಮನೆಯ ಕೋಣೆಯೊಂದರ ಅನುಮಾನಾಸ್ಪದ ಜಾಗ ಅಗೆದಾಗ ಅಲ್ಲಿ 3 ಡ್ರಂನೊಳಗೆ ತುಂಬಿಟ್ಟಿದ್ದ ಕಂತೆ ಕಂತೆ ಹಣ ಪತ್ತೆಯಾಗಿದೆ.

11:46 PM (IST) Oct 31
11:20 PM (IST) Oct 31
10:03 PM (IST) Oct 31
09:10 PM (IST) Oct 31
ವಯಸ್ಸು ಹೆಚ್ಚಾದರೂ ನಯನತಾರಾ ಸೌಂದರ್ಯ ಮಾತ್ರ ಕಡಿಮೆಯಾಗಿಲ್ಲ! ಬ್ಲ್ಯಾಕ್ ಆಫ್‌ಶೋಲ್ಡರ್ ಡ್ರೆಸ್‌ನಲ್ಲಿ ಮಿಂಚಿದ ಲೇಡಿ ಸೂಪರ್‌ಸ್ಟಾರ್ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
08:40 PM (IST) Oct 31
ಕೆಲವು ಮನೆಗಳಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಂದೇ ಬುಟ್ಟಿಯಲ್ಲಿ ಸಂಗ್ರಹಿಸುತ್ತಾರೆ. ಆದರೆ ಎರಡರಿಂದಲೂ ಹೊರಬರುವ ತೇವಾಂಶ ಮತ್ತು ಸಂಗ್ರಹಣೆಯ ಪರಿಸ್ಥಿತಿಗಳು ಅವು ಬೇಗನೆ ಹಾಳಾಗಲು ಕಾರಣವಾಗಬಹುದು. ಅಷ್ಟೇ ಅಲ್ಲ, ಖರೀದಿ ಮಾಡುವಾಗಲೇ ಈರುಳ್ಳಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ!
08:19 PM (IST) Oct 31
ಹಣಕ್ಕಾಗಿ ಮಾತ್ರ ಸಿನಿಮಾ ಮಾಡುವುದಿಲ್ಲ ಎಂದ ಅನುಪಮಾ ಪರಮೇಶ್ವರನ್. ಸಿನಿಮಾ ಜರ್ನಿ, ವೈಯಕ್ತಿಕ ಸವಾಲುಗಳು, ಥೆರಪಿ ಹಾಗೂ ಮುಂದಿನ ಸಿನಿಮಾಗಳ ಬಗ್ಗೆ ನಟಿ ಹಂಚಿಕೊಂಡ ಇಂಟರೆಸ್ಟಿಂಗ್ ವಿಚಾರಗಳಿವು.
07:35 PM (IST) Oct 31
ವೆಂಕಟೇಶ್ ಮತ್ತು ತ್ರಿವಿಕ್ರಮ್ ಕಾಂಬಿನೇಷನ್‌ನ ‘ಆದರ್ಶ ಕುಟುಂಬಂ’ ಸಿನಿಮಾವನ್ನು ಒಪ್ಪಿಕೊಂಡಿದ್ದೇಕೆ? ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಪಾತ್ರ, ಸಿನಿಮಾ ಜರ್ನಿ ಮತ್ತು ರಾಮಾಯಣದ ಆಡಿಷನ್ ಬಗ್ಗೆ ಹೇಳಿದ್ದೇನು?
07:03 PM (IST) Oct 31
ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಕಿಂಗ್’ ಸಿನಿಮಾ ಬಹುನಿರೀಕ್ಷಿತ ಸಿನಿಮಾ. ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲು ತಂಡ ಯೋಜಿಸಿದೆ ಎನ್ನಲಾಗಿದೆ. ಈಗ ಚಿತ್ರದಿಂದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಔಟ್ ಆಗಿದ್ದಾರೆ ಏಕೆ?
06:21 PM (IST) Oct 31
'ಅರಸನ್' ಚಿತ್ರದಲ್ಲಿ ಬ್ಯುಸಿಯಿರುವ ನಟ ಸಿಂಬು, ತಮ್ಮ ಮುಂದಿನ ಸಿನಿಮಾದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.
05:53 PM (IST) Oct 31
ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಬಳಿಕ ಮಹೇಶ್ ಬಾಬು ಮುಂದಿನ ಪ್ರಾಜೆಕ್ಟ್ ಯಾವುದು? ಸಂದೀಪ್ ರೆಡ್ಡಿ ವಂಗಾ, ಪ್ರಶಾಂತ್ ನೀಲ್ ಹೆಸರುಗಳ ನಡುವೆ ಹಾಲಿವುಡ್ ಸಿನಿಮಾದ ಬಗ್ಗೆಯೂ ಚರ್ಚೆ ಶುರುವಾಗಿದೆ.
05:37 PM (IST) Oct 31
ಗುರ್ಮೀತ್ ಸಿಂಗ್ ನಿರ್ದೇಶನದ ಈ ಸಿನಿಮಾದಲ್ಲಿ ಮಿರ್ಜಾಪುರದ ಕ್ರಿಮಿನಲ್ ಜಗತ್ತಿನ ಮತ್ತೊಂದು ಭರ್ಜರಿ ಕದನವನ್ನು ನೀವು ನೋಡಬಹುದು. ಪಂಕಜ್ ತ್ರಿಪಾಠಿ ಅವರು ಕಾಲಿನ್ ಭೈಯಾ ಆಗಿ, ಅಲಿ ಫಜಲ್ ಗುಡ್ಡು ಪಂಡಿತ್ ಆಗಿ ಹಾಗೂ ದಿವ್ಯೇಂದು ಬಬ್ಲು ಪಂಡಿತ್ ಆಗಿ ಅಬ್ಬರಿಸಿದ್ದಾರೆ.
05:25 PM (IST) Oct 31
05:24 PM (IST) Oct 31
ನೆಟ್‌ಫ್ಲಿಕ್ಸ್‌ನ ‘ಅಕ್ಕ: ದಿ ಪ್ರೊಟೆಕ್ಟರ್’ ವೆಬ್ ಸರಣಿಯಲ್ಲಿ ಕನ್ನಡದ ಹಿರಿಯ ನಟಿ ಬಿ. ಜಯಶ್ರೀ ದುಗ್ಗಮ್ಮನಾಗಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್, ರಾಧಿಕಾ ಆಪ್ಟೆ ನಟನೆಯ ಮಹಿಳಾ ಗ್ಯಾಂಗ್‌ಸ್ಟರ್‌ಗಳ ಈ ಕ್ರೈಮ್ ಥ್ರಿಲ್ಲರ್ ಸರಣಿಯ ಕಥೆ ಮತ್ತು ವಿಶೇಷತೆ ತಿಳಿಯಿರಿ.
05:05 PM (IST) Oct 31
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎರಡನೇ ಮದುವೆಯಾಗಿದ್ದಾರೆ. ಪತ್ರಕರ್ತೆ ನಿಧಿ ರಾಜ್ದಾನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮೊದಲ ಪತ್ನಿ ಡಿವೋರ್ಸ್ ಪ್ರಕರಣ ಜುಲೈ ತಿಂಗಳಲ್ಲಿ ಇತ್ಯರ್ಥಗೊಂಡಿತ್ತು.
04:58 PM (IST) Oct 31
04:33 PM (IST) Oct 31
ಇತ್ತೀಚೆಗೆ ನಡೆದ ಗ್ಲಾಮರಸ್ ಈವೆಂಟ್‌ನಲ್ಲಿ ನಟಿ ಆಲಿಯಾ ಭಟ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಮುಖ ನೋಡಿ ನೆಟ್ಟಿಗರು ಶಾಕ್ ಆಗಿದ್ದು, ಸಖತ್ ಟ್ರೋಲ್ ಮಾಡುತ್ತಿದ್ದಾರೆ.
03:59 PM (IST) Oct 31
03:31 PM (IST) Oct 31
ಕೇವಲ ಕರೆ ಮಾಡಲು ಮಾತ್ರ ಮೊಬೈಲ್ ಬಳಸುವವರಿಗಾಗಿ ಜಿಯೋ, ಏರ್‌ಟೆಲ್ ಮತ್ತು ವಿ ಕಂಪನಿಗಳು ಅಗ್ಗದ 'ವಾಯ್ಸ್ ಓನ್ಲಿ' ಪ್ರಿಪೇಡ್ ಯೋಜನೆಗಳನ್ನು ಪರಿಚಯಿಸಿವೆ. ಇಂಟರ್ನೆಟ್ ಇಲ್ಲದ ಈ ಪ್ಲಾನ್‌ಗಳು ಹಿರಿಯ ನಾಗರಿಕರಿಗೆ ಮತ್ತು ಎರಡನೇ ಸಿಮ್ ಆಕ್ಟಿವ್ ಆಗಿಡಲು ಬಯಸುವವರಿಗೆ ಅತ್ಯಂತ ಸೂಕ್ತವಾಗಿವೆ.
02:36 PM (IST) Oct 31
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಚೈನ್‌ಸಾದಿಂದ ಭೀಕರ ದಾಳಿ ನಡೆಸಿದ್ದಾನೆ. ಪ್ರೇಮ ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
02:08 PM (IST) Oct 31
02:01 PM (IST) Oct 31
ಅಮೆರಿಕ ಮತ್ತು ಕೆನಡಾವನ್ನು ಒಳಗೊಂಡ ಉತ್ತರ ಅಮೆರಿಕದಲ್ಲಿ 2.58 ಮಿಲಿಯನ್ ಡಾಲರ್ ಬುಕಿಂಗ್ ಆಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬ್ರಿಟನ್ ಮತ್ತು ಐರ್ಲೆಂಡ್‌ನಲ್ಲಿ 3,51,200 ಡಾಲರ್ ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ 3,13,000 ಡಾಲರ್ ಅಡ್ವಾನ್ಸ್ ಬುಕಿಂಗ್ ದಾಖಲಾಗಿದೆ.
01:38 PM (IST) Oct 31
ಅಕ್ಟೋಬರ್ ತಿಂಗಳ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸತತ ಎರಡನೇ ದಿನವೂ ಭಾರಿ ಇಳಿಕೆ ದಾಖಲಾಗಿದೆ. ಕಳೆದ ಎರಡು ವಹಿವಾಟುಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ₹5,070 ರಷ್ಟು ಕುಸಿದಿದ್ದು, ಹಬ್ಬ ಹಾಗೂ ಮದುವೆ ಸೀಸನ್‌ನಲ್ಲಿ ಗ್ರಾಹಕರಿಗೆ ಸಮಾಧಾನ ತಂದಿದೆ.
01:20 PM (IST) Oct 31
01:14 PM (IST) Oct 31
ಹಾಂಗ್‌ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದ ಬೆನ್ನಲ್ಲೇ ಯುಎಇ ವಿರುದ್ಧವೂ ಸೋಲನುಭವಿಸಿದೆ. ಭಾರತ ನೀಡಿದ್ದ 95 ರನ್‌ಗಳ ಗುರಿಯನ್ನು ಯುಎಇ ತಂಡ ಕೇವಲ 4.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿತು. ಸತತ ಎರಡು ಸೋಲುಗಳಿಂದಾಗಿ ಟೂರ್ನಿಯಲ್ಲಿ ಭಾರತದ ಮುಂದಿನ ಹಾದಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
12:45 PM (IST) Oct 31
ನಿತೇಶ್ ತಿವಾರಿ ನಿರ್ದೇಶನದ ಹಾಗೂ ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ' ಸಿನಿಮಾವು 2026ರ ನವೆಂಬರ್ 5ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ದಕ್ಷಿಣ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಈ ಸಿನಿಮಾ ಸುಮಾರು ₹27 ರಿಂದ ₹38 ಕೋಟಿ ಗಳಿಸಬಹುದು ಎಂದು ಚಿತ್ರರಂಗದ ವ್ಯಾಪಾರ ವಿಶ್ಲೇಷಕರು ಅಂದಾಜಿಸಿದ್ದಾರೆ.
12:12 PM (IST) Oct 31
11:38 AM (IST) Oct 31
ಡಿಸೆಂಬರ್ 24ರಂದು ಶಾರುಖ್ ಖಾನ್‌ರ ‘ಕಿಂಗ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಭಾರೀ ಮೊತ್ತಕ್ಕೆ ವಿದೇಶಿ ವಿತರಣಾ ಒಪ್ಪಂದದ ಸುದ್ದಿ ಹರಿದಾಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಎಲ್ಲರ ಕಣ್ಣು ಶಾರುಖ್ ಖಾನ್ ಅವರ ಈ ಹೊಸ ಸಿನಿಮಾದ ಮೇಲಿದೆ. ಎಷ್ಟಕ್ಕೆ ಡೀಲ್ ಆಯ್ತು? ನೋಡಿ..
11:31 AM (IST) Oct 31
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ₹4,000 ಕೋಟಿ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಚಿತ್ರ ಎಂಬ ದಾಖಲೆ ಬರೆದಿದೆ. ನಟ ಯಶ್ ಸ್ಪಷ್ಟಪಡಿಸಿದ ಈ ಒಟ್ಟು ವೆಚ್ಚವು, ವಿಶ್ವದ ಐದು ಸಣ್ಣ ದ್ವೀಪ ರಾಷ್ಟ್ರಗಳ ವಾರ್ಷಿಕ ಆರ್ಥಿಕ ಉತ್ಪಾದನೆಗಿಂತಲೂ (GDP) ಅಧಿಕವಾಗಿದೆ.
10:51 AM (IST) Oct 31
10:26 AM (IST) Oct 31
ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ ಅವರಿಗೆ ಭಾರತ ಏಕದಿನ ಕ್ರಿಕೆಟ್ ತಂಡದಲ್ಲಿ ಅವಕಾಶ ನೀಡಬೇಕೆಂದು ಯುವರಾಜ್ ಸಿಂಗ್ ಒತ್ತಾಯಿಸಿದ್ದಾರೆ. ಹಿರಿಯ ಆಟಗಾರರ ಉಪಸ್ಥಿತಿಯಿಂದಾಗಿ ಯುವ ಪ್ರತಿಭೆಗಳಿಗೆ ಸ್ಥಾನ ಸಿಗುವುದು ಸವಾಲಾಗಿದ್ದರೂ, 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅವರಿಗೆ ಅವಕಾಶ ನೀಡದಿದ್ದರೆ ಅನ್ಯಾಯವಾಗುತ್ತದೆ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.
09:59 AM (IST) Oct 31
ಮಧುಬಾಲಾ ಹಿಂದಿ ಚಿತ್ರರಂಗ ಕಂಡ ಅತ್ಯಂತ ಮೇರು ನಟಿ ಆಗಿದ್ದರು. ಆಕೆಯ ನಿಧನದ ನಂತರ ಮಧುಬಾಲ ಕುಟುಂಬದ ಬಗ್ಗೆ ಯಾರಿಗೂ ಅಷ್ಟೇನೂ ತಿಳಿದಿರಲಿಲ್ಲ. ಇದೀಗ ಅವರ ಸಹೋದರಿ ಮಧುರ್ ಭೂಷಣ್, ನಟಿಯ ಕುರಿತು ಆಸಕ್ತಿದಾಯಕ ವಿಚಾರವನ್ನ ತಿಳಿಸಿದ್ದಾರೆ.
09:53 AM (IST) Oct 31
26ನೇ ಆವೃತ್ತಿಯ ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅವಾರ್ಡ್ಸ್ (IIFA) 2026ರ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಬಾರಿ ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಪ್ರಶಸ್ತಿಗಳ ಬೇಟೆಯಲ್ಲಿ ಭರ್ಜರಿ ಸಾಧನೆ ಮಾಡಿದೆ. ಬೇರೆ ಯಾರಿಗೆಲ್ಲಾ ಅವಾರ್ಡ್ ಸಿಕ್ಕಿದೆ ನೋಡಿ ನೋಡಿ..
09:38 AM (IST) Oct 31
08:24 AM (IST) Oct 31
ಚಾಟ್‌ಜಿಪಿಟಿ ನೀಡಿದ ವೈದ್ಯಕೀಯ ಸಲಹೆಯಿಂದಾಗಿ ತಮ್ಮ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಆರೋಪಿಸಿ ಪೋಷಕರು ಓಪನ್‌ಎಐ ವಿರುದ್ಧ ದೂರು ದಾಖಲಿಸಿದ್ದಾರೆ. ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಔಷಧಿ ನಿಲ್ಲಿಸುವಂತೆ ಚಾಟ್‌ಬಾಟ್ ಸೂಚಿಸಿತ್ತು ಎನ್ನಲಾಗಿದೆ.
08:08 AM (IST) Oct 31
ಎನ್‌ವಿಡಿಯಾ ಮುಖ್ಯಸ್ಥ ಜೆನ್‌ಸೆನ್ ಹುವಾಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದ ಚೀನೀ ಮಹಿಳೆ ಆಲಿಸ್ ಹುವಾಂಗ್ ಓರ್ವ ಗೂಢಚಾರಿಣಿ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಆರೋಪಿಸಿದೆ. ಈಕೆಯ ಮೂಲಕ ಅಮೆರಿಕದ ಸೂಕ್ಷ್ಮ ಮಾಹಿತಿಗಳು ಹಾಗೂ ನಿರ್ಬಂಧಿತ ಚಿಪ್‌ಗಳು ಚೀನಾಗೆ ರವಾನೆಯಾಗಿರುವ ಆತಂಕ ವ್ಯಕ್ತವಾಗಿದೆ.
07:43 AM (IST) Oct 31
07:12 AM (IST) Oct 31
23 ವರ್ಷದೊಳಗಿನವರಿಗೆ ಮದ್ಯ ಮಾರಾಟ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಬಾರ್‌ಗಳಲ್ಲಿ ವಯಸ್ಸಿನ ದಾಖಲೆ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳಲ್ಲಿ ಅಕ್ರಮ ತಡೆಯಲು 1000 ರೂ. ಮೇಲ್ಪಟ್ಟ ಖರೀದಿಗೆ ಡಿಜಿಟಲ್ ಪಾವತಿಯನ್ನು ಕಡ್ಡಾಯ ಮಾಡಲಾಗಿದೆ.