ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎರಡನೇ ಮದುವೆಯಾಗಿದ್ದಾರೆ. ಪತ್ರಕರ್ತೆ ನಿಧಿ ರಾಜ್ದಾನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮೊದಲ ಪತ್ನಿ ಡಿವೋರ್ಸ್ ಪ್ರಕರಣ ಜುಲೈ ತಿಂಗಳಲ್ಲಿ ಇತ್ಯರ್ಥಗೊಂಡಿತ್ತು.

ಕಾಶ್ಮೀರ (ಅ.31) ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಪತ್ರಕರ್ತೆ ನಿಧಿ ರಾಜ್ದಾನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಒಮರ್ ಅಬ್ದುಲ್ಲಾಗೆ ಇದು ಎರಡನೇ ಮದುವೆ. ಮೂರು ತಿಂಗಳ ಹಿಂದೆ ಮೊದಲ ಪತ್ನಿ ಡಿವೋರ್ಸ್ ಪ್ರಕರಣ ಇತ್ಯರ್ಥಗೊಂಡಿತ್ತು. ಇದರ ಬೆನ್ನಲ್ಲೇ ಪತ್ರಕರ್ತೆ ಜೊತೆ ಮದುವೆಯಾಗಿದ್ದಾರೆ. ಮದುವೆ ಸಂಭ್ರವನ್ನು ಒಮರ್ ಅಬ್ದುಲ್ಲಾ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ನಿನ್ನೆ ಹೊಸ ಬದುಕು ಆರಂಭಗೊಂಡಿದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಒಮರ್ ಅಬ್ದುಲ್ಲಾ (Omar Abdullah) ಖ್ಯಾತ ಪತ್ರಕರ್ತೆ ನಿಧಿ ರಜ್ದಾನ್ (Nidhi Razdan) ಜೊತೆಗಿನ ಮದುವೆ ಫೋಟೋ ಹಂಚಿಕೊಂಡಿದ್ದಾರೆ. ಖಾಸಗಿ ಇಂಗ್ಲೀಷ್ ಸುದ್ದಿ ವಾಹಿನಿಯಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದ ನಿಧಿ, ವರದಿಗಾರಿಕೆ ಮೂಲಕವೂ ಜನಪ್ರಿಯತೆ ಗಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜಕೀಯ, ಭದ್ರತೆ ಹಾಗೂ ಸಾಮಾಜಿಕ ವಿದ್ಯಮಾನಗಳ ಕುರಿತು ದಶಕಗಳಿಂದ ನಿರಂತರವಾಗಿ ವರದಿ ಮಾಡುತ್ತಾ ಬಂದಿರುವ ನಿಧಿ ರಜ್ದಾನ್ ಅವರಿಗೆ ಕಣಿವೆ ರಾಜ್ಯದ ಆಡಳಿತ ಮತ್ತು ರಾಜಕೀಯ ಸಮೀಕರಣಗಳನ್ನು ಹತ್ತಿರದಿಂದ ನೋಡಿದ್ದಾರೆ.

ಮೊದಲ ಮದುವೆ ಡಿವೋರ್ಸ್ ವಿವಾದ

1994ರಲ್ಲಿ ಒಮರ್ ಅಬ್ದುಲ್ಲಾ ಹಾಗೂ ಪಾಯಲ್ ನಾಥ್ ಪ್ರೀತಿ ಮದುವೆ ಅರ್ಥಪಡೆದುಕೊಂಡಿತ್ತು. ಇವರಿಗೆ ಜಹೀರ್ ಹಾಗೂ ಜಮೀರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ 2011ರಲ್ಲಿ ಒಮರ್ ಅಬ್ದುಲ್ಲಾ ಹಾಗೂ ಪಾಯಲ್ ನಾಥ್ ಇಬ್ಬರು ವಿಚ್ಚೇದನ ನೀಡುವುದಾಗಿ ಘೋಷಿಸಿದ್ದರು. ಬಳಿಕ ಇಬ್ಬರು ಬೇರೆ ಬೇರೆಯಾಗಿದ್ದರು. ಆದರೆ ಕೆಲ ಇವರ ಪ್ರಕರಣ ಕೋರ್ಟ್‌ನಲ್ಲಿ ಸುದೀರ್ಘ ದಿನಗಳ ಕಾಲ ಇತ್ಯರ್ಥವಾಗದೇ ಉಳಿದಿತ್ತು. 2026ರ ಜುಲೈ 31ರಂದು ಕೋರ್ಟ್ ಅಧಿಕೃತವಾಗಿ ಡಿವೋರ್ಸ್ ನೀಡಿತ್ತು. ಡಿವೋರ್ಸ್ ನೀಡಿದ ಮೂರೇ ತಿಂಗಳಿಗೆ ಒಮರ್ ಅಬ್ದುಲ್ಲಾ 2ನೇ ಮದುವೆಯಾಗಿದ್ದಾರೆ.

ಇಬ್ಬರಿಗೂ ಎರಡನೇ ಮದುವೆ

ಒಮರ್ ಅಬ್ದುಲ್ಲಾಗೆ ಇದು ಎರಡನೇ ಮದುವೆಯಾದರೆ, ನಿಧಿ ರಜ್ದಾನ್‌ಗೂ ಇದು ಎರಡನೇ ಮದುವೆ. 2005ರಲ್ಲಿ ಪತ್ರಕರ್ತ ನೀಲೇಶ್ ಮಿಶ್ರಾ ಮದುವೆಯಾಗಿದ್ದ ನಿಧಿ ರಾಜ್ದನ್ 2007ರಲ್ಲಿ ವಿಚ್ಚೇದನ ನೀಡಿ ಸಂಬಂಧದಿಂದ ಹೊರಬಂದಿದ್ದರು. ಎನ್‌ಡಿಟಿವಿ ಸುದ್ದಿ ವಾಹನಿಯ ವರದಿಗಾರ್ತಿಯಾಗಿ, ನಿರೂಪಕಿಯಾಗಿ ಗಮನಸೆಳೆದಿದ್ದರು. ಕಳೆದ ಹಲವು ವರ್ಷಗಳಿಂದ ಒಮರ್ ಅಬ್ದುಲ್ಲಾ ಜೊತೆ ಆತ್ಮೀಯರಾಗಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಕೋಲಾಹಲ ಎದ್ದಿರು ನಡುವೆ ಒಮರ್ ಅಬ್ದುಲ್ಲಾ ಕೂಲ್ ಆಗಿ ಮದುವೆ ಮುಗಿಸಿದ್ದಾರೆ. ತಮ್ಮದೇ ಪಾರ್ಟಿ ನ್ಯಾಷನಲ್ ಕಾನ್ಫರೆನ್ಸ್‌ನಲ್ಲಿ ಬಂಡಾಯದ ಬಾವುಟ ಎದ್ದಿದೆ. 20ಕ್ಕೂ ಹೆಚ್ಚು ಶಾಸಕರು ಬಂಡಾಯ ಎದ್ದಿದ್ದಾರೆ. ಇದು ಜಮ್ಮು ಕಾಶ್ಮೀರ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಒಮರ್ ಅಬ್ದುಲ್ಲಾ ಸದ್ದಿಲ್ಲದೆ ಮದುವೆ ಮುಗಿಸಿದ್ದಾರೆ. ರಾಜಕೀಯ ನಾಯಕರು, ಮುಖಂಡರು ಒಮರ್ ಅಬ್ದುಲ್ಲಗೆ ಶುಭಕೋರಿದ್ದಾರೆ. ಇದೇ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಒಮರ್ ಅಬ್ದುಲ್ಲಾ ಹೊಸ ಬದುಕಿಗೆ ಶುಭಾಶಯ ತಿಳಿಸಿದ್ದಾರೆ.