ಇತ್ತೀಚೆಗೆ ನಡೆದ ಗ್ಲಾಮರಸ್ ಈವೆಂಟ್ನಲ್ಲಿ ನಟಿ ಆಲಿಯಾ ಭಟ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಮುಖ ನೋಡಿ ನೆಟ್ಟಿಗರು ಶಾಕ್ ಆಗಿದ್ದು, ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಆಲಿಯಾ ಭಟ್ ಬಾಲಿವುಡ್ನ ಟಾಪ್ ನಟಿಯರಲ್ಲಿ ಒಬ್ಬರು. ತಮ್ಮ ಅದ್ಭುತ ನಟನೆ ಹಾಗೂ ಸೌಂದರ್ಯದಿಂದಲೇ ಅವರು ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಅವರು ಎಲ್ಲೇ ಹೋದರೂ ಕ್ಯಾಮೆರಾಗಳು ಅವರತ್ತ ತಿರುಗುತ್ತವೆ. ಆದರೆ, ಇದೀಗ ಅವರ ಹೊಸ ವಿಡಿಯೋವೊಂದು ವೈರಲ್ ಆಗಿದ್ದು, ಸಖತ್ ಟ್ರೋಲ್ ಆಗುತ್ತಿದ್ದಾರೆ.
ಆಲಿಯಾ ಭಟ್ ಟ್ರೋಲ್!
ಹೌದು, ಇತ್ತೀಚೆಗೆ ನಡೆದ ಈವೆಂಟ್ ಒಂದರಲ್ಲಿ ಆಲಿಯಾ ಭಟ್ ದೇಸಿ ಲುಕ್ನಲ್ಲಿ ಮಿಂಚಿದ್ದರು. ಗೋಲ್ಡನ್ ಬಣ್ಣದ ಫ್ರಂಟ್-ಕಟ್ ಸೂಟ್, ಹೈ ಹೀಲ್ಸ್, ನೀಲಿ ಬಣ್ಣದ ಆಭರಣ ಹಾಗೂ ಸಿಂಪಲ್ ಮೇಕಪ್ನಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ, ಫೋಟೋಗ್ರಾಫರ್ಗಳಿಗೆ ಪೋಸ್ ಕೊಡಲು ಶುರು ಮಾಡುತ್ತಿದ್ದಂತೆ ನೆಟ್ಟಿಗರು ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಅವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಆಲಿಯಾ ನೋಡಲು ಟ್ವಿಂಕಲ್ ಖನ್ನಾ ತರಹ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಆಲಿಯಾ ಲುಕ್ ಹೇಗಿತ್ತು?
ಆಲಿಯಾ ಕಣ್ಣುಗಳಿಂದ ಹಿಡಿದು ಅವರ ಹೇರ್ಸ್ಟೈಲ್ವರೆಗೆ ಎಲ್ಲವೂ ವಿಚಿತ್ರವಾಗಿ ಕಾಣುತ್ತಿತ್ತು. ಹೀಗಾಗಿಯೇ ನೆಟ್ಟಿಗರು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಪ್ರಮೋಷನಲ್ ಈವೆಂಟ್ನಲ್ಲಿ ಆಲಿಯಾ, 'ಪಿಸಿ ಟೋಟುಕಾ ಅಂಡ್ ಸನ್ಸ್' ವಿನ್ಯಾಸದ ನೀಲಿ ಹರಳು ಹಾಗೂ ವಜ್ರದ ಚೋಕರ್ ನೆಕ್ಲೇಸ್ ಧರಿಸಿದ್ದರು. ಇದರ ಜೊತೆಗೆ 'ಮಯೂರ್ ಗಿರೋತ್ರಾ ಕೌಚರ್' ವಿನ್ಯಾಸದ ಗೋಲ್ಡ್ ಬ್ರೊಕೇಡ್ ಜಾಕೆಟ್ ಡ್ರೆಸ್ನಲ್ಲಿ ಅವರು ಕಂಗೊಳಿಸಿದ್ದರು.
ನೆಟ್ಟಿಗರ ಕಮೆಂಟ್ಸ್ ಹೀಗಿವೆ!
ವಿಡಿಯೋ ನೋಡಿದ ಬಳಕೆದಾರರೊಬ್ಬರು, "ಇವರು ನೋಡಲು ಮಾಧುರಿ, ಟ್ವಿಂಕಲ್ ಖನ್ನಾ, ಡಿಂಪಲ್ ಕಪಾಡಿಯಾ ಅವರ ವಯಸ್ಸಾದ ವರ್ಷನ್ ತರಹ ಕಾಣುತ್ತಿದ್ದಾರೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಆಲಿಯಾ ಸುಂದರವಾಗಿದ್ದಾರೆ, ನೆಗೆಟಿವ್ ಕಮೆಂಟ್ ಮಾಡುವುದನ್ನು ನಿಲ್ಲಿಸಿ. ಆದರೆ ಅವರನ್ನು ಕತ್ರಿನಾ ಹಾಗೂ ದೀಪಿಕಾಗೆ ಹೋಲಿಕೆ ಮಾಡಬೇಡಿ. ಅವರು 40ರ ಹರೆಯದಲ್ಲಿದ್ದರೂ ಆಲಿಯಾಗಿಂತ ಹೆಚ್ಚು ಸುಂದರವಾಗಿದ್ದಾರೆ" ಎಂದಿದ್ದಾರೆ. ಇನ್ನೊಬ್ಬರು, "ಆಲೂ ಕಣ್ಣುಗಳಿಗೆ ಏನಾಗಿದೆ?" ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಸಿನಿಮಾಗಳು!
ಇನ್ನು ಆಲಿಯಾ ಭಟ್ ಮುಂದಿನ ದಿನಗಳಲ್ಲಿ 'ಲವ್ ಅಂಡ್ ವಾರ್' ಹಾಗೂ 'ತುಂಬಾಡ್-2' ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.






