ಕೇವಲ ಕರೆ ಮಾಡಲು ಮಾತ್ರ ಮೊಬೈಲ್ ಬಳಸುವವರಿಗಾಗಿ ಜಿಯೋ, ಏರ್‌ಟೆಲ್ ಮತ್ತು ವಿ ಕಂಪನಿಗಳು ಅಗ್ಗದ 'ವಾಯ್ಸ್ ಓನ್ಲಿ' ಪ್ರಿಪೇಡ್ ಯೋಜನೆಗಳನ್ನು ಪರಿಚಯಿಸಿವೆ. ಇಂಟರ್ನೆಟ್ ಇಲ್ಲದ ಈ ಪ್ಲಾನ್‌ಗಳು ಹಿರಿಯ ನಾಗರಿಕರಿಗೆ ಮತ್ತು ಎರಡನೇ ಸಿಮ್ ಆಕ್ಟಿವ್ ಆಗಿಡಲು ಬಯಸುವವರಿಗೆ ಅತ್ಯಂತ ಸೂಕ್ತವಾಗಿವೆ.

ಬೆಂಗಳೂರು (ಅ.31): ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಡೇಟಾ (Data) ಬಳಸದ, ಕೇವಲ ಕರೆ ಮಾಡಲು ಮಾತ್ರ ಮೊಬೈಲ್ ಬಳಸುವ ಕೋಟ್ಯಂತರ ಬಳಕೆದಾರರಿಗೆ ಟೆಲಿಕಾಂ ದೈತ್ಯರಾದ ರಿಲಯನ್ಸ್ ಜಿಯೋ (Jio), ಭಾರ್ತಿ ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vi) ಭಾರಿ ಸಿಹಿ ಸುದ್ದಿ ನೀಡಿದೆ. ಇಂಟರ್ನೆಟ್ ಸೇವೆಯನ್ನು ಹೊರತುಪಡಿಸಿ, ಕೇವಲ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ ಎಸ್‌ಎಮ್‌ಎಸ್ ಸೌಲಭ್ಯ ಹೊಂದಿರುವ ಅತ್ಯಂತ ಅಗ್ಗದ ಪ್ರಿಪೇಡ್ ರಿಚಾರ್ಜ್ ಯೋಜನೆಗಳನ್ನು ಈ ಮೂರೂ ಕಂಪನಿಗಳು ಮಾರುಕಟ್ಟೆಗೆ ಪರಿಚಯಿಸಿವೆ. ಟ್ರಾಯ್‌ ಬಿಗಿನಿಯಮದ ಬಳಿಕ ಈ ಮೂರೂ ಕಂಪನಿಗಳು ವಾಯ್ಸ್‌ ಓನ್ಲಿ ಪ್ಲ್ಯಾನ್‌ ಪರಿಚಯಿಸಿವೆ.

ಇಂದಿನ ದಿನಗಳಲ್ಲಿ ಹೆಚ್ಚಿನ ರಿಚಾರ್ಜ್ ಪ್ಲಾನ್‌ಗಳು ದಿನಂಪ್ರತಿ 1.5GB ಅಥವಾ 2GB ಡೇಟಾ ನೀಡುವ ಮೂಲಕ ದುಬಾರಿಯಾಗಿರುತ್ತವೆ. ಆದರೆ ಕೇವಲ ಬೇಸಿಕ್ ಕೀಪ್ಯಾಡ್ ಫೋನ್ ಬಳಸುವ ಪೋಷಕರಿಗೆ, ಹಿರಿಯ ನಾಗರಿಕರಿಗೆ ಅಥವಾ ತಮ್ಮ ಎರಡನೇ ಸಿಮ್ ಕಾರ್ಡ್ (Secondary SIM) ಅನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳಲು ಬಯಸುವವರಿಗೆ ಈ ಇಂಟರ್ನೆಟ್ ಹಂಗಿಲ್ಲದ 'ವಾಯ್ಸ್ ಓನ್ಲಿ' (Voice-only) ಪ್ಲಾನ್‌ಗಳು ಅತ್ಯಂತ ಸೂಕ್ತ ಹಾಗೂ ಜೇಬಿಗೆ ಅನುಕೂಲಕರವಾಗಿವೆ. ಈ ಮೂರೂ ಪ್ರಮುಖ ಕಂಪನಿಗಳು ನೀಡುತ್ತಿರುವ ವಾಯ್ಸ್ ಓನ್ಲಿ ಪ್ಲಾನ್‌ಗಳ ದರ, ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳ ಸಂಪೂರ್ಣ ವಿವರ ಮತ್ತು ಹೋಲಿಕೆ ಇಲ್ಲಿದೆ.

1. ರಿಲಯನ್ಸ್ ಜಿಯೋ (Jio Voice-Only Plans)

ಶಾರ್ಟ್-ಟರ್ಮ್ (ಕಡಿಮೆ ಅವಧಿ) ಹಾಗೂ 84 ದಿನಗಳ ಪ್ಲಾನ್‌ಗಳಲ್ಲಿ ರಿಲಯನ್ಸ್ ಜಿಯೋ ಸಂಸ್ಥೆಯು ಸ್ಪರ್ಧಿಗಳಿಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಯೋಜನೆಗಳನ್ನು ನೀಡುವ ಮೂಲಕ ಮುಂಚೂಣಿಯಲ್ಲಿದೆ.

  • ₹147 ಪ್ಲಾನ್: 22 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹177 ಪ್ಲಾನ್: 28 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹196 ಪ್ಲಾನ್: 30 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹197 ಪ್ಲಾನ್: 1 ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ (1 Calendar Month), ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹448 ಪ್ಲಾನ್: 84 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 1,000 SMS.
  • ₹1,748 ಪ್ಲಾನ್: 336 ದಿನಗಳ ವಾರ್ಷಿಕ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 3,600 SMS.

2. ಭಾರ್ತಿ ಏರ್‌ಟೆಲ್ (Airtel Voice-Only Plans)

ಏರ್‌ಟೆಲ್ ಸಂಸ್ಥೆಯು 28 ದಿನಗಳಿಂದ ಹಿಡಿದು ಇಡೀ ವರ್ಷಕ್ಕೆ (365 ದಿನಗಳು) ಅನ್ವಯವಾಗುವಂತೆ ವಾಯ್ಸ್ ಓನ್ಲಿ ಪ್ಲಾನ್‌ಗಳನ್ನು ಪರಿಚಯಿಸಿದೆ.

  • ₹185 ಪ್ಲಾನ್: 28 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹203 ಪ್ಲಾನ್: 30 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹206 ಪ್ಲಾನ್: 1 ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ (1 Calendar Month), ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹469 ಪ್ಲಾನ್: 84 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 900 SMS.
  • ₹1,849 ಪ್ಲಾನ್: 365 ದಿನಗಳ (1 ವರ್ಷ) ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 3,600 SMS.

3. ವೊಡಾಫೋನ್ ಐಡಿಯಾ (Vi Voice-Only Plans)

ಏರ್‌ಟೆಲ್ ನೀಡುತ್ತಿರುವ ಯೋಜನೆಗಳಿಗೆ ತೀರಾ ಹತ್ತಿರವಾದ ದರದಲ್ಲಿ ವೊಡಾಫೋನ್ ಐಡಿಯಾ (Vi) ತನ್ನ ಗ್ರಾಹಕರಿಗೆ ವಾಯ್ಸ್ ಪ್ಲಾನ್‌ಗಳನ್ನು ರೂಪಿಸಿದೆ.

  • ₹185 ಪ್ಲಾನ್: 28 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹203 ಪ್ಲಾನ್: 30 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹206 ಪ್ಲಾನ್: 1 ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ (1 Calendar Month), ಅನ್‌ಲಿಮಿಟೆಡ್ ಕಾಲ್ಸ್, 300 SMS.
  • ₹470 ಪ್ಲಾನ್: 84 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 900 SMS.
  • ₹1,849 ಪ್ಲಾನ್: 365 ದಿನಗಳ (1 ವರ್ಷ) ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕಾಲ್ಸ್, 3,600 SMS.

ಮೂರೂ ಸಂಸ್ಥೆಗಳ ಪ್ಲಾನ್‌ಗಳ ಹೋಲಿಕೆ, ಯಾವುದು ಬೆಸ್ಟ್‌?

ಶೀರ್ಷಿಕೆ/ಸೇವೆರಿಲಯನ್ಸ್ ಜಿಯೋ (Jio)ಭಾರ್ತಿ ಏರ್‌ಟೆಲ್ (Airtel)ವೊಡಾಫೋನ್ ಐಡಿಯಾ (Vi)
28 ದಿನಗಳ ಪ್ಲಾನ್₹177 (300 SMS)₹185 (300 SMS)₹185 (300 SMS)
30 ದಿನಗಳ ಪ್ಲಾನ್₹196 (300 SMS)₹203 (300 SMS)₹203 (300 SMS)
1 ತಿಂಗಳ ಪ್ಲಾನ್₹197 (300 SMS)₹206 (300 SMS)₹206 (300 SMS)
84 ದಿನಗಳ ಪ್ಲಾನ್₹448 (1000 SMS)₹469 (900 SMS)₹470 (900 SMS)
ವಾರ್ಷಿಕ ಪ್ಲಾನ್₹1,748 (336 ದಿನಗಳು)₹1,849 (365 ದಿನಗಳು)₹1,849 (365 ದಿನಗಳು)

ಅಂತಿಮ ತೀರ್ಮಾನ: ಯಾರಿಗೆ ಯಾವುದು ಸೂಕ್ತ?:

ಕಡಿಮೆ ಅವಧಿಯ (Short-term) ರಿಚಾರ್ಜ್‌ಗಳು ಹಾಗೂ 84 ದಿನಗಳ ಮಧ್ಯಮ ಅವಧಿಯ ಪ್ಲಾನ್‌ಗಳಲ್ಲಿ ಜಿಯೋ ಸಂಸ್ಥೆಯು ಸ್ಪರ್ಧಿಗಳಿಗಿಂತ (ಏರ್‌ಟೆಲ್ ಮತ್ತು ವಿ) ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿದೆ. ನಿತ್ಯವೂ ಡೇಟಾ ಬಳಸದೆ ಕೇವಲ ಕರೆಗಳಿಗೆ ಮಾತ್ರ ಮೊಬೈಲ್ ಬಳಸುವ ಪೋಷಕರಿಗೆ ಹಾಗೂ ಬ್ಯಾಂಕಿಂಗ್/ಓಟಿಪಿಗಳಿಗಾಗಿ ಸೆಕೆಂಡರಿ ಸಿಮ್ ಆಕ್ಟಿವ್ ಆಗಿಡಲು ಬಯಸುವವರಿಗೆ ಈ ಮೂರೂ ಸಂಸ್ಥೆಗಳ ವಾಯ್ಸ್ ಓನ್ಲಿ ಪ್ಲಾನ್‌ಗಳು ಉತ್ತಮ ಆಯ್ಕೆಯಾಗಿವೆ.