ಅಮೆರಿಕ ಮತ್ತು ಕೆನಡಾವನ್ನು ಒಳಗೊಂಡ ಉತ್ತರ ಅಮೆರಿಕದಲ್ಲಿ 2.58 ಮಿಲಿಯನ್ ಡಾಲರ್ ಬುಕಿಂಗ್ ಆಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬ್ರಿಟನ್ ಮತ್ತು ಐರ್ಲೆಂಡ್ನಲ್ಲಿ 3,51,200 ಡಾಲರ್ ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ 3,13,000 ಡಾಲರ್ ಅಡ್ವಾನ್ಸ್ ಬುಕಿಂಗ್ ದಾಖಲಾಗಿದೆ.
ರಾಮಾಯಣ ಅಡ್ವಾನ್ಸ್ ಬುಕಿಂಗ್ನಲ್ಲಿ ಭರ್ಜರಿ ಕಲೆಕ್ಷನ್; ಭಾರತದಲ್ಲಿ ₹20 ಕೋಟಿ ಗಡಿ ದಾಟುವತ್ತ ರಣಬೀರ್-ಯಶ್ ಸಿನಿಮಾ! Ramayana Rise of a Legend, Ramayana Advance Booking, Ramayana Worldwide Release.
ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾ ವಿಶ್ವಾದ್ಯಂತ ನವೆಂಬರ್ 5ರ ಗುರುವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ತೆರೆಗೆ ಬರಲು ಕೆಲವೇ ದಿನಗಳು ಬಾಕಿ ಇರುವಂತೆಯೇ ಅಡ್ವಾನ್ಸ್ ಬುಕಿಂಗ್ನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಗಳಲ್ಲೂ ಚಿತ್ರದ ಟಿಕೆಟ್ಗಳು ವೇಗವಾಗಿ ಮಾರಾಟವಾಗುತ್ತಿದ್ದು, ಬಿಡುಗಡೆಯ ಮುನ್ನವೇ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ.
ಇತ್ತೀಚಿನ ಅಡ್ವಾನ್ಸ್ ಬುಕಿಂಗ್ ವರದಿಗಳ ಪ್ರಕಾರ, ಭಾರತದಲ್ಲಿ ಮೊದಲ ದಿನದ ಟಿಕೆಟ್ ಮಾರಾಟದಿಂದಲೇ ‘ರಾಮಾಯಣ’ ಸುಮಾರು ₹19.61 ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ. ಇನ್ನು ಬ್ಲಾಕ್ ಮಾಡಿದ ಸೀಟುಗಳ ಲೆಕ್ಕ ಹೊರತುಪಡಿಸಿದರೆ ಈ ಮೊತ್ತ ಸುಮಾರು ₹16.31 ಕೋಟಿಯಷ್ಟಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.
ಫಿಲ್ಮ್ಸ್ ಡಿಸ್ಕೋರ್ಸ್ ವರದಿಯ ಪ್ರಕಾರ, ಐದು ದಿನಗಳ ವಿಸ್ತೃತ ಆರಂಭಿಕ ವಾರಾಂತ್ಯಕ್ಕಾಗಿ ಚಿತ್ರದ ಒಟ್ಟು ಅಡ್ವಾನ್ಸ್ ಬುಕಿಂಗ್ ಸುಮಾರು ₹40 ಕೋಟಿ ತಲುಪಿದೆ. ಬ್ಲಾಕ್ ಮಾಡಿದ ಸೀಟುಗಳನ್ನು ಹೊರತುಪಡಿಸಿದ ಮೊತ್ತ ಸುಮಾರು ₹22.11 ಕೋಟಿ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ₹3.89 ಕೋಟಿ ಅಡ್ವಾನ್ಸ್ ಬುಕಿಂಗ್!
ನವೆಂಬರ್ 5ರ ಮೊದಲ ದಿನದ ಬುಕಿಂಗ್ನಲ್ಲಿ ದೆಹಲಿ-ಎನ್ಸಿಆರ್ ಮಾರುಕಟ್ಟೆ ಮುಂಚೂಣಿಯಲ್ಲಿದ್ದು, ಸುಮಾರು ₹3.25 ಕೋಟಿ ಗಳಿಸಿದೆ. ರಾಜ್ಯಗಳ ಪೈಕಿ ಕರ್ನಾಟಕ ₹3.89 ಕೋಟಿ ಅಡ್ವಾನ್ಸ್ ಬುಕಿಂಗ್ನೊಂದಿಗೆ ಮೊದಲ ಸ್ಥಾನದಲ್ಲಿದೆ. ಇದು ಚಿತ್ರದ ಒಟ್ಟು ಗ್ರಾಸ್ ಬುಕಿಂಗ್ನ ಸುಮಾರು ಶೇ.20ರಷ್ಟಾಗಿದೆ. ಮಹಾರಾಷ್ಟ್ರ ₹3.85 ಕೋಟಿ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ದೆಹಲಿ ₹3.25 ಕೋಟಿ ದಾಖಲಿಸಿದೆ.
ಭಾಷಾವಾರು ಬುಕಿಂಗ್ನಲ್ಲಿ ಹಿಂದಿ ಆವೃತ್ತಿ ದೊಡ್ಡ ಪಾಲು ಹೊಂದಿದೆ. ಮೊದಲ ದಿನದ ಅಡ್ವಾನ್ಸ್ ಬುಕಿಂಗ್ನಲ್ಲಿ ಹಿಂದಿ ಭಾಷೆಯ ಪಾಲು ಶೇ.83ರಷ್ಟಿದ್ದು, ಸುಮಾರು ₹16.28 ಕೋಟಿ ಸಂಗ್ರಹವಾಗಿದೆ. ಕನ್ನಡ ಆವೃತ್ತಿ ₹2.56 ಕೋಟಿ ಅಡ್ವಾನ್ಸ್ ಬುಕಿಂಗ್ ದಾಖಲಿಸಿದೆ. ಇಂಗ್ಲಿಷ್ ಡಬ್ಬಿಂಗ್ ಆವೃತ್ತಿಗೆ ಎಐ ತಂತ್ರಜ್ಞಾನ ಬಳಸಲಾಗಿದೆ ಎಂಬ ವರದಿಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ವಿದೇಶದಲ್ಲಿ 3.45 ಮಿಲಿಯನ್ ಡಾಲರ್ ಗಳಿಕೆ!
ಭಾರತದ ಜೊತೆಗೆ ವಿದೇಶಗಳಲ್ಲೂ ‘ರಾಮಾಯಣ’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅಕ್ಟೋಬರ್ 30ರ ವೇಳೆಗೆ ಎಲ್ಲಾ ಪ್ರದರ್ಶನಗಳ ಅಡ್ವಾನ್ಸ್ ಬುಕಿಂಗ್ನಿಂದ ಒಟ್ಟು 3.45 ಮಿಲಿಯನ್ ಅಮೆರಿಕನ್ ಡಾಲರ್ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.
ಅಮೆರಿಕ ಮತ್ತು ಕೆನಡಾವನ್ನು ಒಳಗೊಂಡ ಉತ್ತರ ಅಮೆರಿಕದಲ್ಲಿ 2.58 ಮಿಲಿಯನ್ ಡಾಲರ್ ಬುಕಿಂಗ್ ಆಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬ್ರಿಟನ್ ಮತ್ತು ಐರ್ಲೆಂಡ್ನಲ್ಲಿ 3,51,200 ಡಾಲರ್ ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ 3,13,000 ಡಾಲರ್ ಅಡ್ವಾನ್ಸ್ ಬುಕಿಂಗ್ ದಾಖಲಾಗಿದೆ.
ಇನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಚಿತ್ರಕ್ಕೆ ಯು ಪ್ರಮಾಣಪತ್ರ ನೀಡಿದೆ. ಹಿಂದಿ ಆವೃತ್ತಿಯ ಅವಧಿ 195 ನಿಮಿಷಗಳಾಗಿದ್ದು, ಅಂದರೆ 3 ಗಂಟೆ 15 ನಿಮಿಷಗಳ ಕಾಲ ಸಿನಿಮಾ ಪ್ರದರ್ಶನಗೊಳ್ಳಲಿದೆ. ಒಟ್ಟಿನಲ್ಲಿ, ರಣಬೀರ್ ಕಪೂರ್ ರಾಮನಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಈ ಬೃಹತ್ ಸಿನಿಮಾ ಬಿಡುಗಡೆಯ ಮುನ್ನವೇ ಬಾಕ್ಸ್ ಆಫೀಸ್ನಲ್ಲಿ ಸಂಚಲನ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಅಡ್ವಾನ್ಸ್ ಬುಕಿಂಗ್ ಯಾವ ಮಟ್ಟಕ್ಕೆ ತಲುಪಲಿದೆ ಎಂಬ ಕುತೂಹಲ ಹೆಚ್ಚಾಗಿದೆ.






