Published : Aug 03, 2026, 07:13 AM ISTUpdated : Aug 04, 2026, 12:26 AM IST

India Latest News Live: ಈ 'ಮನಿ ಕ್ವೀನ್' ಭಾರತದ ಅತ್ಯಂತ ದುಬಾರಿ ನಟಿ.. ಸ್ಟಾರ್ ಹೀರೋ ಅಲ್ಲ, ಇವ್ರ ಕಾಲ್‌ಶೀಟ್ ಸಿಗೋದೇ ಕಷ್ಟವಂತೆ!

ಸಾರಾಂಶ

ಚೆನ್ನೈ: ಕರ್ನಾಟಕದ ಕಬಿನಿ ಜಲಾಶಯದಿಂದ ತಮಿಳುನಾಡಿಗೆ 12000 ಕ್ಯುಸೆಕ್‌ನಷ್ಟು ನೀರು ಹರಿದುಬರುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸರ್ಕಾರ, ನಮಗೆ ಅಷ್ಟು ಸಾಲದು ಎಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನೂನು ಖಾತೆ ಸಚಿವ ನಿರ್ಮಲ್‌ ಕುಮಾರ್‌, ‘ನಮಗೆ 12000 ಕ್ಯುಸೆಕ್‌ ನೀರು ಸಾಲದು. ನಮಗೆ ನಮ್ಮ ಪಾಲಿನ 17 ಟಿಎಂಸಿ ನೀರು ಕರ್ನಾಟಕದಿಂದ ಬೇಕು’ ಎಂದು ಹೇಳಿದ್ದಾರೆ. ಸಿಡಬ್ಲ್ಯುಆರ್‌ಸಿ, 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್‌ ನೀರು ಹರಿಸಲು ಸೂಚಿಸಿತ್ತು. ಇದೀಗ ಕಬಿನಿ ಜಲಾಶಯ ತುಂಬಿರುವ ಕಾರಣ ಹೆಚ್ಚುವರಿ ನೀರು ಕಾವೇರಿ ನದಿಗೆ ಸೇರಿಕೊಂಡು ಬಿಳಿಗೊಂಡ್ಲುವಿನ ಮೂಲಕ ತಮಿಳುನಾಡಿಗೆ ಹರಿದುಹೋಗುತ್ತಿದೆ.

Priyanka Chopra

12:26 AM (IST) Aug 04

ಈ 'ಮನಿ ಕ್ವೀನ್' ಭಾರತದ ಅತ್ಯಂತ ದುಬಾರಿ ನಟಿ.. ಸ್ಟಾರ್ ಹೀರೋ ಅಲ್ಲ, ಇವ್ರ ಕಾಲ್‌ಶೀಟ್ ಸಿಗೋದೇ ಕಷ್ಟವಂತೆ!

ಕಳೆದ ಆರು ವರ್ಷಗಳಿಂದ ಬಾಲಿವುಡ್‌ನಿಂದ ದೂರವಿದ್ದು ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ, ಈಗ ಹತ್ತಕ್ಕೂ ಹೆಚ್ಚು ಇಂಗ್ಲಿಷ್ ಪ್ರಾಜೆಕ್ಟ್‌ಗಳನ್ನು ಮುಗಿಸಿ ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಸಂಭಾವನೆ ಈಗ ಎಷ್ಟು ಗೊತ್ತಾ? ಶಾಕ್ ಆಗ್ತೀರಾ…!

Read Full Story

11:43 PM (IST) Aug 03

Lenin OTT - 100 ಕೋಟಿ ಕ್ಲಬ್ ಸೇರಿದ ಅಖಿಲ್ ಸಿನಿಮಾ ಓಟಿಟಿಗೆ - ಯಾವಾಗ, ಎಲ್ಲಿ ಸ್ಟ್ರೀಮಿಂಗ್?

ಅಖಿಲ್ ಅಕ್ಕಿನೇನಿ ಅವರ 'ಲೆನಿನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಳಿಸಿ, ಅವರ ವೃತ್ತಿಜೀವನದ ಮೊದಲ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಈಗ ಈ ಸಿನಿಮಾ ಓಟಿಟಿಗೆ ಬರುವ ಸಮಯ ಫಿಕ್ಸ್ ಆಗಿದ್ದು, ಈ ತಿಂಗಳಲ್ಲೇ ಡಿಜಿಟಲ್ ಪ್ರೇಕ್ಷಕರನ್ನು ರಂಜಿಸಲಿದೆ.

Read Full Story

11:09 PM (IST) Aug 03

ರಾಜಕೀಯ ಸಮಾವೇಶದಲ್ಲಿ ನಟಿ ತ್ರಿಷಾ ವಿರುದ್ಧ ಡಬಲ್‌ ಮೀನಿಂಗ್‌ ಹೇಳಿಕೆ, ಉದಯನಿಧಿ ಸ್ಟ್ಯಾಲಿನ್‌ ವಿರುದ್ಧ ವಿಪಕ್ಷಗಳ ಆಕ್ರೋಶ!

ಕಾವೇರಿ ವಿವಾದದ ಪ್ರತಿಭಟನೆಯಲ್ಲಿ, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಷಾ ಅವರನ್ನು ಕುರಿತು ನೀಡಿದ್ದಾರೆನ್ನಲಾದ ಅಸಭ್ಯ ಹೇಳಿಕೆಯು ತಮಿಳುನಾಡಿನಲ್ಲಿ ರಾಜಕೀಯ ವಿವಾದ ಸೃಷ್ಟಿಸಿದೆ.

Read Full Story

10:54 PM (IST) Aug 03

ಅಪರೂಪದ ದಾಖಲೆಯ ಹೊಸ್ತಿಲಲ್ಲಿ ರೋಹಿತ್‌ ಶರ್ಮಾ, 24 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಸಚಿನ್‌ಗೂ ಸಾಧ್ಯವಾಗಿಲ್ಲ ಈ ದಾಖಲೆ!

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಒಂದು ವಿಶಿಷ್ಟ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಇನ್ನು 16 ಆಟಗಾರರೊಂದಿಗೆ ಆಡಿದರೆ 1,000 ಆಟಗಾರರೊಂದಿಗೆ ಆಡಿದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಲಿದ್ದಾರೆ.

Read Full Story

10:45 PM (IST) Aug 03

4 ನಿಮಿಷದ ಸ್ಪೆಷಲ್ ಸಾಂಗ್‌ಗೆ 1 ಕೋಟಿ? ಕೀರ್ತಿ ಸುರೇಶ್ ಸಂಭಾವನೆ ಸತ್ಯಾಸತ್ಯತೆ ಏನು?

'ದಿ ಪ್ಯಾರಡೈಸ್' ಚಿತ್ರದಲ್ಲಿ ಕೀರ್ತಿ ಸುರೇಶ್ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗಾಗಿ ಅವರು ಪಡೆದ ಸಂಭಾವನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಇದರ ಹಿಂದಿನ ಸತ್ಯಾಂಶ ಏನು?

Read Full Story

10:13 PM (IST) Aug 03

ಮೂರು ಅದ್ಭುತ ಫೀಚರ್‌ಗಳೊಂದಿಗೆ ಆ.15ಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಹೀಂದ್ರಾ Scorpio N

ಮಹೀಂದ್ರಾ ತನ್ನ ಜನಪ್ರಿಯ ಸ್ಕಾರ್ಪಿಯೋ N ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು 2026ರ ಆಗಸ್ಟ್ 15 ರಂದು ಅನಾವರಣಗೊಳಿಸಲು ಸಿದ್ಧವಾಗಿದೆ. ಈ ಹೊಸ ಮಾದರಿಯು ಪ್ಯಾನೊರಾಮಿಕ್ ಸನ್‌ರೂಫ್, ಥಾರ್ ರಾಕ್ಸ್‌ನಿಂದ ಎರವಲು ಪಡೆದ ದೊಡ್ಡ ಟಚ್‌ಸ್ಕ್ರೀನ್ ಇದರಲ್ಲಿ ಇರಲಿದೆ.

Read Full Story

09:46 PM (IST) Aug 03

ಅಜಿತ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡ್ತಿದ್ದಾರೆ ಪತ್ನಿ ಶಾಲಿನಿ - AK 64 ಚಿತ್ರದ ಟೈಟಲ್ ರಿವೀಲ್

ನಟ ಅಜಿತ್ ಕುಮಾರ್ ಅವರ 64ನೇ ಸಿನಿಮಾಗೆ 'ಡೇರ್‌ಡೆವಿಲ್' ಅಂತ ಟೈಟಲ್ ಫಿಕ್ಸ್ ಆಗಿದೆ. ಆದಿಕ್ ರವಿಚಂದ್ರನ್ ನಿರ್ದೇಶಿಸಲಿರುವ ಈ ಚಿತ್ರವನ್ನು ಅಜಿತ್ ಪತ್ನಿ ಶಾಲಿನಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

Read Full Story

09:39 PM (IST) Aug 03

ಬಜಾಜ್‌, ಏಥರ್‌ಗೆ ನಡುಕ; ಒಂದೇ ತಿಂಗಳಲ್ಲಿ 55 ಸಾವಿರ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರಿ ದಾಖಲೆ ಬರೆದ ಕಂಪನಿ!

ಜುಲೈ 2026ರಲ್ಲಿ 55,480 ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ ಟಿವಿಎಸ್ ಮೋಟಾರ್ ಕಂಪನಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಭಾರತದ ನಂ.1 ಇವಿ ದ್ವಿಚಕ್ರ ವಾಹನ ಸಂಸ್ಥೆಯಾಗಿ ಹೊರಹೊಮ್ಮಿದೆ.

Read Full Story

09:19 PM (IST) Aug 03

'ನೀವೇ ನಿಜವಾದ ಹೀರೋ…'ದೋಸ್ತ್‌ಗಾಗಿ ಭಾವುಕ ಪೋಸ್ಟ್‌ ಹಂಚಿಕೊಂಡ ರೋಹಿತ್ ಶರ್ಮಾ!

ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ, ನಿರ್ಗಮಿತ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಕೊಡುಗೆಯನ್ನು ಶ್ಲಾಘಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

Read Full Story

08:54 PM (IST) Aug 03

'ನಟ ಸೂರ್ಯ ನನ್ನ ಬಾಲ್ಯದ ಕ್ರಶ್'.. - ಮಮಿತಾ ಬೈಜು ಹೇಳಿದ ಮತ್ತೊಂದು ಸೀಕ್ರೆಟ್ ಏನು?

ವೆಂಕಿ ಅಟ್ಲೂರಿ ನಿರ್ದೇಶನದ 'ವಿಶ್ವನಾಥ್ ಆ್ಯಂಡ್ ಸನ್ಸ್' ಚಿತ್ರದಲ್ಲಿ ಸೂರ್ಯ ಜೊತೆ ನಟಿಸಿರುವ ಮಮಿತಾ ಬೈಜು, ತಮ್ಮ ಬಾಲ್ಯದ ಕ್ರಶ್ ಜೊತೆ ನಟಿಸಿದ್ದು ಕನಸು ನನಸಾದ ಹಾಗೆ ಇದೆ ಎಂದಿದ್ದಾರೆ. ಈ ಸಿನಿಮಾ ಆಗಸ್ಟ್ 14 ರಂದು ತೆರೆಗೆ ಬರಲಿದೆ.

Read Full Story

08:09 PM (IST) Aug 03

'50 ರಿಂದ 70 ಜನ ಒಂದೇ ಬಾತ್‌ರೂಮ್ ಬಳಸುತ್ತಿದ್ದೆವು' - ಜೈಲಿನ ಕಷ್ಟದ ದಿನಗಳನ್ನು ನೆನೆದ ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್ ಅವರು 'ದಿ ಅಲಯನ್ಸ್' ರಿಯಾಲಿಟಿ ಶೋನಲ್ಲಿ ತಾವು ಜೈಲಿನಲ್ಲಿದ್ದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಕಿರಿಯ ಸಹೋದರ ಸೊಹೈಲ್ ಖಾನ್‌ಗೆ ಧೈರ್ಯ ತುಂಬಲು ಸಲ್ಮಾನ್ ಈ ಶೋಗೆ ಬಂದಿದ್ದರು.

Read Full Story

07:10 PM (IST) Aug 03

50 ಗಂಟೆ ಲೈವ್ ಸ್ಟ್ರೀಮ್, ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 75 ಲಕ್ಷ ಸಂಗ್ರಹ - ಯಾರು ಈ ಯೂಟ್ಯೂಬರ್?

Triggered Insaan: ಖ್ಯಾತ ಯೂಟ್ಯೂಬರ್ ಟ್ರಿಗರ್ಡ್ ಇನ್ಸಾನ್, ಅಸ್ಸಾಂ ಪ್ರವಾಹ ಸಂತ್ರಸ್ತರಿಗಾಗಿ 50 ಗಂಟೆಗಳ ಕಾಲ ನಿರಂತರ ಲೈವ್‌ಸ್ಟ್ರೀಮ್ ಮಾಡಿ ಸುಮಾರು 75 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ.

Read Full Story

07:07 PM (IST) Aug 03

ಲಾರೆನ್‌ಗೆ ಮುತ್ತು, ಅಂದು ಸುಶ್ಮಿತಾ ಸೇನ್ ಇಂದು ಗಾಯಕಿ ಕನಿಕಾ ಕಪೂರ್, ಗ್ರೀಸ್ ಬೀಚ್‌ಲ್ಲಿ ಲಲಿತ್ ಮೋದಿ ಮೋಜು ಮಸ್ತಿ!

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಗ್ರೀಸ್‌ನಲ್ಲಿ ಗಾಯಕಿ ಕನಿಕಾ ಕಪೂರ್ ಜೊತೆ ಪಾರ್ಟಿ ಮಾಡುತ್ತಿರುವ ವೀಡಿಯೊದಿಂದ ಮತ್ತೆ ಸುದ್ದಿಯಲ್ಲಿದ್ದಾರೆ.  ಹೊಸ ಸಂಬಂಧದ ಬಗ್ಗೆ ಚರ್ಚೆ ಹುಟ್ಟುಹಾಕಿದ್ದು,  16 ವರ್ಷಗಳ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿ ಭಾರತಕ್ಕೆ ಮರಳುವ ಸೂಚನೆ ನೀಡಿದ್ದಾರೆ.

Read Full Story

06:52 PM (IST) Aug 03

ವೃತ್ತಿ ಆಯ್ಕೆ ಬಗ್ಗೆ ಪೋಷಕರಿಗೆ ಸತ್ಯ ಹೇಳಿದ ಸನ್ನಿ ಲಿಯೋನ್ - ಇಲ್ಲಿದೆ ಕಣ್ಣೀರು ತರಿಸುವ ಕಥೆ!

Sunny Leone: ತಮ್ಮ ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ ಒಂದಾದ, ವಯಸ್ಕರ ಚಿತ್ರರಂಗಕ್ಕೆ ಸೇರುವ ನಿರ್ಧಾರವನ್ನು ಪೋಷಕರಿಗೆ ತಿಳಿಸಿದ ಘಟನೆಯನ್ನು ಸನ್ನಿ ಲಿಯೋನ್ ಒಮ್ಮೆ ನೆನಪಿಸಿಕೊಂಡಿದ್ದರು.

Read Full Story

06:30 PM (IST) Aug 03

ಹಬ್ಬದ ಫ್ಯಾಷನ್‌ಗೆ ಟಾಕ್ಸಿಕ್ ಬ್ಯೂಟಿ ಕಿಯಾರಾ ದೇಸಿ ಲುಕ್ಸ್ - ನೀವು ಕೂಡ ಟ್ರೈ ಮಾಡಿ

ಟಾಕ್ಸಿಕ್ ಬ್ಯೂಟಿ ಕಿಯಾರಾ ಅಡ್ವಾಣಿ ಅವರ ಫ್ಯಾಷನ್ ಸೆನ್ಸ್ ಸಖತ್ ಆಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮುಂಬರುವ ಹಬ್ಬದ ಸೀಸನ್‌ಗೆ ಪರ್ಫೆಕ್ಟ್ ಆಗಿರುವ ಅವರ ಕೆಲವು ಅದ್ಭುತ ಮತ್ತು ಹೊಳೆಯುವ ಡ್ರೆಸ್‌ಗಳ ಮೇಲೆ ಇಲ್ಲಿದೆ ಒಂದು ನೋಟ. ಇನ್ನಷ್ಟು ತಿಳಿಯಲು ಮುಂದೆ ಓದಿ.

Read Full Story

06:07 PM (IST) Aug 03

'ರಾಮಾಯಣ' ಶೂರ್ಪನಖಿ ಬಗ್ಗೆ ನೀವು ಕೇಳಿರದ ಕಥೆ - ರಕುಲ್ ಆಯ್ಕೆ ಹಿಂದಿನ ಇಂಟ್ರೆಸ್ಟಿಂಗ್ ಕಾರಣಗಳಿವು!

ರಾಮಾಯಣ ಸಿನಿಮಾದಲ್ಲಿ ಶೂರ್ಪನಖಿ ಪಾತ್ರಕ್ಕೆ ರಕುಲ್ ಪ್ರೀತ್ ಸಿಂಗ್ ಆಯ್ಕೆ ಆಗಿರೋದು ಯಾಕೆ ಸರಿ ಅನ್ನಿಸ್ತಿದೆ? ಶೂರ್ಪನಖಿ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಮುಂದೆ ಓದಿ.

Read Full Story

05:42 PM (IST) Aug 03

ಮ್ಯಾಚ್ ಫಿಕ್ಸಿಂಗ್‌ಗೆ ಯತ್ನ - ಭಾರತೀಯ ಮೂಲದ ಈ ಕ್ರಿಕೆಟಿಗನಿಗೆ 8 ವರ್ಷ ನಿಷೇಧ!

ಭಾರತೀಯ ಮೂಲದ ಅಮೆರಿಕ ಕ್ರಿಕೆಟಿಗ ಬೋಡುಗಂ ಅಖಿಲೇಶ್ ರೆಡ್ಡಿಗೆ ಮ್ಯಾಚ್ ಫಿಕ್ಸಿಂಗ್ ಪ್ರಯತ್ನದ ಆರೋಪದ ಮೇಲೆ ಐಸಿಸಿ ಎಂಟು ವರ್ಷಗಳ ನಿಷೇಧ ಹೇರಿದೆ. ಅಬುಧಾಬಿ ಟಿ10 ಟೂರ್ನಮೆಂಟ್‌ನಲ್ಲಿ ಪಂದ್ಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದು ಮತ್ತು ತನಿಖೆಗೆ ಅಡ್ಡಿಪಡಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
Read Full Story

04:45 PM (IST) Aug 03

'​ಚಪ್ಪಲಿ ಹೊಲಿದು ಹಣ ಉಳಿಸೋ 19ರ ಯುವತಿ' - Gen Z ಹುಡುಗಿಯ ಮಾತು ಕೇಳಿ ಬೆರಗಾದ ಜೋಹೋ ಸಿಇಒ ಶ್ರೀಧರ್ ವೆಂಬು

ಜೋಹೋ ಸಿಇಒ ಶ್ರೀಧರ್ ವೆಂಬು ಅವರು, ತಮ್ಮ ಕುಟುಂಬಕ್ಕಾಗಿ ದುಡಿಯುವ ಮತ್ತು ಪ್ರತಿ ರೂಪಾಯಿ ಉಳಿಸುವ 19 ವರ್ಷದ ಝೆನ್‌ ಜಿ ಉದ್ಯೋಗಿಯೊಬ್ಬರ ಕಥೆಯನ್ನು ಹಂಚಿಕೊಂಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಜವಾಬ್ದಾರಿಯಂತಹ ಮೌಲ್ಯಗಳು ಯಾವುದೇ ಪೀಳಿಗೆಗೆ ಸೀಮಿತವಲ್ಲ ಎಂದು ಅವರು ಈ ಮೂಲಕ ಪ್ರತಿಪಾದಿಸಿದ್ದಾರೆ.
Read Full Story

04:40 PM (IST) Aug 03

ಅಳಿವಿನ ಅಂಚಿನಲ್ಲಿರುವ ಹಾರ್ಲೆಕ್ವಿನ್ ಕಪ್ಪೆಗಳು - ವಿಷದ ರಕ್ಷಣೆ ಕಳೆದುಕೊಳ್ಳುತ್ತಿರುವ ಉಭಯಚರಗಳ ಆತಂಕಕಾರಿ ಕಥೆ!

ಅಳಿವಿನಂಚಿನಲ್ಲಿರುವ ಹಾರ್ಲೆಕ್ವಿನ್ ಕಪ್ಪೆಗಳು ತಮ್ಮ ಪ್ರಬಲ ರಕ್ಷಣಾ ವಿಷವನ್ನು ಕಳೆದುಕೊಳ್ಳುತ್ತಿವೆ ಎಂದು ಹೊಸ ಸಂಶೋಧನೆ ಬಹಿರಂಗಪಡಿಸಿದೆ. ಪರಿಸರ ಬದಲಾವಣೆ ಮತ್ತು ಮಾರಕ ಶಿಲೀಂಧ್ರದ ದಾಳಿಯಿಂದಾಗಿ ಈ ಉಭಯಚರಗಳ ಅಸ್ತಿತ್ವಕ್ಕೆ ದೊಡ್ಡ ಸವಾಲು ಎದುರಾಗಿದ್ದು, ಈ ವಿಷದ ನಷ್ಟವು ವೈದ್ಯಕೀಯ ಸಂಶೋಧನೆಗಳಿಗೂ ಹಿನ್ನಡೆಯನ್ನುಂಟುಮಾಡಿದೆ.
Read Full Story

04:27 PM (IST) Aug 03

'ಪುಷ್ಪ-ಧುರಂಧರ್' ದಾಖಲೆ ಅಳಿಸಿಹಾಕಿದ 'ರಾಮಾಯಣ'.. ಯಶ್ ಚಿತ್ರಕ್ಕೆ ಇಷ್ಟೊಂದು ಆಡಿಯೋ ರೈಟ್ಸ್!

ಇಲ್ಲಿಯ ತನಕ ಅತಿಹೆಚ್ಚು ಆಡಿಯೋ ಹಕ್ಕುಗಳು ಮಾರಾಟಗೊಂಡ ಸಿನಿಮಾಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಅಲ್ಲು ಅರ್ಜುನ್ ಪುಷ್ಪ-2 ಹಾಗೂ ರಣ್‌ವೀರ್ ಸಿಂಗ್ ನಟನೆಯ ಧುರಂಧರ್-2 ಚಿತ್ರಗಳಿದ್ದವು. 65 ಕೋಟಿಗೆ ಪುಷ್ಪ-2, 58 ಕೋಟಿಗೆ ಧುರಂಧರ್-2 ಸಿನಿಮಾಗಳ ಆಡಿಯೋ ಸೇಲ್ ಆಗಿತ್ತು. ಈಗ

Read Full Story

04:15 PM (IST) Aug 03

ಸೊಳ್ಳೆಗಳು ಕೆಲವರನ್ನೇ ಹುಡುಕಿ ಹುಡುಕಿ ಕಚ್ಚೋದು ಯಾಕೆ? ಅದಕ್ಕೆ ಐದು ರಹಸ್ಯಗಳು..!

ಕೆಲವರನ್ನು ಮಾತ್ರ ಸೊಳ್ಳೆಗಳು ಏಕೆ ಹೆಚ್ಚು ಕಚ್ಚುತ್ತವೆ ಎನ್ನುವುದಕ್ಕೆ ವೈಜ್ಞಾನಿಕ ಕಾರಣಗಳಿವೆ. 'O' ರಕ್ತದ ಗುಂಪು, ದೇಹದಿಂದ ಹೊರಸೂಸುವ ಕಾರ್ಬನ್ ಡೈಆಕ್ಸೈಡ್, ಬೆವರಿನ ವಾಸನೆ, ಮತ್ತು ಧರಿಸುವ ಬಟ್ಟೆಯ ಬಣ್ಣದಂತಹ ಅಂಶಗಳು ಸೊಳ್ಳೆಗಳನ್ನು ಆಕರ್ಷಿಸುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ.
Read Full Story

03:44 PM (IST) Aug 03

Kangana Ranaut - ಹೌದು, ನಾನು ಮಾಡರೇಟ್ ಹಿಂದೂ ಆಗಿದ್ದೆ, ಈಗ ಸಂಘಿ ಆಗ್ಬೇಕು ಆ ಟ್ರೋಲ್ ವಿಡಿಯೋಗೆ ಕಂಗನಾ ಬೆಂಕಿ ರಿಪ್ಲೆ!

2018ರ ಕಾನ್ ಪಾರ್ಟಿಯ ಹಳೆ ವಿಡಿಯೋ ವೈರಲ್ ಆದ್ಮೇಲೆ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಮಾಡರೇಟ್ ಹಿಂದೂ ಆಗಿದ್ದೆ, ಈಗ ಸಂಘಿ ಆಗ್ಬೇಕು’ ಅಂತ ಹೇಳಿದ್ದಾರೆ. Gen-Z ಯುವಜನರ ಬಗ್ಗೆಜನರೇಷನ್ ಗಟರ್ಅಂ ತ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈ ಹಳೆಯ ವಿಡಿಯೋ ಒಂದು ಟ್ರೋಲ್ ಆಗಿತ್ತು.

Read Full Story

03:43 PM (IST) Aug 03

38 ವರ್ಷಗಳ ನಂತರ ಸಾಕಿದ ದಾದಿ ಹುಡುಕಿದ ಫ್ರೆಂಚ್ ವ್ಯಕ್ತಿಯ ಕಥೆ, ತಾಯಿ ಪ್ರೀತಿಗೆ ಹಣ, ಐಷಾರಾಮಿ ಕಾರು ಉಡುಗೊರೆ!

ಫ್ರೆಂಚ್ ವ್ಯಕ್ತಿಯೊಬ್ಬರು ಬರೋಬ್ಬರಿ 38 ವರ್ಷಗಳ ಕಾಲ ಹುಡುಕಾಡಿ, ತಮ್ಮ ಬಾಲ್ಯದಲ್ಲಿ ಆರೈಕೆ ಮಾಡಿದ್ದ ದಾದಿಯನ್ನು ಪತ್ತೆಹಚ್ಚಿದ್ದಾರೆ. ಐವರಿ ಕೋಸ್ಟ್‌ನಲ್ಲಿ ವಾಸಿಸುತ್ತಿದ್ದ ಆಕೆಯನ್ನು ಭೇಟಿಯಾಗಿ, ಕೃತಜ್ಞತಾಪೂರ್ವಕವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಹಣ, ಕಾರು ಮತ್ತು ಜೀವಮಾನದ ಮಾಸಿಕ ಭತ್ಯೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮಾನವೀಯತೆಯ ಕಥೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

03:37 PM (IST) Aug 03

ನಮಗೇ 'ರಾಮಾಯಣ' ಮೊದಲ ಶೋ ತೋರಿಸಲೇಬೇಕು, ಇಲ್ಲಿದಿದ್ದರೆ ಉಗ್ರ ಪ್ರತಿಭಟನೆ; ಎಚ್ಚರಿಕೆ ಕೊಟ್ಟಿದ್ಯಾರು?

ರಾಮಾಯಣ ಸಿನಿಮಾ ನೋಡಿ, ಬಳಿಕ ಸಾವಿರಾರು ಜನರಿಗೆ ಉಚಿತವಾಗಿ ಈ ಸಿನಿಮಾ ತೋರಿಸಲು ಶ್ರೀ ರಾಮಲೀಲಾ ಸಮಿತಿ ರೆಡಿಯಿದೆ, ಆದರೆ ಅದಕ್ಕೆ ಕಂಡಿಶನ್ ಒಂದೇ—ಸಿನಿಮಾ ಶಾಸ್ತ್ರೋಕ್ತವಾಗಿರಬೇಕು! ಚಿತ್ರತಂಡ ಸಂಘಟನೆಯ ಈ ಮನವಿಗೆ ಒಪ್ಪಿ 'ಸ್ಪೆಷಲ್ ಸ್ಕ್ರೀನಿಂಗ್' ಏರ್ಪಡಿಸುತ್ತಾರಾ? ಅಥವಾ ವಿವಾದವನ್ನು ಮೈಮೇಲೆ ಎಳೆದುಕೊಳ್ತಾರಾ? ಕಾದು ನೋಡಬೇಕು.

Read Full Story

02:46 PM (IST) Aug 03

ಕೇರಳದಲ್ಲಿ ಪ್ರವಾಹ ಮಳೆಗೆ ಬಲಿಯಾದವರ ಸಂಖ್ಯೆ 15 ಕ್ಕೆ ಏರಿಕೆ, ರಕ್ಷಣಾ ಕಾರ್ಯ ಚುರುಕು

ಕೇರಳದಲ್ಲಿ ಮುಂದುವರಿದ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ 15 ಜನರು ಮೃತಪಟ್ಟಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. ಸರ್ಕಾರವು ಬೃಹತ್ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಆರಂಭಿಸಿದ್ದು, ಸಂತ್ರಸ್ತರಿಗೆ ಪರಿಹಾರ ಶಿಬಿರಗಳನ್ನು ತೆರೆದು, ಭಾರಿ ಆರ್ಥಿಕ ನೆರವನ್ನು ಘೋಷಿಸಿದೆ.
Read Full Story

02:39 PM (IST) Aug 03

ಇದೇ ನೋಡಿ ಗೂಡು ಕಟ್ಟೋ ಜಗತ್ತಿನ ಏಕೈಕ ವಿಷಕಾರಿ ಹಾವು! ಇದರ ಸ್ಪೆಷಾಲಿಟಿ ಏನು ಗೊತ್ತಾ?

ಪ್ರಪಂಚದಲ್ಲಿ ಸಾವಿರಾರು ಹಾವುಗಳಿದ್ದರೂ, ಕೇವಲ ಒಂದು ಪ್ರಭೇದ ಮಾತ್ರ ತನ್ನ ಮರಿಗಳಿಗಾಗಿ ಗೂಡು ಕಟ್ಟುತ್ತದೆ. ಸರ್ಪ ಎಲೆಗಳಿಂದ ಗೂಡು ನಿರ್ಮಿಸಿ, ಮೊಟ್ಟೆಗಳನ್ನಿಟ್ಟು, ಮರಿಗಳು ಹೊರಬರುವವರೆಗೂ ಕಾವಲು ಕಾಯುತ್ತದೆ. ಈ ವಿಶೇಷ ಗುಣದಿಂದಾಗಿ ಕಾಳಿಂಗ ಸರ್ಪವು ಹಾವುಗಳಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ.

Read Full Story

01:32 PM (IST) Aug 03

Indian IT - ಐಟಿ ಉದ್ಯೋಗಿಗಳೇ ಗಮನಿಸಿ! ಎಐ ಎಫೆಕ್ಟ್, ಜಾಗತಿಕ ಬಿಕ್ಕಟ್ಟು, FY27ರಲ್ಲಿ ಏನೆಲ್ಲ ಸವಾಲುಗಳಿವೆ ಗೊತ್ತಾ?

2027ನೇ ಹಣಕಾಸು ವರ್ಷದಲ್ಲಿ ಭಾರತದ ಐಟಿ ಕಂಪನಿಗಳು ಎಐ ಮತ್ತು ಜಾಗತಿಕ ಅಸ್ಥಿರತೆಯಿಂದಾಗಿ ನಿಧಾನಗತಿಯ ಆರಂಭವನ್ನು ಕಂಡಿವೆ. ಆದಾಯ ಬೆಳವಣಿಗೆಯ ಸವಾಲುಗಳನ್ನು ಎದುರಿಸಲು, ಈ ಕಂಪನಿಗಳು ತಮ್ಮ ಸಾಮರ್ಥ್ಯವನ್ನು ಬಲಪಡಿಸಲು ಬೇರೆ ಕಂಪನಿಗಳನ್ನು ಖರೀದಿಸುವ ಕಾರ್ಯತಂತ್ರವನ್ನು ಅನುಸರಿಸುತ್ತಿವೆ.
Read Full Story

12:50 PM (IST) Aug 03

ಡಿವೋರ್ಸ್ ಮಾರುಕಟ್ಟೆ - ಮೊದಲ ಪತಿಯಿಂದ 20 ಲಕ್ಷ, 2ನೆಯವನಿಂದ 4 ಕೋಟಿ ಪರಿಹಾರ ಪಡೆದ ಎಂಜಿನಿಯರ್​

ಎಂಬಿಎ ಪದವೀಧರೆ ಮಹಿಳೆಯೊಬ್ಬಳು ಮೊದಲ ವಿಚ್ಛೇದನದಿಂದ 20 ಲಕ್ಷ ರೂ. ಪಡೆದ ನಂತರ, ಕೇವಲ 18 ತಿಂಗಳ ದಾಂಪತ್ಯದ ಬಳಿಕ ಎರಡನೇ ಪತಿಯಿಂದ 12 ಕೋಟಿ ರೂ. ಪರಿಹಾರ ಕೇಳಿದ್ದಾಳೆ. ನ್ಯಾಯಾಲಯವು 4 ಕೋಟಿ ರೂ. ಪರಿಹಾರ ನೀಡಲು ಆದೇಶಿಸಿದ್ದು, ಈ ಪ್ರಕರಣವು ಜೀವನಾಂಶ ಕಾನೂನಿನ ದುರ್ಬಳಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

12:35 PM (IST) Aug 03

ಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ಮತ್ತೋರ್ವ ಕೋಚ್ ತಲೆದಂಡ; ಹೊಸ ಕೋಚ್ ಅಧಿಕೃತವಾಗಿ ನೇಮಕ

ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲಿಪ್ ಅವರ ಒಪ್ಪಂದವನ್ನು ಬಿಸಿಸಿಐ ಮುಂದುವರೆಸಿಲ್ಲ. ಅವರ ಸ್ಥಾನಕ್ಕೆ ಭಾರತ ಮಹಿಳಾ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆಗಿದ್ದ ಶುಭದೀಪ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಘೋಷ್ ತಮ್ಮ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
Read Full Story

12:29 PM (IST) Aug 03

ಠೇವಣಿ ಮೇಲಿನ ಬಡ್ಡಿದರ- RBI ಹೊಸ ರೂಲ್ಸ್​ - ಅಕ್ಟೋಬರ್​ 1ರಿಂದಲೇ ಭಾರಿ ಬದಲಾವಣೆ- ಯಾರಿಗೆಲ್ಲಾ ಅನ್ವಯ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ 1 ರಿಂದ ಬ್ಯಾಂಕ್ ಠೇವಣಿಗಳ ಬಡ್ಡಿದರಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು, ವಿಶೇಷವಾಗಿ ₹3 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೃಹತ್ ಠೇವಣಿಗಳ ಮೇಲೆ ಪಾರದರ್ಶಕತೆ ಮತ್ತು ಏಕರೂಪತೆಯನ್ನು ತರುವುದನ್ನು ಗುರಿಯಾಗಿಸಿಕೊಂಡಿವೆ.

Read Full Story

12:09 PM (IST) Aug 03

ವಾಘಾ ಗಡಿಯಲ್ಲಿ ಭಾರತೀಯ ಸೇನಾಧಿಕಾರಿಗೆ ಖಡಕ್ ಸಲ್ಯೂಟ್ ನೀಡಿದ ಪಾಕಿಸ್ತಾನ ರೇಂಜರ್, ವಿಡಿಯೋ

ಭಾರತೀಯ ಸೇನಾಧಿಕಾರಿಯನ್ನು ನೋಡುತ್ತಿದ್ದಂತೆ ಪಾಕಿಸ್ತಾನದ ರೇಂಜರ್ ಸಲ್ಯೂಟ್ ನೀಡಿದ ಘಟನೆ ಅಟ್ಟಾರಿ ವಾಘಾ ಗಡಿಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ವೃತ್ತಿಪರ ಗೌರವ ಎಂದು ಹಲವರು ಉಲ್ಲೇಖಿಸಿದ್ದಾರೆ.

Read Full Story

11:54 AM (IST) Aug 03

ಮತ್ತೆ ಅಪ್ಪಳಿಸಿದ ಸುನಾಮಿ.. 'ಸಬಾ ಆಜಾದ್‌ ಜೊತೆ ಚೆನ್ನಾಗಿರಿ'- ಹೃತಿಕ್ ರೋಶನ್ ವಿರುದ್ಧ ಕಿಡಿಕಿಡಿಯಾದ ಕಂಗನಾ ರಣಾವತ್!

ರಾಜಕೀಯದಲ್ಲಿ ಬ್ಯುಸಿಯಾಗಿದ್ದರೂ ಕಂಗನಾ ಅವರ 'ಫೈಟಿಂಗ್ ಸ್ಪಿರಿಟ್' ಮಾತ್ರ ಕಮ್ಮಿಯಾಗಿಲ್ಲ. ಅತ್ತ ಹೃತಿಕ್ ಈ ಬಾರಿಯಾದರೂ ಈ ವಿವಾದಕ್ಕೆ ಫುಲ್ ಸ್ಟಾಪ್ ಇಡುತ್ತಾರಾ ಅಥವಾ ಕಂಗನಾ ಅವರ ಈ 'ಟಾಂಗ್'ಗೆ ಮತ್ತೊಂದು ತಿರುಗೇಟು ನೀಡುತ್ತಾರಾ?  ಏನಿದು ಸ್ಟೋರಿ ನೋಡಿ..

Read Full Story

11:43 AM (IST) Aug 03

ಪ್ರಧಾನಿ ಮೋದಿ ಕ್ಷಮಿಸಿದ ಬಳಿಕ ಬಾಲಕಿ ಮೇಲೆ ಕೇಸ್ ರದ್ದುಗೊಳಿಸಿದ ಪೊಲೀಸ್, ನಿಟ್ಟುಸಿರು ಬಿಟ್ಟ ಕುಟುಂಬ

ಸಿಜೆಪಿ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ವಿರುದ್ದ ಅವಾಚ್ಯ ಶಬ್ದ ಪ್ರಯೋಗಿಸಿದ ಅಪ್ರಾಪ್ತ ಬಾಲಕಿ ವಿರುದ್ದ ಪ್ರಕರಣ ದಾಖಲಾಗಿತ್ತು. ಆದರೆ ಪ್ರಧಾನಿ ಮೋದಿ ವಿಡಿಯೋ ಮೂಲಕ ತಾವು ಕ್ಷಮಿಸಿರುವುದಾಗಿ ಹೇಳಿದ ಬೆನ್ನಲ್ಲೇ ಪೊಲೀಸ್ ಕೇಸ್ ರದ್ದುಗೊಳಿಸಿದ್ದಾರೆ.

Read Full Story

11:25 AM (IST) Aug 03

ಅಮೆರಿಕದಲ್ಲಿ 'ಸಂಪೂರ್ಣ ಭಗವದ್ಗೀತಾ ಪಾರಾಯಣ' - ಸಾವಿರಾರು ಕಂಠಗಳಲ್ಲಿ ದಿವ್ಯ ಸಂಕಲ್ಪ

ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 50 ವರ್ಷಗಳ ಆಧ್ಯಾತ್ಮಿಕ ಯಾತ್ರೆಯ ಅಂಗವಾಗಿ, ಅಮೆರಿಕದ ಡಲ್ಲಾಸ್‌ನಲ್ಲಿ 'ಸಂಪೂರ್ಣ ಭಗವದ್ಗೀತಾ ಪಾರಾಯಣ' ನಡೆಯಿತು. ವಿಶ್ವಶಾಂತಿಯ ಸಂಕಲ್ಪದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ 18 ದೇಶಗಳ ಸಾವಿರಾರು ಭಕ್ತರು ಭಾಗವಹಿಸಿ, ಗೀತೆಯ ಸಂದೇಶವನ್ನು ಪಠಿಸಿದರು. ಭಗವದ್ಗೀತೆಯು ಮಾನವಕುಲದ ಆಸ್ತಿಯಾಗಿದ್ದು, 'ವಸುಧೈವ ಕುಟುಂಬಕಂ' ತತ್ವವನ್ನು ಅನುಸರಿಸಲು ಸ್ವಾಮೀಜಿಯವರು ಕರೆ ನೀಡಿದರು.
Read Full Story

11:00 AM (IST) Aug 03

ಬುಮ್ರಾ ಬಿಟ್ಟು ಭಾರತದ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಬೌಲರ್‌ಗಳನ್ನು ಆಯ್ಕೆ ಮಾಡಿದ ಅರ್ಶದೀಪ್ ಸಿಂಗ್..! ಈ ದಿಗ್ಗಜ ಬೌಲರ್‌ ಬಳಿ ಕ್ಷಮೆ ಕೇಳಿದ ವೇಗಿ

ಭಾರತದ ವೇಗಿ ಅರ್ಶದೀಪ್ ಸಿಂಗ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಭಾರತೀಯ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ತಮ್ಮ ನೆಚ್ಚಿನ ಆಟಗಾರ ಭುವನೇಶ್ವರ್ ಕುಮಾರ್‌ಗೆ ಅಗ್ರಸ್ಥಾನ ನೀಡಿರುವ ಅವರು, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್ ಹಾಗೂ ರವಿಚಂದ್ರನ್ ಅಶ್ವಿನ್‌ರನ್ನು ಪಟ್ಟಿಯಲ್ಲಿ ಹೆಸರಿಸಿದ್ದಾರೆ.
Read Full Story

09:28 AM (IST) Aug 03

ಕಾಮನ್‌ವೆಲ್ತ್‌ ಗೇಮ್ಸ್‌ 2026 - ಸತತ 7ನೇ ಬಾರಿಯೂ ಭಾರತ ಟಾಪ್‌-5! ಪದಕ ಕಡಿಮೆಯಾದ್ರೂ ಭಾರತದಿಂದ ಶ್ರೇಷ್ಠ ಸಾಧನೆ

2026ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 13 ಚಿನ್ನ ಸೇರಿ ಒಟ್ಟು 39 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಕಳೆದ ಆವೃತ್ತಿಗಿಂತ ಕಡಿಮೆ ಪದಕಗಳನ್ನು ಗೆದ್ದರೂ, ಬಾಕ್ಸಿಂಗ್ ಮತ್ತು ಜುಡೋದಲ್ಲಿನ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನದಿಂದಾಗಿ ಇದನ್ನು ಭಾರತದ ಅತ್ಯುತ್ತಮ ಸಾಧನೆ ಎಂದು ಪರಿಗಣಿಸಲಾಗಿದೆ.
Read Full Story

08:42 AM (IST) Aug 03

ಮುಂಗಾರು ಮಳೆ ಪವಾಡ - 1997ರ ರೀತಿ ವಿದ್ಯಮಾನದ ಸುಳಿವು, ವಿಶ್ವ ಹವಾಮಾನ ಸಂಸ್ಥೆ ವರದಿ

ಎಲ್‌ನಿನೋ ಪರಿಣಾಮದಿಂದ ದೇಶದಲ್ಲಿ ಮಳೆ ಕೊರತೆ ಉಂಟಾಗಿದೆ. ಆದರೆ, ವಿಶ್ವ ಹವಾಮಾನ ಸಂಸ್ಥೆಯ ವರದಿ ಪ್ರಕಾರ, 'ಪಾಸಿಟಿವ್ ಇಂಡಿಯನ್ ಓಷನ್ ಡೈಪೋಲ್' (ಐಒಡಿ) ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಇದು 1997ರಂತೆ ಮುಂಗಾರಿನ ದ್ವಿತೀಯಾರ್ಧದಲ್ಲಿ ಉತ್ತಮ ಮಳೆಗೆ ಕಾರಣವಾಗಬಹುದು.
Read Full Story

More Trending News