ಇಲ್ಲಿಯ ತನಕ ಅತಿಹೆಚ್ಚು ಆಡಿಯೋ ಹಕ್ಕುಗಳು ಮಾರಾಟಗೊಂಡ ಸಿನಿಮಾಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಅಲ್ಲು ಅರ್ಜುನ್ ಪುಷ್ಪ-2 ಹಾಗೂ ರಣ್‌ವೀರ್ ಸಿಂಗ್ ನಟನೆಯ ಧುರಂಧರ್-2 ಚಿತ್ರಗಳಿದ್ದವು. 65 ಕೋಟಿಗೆ ಪುಷ್ಪ-2, 58 ಕೋಟಿಗೆ ಧುರಂಧರ್-2 ಸಿನಿಮಾಗಳ ಆಡಿಯೋ ಸೇಲ್ ಆಗಿತ್ತು. ಈಗ
ಆಡಿಯೋ ರೈಟ್ಸ್‌ನಲ್ಲಿ ಹೊಸ ದಾಖಲೆ ಬರೆದ ರಾಮಾಯಣ!
ರಾಕಿಂಗ್ ಸ್ಟಾರ್ಯಶ್ (Rocking Star Yash) ಅವರ ಮತ್ತೊಂದು ದೊಡ್ಡ ಕನಸು ನನಸಾಗಿದೆ. ಇವತ್ತು ಇಡೀ ಸಿನಿಮಾ ಜಗತ್ತು ರಾಮಾಯಣ ಸಿನಿಮಾದ ಬಗ್ಗೆ ಮಾತಾಡುತ್ತಿದೆ. ರಾವಣನ ಟ್ರೈಲರ್ನೋಡಿ ವಾವ್ಹ್ಎನ್ನುತ್ತಿದ್ದಾರೆ. ಆ ಟ್ರೈಲರ್ದಾಖಲೆ ಬರೆಯುತ್ತಿದೆ. ಹಾಗಾದ್ರೆ ರಾಮಾಯಣ ಟ್ರೈಲರ್ ಮಾಡಿರೋ ರೆಕಾರ್ಡ್ ಏನು..? ಇಲ್ಲಿರೋ ಮೈನಸ್ಗಳು ಹೇಗೆಲ್ಲಾ ಹೈಲೆಟ್ ಆಗುತ್ತಿವೆ ಅಂತ ನೋಡೋಣ ಬನ್ನಿ..
ಡ್ರೆಂಡಿಂಗ್ನಲ್ಲಿ ನಂ-1 ಪಟ್ಟಕ್ಕೇರಿದ ರಾಮಾಯಣ!
ರಾಮಾಯಣ ಭಾರತೀಯ ಚಿತ್ರರಂಗದ ದುಬಾರಿ ಸಿನಿಮಾ. ಇದರ ಬಜೆಟ್ ಬರೋಬ್ಬರಿ 4 ಸಾವಿರ ಕೋಟಿ ಅಂದ್ರೆ ನೀವು ನಂಬಲೇಬೇಕು. ಬಜೆಟ್ ಕೇಳಿ ಸುಸ್ತಾದ ಕೆಲ ನೆಟ್ಟಿಗರು ಕೊಂಕು ಮಾತಾಡ್ತಿದ್ರು. ಅಂಥವ್ರಿಗೆ ಟ್ರೈಲರ್ ಮೂಲಕ ಉತ್ತರ ನೀಡಿದೆ. ಬ್ರಾಹ್ಮಿ ಮಹೂರ್ಥದಲ್ಲಿ ಬಂದ ರಾಮಾಯಣ ಟ್ರೈಲರ್ ಬಿಡುಗಡೆ ಆಗಿ ಕೇವರ ಒಂಭತ್ತು ಗಂಟೆ ಅವಧಿಯಲ್ಲಿ ಬರೋಬ್ಬರಿ 10 ಮಿಲಿಯನ್ಸ್ಗೂ ಹೆಚ್ಚು ವೀಕ್ಷಣೆ ಕಂಡಿದೆ. ವಿಶ್ವ ಸಿನಿ ಜಗತ್ತಲ್ಲೇ ಟ್ರೆಂಡಿಂಗ್ ನಂಬರ್ಒನ್ ಪಟ್ಟಕ್ಕೇರಿದೆ.
ರಾಮ-ರಾವಣನ ಹೊಸ ಯುಗಾರಂಭ.. ಐತಿಹಾಸಿಕ ದಾಖಲೆ..!
ರಾಮಾಯಣ ಎರಡು ಭಾಗಗಳಿಗೆ ಸುಮಾರು 3500 ರಿಂದ 4 ಸಾವಿರ ಕೋಟಿ ರೂಪಾಯಿ ಹಣವನ್ನ ವ್ಯಯಿಸಲಾಗಿದೆ. ನಮಿತ್ ಮಲ್ಹೋತ್ರಾ ಹಾಗು ನಮ್ಮ ಯಶ್ ಬಂಡವಾಳ ಹೂಡಿರೋ ಈ ಸಿನಿಮಾದ ಆಡಿಯೋ ಹಕ್ಕಿನಿಂದ ಬರೋಬ್ಬರಿ 75 ಕೋಟಿ ದುಡ್ಡನ್ನ ಬಾಚಿಕೊಂಡಿದ್ದಾರೆ. ಮ್ಯೂಸಿಕ್‌ಗಾಗಿ ಅತಿ ಹೆಚ್ಚು ಬೆಲೆ ಪಡೆದ ಇಂಡಿಯನ್ ಸಿನಿಮಾ ರಾಮಾಯಣ ಆಗಿದೆ.
ಪುಷ್ಪ-ಧುರಂಧರ್ ದಾಖಲೆ ಧೂಳೀಪಟ.. 75 ಕೋಟಿ ಆಡಿಯೋ ರೈಟ್ಸ್
ಅಂದಹಾಗೆ ಇಲ್ಲಿಯ ತನಕ ಅತಿಹೆಚ್ಚು ಆಡಿಯೋ ಹಕ್ಕುಗಳು ಮಾರಾಟಗೊಂಡ ಸಿನಿಮಾಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಅಲ್ಲು ಅರ್ಜುನ್ ಪುಷ್ಪ-2 ಹಾಗೂ ರಣ್‌ವೀರ್ ಸಿಂಗ್ ನಟನೆಯ ಧುರಂಧರ್-2 ಚಿತ್ರಗಳಿದ್ದವು. 65 ಕೋಟಿಗೆ ಪುಷ್ಪ-2, 58 ಕೋಟಿಗೆ ಧುರಂಧರ್-2 ಸಿನಿಮಾಗಳ ಆಡಿಯೋ ಸೇಲ್ ಆಗಿತ್ತು.
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..


