ಸಿಜೆಪಿ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ವಿರುದ್ದ ಅವಾಚ್ಯ ಶಬ್ದ ಪ್ರಯೋಗಿಸಿದ ಅಪ್ರಾಪ್ತ ಬಾಲಕಿ ವಿರುದ್ದ ಪ್ರಕರಣ ದಾಖಲಾಗಿತ್ತು. ಆದರೆ ಪ್ರಧಾನಿ ಮೋದಿ ವಿಡಿಯೋ ಮೂಲಕ ತಾವು ಕ್ಷಮಿಸಿರುವುದಾಗಿ ಹೇಳಿದ ಬೆನ್ನಲ್ಲೇ ಪೊಲೀಸ್ ಕೇಸ್ ರದ್ದುಗೊಳಿಸಿದ್ದಾರೆ.

ನವದೆಹಲಿ (ಆ.03) ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪ್ರತಿಭಟನೆ ವೇಳೆ ಹಲವರು ಪ್ರಧಾನಿ ನರೇಂದ್ರ ಮೋದಿ, ಮೋದಿ ತಾಯಿ, ಭಾರತೀಯ ಸೇನೆ, ಪೊಲೀಸ್, ಭದ್ರತಾ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅತೀರೇಖದ ವರ್ತನೆ ಹಾಗೂ ಅತ್ಯಂತ ಕೀಳು ಮಟ್ಟದ ಶಬ್ದ ಪ್ರಯೋಗಿಸಿದವರ ವಿರುದ್ದ ಪೊಲೀಸರು ಪ್ರಕರಣ ದಾಖಲರು ಆರಂಭಿಸುತ್ತಿದ್ದಂತೆ ಒಬ್ಬರ ಹಿಂದೆ ಒಬ್ಬರಾಗಿ ಕ್ಷಮೆ ಕೇಳುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿತ್ತು. ಹೀಗೆ ಮೋದಿಯನ್ನು ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸಿದ ಅಪ್ರಾಪ್ತ ಬಾಲಕಿ ಮೇಲಿನ ಕೇಸ್‌ನ್ನು ಡೆಲ್ಲಿ ಪೊಲೀಸ್ ರದ್ದುಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಮೂಲಕ ತನ್ನನ್ನು ನಿಂದಿಸಿದ ಮಕ್ಕಳನ್ನು ಕ್ಷಮಿಸಿದ್ದೇನೆ ಎಂದಿದ್ದರು. ಇದರ ಬೆನ್ನಲ್ಲೇ ಪೊಲೀಸರು ಕೇಸ್ ರದ್ದುಗೊಳಿಸಿದ್ದಾರೆ.

ಕ್ಷಮೆ ಕೇಳಿ ಬಾಲಕಿ ವಿಡಿಯೋ ಪೋಸ್ಟ್

ಜಂತರ್ ಮಂತರ್ ಪ್ರತಿಭಟನೆಯಲ್ಲಿ ಉಗ್ರ ಶಬ್ದಗಳ ಪ್ರಯೋಗಿಸಿದ ಬಾಲಕಿ ಭಾರಿ ಆಕ್ರೋಶ, ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಕುಟುಂಬ ತೀವ್ರ ಸಮಸ್ಯೆಗೆ ಸಿಲುಕಿತ್ತು. ಇತ್ತ ಡೆಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದರಿಂದ ಕುಟುಂಬ ಕಂಗಾಲಾಗಿತ್ತು. ಈ ಘಟನೆಗಳ ಬೆನ್ನಲ್ಲೇ ಅಪ್ರಾಪ್ತ ಬಾಲಕಿ ವಿಡಿಯೋ ಮೂಲಕ ತನ್ನನ್ನು ಕ್ಷಮಿುವಂತೆ ಬೇಡಿಕೊಂಡಿದ್ದಳು. ತಾನು ಅಂದಿನ ಅವೇಷದಲ್ಲಿ ತಪ್ಪಾಗಿ ನಿಂದಿಸಿದ್ದೇನೆ. ತನ್ನಿಂದ ತಪ್ಪಾಗಿದೆ. ಹೀಗಾಗಿ ದಯವಿಟ್ಟು ಕ್ಷಮಿಸುವಂತೆ ಮೋದಿಯನ್ನು ಮನವಿ ಮಾಡಿಕೊಂಡಿದ್ದರು.

ವಿಡಿಯೋ ಮೂಲಕ ಮೋದಿ ಕ್ಷಮೆ

ಅಪ್ರಾಪ್ತ ಬಾಲಕಿ ಸೇರಿದಂತೆ ಹಲವರು ತಮ್ಮಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದರು. ಪೊಲೀಸ್ ಕೇಸ್ ಬೀಳುತ್ತಿದ್ದಂತೆ ಹಲವರು ಮೋದಿ ಬಳಿ ಕ್ಷಮೆ ಕೇಳಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ವಿಡಿಯೋ ಮೂಲಕ ಮಾತನಾಡಿದ್ದರು. ಮಕ್ಕಳು ತಪ್ಪು ಮಾಡುವುದು ಸಹಜ. ಅವರನ್ನು ಕ್ಷಮಿಸಿ, ತಿದ್ದಿ ಮುನ್ನಡೆಸುವುದು ನಮ್ಮ ಜವಾಬ್ದಾರಿ. ಮಕ್ಕಳು ತಪ್ಪಿನಿಂದ ಏನಾದರು ಹೇಳಿದರೆ ಅವರ ವಿರುದ್ದ ಪ್ರಕರಣ ದಾಖಲಿಸುವುದು ಬೇಡ. ಅವರ ಜೀವನ ಪೊಲೀಸ್ ಠಾಣೆ, ಕೋರ್ಟ್ ಹತ್ತಿ ಹಾಳಾಗಲಿದೆ. ಹೀಗಾಗಿ ತಮ್ಮನ್ನು ನಿಂದಿಸಿದ ಮಕ್ಕಳನ್ನು ಕ್ಷಮಿಸಿದ್ದೇನೆ ಎಂದು ವಿಡಿಯೋ ಮೂಲಕ ಹೇಳಿದ್ದರು.

ಬಾಲಕಿ ಕ್ಷಮೆ ಕೇಳಿದ ಬೆನ್ನಲ್ಲೇ ಬಾಲಕಿ ತಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ಮಗಳು ತಪ್ಪು ಮಾಡಿದ್ದಾಳೆ. ದಯವಿಟ್ಟು ಕ್ಷಮೆ ನೀಡಬೇಕು ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದರು. ಈ ವಿಡಿಯೋ ಬೆನ್ನಲ್ಲೇ ಆಪ್ ನಾಯಕ ಅರವಿಂದಗ್ ಕೇಜ್ರಿವಾಲ್, ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಸೇರಿದಂತೆ ಹಲವು ವಿದ್ಯಾರ್ಥಿಗಳ ಮೇಲಿನ ಕೇಸ್ ಹಿಂಪಡೆಯಲು ಒತ್ತಾಯಿಸಿದ್ದರು.