ಇದೇ ನೋಡಿ ಗೂಡು ಕಟ್ಟೋ ಜಗತ್ತಿನ ಏಕೈಕ ವಿಷಕಾರಿ ಹಾವು! ಇದರ ಸ್ಪೆಷಾಲಿಟಿ ಏನು ಗೊತ್ತಾ?
ಪ್ರಪಂಚದಲ್ಲಿ ಸಾವಿರಾರು ಹಾವುಗಳಿದ್ದರೂ, ಕೇವಲ ಒಂದು ಪ್ರಭೇದ ಮಾತ್ರ ತನ್ನ ಮರಿಗಳಿಗಾಗಿ ಗೂಡು ಕಟ್ಟುತ್ತದೆ. ಸರ್ಪ ಎಲೆಗಳಿಂದ ಗೂಡು ನಿರ್ಮಿಸಿ, ಮೊಟ್ಟೆಗಳನ್ನಿಟ್ಟು, ಮರಿಗಳು ಹೊರಬರುವವರೆಗೂ ಕಾವಲು ಕಾಯುತ್ತದೆ. ಈ ವಿಶೇಷ ಗುಣದಿಂದಾಗಿ ಕಾಳಿಂಗ ಸರ್ಪವು ಹಾವುಗಳಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ.

ಗೂಡು ಕಟ್ಟುವ ಹಾವು
ನಾವು ಚಿಕ್ಕಂದಿನಿಂದ ಏನು ಓದಿದ್ದೇವೆ? ಇರುವೆಗಳು ಕಟ್ಟಿದ ಹುತ್ತದಲ್ಲಿ ಹಾವುಗಳು ವಾಸಿಸುತ್ತವೆ ಅಂತ. ಹಕ್ಕಿಗಳು ಗೂಡು ಕಟ್ಟುತ್ತವೆ ಅನ್ನೋದು ನಮಗೆ ಗೊತ್ತು. ಆದರೆ ಹಾವುಗಳೂ ಗೂಡು ಕಟ್ಟುತ್ತವೆ ಅಂತ ಎಂದಾದರೂ ಕೇಳಿದ್ದೀರಾ? ಎಲ್ಲಾ ಹಾವುಗಳು ಗೂಡು ಕಟ್ಟಲ್ಲ, ಆದರೆ ಜಗತ್ತಿನಲ್ಲಿ ಒಂದೇ ಒಂದು ಹಾವು ಮಾತ್ರ ತಾನಾಗಿಯೇ ಎಲೆಗಳನ್ನು ಸೇರಿಸಿ ಗೂಡು ಕಟ್ಟುತ್ತದೆ. ಅದು ಯಾವ ಹಾವು? ಅದರ ಬಗ್ಗೆ ಈಗ ತಿಳಿಯೋಣ ಬನ್ನಿ.
ಕಾಳಿಂಗ ಸರ್ಪ (King Cobra)
ಸಾಮಾನ್ಯವಾಗಿ ಹಾವುಗಳು ಮೊಟ್ಟೆ ಇಟ್ಟು ಅವುಗಳನ್ನು ಅಲ್ಲೇ ಬಿಟ್ಟು ಹೋಗುತ್ತವೆ. ಆದರೆ, ಒಂದು ಹಾವು ಮಾತ್ರ ಬೇರೆ ಹಾವುಗಳಿಗಿಂತ ಭಿನ್ನವಾಗಿ ನಡೆದುಕೊಳ್ಳುತ್ತದೆ. ಇದು ಮೊಟ್ಟೆ ಇಡುವುದಷ್ಟೇ ಅಲ್ಲ, ತನ್ನ ಮರಿಗಳಿಗಾಗಿ ಗೂಡನ್ನು ಕಟ್ಟುತ್ತದೆ. ಅಷ್ಟೇ ಅಲ್ಲ, ಮರಿಗಳು ಹೊರಬರುವವರೆಗೂ ಆ ಗೂಡಿನ ಬಳಿಯೇ ಕಾವಲು ಕಾಯುತ್ತದೆ. ಅದೇ ಕಾಳಿಂಗ ಸರ್ಪ (King Cobra). ವಿಶ್ವದಾದ್ಯಂತ 4,000ಕ್ಕೂ ಹೆಚ್ಚು ಹಾವಿನ ಪ್ರಭೇದಗಳಿದ್ದು, ಅವುಗಳಲ್ಲಿ ಗೂಡು ಕಟ್ಟುವ ಏಕೈಕ ಹಾವು ಕಾಳಿಂಗ ಸರ್ಪ.
20 ರಿಂದ 40 ಮೊಟ್ಟೆ
ಹೆಣ್ಣು ಕಾಳಿಂಗ ಸರ್ಪ ಕಾಡಿನಲ್ಲಿ ಒಣಗಿದ ಎಲೆಗಳು, ಸಣ್ಣ ಕೊಂಬೆಗಳು ಮತ್ತು ಹುಲ್ಲನ್ನು ತನ್ನ ದೇಹದಿಂದ ತಳ್ಳಿ ಒಂದು ದೊಡ್ಡ ಗೂಡನ್ನು ಸ್ವತಃ ಸಿದ್ಧಪಡಿಸುತ್ತದೆ. ಈ ಗೂಡಿನಲ್ಲಿ ಹಾವು 20 ರಿಂದ 40 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆ ಇಟ್ಟ ನಂತರ ಕಾಳಿಂಗ ಸರ್ಪ ಗೂಡನ್ನು ಬಿಟ್ಟು ಹೋಗುವುದಿಲ್ಲ. ಮರಿಗಳು ಹೊರಬರುವವರೆಗೂ ಹಲವು ವಾರಗಳ ಕಾಲ ಗೂಡಿನ ಬಳಿ ಕಾವಲು ಕಾಯುತ್ತದೆ.
ಹುಟ್ಟಿನಿಂದಲೇ ವಿಷಪೂರಿತ
ಗೂಡಿಗೆ ಬಳಸಿದ ಎಲೆಗಳು ಕೊಳೆಯುವುದರಿಂದ, ಅವುಗಳಿಂದ ನೈಸರ್ಗಿಕವಾಗಿ ಶಾಖ ಉತ್ಪತ್ತಿಯಾಗುತ್ತದೆ. ಈ ಶಾಖಕ್ಕೆ ಮೊಟ್ಟೆಗಳು ಬೇಗ ಮರಿಯಾಗುತ್ತವೆ. ಹಾವು ಮರಿಗಳು ಮೊಟ್ಟೆಯಿಂದ ಹೊರಬರುವ ಸಮಯಕ್ಕೆ, ತಾಯಿ ಕಾಳಿಂಗ ಸರ್ಪ ಅಲ್ಲಿಂದ ಹೊರಟುಹೋಗುತ್ತದೆ. ಯಾಕೆಂದರೆ, ಆ ಮರಿಗಳು ಹುಟ್ಟಿನಿಂದಲೇ ವಿಷಪೂರಿತವಾಗಿರುತ್ತವೆ ಮತ್ತು ಸ್ವತಂತ್ರವಾಗಿ ಬದುಕಬಲ್ಲವು. ಅದಕ್ಕಾಗಿಯೇ ಅವುಗಳನ್ನು ಬಿಟ್ಟು ಹೋಗುತ್ತದೆ. ಈ ಹಾವು ಕಟ್ಟುವ ಗೂಡುಗಳು ನಮಗೆ ಬಹಳ ಅಪರೂಪವಾಗಿ ಕಾಣಸಿಗುತ್ತವೆ.
ಕಾಳಿಂಗ ಸರ್ಪ ಅತ್ಯಂತ ಬುದ್ಧಿವಂತ ಹಾವು.
ಎಲ್ಲಾ ಹಾವುಗಳಿಗಿಂತ ಕಾಳಿಂಗ ಸರ್ಪ ಅತ್ಯಂತ ಬುದ್ಧಿವಂತ ಹಾವು. ಯಾವುದೇ ಅಪಾಯವನ್ನು ಎಲ್ಲಕ್ಕಿಂತ ಮುಂಚಿತವಾಗಿ ಇದು ಗ್ರಹಿಸುತ್ತದೆ. ವಿಶೇಷವಾಗಿ, ತನ್ನ ಗೂಡಿನ ಬಳಿ ಯಾರಾದರೂ ಬಂದರೆ, ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಕಚ್ಚಲು ಕೂಡ ಹಿಂಜರಿಯುವುದಿಲ್ಲ. ಇದೇ ಕಾಳಿಂಗ ಸರ್ಪ ಮತ್ತು ಇತರ ಹಾವುಗಳಿಗಿರುವ ಮುಖ್ಯ ವ್ಯತ್ಯಾಸ.
ವಿಶ್ವದ ಅತಿ ಉದ್ದದ ವಿಷಪೂರಿತ ಹಾವು
ಇದು ವಿಶ್ವದ ಅತಿ ಉದ್ದದ ವಿಷಪೂರಿತ ಹಾವು ಕೂಡ ಹೌದು. ಈ ಹಾವು ಸುಮಾರು 5.5 ಮೀಟರ್ ಅಂದರೆ 18 ಅಡಿಗಳಷ್ಟು ಉದ್ದವಿರುತ್ತದೆ. ಗೂಡು ಕಟ್ಟುವುದು, ಮೊಟ್ಟೆಗಳನ್ನು ರಕ್ಷಿಸುವುದು, ಮತ್ತು ನೈಸರ್ಗಿಕ ಶಾಖದಿಂದ ಅವುಗಳ ಬೆಳವಣಿಗೆಗೆ ಸಹಾಯ ಮಾಡುವುದು - ಈ ಗುಣಗಳಿಂದಾಗಿ ಕಾಳಿಂಗ ಸರ್ಪ ಎಲ್ಲಾ ಹಾವುಗಳಲ್ಲಿ ವಿಶೇಷ ಸ್ಥಾನ ಪಡೆದಿದೆ. ಇದೇ ಕಾರಣಕ್ಕೆ ಇದನ್ನು 'ಗೂಡು ಕಟ್ಟುವ ಜಗತ್ತಿನ ಏಕೈಕ ಹಾವು' ಎಂದು ಕರೆಯುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

