ದಾವೋಸ್: ಭಾರತದ ಜೊತೆಗೆ ಶೀಘ್ರವೇ ನಾವು ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ‘ಪ್ರಧಾನಿ ಮೋದಿ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಅವರು ನನ್ನ ಆತ್ಮೀಯ ಸ್ನೇಹಿತ. ಶೀಘ್ರವೇ ನಾವು ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತ-ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ ಕೀರ್ತಿಯ ಗರಿ ತೊಟ್ಟಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅದೇ ರಾಗ ಹಾಡಿದ್ದಾರೆ. ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಸಮಾವೇಶದಲ್ಲಿ ಮಾತನಾಡುವ ವೇಳೆ, ‘ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು 71ನೇ ಸಲ ಬಡಾಯಿ ಕೊಚ್ಚಿಕೊಂಡಿದ್ದಾರೆ.
09:25 AM (IST) Jan 22
ದುಬೈ: ಫೆಬ್ರವರಿ 07ರಿಂದ ಆರಂಭವಾಗಬೇಕಿರುವ ಐಸಿಸಿ ಟಿ20 ವಿಶ್ವಕಪ್ ಬಗ್ಗೆ ವಿವಾದ ಮುಂದುವರೆದಿದ್ದು, ಬಾಂಗ್ಲಾದೇಶ ಪಟ್ಟು ಸಡಿಲಿಸಿಲ್ಲ. ಆದರೆ ಇದೀಗ ಬಾಂಗ್ಲಾದೇಶ ಮ್ಯಾಚ್ ಬೇರೆಡೆಗೆ ಶಿಫ್ಟ್ ಮಾಡಬೇಕೇ-ಬೇಡವೇ ಎನ್ನುವ ಬಗ್ಗೆ ನಡೆಸಿದ ಮತ ಚಲಾವಣೆಯಲ್ಲಿ ಬಾಂಗ್ಲಾದೇಶಕ್ಕೆ ಮುಖಭಂಗವಾಗಿದೆ.
08:10 AM (IST) Jan 22
ಬೆಂಗಳೂರಿನ ಬೀದಿಯಲ್ಲಿ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬರು ಸೀರೆಯುಟ್ಟಿದ್ದ ಜರ್ಮನ್ ಯುವತಿ ಲಿಜ್ ಅವರ ಫೋಟೋಗಳನ್ನು ತೆಗೆದಿದ್ದಾರೆ. ಈ ಫೋಟೋಗಳು ಮತ್ತು ವೀಡಿಯೋಗಳು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ಸೌಂದರ್ಯಕ್ಕೆ ಮಾರುಹೋಗಿ 'ಹೊಸ ನ್ಯಾಷನಲ್ ಕ್ರಶ್' ಎಂದು ಕರೆಯುತ್ತಿದ್ದಾರೆ.
07:14 AM (IST) Jan 22
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪಾಸಣೆ ನೆಪದಲ್ಲಿ ಅಸಭ್ಯವಾಗಿ ಸ್ಪರ್ಶಿಸಿ ತಬ್ಬಿಕೊಂಡು ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.