1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ತೀರ್ಪಿನಿಂದ ಆಕ್ರೋಶಗೊಂಡ ಸಂತ್ರಸ್ತರ ಕುಟುಂಬಗಳು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ದಂಗೆಯಲ್ಲಿ 2,733 ಜನರು ಮೃತಪಟ್ಟಿದ್ದರು.

ನವದೆಹಲಿ: ಇಂದಿರಾಗಾಂಧಿ ಹತ್ಯೆಯ ನಂತರ 1984ರ ನವಂಬರ್ 1 ರಂದು ನಡೆದ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ದಂಗೆಯ ಪ್ರಮುಖ ಆರೋಪಿಯಾಗಿದ್ದ ಕಾಂಗ್ರೆಸ್ ನಾಯಕ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ದೆಹಲಿ ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದೆ. 1984 ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಜನಕ್‌ಪುರಿ ಮತ್ತು ವಿಕಾಸಪುರಿ ಪ್ರದೇಶಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋ ಸಜ್ಜನ್‌ಕುಮಾರ್ ಮೇಲಿತ್ತು. ಆದರೆ ಈಗ ಅವರನ್ನು ದೆಹಲಿ ನ್ಯಾಯಾಲಯದ ನ್ಯಾಯಾಧೀಶ ದಿಗ್ ವಿನಯ್ ಸಿಂಗ್ ಮೌಖಿಕವಾಗಿ ಖುಲಾಸೆಗೊಳಿಸಿದ್ದಾರೆ, ಆದರೆ ವಿವರವಾದ ಖುಲಾಸೆಗೆ ಸಮಂಜಸವಾದ ಕಾರಣವಿರುವ ಆದೇಶ ಇನ್ನೂ ಬಿಡುಗಡೆಯಾಗಿಲ್ಲ.

ಈ ಪ್ರಕರಣದಲ್ಲಿ ಸಜ್ಜನ್‌ ಕುಮಾರ್, ತಾನು ನಿರಪರಾಧಿ ಮತ್ತು ಈ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದು ವಾದಿಸಿದ್ದರು. ತಾನು ಎಂದಿಗೂ ಘಟನೆಯಲ್ಲಿ ಭಾಗಿಯಾಗಿಲ್ಲ ಮತ್ತು ಕನಸಿನಲ್ಲಿಯೂ ಸಹ ಭಾಗಿಯಾಗಿರಲು ಸಾಧ್ಯವಿಲ್ಲ, ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಒಂದೇ ಒಂದು ಪುರಾವೆಯೂ ದಾಖಲೆಯಲ್ಲಿಲ್ಲ ಎಂದು ಕುಮಾರ್ ನ್ಯಾಯಾಲಯದಲ್ಲಿ ವಾದಿಸಿದ್ದರು.

ಘಟನೆ ನಡೆದ ಸ್ಥಳದಲ್ಲಿ ಪ್ರಾಸಿಕ್ಯೂಷನ್, ಅವರ ಹಾಜರಾತಿಯನ್ನು ಸಾಬೀತುಪಡಿಸಲು ವಿಫಲವಾದ ಕಾರಣ ಮಾಜಿ ಕಾಂಗ್ರೆಸ್ ನಾಯಕನನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದೆ ಎಂದು ಸಜ್ಜನ್‌ ಕುಮಾರ್ ಅವರ ವಕೀಲರು ತಿಳಿಸಿದ್ದಾರೆ. ಘಟನೆ ನಡೆದು 36 ವರ್ಷಗಳ ನಂತರ ಕುಮಾರ್ ಅವರ ಹೆಸರನ್ನು ಪ್ರಕರಣಕ್ಕೆ ಸೇರಿಸಲಾಗಿತ್ತು, ಇದು ಆರೋಪಗಳ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸಿದೆ ಎಂದು ವಕೀಲರು ವಾದಿಸಿದ್ದಾರೆ.

ವಿಕಾಸಪುರಿ ಮತ್ತು ಜನಕ್‌ಪುರಿ ಪ್ರಕರಣಗಳಲ್ಲಿ ಅವರ ವಿರುದ್ಧದ ಯಾವುದೇ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದೆ. ಅವರ ಉಪಸ್ಥಿತಿಯನ್ನು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅವರನ್ನು ಗುರಿಯಾಗಿಸಿ ಈ ಆರೋಪ ಮಾಡಲಾಗಿದೆ ಎಂದು ನಾವು ನ್ಯಾಯಾಲಯಕ್ಕೆ ತಿಳಿಸಿದ್ದೆವು. ಇಲ್ಲಿಯವರೆಗೆ ಯಾವುದೇ ಸಾಕ್ಷಿಗಳು ಅವರ ಹೆಸರನ್ನು ಹೇಳಿಲ್ಲ, ಆದರೆ ಈಗ 32 ವರ್ಷಗಳ ನಂತರ ಅವರನ್ನು ಖುಲಾಸೆಗೊಳಿಸಿದ್ದಕ್ಕಾಗಿ ನಾವು ನ್ಯಾಯಾಂಗಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಮಾಜಿ ಸಂಸದ ಸಜ್ಜನ್ ಕುಮಾರ್ ಶರ್ಮಾ ಅವರ ವಕೀಲ ಅನಿಲ್ ಕುಮಾರ್ ಶರ್ಮಾ ಹೇಳಿದ್ದಾರೆ.

Scroll to load tweet…

ದೆಹಲಿ ನ್ಯಾಯಾಲಯವು ಆರೋಪಿಯಾಗಿದ್ದ ಸಜ್ಜನ್‌ಕುಮಾರ್ ಅವರನ್ನು ಖುಲಾಸೆಗೊಳಿಸಿದ್ದರಿಂದ ನಮಗೆ ಮತ್ತೆ ಅನ್ಯಾಯವಾಗಿದೆ ಎಂದು 1984 ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರು ಗೋಳಾಡಿದ್ದಾರೆ. ನಮಗೆ ನ್ಯಾಯ ಸಿಕ್ಕಿಲ್ಲ, ನಾವು ಈ ದಂಗೆಯಿಂದ ನಮ್ಮ ಗಂಡ, ಸೋದರ ಹಾಗೂ ತಂದೆಯನ್ನು ಕಳೆದುಕೊಂಡಿದ್ದೇವೆ, ನಮ್ಮ ಕುಟುಂಬದ 10 ಜನರು ಸಾವನ್ನಪ್ಪಿದ್ದಾರೆ ಎಂದು ದಂಗೆಯಲ್ಲಿ ತಮ್ಮವರನ್ನು ಕಳೆದುಕೊಂಡ ಮಹಿಳೆಯೊಬ್ಬರು ಕಣ್ಣೀರಿಡುತ್ತಲೇ ಹೇಳಿದ್ದಾರೆ.

ಸಂತ್ರಸ್ತರ ಸಂಬಂಧಿಕರು ಕೋರ್ಟ್‌ ಮುಂದೆ ತಮ್ಮ ದುಃಖ ವ್ಯಕ್ತಪಡಿಸಿದ್ದು,ಸಜ್ಜನ್‌ಕುಮಾರ್ ಗಲ್ಲಿಗೇರಲು ಅರ್ಹರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಕಳೆದ 40 ವರ್ಷಗಳಿಂದ ಹೋರಾಡುತ್ತಿದ್ದೇವೆ. ನಾವು ಸುಮ್ಮನಿರುವುದಿಲ್ಲ. ನಾವು ಹೈಕೋರ್ಟ್‌ಗೆ ಹೋಗುತ್ತೇವೆ ಎಂದು ಅವರು ಹೇಳಿದ್ದಾರೆ. ನಾನು ನನ್ನ ಕುಟುಂಬದ 10 ಸದಸ್ಯರನ್ನು ಕಳೆದುಕೊಂಡೆ. ಸಜ್ಜನ್ ಕುಮಾರ್ ಅವರನ್ನು ಯಾಕೆ ಗಲ್ಲಿಗೇರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

Scroll to load tweet…

ಸಜ್ಜನ್‌ಕುಮಾರ್ ಅವರ ವಿರುದ್ಧದ ಈ ಪ್ರಕರಣಗಳು ವಿಶೇಷ ತನಿಖಾ ತಂಡವು ಫೆಬ್ರವರಿ 2015 ರಲ್ಲಿ ದಾಖಲಿಸಿದ ಎರಡು ಎಫ್‌ಐಆರ್‌ಗಳಿಂದ ಆಗಿದೆ. ಮೊದಲ ಎಫ್‌ಐಆರ್ ಜನಕಪುರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದೆ ಅಲ್ಲಿ ಸೋಹನ್ ಸಿಂಗ್ ಮತ್ತು ಅವರ ಅಳಿಯ ಅವತಾರ್ ಸಿಂಗ್ ಅವರನ್ನು ನವೆಂಬರ್ 1, 1984 ರಂದು ಕೊಲ್ಲಲಾಯಿತು. ಎರಡನೆಯದಾಗಿ ಗುರುಚರಣ್ ಸಿಂಗ್ ಅವರನ್ನು ಒಂದು ದಿನದ ನಂತರ ನವೆಂಬರ್ 2, 1984 ರಂದು ವಿಕಾಸಪುರಿಯಲ್ಲಿ ಬೆಂಕಿ ಹಚ್ಚಿ ಕೊಲ್ಲಲಾಯ್ತು. ಸಜ್ಜನ್‌ಕುಮಾರ್ ಅವರು ಇಂದು ಒಂದು ಪ್ರಕರಣದಲ್ಲಿ ಖುಲಾಸೆಗೊಂಡಿದ್ದರೂ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಜ್ಜನ್‌ ಕುಮಾರ್ ಇನ್ನೂ ಜೈಲಿನಲ್ಲೇ ಇದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ 12 ಗಂಟೆ ಉಬರ್ ಚಾಲಕನಾಗಿ ಕೆಲಸ ಮಾಡಿದ ಭಾರತೀಯ ಯುವಕ ಗಳಿಸಿದ್ದೆಷ್ಟು?

ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ನವೆಂಬರ್ 1, 1984 ರಂದು ನಡೆದ ಗಲಭೆಯ ಸಂದರ್ಭದಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಕಳೆದ ವರ್ಷ ಫೆಬ್ರವರಿ 25 ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

1984ರ ಸಿಖ್ ದಂಗೆ ಹಿಂಸಾಚಾರ ಮತ್ತು ಅದರ ಪರಿಣಾಮಗಳ ಬಗ್ಗೆ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗದ ವರದಿಯ ಪ್ರಕಾರ, ದೆಹಲಿಯಲ್ಲಿ 2,733 ಜನರ ಹತ್ಯೆಗೆ ಕಾರಣವಾದ ಈ ಗಲಭೆಗೆ ಸಂಬಂಧಿಸಿದಂತೆ 587 ಎಫ್‌ಐಆರ್‌ಗಳು ದಾಖಲಾಗಿವೆ. ಒಟ್ಟು 240 ಎಫ್‌ಐಆರ್‌ಗಳನ್ನು ಪೊಲೀಸರು ಪತ್ತೆಯಾಗದ ಪ್ರಕರಣಗಳೆಂದು ಮುಚ್ಚಿಹಾಕಿದ್ದಾರೆ ಮತ್ತು 250 ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯಾಗಿದೆ. ಒಟ್ಟು 587 ಎಫ್‌ಐಆರ್‌ಗಳಲ್ಲಿ ಕೇವಲ 28 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದ್ದು, ಅದರಲ್ಲಿ ಸುಮಾರು 400 ಜನರು ಶಿಕ್ಷೆಗೊಳಗಾಗಿದ್ದಾರೆ. ಮಾಜಿ ಸಂಸದ ಸೇರಿದಂತೆ ಸುಮಾರು 50 ಜನರು ಕೊಲೆ ಆರೋಪದ ಮೇಲೆ ಶಿಕ್ಷೆಗೊಳಗಾಗಿದ್ದಾರೆ.

ಇದನ್ನೂ ಓದಿ: ತನ್ನ ನಾಯಿಗೆ ವಾಕ್ ಮಾಡಿಸಲು ಇಡೀ ಸ್ಟೇಡಿಯಂನ್ನೇ ಖಾಲಿ ಮಾಡಿಸಿದ IASಅಧಿಕಾರಿ ಈಗ ಪಾಲಿಕೆ ಕಮೀಷನರ್

ಆ ಸಮಯದಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ಸಂಸದರಾಗಿದ್ದ ಸಜ್ಜನ್‌ ಕುಮಾರ್, 1984 ರ ನವೆಂಬರ್ 1 ಮತ್ತು 2 ರಂದು ದೆಹಲಿಯ ಪಾಲಂ ಕಾಲೋನಿಯಲ್ಲಿ ನಡೆದ ಐದು ಜನರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಶಿಕ್ಷೆಯನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರಾದ ಸಿಖ್ ಸಮುದಾಯದ ವ್ಯಕ್ತಿ ಗುಂಡಿಕ್ಕಿ ಕೊಂದಿದ್ದರಿಂದ ಇಂದಿರಾ ಹತ್ಯೆಯ ನಂತರ ದೆಹಲಿಯಲ್ಲಿ ಸಿಖ್ ಸಮುದಾಯದ ಜನರನ್ನು ಅಟ್ಟಾಡಿಸಿ ಹತ್ಯೆ ಮಾಡಲಾಗಿತ್ತು.